ಜಿಯೋ ಇಂದು ತನ್ನ Jio's 9th Anniversary ಅನ್ನು ಆಚರಿಸುತ್ತಿದೆ.
ಜಿಯೋ ಉಚಿತ ಡೇಟಾ, ವಿಶೇಷ ರಿಯಾಯಿತಿಗಳು ಮತ್ತು ಇನ್ನೂ ಹೆಚ್ಚಿನದನ್ನು ನೀಡುತ್ತಿದೆ.
ಇತ್ತೀಚಿನ ಜಿಯೋ ವಾರ್ಷಿಕೋತ್ಸವ ಯೋಜನೆಗಳ ಕುರಿತು ಮತ್ತು ನಿಮ್ಮ ಬಹುಮಾನಗಳನ್ನು ಹೇಗೆ ಪಡೆಯುವುದು.
Jio’s 9th Anniversary: ಇಂದು ರಿಲಯನ್ಸ್ ಜಿಯೋ ತನ್ನ 9ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಜಿಯೋ ಬಂದ ನಂತರ ಭಾರತದ ಡಿಜಿಟಲ್ ಜಗತ್ತು ಸಂಪೂರ್ಣವಾಗಿ ಬದಲಾಗಿದೆ. ಮೊದಲು ಜಿಯೋ 2016 ಇಸವಿಯಲ್ಲಿ ಶುರುವಾದಈ ಕಂಪನಿ ಡೇಟಾ ಬಳಕೆ ಮತ್ತು ಇಂಟರ್‌ನೆಟ್ ಬಳಕೆಯನ್ನು ದೇಶಾದ್ಯಂತ ಕ್ರಾಂತಿಕಾರಕವಾಗಿ ಹೆಚ್ಚಿಸಿದೆ. ಕೋಟ್ಯಂತರ ಜನರಿಗೆ ಅತಿ ಕಡಿಮೆ ಬೆಲೆಯಲ್ಲಿ ಹೈ-ಸ್ಪೀಡ್ ಇಂಟರ್‌ನೆಟ್ ಅನ್ನು ತಲುಪಿಸಿದ ಹೆಗ್ಗಳಿಕೆ ಜಿಯೋಗೆ ಸಲ್ಲುತ್ತದೆ. ಜಿಯೋ ತನ್ನ ಈ ವಿಶೇಷ ವಾರ್ಷಿಕೋತ್ಸವದ ಸಂದರ್ಭದಲ್ಲಿ ತನ್ನ ಗ್ರಾಹಕರಿಗಾಗಿ ಕೆಲವು ಆಕರ್ಷಕ ಆಫರ್‌ಗಳನ್ನು ಘೋಷಿಸಿದೆ.
SurveyJio’s 9th Anniversary ಆಚರಿಸಲು 5 ಪ್ರಮುಖ ಸಾಧನೆಗಳು:
ಡೇಟಾ ಕ್ರಾಂತಿ: ಜಿಯೋ ಆರಂಭದಲ್ಲಿ ತಿಂಗಳುಗಳ ಕಾಲ ಉಚಿತ ಡೇಟಾ ಮತ್ತು ಕರೆಗಳನ್ನು ನೀಡಿ ಡೇಟಾ ಬೆಲೆಯನ್ನು ಅತಿ ಕಡಿಮೆ ಮಾಡಿತು. ಇದರಿಂದ ಇಂಟರ್‌ನೆಟ್ ಸೌಲಭ್ಯ ಮೊದಲ ಬಾರಿಗೆ ಕೋಟ್ಯಂತರ ಜನರಿಗೆ ಸುಲಭವಾಗಿ ಸಿಕ್ಕಿತು.
4G ಮತ್ತು 5G ಅಳವಡಿಕೆ: ಜಿಯೋ ಭಾರತವನ್ನು 2G ಮತ್ತು 3Gಯಿಂದ 4G ರಾಷ್ಟ್ರವನ್ನಾಗಿ ಮಾಡಿತು. ಜಿಯೋನ ಪ್ಯಾನ್-ಇಂಡಿಯಾ 4G ನೆಟ್‌ವರ್ಕ್ ಪ್ರತಿಸ್ಪರ್ಧಿಗಳನ್ನು ತಮ್ಮ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಂತೆ ಮಾಡಿತು. ಈಗ ತನ್ನ 5G ಸೇವೆಯನ್ನು ವೇಗವಾಗಿ ವಿಸ್ತರಿಸುವ ಮೂಲಕ ಜಿಯೋ ಮುಂಚೂಣಿಯಲ್ಲಿದೆ.

ಡಿಜಿಟಲ್ ಜಗತ್ತನ್ನು ವಿಸ್ತರಿಸಿದ್ದು: ಟೆಲಿಕಾಂ ಸೇವೆಯ ಜೊತೆಗೆ ಜಿಯೋ ಒಂದು ದೊಡ್ಡ ಡಿಜಿಟಲ್ ವ್ಯವಸ್ಥೆಯನ್ನು ಕಟ್ಟಿದೆ. JioCinema, JioSaavn ನಂತಹ ಮನರಂಜನಾ ಅಪ್ಲಿಕೇಶನ್‌ಗಳಿಂದ Jio Payments Bank ನಂತಹ ಹಣಕಾಸು ಸೇವೆಗಳು ಮತ್ತು JioFiber ನಂತಹ ಸ್ಮಾರ್ಟ್ ಹೋಮ್ ಪರಿಹಾರಗಳನ್ನು ಒದಗಿಸಿದೆ.
ಹಳ್ಳಿಗಳಿಗೂ ಸಂಪರ್ಕ: ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ನೆಟ್‌ವರ್ಕ್ ವಿಸ್ತರಣೆಗೆ ಜಿಯೋ ಹೆಚ್ಚು ಗಮನ ನೀಡಿದೆ. ಇದರಿಂದ ಹಳ್ಳಿಗಳಲ್ಲಿರುವ ಜನರಿಗೆ ಶಿಕ್ಷಣ, ಇ-ಕಾಮರ್ಸ್ ಮತ್ತು ಆರೋಗ್ಯ ಸೇವೆಗಳು ಸುಲಭವಾಗಿ ಸಿಗುತ್ತಿವೆ.
ಕಡಿಮೆ ಬೆಲೆಯ ಸಾಧನಗಳು: ಎಲ್ಲರೂ ಡಿಜಿಟಲ್ ಕ್ರಾಂತಿಯ ಭಾಗವಾಗಲು ಜಿಯೋ 4G ಸಾಮರ್ಥ್ಯವಿರುವ JioPhone ಅನ್ನು ಪರಿಚಯಿಸಿತು. ಸ್ಮಾರ್ಟ್‌ಫೋನ್ ಕೊಂಡುಕೊಳ್ಳಲು ಆಗದವರಿಗೆ ಇದು ಇಂಟರ್‌ನೆಟ್ ಒದಗಿಸಿತು.
Also Read: ಗೂಗಲ್‌ನ ಹೊಸ ‘Nano Banana AI Image Tool’ ಬಳಸುವುದು ಹೇಗೆ? ಹಂತ ಹಂತದ ಮಾಹಿತಿ ಇಲ್ಲಿದೆ
9ನೇ ವಾರ್ಷಿಕೋತ್ಸವದಲ್ಲಿ ಮೊಬೈಲ್ ಸಿಮ್ ಬಳಕೆದಾರರಿಗೆ ಆಫರ್‌ಗಳು:
- ಹೆಚ್ಚುವರಿ ಡೇಟಾ ವೋಚರ್‌ಗಳು: ಆಯ್ದ ಪ್ಲಾನ್‌ಗಳಿಗೆ ರೀಚಾರ್ಜ್ ಮಾಡಿದರೆ ಹೆಚ್ಚುವರಿ ಡೇಟಾ ಸಿಗುತ್ತದೆ. ಉದಾಹರಣೆಗೆ ₹299 ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್‌ಗೆ 9GB ಡೇಟಾ ವೋಚರ್ ಉಚಿತವಾಗಿ ಸಿಗುತ್ತದೆ.
- ರಿಯಾಯಿತಿಗಳು: MyJio ಅಪ್ಲಿಕೇಶನ್ ಮತ್ತು ಇತರ ಪೇಮೆಂಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ರೀಚಾರ್ಜ್ ಮಾಡಿದರೆ ವಿಶೇಷ ರಿಯಾಯಿತಿ ಮತ್ತು ಕ್ಯಾಶ್‌ಬ್ಯಾಕ್ ಲಭ್ಯವಿದೆ.
- ಪಾರ್ಟ್‌ನರ್ ಆಫರ್‌ಗಳು: ವಾರ್ಷಿಕೋತ್ಸವದ ಅಂಗವಾಗಿ ಗ್ರಾಹಕರು Amazon Prime, Disney+ Hotstar, ಮತ್ತು Zomato ನಂತಹ ಜಿಯೋ ಪಾರ್ಟ್‌ನರ್‌ಗಳ ಸೇವೆಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ಪಡೆಯಬಹುದು.
ಹೊಸ ಜಿಯೋ ಹೋಮ್ ಗ್ರಾಹಕರಿಗೆ ಆಫರ್‌ಗಳು:
ಉಚಿತ ಇನ್‌ಸ್ಟಾಲೇಷನ್: ಹೊಸದಾಗಿ JioFiber ಸಂಪರ್ಕ ಪಡೆಯುವವರಿಗೆ ಇನ್‌ಸ್ಟಾಲೇಷನ್ ಶುಲ್ಕ ಸಂಪೂರ್ಣ ಉಚಿತವಾಗಿರುತ್ತದೆ.
ವಾರ್ಷಿಕ ಪ್ಲಾನ್‌ಗಳಿಗೆ ಹೆಚ್ಚುವರಿ ವ್ಯಾಲಿಡಿಟಿ: ವಾರ್ಷಿಕ JioFiber ಪ್ಲಾನ್ ತೆಗೆದುಕೊಂಡರೆ ಒಂದು ತಿಂಗಳ ಹೆಚ್ಚುವರಿ ಸೇವೆಯನ್ನು ಉಚಿತವಾಗಿ ಪಡೆಯಬಹುದು.
ಆಕರ್ಷಕ ಬಂಡಲ್‌ಗಳು: ಹೊಸ ಗ್ರಾಹಕರು JioFiber ಅಥವಾ JioAirFiber ಜೊತೆಗೆ ಸ್ಮಾರ್ಟ್ ಸ್ಪೀಕರ್ ಅಥವಾ ಸೆಕ್ಯೂರಿಟಿ ಕ್ಯಾಮೆರಾ ಲೈಕ್ ಉಚಿತ ಸ್ಮಾರ್ಟ್ ಹೋಮ್ ಸಾಧನಗಳನ್ನು ಪಡೆಯಬಹುದು.
ಜಿಯೋ ಬರೋಬ್ಬರಿ 9 ವರ್ಷಗಳನ್ನು ಪೂರೈಸಿದ ಜಿಯೋ ಮಾರುಕಟ್ಟೆಯಲ್ಲಿ ತನ್ನ ಪ್ರಭಾವವನ್ನು ಸ್ಪಷ್ಟವಾಗಿ ತೋರಿಸಿದೆ. ಈ ಆಫರ್‌ಗಳು ಈ ಅದ್ಭುತ ಪ್ರಯಾಣದ ಭಾಗವಾಗಿರುವ ಲಕ್ಷಾಂತರ ಗ್ರಾಹಕರಿಗೆ ಜಿಯೋ ನೀಡುತ್ತಿರುವ ಧನ್ಯವಾದಗಳು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile