Reliance Jio ಮತ್ತು Airtel ಗ್ರಾಹಕರು ಹೆಚ್ಚು ಹಣ ಖರ್ಚು ಮಾಡದೇ ಪ್ರೈಮ್ ಚಂದಾದಾರಿಕೆ, ಕರೆ ಮತ್ತು ಡೇಟಾ ಪಡೆಯಿರಿ!

HIGHLIGHTS

ಭಾರತದಲ್ಲಿ ನಾಳೆಯಿಂದ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2025 ಮಾರಾಟ ಶುರುವಾಗಲಿದೆ.

Reliance Jio ಮತ್ತು Airtel ಗ್ರಾಹಕರು ಹೆಚ್ಚು ಹಣ ಖರ್ಚು ಮಾಡದೇ ಪ್ರೈಮ್ ಚಂದಾದಾರಿಕೆಯನ್ನು ಪಡೆಯಬಹುದು.

ಈ ರಿಚಾರ್ಜ್ ಯೋಜನೆಯಲ್ಲೇ ಉಚಿತವಾಗಿ Amazon Prime Membership ಪಡೆಯುವಾಗ ಹೆಚ್ಚು ಹಣ ಏಕೆ ಖರ್ಚು ಮಾಡಬೇಕು.

Reliance Jio ಮತ್ತು Airtel ಗ್ರಾಹಕರು ಹೆಚ್ಚು ಹಣ ಖರ್ಚು ಮಾಡದೇ ಪ್ರೈಮ್ ಚಂದಾದಾರಿಕೆ, ಕರೆ ಮತ್ತು ಡೇಟಾ ಪಡೆಯಿರಿ!

Get Free Amazon Prime Subscription: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ರೀಚಾರ್ಜ್ ಯೋಜನೆಯು ಕೇವಲ ಕರೆಗಳು ಮತ್ತು ಡೇಟಾಕ್ಕಿಂತ ಹೆಚ್ಚಿನದನ್ನು ನೀಡುತ್ತದೆ. ಇದು ಮನರಂಜನೆಗೆ ಒಂದು ಹೆಬ್ಬಾಗಿಲು. ಟೆಲಿಕಾಂ ದೈತ್ಯ ಕಂಪನಿಗಳಾದ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಇದನ್ನು ಅರ್ಥಮಾಡಿಕೊಂಡಿವೆ. Reliance Jio ಮತ್ತು Airtel ಗ್ರಾಹಕರು ಹೆಚ್ಚು ಹಣ ಖರ್ಚು ಮಾಡದೇ ಪ್ರೈಮ್ ಚಂದಾದಾರಿಕೆ, ಕರೆ ಮತ್ತು ಡೇಟಾ ಪಡೆಯಬಹುದು.

Digit.in Survey
✅ Thank you for completing the survey!

ಈ ಉಚಿತ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಒಳಗೊಂಡಿರುವ ಆಕರ್ಷಕ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಿವೆ. ಇದರರ್ಥ ನೀವು ನಿಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ನಿರಂತರವಾಗಿ ವೀಕ್ಷಿಸಬಹುದು. ಜಾಹೀರಾತುಗಳಿಲ್ಲದೆ ಮ್ಯೂಸಿಕ್ ಆನಂದಿಸಬಹುದು. ಅಲ್ಲದೆ ಅಮೆಜಾನ್ ಪ್ರತ್ಯೇಕ ಪ್ರೈಮ್ ಚಂದಾದಾರಿಕೆಗೆ ಹೆಚ್ಚುವರಿ ಖರ್ಚು ಮಾಡದೆಯೇ ವಿಶೇಷ ಶಾಪಿಂಗ್ ಪ್ರಯೋಜನಗಳನ್ನು ಪಡೆಯಬಹುದು. ಅವರ ಕೆಲವು ಜನಪ್ರಿಯ ಯೋಜನೆಗಳನ್ನು ನೋಡೋಣ.

ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2025 ಮಾರಾಟ ಶುರುವಾಗಲಿದೆ!

ಭಾರತದಲ್ಲಿ ಪ್ರಸ್ತುತ ನಾಳೆಯಿಂದ ಅಮೆಜಾನ್ ತನ್ನ ಫ್ರೀಡಂ ಫೆಸ್ಟಿವಲ್ ಸೇಲ್ ಅನ್ನು ಆರಂಭಿಸಲಾಗಿದೆ. ಇದರಲ್ಲಿ ಮೊದಲಿಗೆ ಸಾಮಾನ್ಯ ಬಳಕೆದಾರಿಗಿಂತ 12 ಗಂಟೆಗಳ ಮೊದಲು ಜಬರದಸ್ತ್ ಡೀಲ್ ಮತ್ತು ಡಿಸ್ಕೌಂಟ್ ಪಡೆಯಲು ಅವಕಾಶವನ್ನು ಪಡೆಯಬಹುದು. ಅಲ್ಲದೆ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆಯುವುದರಿಂದ ನಿಮ್ಮ ಯಾವುದೇ ಆರ್ಡರ್ ಅದೇ ದಿನ ಪಡೆಯಬಹುದು. ಈ ಮೂಲಕ ಜಿಯೋ ಮತ್ತು ಏರ್ಟೆಲ್ ಗ್ರಾಹಕರು ತಿಂಗಳಿಗೆ ಬಳಸುವ ರಿಚಾರ್ಜ್ ಯೋಜನೆಯಲ್ಲೇ ಈ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆಯಬಹುದು. ಇದಕ್ಕಾಗಿ ಯಾವುದೇ ಹೆಚ್ಚುವರಿಯ ಹಣ ಖರ್ಚು ಮಾಡುವ ಅಗತ್ಯವಿಲ್ಲ ಅನ್ನೋದು ವಿಶೇಷವಾಗಿದೆ.

ಇದನ್ನೂ ಓದಿ: ಭಾರತದಲ್ಲಿ Vivo V60 ಬಿಡುಗಡೆ ಕಂಫಾರ್ಮ್ ಮಾಡಿದ ವಿವೋ! ಫೀಚರ್ ಮತ್ತು ಬೆಲೆ ಎಷ್ಟಿರಬಹುದು!

ರಿಲಯನ್ಸ್ ಜಿಯೋ 1029 ರೀಚಾರ್ಜ್ ಪ್ಲಾನ್ ವಿವರಗಳು:

ಜಿಯೋದ ₹1029 ಪ್ರಿಪೇಯ್ಡ್ ಯೋಜನೆಯು ಸಂಪರ್ಕ ಮತ್ತು ಮನರಂಜನೆ ಎರಡನ್ನೂ ಬಯಸುವವರಿಗೆ ಅದ್ಭುತ ಆಯ್ಕೆಯಾಗಿದೆ. ಇದು 84 ದಿನಗಳ ಉದಾರ ಮಾನ್ಯತೆಯೊಂದಿಗೆ ಬರುತ್ತದೆ. ಚಂದಾದಾರರು ದಿನಕ್ಕೆ 2GB ಹೈ-ಸ್ಪೀಡ್ ಡೇಟಾ (ಅರ್ಹ ಬಳಕೆದಾರರಿಗೆ ಅನಿಯಮಿತ 5G ಡೇಟಾದೊಂದಿಗೆ) ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಪಡೆಯುತ್ತಾರೆ. ಪ್ರಮುಖ ಹೈಲೈಟ್ ಎಂದರೆ ಸಂಪೂರ್ಣ 84 ದಿನಗಳ ಮಾನ್ಯತೆಗೆ ಉಚಿತ ಅಮೆಜಾನ್ ಪ್ರೈಮ್ ಲೈಟ್ ಚಂದಾದಾರಿಕೆ ಜೊತೆಗೆ ಜಿಯೋಟಿವಿ ಮತ್ತು ಜಿಯೋಸಿನಿಮಾಗೆ ಪ್ರವೇಶ ಪಡೆಯಬಹುದು.

ಏರ್‌ಟೆಲ್ 838 ರೀಚಾರ್ಜ್ ಪ್ಲಾನ್ ವಿವರಗಳು:

ಏರ್‌ಟೆಲ್‌ನ ₹838 ಪ್ರಿಪೇಯ್ಡ್ ಯೋಜನೆಯು ಆಕರ್ಷಕ ಪ್ಯಾಕೇಜ್ ಅನ್ನು ನೀಡುತ್ತದೆ. ವಿಶೇಷವಾಗಿ ಡೇಟಾ ಮತ್ತು ಪ್ರೈಮ್ ಪ್ರವೇಶಕ್ಕೆ ಆದ್ಯತೆ ನೀಡುವವರಿಗೆ ಈ ಯೋಜನೆಯು 56 ದಿನಗಳ ಮಾನ್ಯತೆಗಾಗಿ 3GB ದೈನಂದಿನ ಡೇಟಾವನ್ನು ಒದಗಿಸುತ್ತದೆ ಜೊತೆಗೆ ಅನಿಯಮಿತ ಸ್ಥಳೀಯ, STD ಮತ್ತು ರೋಮಿಂಗ್ ಕರೆಗಳು ಮತ್ತು ದಿನಕ್ಕೆ 100 SMS ನೀಡುತ್ತದೆ. ಜಿಯೋದಂತೆ ಇದು 56 ದಿನಗಳವರೆಗೆ ಉಚಿತ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಒಳಗೊಂಡಿದೆ . ಹೆಚ್ಚುವರಿಯಾಗಿ ಬಳಕೆದಾರರು ಅನಿಯಮಿತ 5G ಡೇಟಾ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ (22 ಕ್ಕೂ ಹೆಚ್ಚು OTT ಅಪ್ಲಿಕೇಶನ್‌ಗಳೊಂದಿಗೆ) ಮತ್ತು Wynk Music ನಂತಹ ಇತರ ಸವಲತ್ತುಗಳನ್ನು ಪಡೆಯುತ್ತಾರೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo