ಸರ್ಕಾರದಿಂದ ಮಹತ್ವದ ಅಪ್ಡೇಟ್ ಜಾರಿ! ಇನ್ಮೇಲೆ ಇಂಹತ ನಂಬರ್‌ಗಳಿಗೆ UPI ವಹಿವಾಟು ನಿರ್ಬಂಧ!

HIGHLIGHTS

ಡಿಜಿಟಲ್ ವಂಚನೆಯನ್ನು ತಡೆಗಟ್ಟಲು ಸರ್ಕಾರ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಇತ್ತೀಚೆಗೆ ನಿಮ್ಮ ವಹಿವಾಟುಗಳು ಪದೇ ಪದೇ ವಿಫಲವಾಗುತ್ತಿದ್ದರೆ ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿದೆ.

ಬಳಕೆದಾರರ ಖಾತೆಯಿಂದ ಹಣವನ್ನು ಕಡಿತಗೊಳಿಸುವ ಮೊದಲು ವಂಚನೆಯನ್ನು ತಡೆಗಟ್ಟುವುದು ಈ ನಿರ್ಧಾರದ ಮೂಲ ಉದ್ದೇಶವಾಗಿದೆ.

ಸರ್ಕಾರದಿಂದ ಮಹತ್ವದ ಅಪ್ಡೇಟ್ ಜಾರಿ! ಇನ್ಮೇಲೆ ಇಂಹತ ನಂಬರ್‌ಗಳಿಗೆ UPI ವಹಿವಾಟು ನಿರ್ಬಂಧ!

UPI Transactions Update: ಪ್ರಸ್ತುತ ನೀವು ಆನ್‌ಲೈನ್ ಪೇಮೆಂಟ್ ವಾಲೆಟ್ಗಳಾಗಿರುವ Paytm, PhonePe ಅಥವಾ Google Pay ರೀತಿಯ ಅನೇಕ ಯುಪಿಐ ಅಪ್ಲಿಕೇಶನ್‌ಗಳ (UPI Apps) ಮೂಲಕ ಪಾವತಿಗಳನ್ನು ಮಾಡುವವರಲ್ಲಿ ನೀವು ಒಬ್ಬರರಾಗಿದ್ದರೆ ಈ ಸುದ್ದಿಯ ಬಗ್ಗೆ ತಿಳಿಯಲೇಬೇಕು. ಅಲ್ಲದೆ ಇತ್ತೀಚೆಗೆ ನಿಮ್ಮ ವಹಿವಾಟುಗಳು ಪದೇ ಪದೇ ವಿಫಲವಾಗುತ್ತಿದ್ದರೆ ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿದೆ. ಡಿಜಿಟಲ್ ಪಾವತಿ ವಂಚನೆಯನ್ನು ತಡೆಗಟ್ಟಲು ಭಾರತ ಸರ್ಕಾರ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು ಇದರ ಅಡಿಯಲ್ಲಿ ಕೆಲವು ಮೊಬೈಲ್ ಸಂಖ್ಯೆಗಳಲ್ಲಿನ UPI ವಹಿವಾಟುಗಳನ್ನು “ಅಪಾಯಕಾರಿ” ಎಂದು ಪರಿಗಣಿಸಿ ನಿರ್ಬಂಧಿಸಲಾಗುತ್ತಿದೆ.

Digit.in Survey
✅ Thank you for completing the survey!

ಈ UPI Transactions ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಗಿದೆ?

ಕೆಲವು ಮೊಬೈಲ್ ಸಂಖ್ಯೆಗಳಲ್ಲಿನ UPI ವಹಿವಾಟುಗಳನ್ನು ನಿರ್ಬಂಧಿಸಬಹುದಾದ ಡಿಜಿಟಲ್ ವಂಚನೆಯನ್ನು ತಡೆಗಟ್ಟಲು ಸರ್ಕಾರ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಸೈಬರ್ ವಂಚನೆಯಲ್ಲಿ ಪದೇ ಪದೇ ದೂರುಗಳನ್ನು ಸ್ವೀಕರಿಸಿದ ನಂಬರ್ ಅಥವಾ ಡಿವೈಸ್ಗಳು, ತಪ್ಪಾದ KYC ಒದಗಿಸಿ ಬಳಸುತ್ತಿರುವ ಖಾತೆಗಳು ಮತ್ತು ನಕಲಿ QR ಕೋಡ್‌ಗಳೊಂದಿಗೆ ಸಂಪರ್ಕದಂತಹ ನಡವಳಿಕೆಯು ಅನುಮಾನಾಸ್ಪದವಾಗಿ ಕಂಡುಬರುವ ಸಂಖ್ಯೆಗಳನ್ನು ಸರ್ಕಾರ ಹೇಳದೆ ಕೇಳದೆ ನಿರ್ಬಂಧಿಸಲಾಗುತ್ತಿದೆ.

ಬಳಕೆದಾರರ ಖಾತೆಯಿಂದ ಹಣವನ್ನು ಕಡಿತಗೊಳಿಸುವ ಮೊದಲು ವಂಚನೆಯನ್ನು ತಡೆಗಟ್ಟುವುದು ಈ ನಿರ್ಧಾರದ ಮೂಲ ಉದ್ದೇಶವಾಗಿದೆ. ಭಾರತದಲ್ಲಿ ನಕಲಿ QR ಕೋಡ್‌ಗಳು, ನಕಲಿ UPI ಹ್ಯಾಂಡಲ್‌ಗಳು ಇತ್ಯಾದಿಗಳಂತಹ UPI ವಂಚನೆ ವೇಗವಾಗಿ ಹೆಚ್ಚಾಗಿದೆ. ಆದ್ದರಿಂದ ವಂಚನೆಯನ್ನು ಸಕಾಲದಲ್ಲಿ ನಿಲ್ಲಿಸಲು ಈ ಹೊಸ ವ್ಯವಸ್ಥೆ ಅಗತ್ಯವಾಗಿದ್ದು ಈಗಾಗಲೇ ಜಾರಿಗೆ ತಂದಿದೆ.

ಇದನ್ನೂ ಓದಿ: ನಿಮ್ಮ Aadhaar Card ಎಲ್ಲೆಲ್ಲಿ ಬಳಸಲಾಗಿದೆ ನಿಮಗೊತ್ತಾ? ಈ ರೀತಿ ಸುಲಭವಾಗಿ ಪರಿಶೀಲಿಸಿಕೊಳ್ಳಿ!

ಈ ಹೊಸ ವ್ಯವಸ್ಥೆ ಹೇಳೋದೇನು?

ಈಗ ಈ ವ್ಯವಸ್ಥೆಯಡಿಯಲ್ಲಿ ಕೆಲವು ಮೊಬೈಲ್ ಸಂಖ್ಯೆಗಳನ್ನು ವಂಚನೆಯ ಅಪಾಯದ ಆಧಾರದ ಮೇಲೆ ಮೂರು ಹೊಸ ವರ್ಗಗಳಲ್ಲಿ ಮಧ್ಯಮ, ಹೆಚ್ಚಿನ ಅಥವಾ ಅತ್ಯಂತ ಹೆಚ್ಚಿನ ವರ್ಗದಲ್ಲಿ ಇರಿಸಲಾಗುತ್ತದೆ. ಅಂತಹ ಸಂಖ್ಯೆಗಳಲ್ಲಿನ UPI ವಹಿವಾಟುಗಳನ್ನು ನಿರ್ಬಂಧಿಸಬಹುದು ಅಥವಾ ಸೀಮಿತಗೊಳಿಸಬಹುದು. ನಿಮ್ಮ ಮೊಬೈಲ್ ನಂಬರ್ ಅಥವಾ ನಿಮ್ಮ ಪೇಮೆಂಟ್ ಕೋಡ್ ಮೇಲೆ ಸೈಬರ್ ಅಪರಾಧ ದೂರುಗಳು ದಾಖಲಾಗಿರುವ ಸಂಖ್ಯೆಗಳು, ತಪ್ಪು KYC ವಿವರಗಳನ್ನು ನೀಡಲಾಗಿರುವ ಸಂಖ್ಯೆಗಳು, OTP/UPI ಪಿನ್ ಪದೇ ಪದೇ ವಿಫಲವಾಗಿರುವ ಸಂಖ್ಯೆಗಳಲ್ಲಿ UPI ವಹಿವಾಟುಗಳನ್ನು ಕಾಣುತ್ತಿದ್ದರೆ ಹೇಳದೆ ಕೇಳದೆ ನಿರ್ಬಂಧಿಸಲಾಗುತ್ತಿದೆ ಎನ್ನುತ್ತಿದೆ ಸರ್ಕಾರ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo