ಭಾರತದ ಜನಪ್ರಿಯ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ತಮ್ಮ ಗ್ರಾಹಕರಿಗೆಗಾಗಿ ಅತ್ಯುತ್ತಮ ಕಾಂಬೋ ಆಫರ್ ನೀಡಿದ್ದಾರೆ. ಈ ತಿಂಗಳ ನಿಮ್ಮ ರಿಚಾರ್ಜ್ ಮುಗಿದಿದ್ದರೆ ಒಮ್ಮೆ ಈ ಬೆಸ್ಟ್ ಬಂಡಲ್ ಆಫರ್ ಯೋಜನೆಯನ್ನು ಒಮ್ಮೆ ಪರಿಶೀಲಿಸಲೇಬೇಕು. ಏಕೆಂದರೆ ಜಿಯೋದ ಈ 1198 ರೂಗಳ ರಿಚಾರ್ಜ್ ಯೋಜನೆಯಲ್ಲಿ ದಿನಕ್ಕೆ 100 SMS ಜೊತೆಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು 5G ಫಾಸ್ಟ್ ಡೇಟಾದೊಂದಿಗೆ Amazon Prime Video ಮತ್ತು Disney+ Hotstar ಸೇರಿ ಒಟ್ಟಾರೆಯಾಗಿ 14 ವಿವಿಧ OTT ಅಪ್ಲಿಕೇಶನ್‌ಗಳನ್ನು 84 ದಿನಗಳ ಮಾನ್ಯತೆವರೆಗೆ ಬಳಸುವ ಅವಕಾಶವನ್ನು ರಿಲಯನ್ಸ್ ಜಿಯೋ (Reliance Jio) ನೀಡುತ್ತಿದೆ.
Prime Video ಮತ್ತು Disney+ Hotstar ನೀಡುವ ಬೆಸ್ಟ್ Jio ಪ್ಲಾನ್
ಭಾರತೀಯ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ಗುರಿಯನ್ನು ರಿಲಯನ್ಸ್ ಜಿಯೋ (Reliance Jio) ಹೊಂದಿದ್ದು ಈಗಾಗಲೇ ಮೇಲೆ ತಿಳಿಸಿರುವಂತೆ ಅನಿಯಮಿತ ಕರೆಗಳು, 5G ಡೇಟಾ ಮತ್ತು OTT ಚಂದಾದಾರಿಕೆಗಳೊಂದಿಗೆ ಅಭೂತಪೂರ್ವ ಮೌಲ್ಯವನ್ನು ತರುತ್ತವೆ. ರಿಲಯನ್ಸ್ ಜಿಯೋ (Reliance Jio) ಮತ್ತು ಅದರ ಹೆಚ್ಚುವರಿ ಪ್ರಯೋಜನಗಳ ಬಗ್ಗೆ ಮಾತನಾಡುವುದಾದರೆ ನಿಮಗೆ Amazon Prime Video (Mobile) ಮತ್ತು Disney+ Hotstar ಸೇರಿ ಒಟ್ಟಾರೆಯಾಗಿ 14 ವಿವಿಧ OTT ಅಪ್ಲಿಕೇಶನ್‌ಗಳು ಯಾವುದೆಂದರೆ ಈ ಕೆಳಗೆ ಪಟ್ಟಿ ಮಾಡಲಾಗಿದೆ.
1 JioCinema Premium 2 Disney+ Hotstar 3 ZEE5 4 SonyLIV 5 Prime Video (Mobile) 6 Lionsgate Play 7 Discovery+ 8 Docubay 9 Hoichoi 10 SunNXT 11 Planet Marathi 12 Chaupal 13 EpicON 14 Kanccha Lannka
ಜಿಯೋದ ಈ 1198 ರೂಗಳ ರಿಚಾರ್ಜ್ ಯೋಜನೆ ವಿವರಗಳು
ರಿಲಯನ್ಸ್ ಜಿಯೋ (Reliance Jio) ಹೊಂದಿರುವ 1198 ಪ್ಲಾನ್ ಪೂರ್ತಿ 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಮತ್ತು ಅನಿಯಮಿತ ಕರೆ ಮತ್ತು 100 SMS/ದಿನ ಪ್ರಯೋಜನಗಳೊಂದಿಗೆ ದೈನಂದಿನ 2GB ಹೈ-ಸ್ಪೀಡ್ ಡೇಟಾದೊಂದಿಗೆ ಬರುತ್ತದೆ. ಇದು ಒಟ್ಟು 168GB ಡೇಟಾವನ್ನು ನೀಡುತ್ತದೆ. ಇದು ಅರ್ಹ ಚಂದಾದಾರರಿಗೆ ಅನಿಯಮಿತ 5G ಡೇಟಾವನ್ನು ಸಹ ನೀಡುತ್ತದೆ. ರೂ 1198 ಯೋಜನೆಯು ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್‌ನ 3 ತಿಂಗಳ (90 ದಿನಗಳು) ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.
ಅಲ್ಲದೆ ಈ ಚಂದಾದಾರಿಕೆಯು ಅದೇ ಮೊಬೈಲ್ ಸಂಖ್ಯೆಯಲ್ಲಿ Disney+Hotstar ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ. ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿಯ ಚಂದಾದಾರಿಕೆಯ ಅವಧಿಯು 84 ದಿನಗಳಾಗಿರುತ್ತದೆ. ನೀವು MyJio ಅಪ್ಲಿಕೇಶನ್ ಮೂಲಕ ಚಂದಾದಾರಿಕೆಯನ್ನು ಸಕ್ರಿಯಗೊಳಿಸಬಹುದು. ಯೋಜನೆಯೊಂದಿಗೆ ಬಳಕೆದಾರರು 84 ದಿನಗಳ JioCinema ಪ್ರೀಮಿಯಂ ಚಂದಾದಾರಿಕೆಯನ್ನು ಪಡೆಯುತ್ತಾರೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile