Jio Plan: ಒಂದೇ ಪ್ರಿಪೇಯ್ಡ್ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆ, 5G ಡೇಟಾ ಮತ್ತು ಪ್ರೈಮ್ ವಿಡಿಯೋ ಪೂರ್ತಿ 84 ದಿನಗಳಿಗೆ ಲಭ್ಯ!

HIGHLIGHTS

ರಿಲಯನ್ಸ್ ಜಿಯೋ ಒಂದೇ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆ, 5G ಡೇಟಾ ಮತ್ತು ಪ್ರೈಮ್ ವಿಡಿಯೋ ನೀಡುತ್ತಿದೆ.

ರಿಲಯನ್ಸ್ ಜಿಯೋ 1,029 ರೂಗಳ ರೀಚಾರ್ಜ್ ಯೋಜನೆಯಲ್ಲಿ ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತಿದೆ.

ಜಿಯೋ 1,029 ರೂಗಳ ರೀಚಾರ್ಜ್ ಯೋಜನೆಯಲ್ಲಿ ಬರೋಬ್ಬರಿ 84 ದಿನಗಲ್ ವ್ಯಾಲಿಡಿಟಿಯೊಂದಿಗೆ ಬರುತ್ತದೆ.

Jio Plan: ಒಂದೇ ಪ್ರಿಪೇಯ್ಡ್ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆ, 5G ಡೇಟಾ ಮತ್ತು ಪ್ರೈಮ್ ವಿಡಿಯೋ ಪೂರ್ತಿ 84 ದಿನಗಳಿಗೆ ಲಭ್ಯ!

Reliance Jio Plan: ರಿಲಯನ್ಸ್ ಜಿಯೋ ತನ್ನ ಚಂದಾದಾರರಿಗೆ ತನ್ನ ಅಸ್ತಿತ್ವದಲ್ಲಿರುವ ರೀಚಾರ್ಜ್ ಯೋಜನೆಗಳನ್ನು ಹೆಚ್ಚು ಆಕರ್ಷಕವಾಗಿಸುತ್ತಿದೆ. ಕಂಪನಿಯು ಇತ್ತೀಚೆಗೆ 1,029 ರೂಗಳ ರೀಚಾರ್ಜ್ ಯೋಜನೆಯಲ್ಲಿ ಯಾವುದೇ ಇತರ ಪ್ರಯೋಜನಗಳನ್ನು ಬದಲಾಯಿಸದೆ OTT ಪ್ರಯೋಜನಗಳನ್ನು ಅಪ್‌ಗ್ರೇಡ್ ಮಾಡಿ ತಮ್ಮ ಗ್ರಾಹಕರಿಗೆ ನೀಡುತ್ತಿದೆ. ರಿಲಯನ್ಸ್ ಜಿಯೋ ತನ್ನ ಲಕ್ಷಾಂತರ ಗ್ರಾಹಕರಿಗೆ ಪರಿಹಾರವನ್ನು ಒದಗಿಸಲು ಜಿಯೋ ತನ್ನ ಕೈಗೆಟುಕುವ ಯೋಜನೆಗಳಲ್ಲಿ ಒಂದಾದ 1029 ಯೋಜನೆಯನ್ನು ಸದ್ದಿಲ್ಲದೆ ಅಪ್ಡೇಟ್ ಮಾಡಲಾಗಿದೆ.

84 ದಿನಗಳಿಗೆ ಉಚಿತ ಅಮೆಜಾನ್ ಪ್ರೈಮ್ ಲೈಟ್ ಚಂದಾದಾರಿಕೆ:

ಹೊಸ ರೀಚಾರ್ಜ್ ಯೋಜನೆಯನ್ನು ಪಡೆಯುವುದನ್ನು ಪರಿಗಣಿಸುತ್ತಿದ್ದರೆ ಈ ಯೋಜನೆಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ಪ್ರಸ್ತುತ ಜಿಯೋ ತಮ್ಮ ಬಳಕೆದಾರರಿಗೆ ನೀಡುತ್ತಿರುವ ಈ 1029 ರೂಗಳ ಪ್ರಿಪೇಯ್ಡ್ ಯೋಜನೆಯಲ್ಲಿ ಗಮನಾರ್ಹವಾದ ನವೀಕರಣವನ್ನು ಮಾಡಿದೆ.

Reliance Jio Rs.1029 Plan Details- Kannada Tech News
Reliance Jio Combo Plan – Jio 1029 Plan

ಇದನ್ನೂ ಓದಿ: ಸ್ಯಾಮ್‌ಸಂಗ್‌ನ Galaxy F55 5G ಸ್ಮಾರ್ಟ್ಫೋನ್ ಕೇವಲ 16999 ರೂಗಳಿಗೆ ಮಾರಾಟ! ಖರೀದಿಗೆ ಮುಗಿ ಬೀಳುತ್ತಿರುವ ಜನ!

ಯಾಕೆಂದರೆ ಇದೊಂದು ಮನರಂಜನಾ ಪ್ಯಾಕ್ ಆಗಿದ್ದು ಹೆಚ್ಚು ಮನೋರ೦ಜನೆಯನ್ನು ಬಯಸುವವರಿಗೆ ಈ ರಿಚಾರ್ಜ್ ಪ್ಲಾನ್ ಉತ್ತಮ ಆಯ್ಕೆಯಾಗಿದೆ. ಈ ರೀಚಾರ್ಜ್ ಯೋಜನೆಯೊಂದಿಗೆ ನೀಡಲಾಗುವ OTT ಪ್ರಯೋಜನವನ್ನು ಕೊಂಚ ಬದಲಾಯಿಸಲಾಗಿದೆ. ಈ ಯೋಜನೆಯಲ್ಲಿ ಲಭ್ಯವಿರುವ ಕೊಡುಗೆಗಳ ವಿವರಗಳನ್ನು ಪರಿಶೀಲಿಸೋಣ.

ರಿಲಯನ್ಸ್ ಜಿಯೋ 1,029 ರೂಗಳ ರೀಚಾರ್ಜ್ ಯೋಜನೆ:

ರಿಲಯನ್ಸ್ ಜಿಯೋದ 1029 ರೂ. ಯೋಜನೆಯೊಂದಿಗೆ ನೀವು 84 ದಿನಗಳ ದೀರ್ಘಾವಧಿಯ ಮಾನ್ಯತೆಯನ್ನು ಪಡೆಯುತ್ತೀರಿ ಈ ಸಮಯದಲ್ಲಿ ನೀವು ಅನಿಯಮಿತ ಉಚಿತ ಕರೆಗಳನ್ನು ಮಾಡಬಹುದು. ಈ ಯೋಜನೆಯು ಒಟ್ಟು 168GB ಡೇಟಾವನ್ನು ನೀಡುತ್ತದೆ, ಇದು ನಿಮಗೆ ಪ್ರತಿದಿನ 2GB ವರೆಗೆ ಹೈ-ಸ್ಪೀಡ್ ಡೇಟಾವನ್ನು ಬಳಸಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ ನೀವು ಪ್ರತಿದಿನ 100 ಉಚಿತ SMS ಗಳ ಪ್ರಯೋಜನವನ್ನು ಆನಂದಿಸುವಿರಿ.

ಇದನ್ನೂ ಓದಿ: ಸರ್ಕಾರದಿಂದ ಮಹತ್ವದ ಅಪ್ಡೇಟ್ ಜಾರಿ! ಇನ್ಮೇಲೆ ಇಂಹತ ನಂಬರ್‌ಗಳಿಗೆ UPI ವಹಿವಾಟು ನಿರ್ಬಂಧ!

ಈ ಜಿಯೋ ಯೋಜನೆಯು ಅನಿಯಮಿತ ನಿಜವಾದ 5G ಡೇಟಾದೊಂದಿಗೆ ಬರುತ್ತದೆ. ಜಿಯೋ ಪ್ರಸ್ತುತ 5G ಡೇಟಾದೊಂದಿಗೆ ಅನ್ಲಿಮಿಟೆಡ್ 5G ಡೇಟಾವನ್ನು ಉಚಿತವಾಗಿ ನೀಡುತ್ತಿದೆ. ಅಲ್ಲದೆ ದೈನಂದಿನ ಡೇಟಾ ಮಿತಿಯನ್ನು ಮೀರಿದ ನಂತರವೂ ನೀವು 64Kbps ವೇಗದಲ್ಲಿ ಡೇಟಾ ಸಂಪರ್ಕವನ್ನು ಹೊಂದಿರುತ್ತೀರಿ.

ಅಲ್ಲದೆ ಈ ಯೋಜನೆಯು OTT ಸ್ಟ್ರೀಮಿಂಗ್‌ಗೆ ಅತ್ಯುತ್ತಮ ಆಯ್ಕೆಯಾಗಿದೆ. ಜಿಯೋ ಈ ಯೋಜನೆಯಲ್ಲಿ ಅಮೆಜಾನ್ ಪ್ರೈಮ್ ಲೈಟ್‌ನ ಚಂದಾದಾರಿಕೆಯನ್ನು ನವೀಕರಿಸಿದೆ. ಈ ಹಿಂದೆ ಗ್ರಾಹಕರಿಗೆ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಗೆ 84 ದಿನಗಳ ಉಚಿತ ಪ್ರವೇಶವನ್ನು ನೀಡಲಾಗುತ್ತಿತ್ತು ಆದರೆ ಈಗ OTT ಪ್ರಯೋಜನವನ್ನು ಅಮೆಜಾನ್ ಪ್ರೈಮ್ ಲೈಟ್‌ಗೆ ಬದಲಾಯಿಸಲಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo