ಭಾರತದಲ್ಲಿ Vivo V60 ಬಿಡುಗಡೆ ಕಂಫಾರ್ಮ್ ಮಾಡಿದ ವಿವೋ! ಫೀಚರ್ ಮತ್ತು ಬೆಲೆ ಎಷ್ಟಿರಬಹುದು!

HIGHLIGHTS

ಭಾರತದಲ್ಲಿ Vivo V60 ಬಿಡುಗಡೆಯನ್ನು ಕಂಫಾರ್ಮ್ ಮಾಡಿರುವ ವಿವೋ ಕಂಪನಿ!

6500mAh ಬ್ಯಾಟರಿಯೊಂದಿಗೆ ಬರುವ ಈ ಸ್ಮಾರ್ಟ್ಫೋನ್ ಬೆಲೆ ಮತ್ತು ಫೀಚರ್ಗಳೇನು?

Vivo V60 ಸ್ಮಾರ್ಟ್ಫೋನ್ ಬೆಲೆ ಸುಮಾರು ಆರಂಭಿಕ 37,000 ರೂಗಳಿಂದ ಶುರುವಾಗುವ ನಿರೀಕ್ಷೆಗಳಿವೆ.

ಭಾರತದಲ್ಲಿ Vivo V60 ಬಿಡುಗಡೆ ಕಂಫಾರ್ಮ್ ಮಾಡಿದ ವಿವೋ! ಫೀಚರ್ ಮತ್ತು ಬೆಲೆ ಎಷ್ಟಿರಬಹುದು!

Vivo V60 India Launch Confirmed: ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ (Vivo) ತನ್ನ ಮುಂಬರಲಿರುವ Vivo V60 ಬಿಡುಗಡೆಯನ್ನು ಕಂಫಾರ್ಮ್ ಮಾಡಿದೆ! 6500mAh ಬ್ಯಾಟರಿಯೊಂದಿಗೆ ಬರುವ ಈ ಸ್ಮಾರ್ಟ್ಫೋನ್ ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಬಹುದು. ಈ ಸ್ಮಾರ್ಟ್ಫೋನ್ ಮುಖ್ಯವಾಗಿ ಕ್ಯಾಮೆರಾ ವಿಭಾಗವನ್ನು ಹೆಚ್ಚು ಹೊತ್ತು ನಿಡುವುದರೊಂದಿಗೆ ಫೋಟೋಗ್ರಾಫಿ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ ಅನ್ನೋದು ಸ್ಪಷ್ಟವಾಗಿ ಕಾಣುತ್ತದೆ. ಸ್ಮಾರ್ಟ್ಫೋನ್ ಕ್ವಾಡ್ ಕರ್ವ್ ಡಿಸ್ಪ್ಲೇಯನ್ನು ಹೊಂದಿದ್ದು ಟ್ರಿಪಲ್ ರೇರ್ ಕ್ಯಾಮೆರಾವನ್ನು ಸಪೋರ್ಟ್ ಮಾಡುತ್ತದೆ. ಹಾಗಾದ್ರೆ Vivo V60 ಸ್ಮಾರ್ಟ್ಫೋನ್ ಯಾವಾಗ ಬಿಡುಗಡೆಯಾಗುತ್ತೆ ಮತ್ತು ಇದರ ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ.

Digit.in Survey
✅ Thank you for completing the survey!

ಭಾರತದಲ್ಲಿ Vivo V60 ನಿರೀಕ್ಷಿತ ಬೆಲೆ ಮತ್ತು ಲಭ್ಯತೆ

ಈ ಮುಂಬರಲಿರುವ Vivo V60 ಸ್ಮಾರ್ಟ್ಫೋನ್ ಮುಂದಿನ ತಿಂಗಳು ಅಂದರೆ 12ನೇ ಆಗಸ್ಟ್ 2025 ಸುಮಾರಿಗೆ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ . ಈ ಮೂಲಕ ಇದರ ಮೂಲ ಮಾದರಿಯನ್ನು ಸುಮಾರು ₹37,000 ರಿಂದ ₹40,000 ರೂಗಳ ಮಧ್ಯೆ ನಿರೀಕ್ಷಿಸಲಾಗಿದೆ. Vivo V60 ಸ್ಮಾರ್ಟ್ಫೋನ್ ವಿವೋದ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯ ನಂತರ ಲಭ್ಯವಿರುತ್ತದೆ. ಅಲ್ಲದೆ ಈ Vivo V60 ಸ್ಮಾರ್ಟ್ಫೋನ್ ನಿಮಗೆ ಆಸುಪಿಯಸ್ ಗೋಲ್ಡ್, ಮಿಸ್ಟ್ ಗ್ರೇ ಮತ್ತು ಮೂನ್‌ಲಿಟ್ ಬ್ಲೂ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಬರಬಹುದು.

ಇದನ್ನೂ ಓದಿ: OPPO K13 Turbo Series ಬಿಡುಗಡೆಗೆ ಸಜ್ಜು! ಮುಂಬರಲಿರುವ ಸ್ಮಾರ್ಟ್ಫೋನ್ ಅನೌನ್ಸ್ ಮಾಡಿದ ಒಪ್ಪೋ!

ಭಾರತದಲ್ಲಿ Vivo V60 ನಿರೀಕ್ಷಿತ ಫೀಚರ್ ಮತ್ತು ವಿಶೇಷತೆಗಳು?

ಈ ಮುಂಬರುವ ಫೋನ್ 6.67-ಇಂಚಿನ 1.5K AMOLED 120Hz ಡಿಸ್ಪ್ಲೇಯನ್ನು ಹೊಂದಿರಬಹುದು ಸ್ಮಾರ್ಟ್ಫೋನ್ ZEISS ಬೆಂಬಲಿತ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ OIS ನೊಂದಿಗೆ 50MP ಪ್ರೈಮರಿ ಕ್ಯಾಮೆರಾ 100x ಡಿಜಿಟಲ್ ಜೂಮ್ ಸಹ ಸಪೋರ್ಟ್ ಮಾಡುತ್ತದೆ. ಮತ್ತೊಂದು 8MP ಅಲ್ಟ್ರಾವೈಡ್ ಸೆನ್ಸರ್ ಮತ್ತು 50MP ಟೆಲಿಫೋಟೋ ಸೆನ್ಸರ್ ಬರುವ ನಿರೀಕ್ಷೆ. 50MP ಸೆಲ್ಫಿ ಕ್ಯಾಮೆರಾದೊಂದಿಗೆ ಒಂದು ಹೈಲೈಟ್ ಆಗಿರುತ್ತದೆ.

ಈ ಸ್ಮಾರ್ಟ್ಫೋನ್ ಪ್ರಮುಖ ಹೈಲೈಟ್ ಎಂದರೆ ಇದರ 90W ಫಾಸ್ಟ್ ಚಾರ್ಜಿಂಗ್ ಹೊಂದಿರುವ ಇದರ ಬೃಹತ್ 6,500mAh ಬ್ಯಾಟರಿಯನ್ನು ಕಂಪನಿ ಈಗಾಗಲೇ ಕಂಫಾರ್ಮ್ ಮಾಡಿದೆ. Vivo V60 ಸ್ಮಾರ್ಟ್ಫೋನ್ ಮತ್ತು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 Gen 4 ಮೂಲಕ ಚಾಲಿತವಾಗಬಹುದು. ಅಲ್ಲದೆ IP68/IP69 ರೇಟಿಂಗ್‌ಗಳನ್ನು ನಿರೀಕ್ಷಿಸಬಹುದು. ಇದು ದೃಢವಾದ 5G ಕಾರ್ಯಕ್ಷಮತೆಯನ್ನು ಖಚಿತಪಡಿಸುವುದರೊಂದಿಗೆ ಹೊಸ ಆಂಡ್ರಾಯ್ಡ್ 15 ಅನ್ನು ಬೆಂಬಲಿಸಲಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo