ಡ್ಯುಯಲ್‌ 50MP ಕ್ಯಾಮೆರಾ ಇರುವ OnePlus 13s ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಸಖತ್‌ ಇಳಿಕೆ!

HIGHLIGHTS

ಅಮೆಜಾನ್‌ ತಾಣದಲ್ಲಿ OnePlus 13s ಮೊಬೈಲ್‌ಗೆ ಸದ್ಯ 4,000 ರೂ.ಗಳ ರಿಯಾಯಿತಿ

ಒನ್‌ಪ್ಲಸ್‌ನ ಈ ಫೋನ್‌ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ

OnePlus 13s ಮೊಬೈಲ್‌ 32MP ಸೆನ್ಸಾರ್ ಕ್ಯಾಮೆರಾ ಸೌಲಭ್ಯ ಹೊಂದಿದೆ

ಡ್ಯುಯಲ್‌ 50MP ಕ್ಯಾಮೆರಾ ಇರುವ OnePlus 13s ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಸಖತ್‌ ಇಳಿಕೆ!

ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ OnePlus ಕಂಪನಿಯ ಸ್ಟೈಲಿಶ್‌ ಫೋನ್‌ ಖರೀದಿಸುವ ಪ್ಲಾನ್‌ ಇದ್ದರೆ ಅಮೆಜಾನ್‌ನತ್ತ ಗಮನಿಸಿ. ಹೌದು ಜನಪ್ರಿಯ ಇ ಕಾಮರ್ಸ್‌ ತಾಣ (Amazon) ಅಮೆಜಾನ್‌ ಹಾಗೂ ರಿಯಲ್‌ಮಿ ವೆಬ್‌ಸೈಟ್‌ ನಲ್ಲಿ OnePlus 13s ಮೊಬೈಲ್‌ ಬೊಂಬಾಟ್‌ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅಲ್ಲದ ಆಯ್ದ ಬ್ಯಾಂಕ್‌ ಕೊಡುಗೆಗಳ ಮೂಲಕ ಆಸಕ್ತ ಗ್ರಾಹಕರು ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದಾಗಿದೆ. ಒನ್‌ಪ್ಲಸ್‌ನ ಈ ಮೊಬೈಲ್‌ Snapdragon 8 Elite ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದಿದ್ದು ಹಾಗೆಯೇ 50MP ಸೌಲಭ್ಯದ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಇನ್ನುಳಿದಂತೆ ಅಮೆಜಾನ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ OnePlus 13s ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಇತ್ತೀಚಿಗೆ ಲಾಂಚ್‌ ಆಗಿರುವ Vivo T4R 5G ಸ್ಮಾರ್ಟ್‌ಫೋನ್‌ಗೆ ಭರ್ಜರಿ ಡಿಸ್ಕೌಂಟ್‌

OnePlus 13s ಮೊಬೈಲ್‌ ಈಗ ಆಫರ್‌ ಬೆಲೆಯಲ್ಲಿ ಲಭ್ಯ

ಒನ್‌ಪ್ಲಸ್‌ ಸಂಸ್ಥೆಯ OnePlus 13s ಮೊಬೈಲ್‌ ಪ್ರಸ್ತುತ ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಆಕರ್ಷಕ ಬೆಲೆ ಇಳಿಕೆ ಪಡೆದಿದೆ. ಈ ಮೊಬೈಲ್‌ 8 GB RAM + 128 GB ವೇರಿಯಂಟ್‌ 54,999 ರೂಗಳ ಬೆಲೆಯನ್ನು ಹೊಂದಿದ್ದು, ಆದರೆ ಪ್ರಸ್ತುತ ಅಮೆಜಾನ್‌ನಲ್ಲಿ 50,999 ರೂಗಳ ನೇರ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಈ ಮೊಬೈಲ್‌ ಖರೀದಿಸುವ ಗ್ರಾಹಕರು ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೂಲಕ ಹೆಚ್ಚುವರಿ ಡಿಸ್ಕೌಂಟ್‌ ಹಾಗೂ ಆಕರ್ಷಕ EMI ಆಯ್ಕೆಗಳನ್ನು ಸಹ ಪಡೆಯಬಹುದು. ಅಂದಹಾಗೆ ಈ ಫೋನ್‌ ಗ್ರೀನ್‌ ಸಿಲ್ಕ್, ಪಿಂಕ್ ಸ್ಯಾಟಿನ್‌ ಮತ್ತು ಬ್ಲ್ಯಾಕ್‌ ವೆಲ್ವೆಟ್‌ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.

OnePlus 13s

OnePlus 13s ಮೊಬೈಲ್‌ನ ಪ್ರಮುಖ ಫೀಚರ್ಸ್‌

OnePlus 13s ಮೊಬೈಲ್‌ ಡಿಸ್‌ಪ್ಲೇಯು 6.32 ಇಂಚಿನ ಪೂರ್ಣ ಹೆಚ್‌ಡಿ ProXDR LTPO AMOLED ಮಾದರಿಯಲ್ಲಿ ಇದ್ದು ಕಂಪ್ಯಾಕ್ಟ್‌ ರಚನೆ ಹೊಂದಿದೆ. ಹಾಗೆಯೇ 120Hz ರಿಫ್ರೆಶ್‌ ರೇಟ್‌ ಹೊಂದಿದ್ದು 2640×1216 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. ಇನ್ನು ಈ ಮೊಬೈಲ್‌ Snapdragon 8 Elite chipset ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್‌ 15 ಬೆಂಬಲಿತ Oxygren OS 15 ಸಪೋರ್ಟ್‌ ಇದೆ. ಈ ಫೋನ್‌ 12GB RAM + 256GB ಮತ್ತು 12GB RAM + 512GB ವೇರಿಯಂಟ್‌ ಸೌಲಭ್ಯವನ್ನು ಒಳಗೊಂಡಿದೆ. 5,700mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ.

ಅಲ್ಲದೇ OnePlus 13s ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಅನ್ನು ಒಳಗೊಂಡಿದ್ದು, ದ್ವಿತೀಯ ಕ್ಯಾಮೆರಾವು ಸಹ 50MP ಅಲ್ಟ್ರಾ ವೈಡ್ ಸೆನ್ಸಾರ್‌ ಹೊಂದಿದೆ. ಹಾಗೆಯೇ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಕೂಡಾ ಈ ಮೊಬೈಲ್‌ 32MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್‌ 5850mAh ಬ್ಯಾಟರಿ ಜೊತೆಗೆ ಸೂಪರ್‌ವೂಕ್‌ ಫಾಸ್ಟ್‌ ಚಾರ್ಜಿಂಗ್‌ ಬೆಂಬಲ ಪಡೆದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo