Free Gemini 3 For Jio Users: ಭಾರತದ ಜನಪ್ರಿಯ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ಇಂದು ತನ್ನ ಜಿಯೋ ಬಳಕೆದಾರರಿಗೆ ಹೊಸ ಜೆಮಿನಿ ಎಐ ಆಫರ್ ವ್ಯಾಪ್ತಿಯನ್ನು ವಿಸ್ತರಿಸಿದ್ದು ಎಲ್ಲಾ ಜಿಯೋ 5G ಅನ್ಲಿಮಿಟೆಡ್ ಬಳಕೆದಾರರಿಗೆ ಜಿಯೋ ಜೆಮಿನಿ ಪ್ರೊ ಪ್ಲಾನ್ ಉಚಿತವಾಗಿ ಘೋಷಿಸಿದೆ. ರಿಲಯನ್ಸ್ ಜಿಯೋ ಇಂದು ತನ್ನ ಜಿಯೋ ಜೆಮಿನಿ ಆಫರ್ ವಿಸ್ತರಣೆಯನ್ನು ಘೋಷಿಸಿದೆ. ಇದರಲ್ಲಿ ಜಿಯೋ ಜೆಮಿನಿ ಪ್ರೊ ಪ್ಲಾನ್ ಭಾಗವಾಗಿ ಗೂಗಲ್ ಜೆಮಿನಿ 3 ಸೇರಿದೆ. ಇದು ಎಲ್ಲಾ ಜಿಯೋ ಅನ್ಲಿಮಿಟೆಡ್ 5G ಗ್ರಾಹಕರಿಗೆ 18 ತಿಂಗಳವರೆಗೆ ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತದೆ. ಹೀಗಾಗಿ ಈ ಯೋಜನೆಯು ಗೂಗಲ್‌ನ ಹೊಸ ಮತ್ತು ಮುಂದುವರಿದ ಜೆಮಿನಿ 3 ಮಾದರಿಯನ್ನು ಒಳಗೊಂಡಿದೆ ಮತ್ತು ಯುವಕರಿಗೆ ಮಾತ್ರವಲ್ಲದೆ ಎಲ್ಲಾ 5G ಬಳಕೆದಾರರಿಗೆ ಇದನ್ನು ಬಿಡುಗಡೆ ಮಾಡಲಾಗಿದೆ.
SurveyAlso Read: Jio vs Airtel: ಬರೋಬ್ಬರಿ 90 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವ ಈ ರಿಚಾರ್ಜ್ ಯೋಜನಗೆಳಲ್ಲಿ ಯಾವುದು ಬೆಸ್ಟ್?
Free Gemini 3 ಜಿಯೋದ ಎಲ್ಲ ಅನ್ಲಿಮಿಟೆಡ್ 5G ಪ್ಲಾನ್ ಬಳಕೆದಾರರಿಗೆ ಲಭ್ಯ:
ಜಿಯೋದ ಎಲ್ಲ ಅನ್ಲಿಮಿಟೆಡ್ 5G ಪ್ಲಾನ್ ಬಳಕೆದಾರರಾಗಿದ್ದರೆ ಈ ಜಬರ್ದಸ್ತ್ AI ಟೂಲ್ ಉಚಿತವಾಗಿದೆ. ಅಂದರೆ ಈವರೆಗೆ ಕೇವಲ ಯುವಕರಿಗೆ ಮಾತ್ರ ನೀಡುವ ಕೊಡುಗೆಯ ಹೊರತಾಗಿ ಇದು ಎಲ್ಲಾ ಅರ್ಹ ಅನಿಯಮಿತ 5G ಬಳಕೆದಾರರಿಗೆ ಲಭ್ಯವಿರುತ್ತದೆ. ಇದರಲ್ಲಿ ಗೂಗಲ್‌ನ ಹೊಸ ಜೆಮಿನಿ 3 ಮಾದರಿಯನ್ನು ಸೇರಿಸಲಾಗುವುದು. ಜಿಯೋದ ಅನ್‌ಲಿಮಿಟೆಡ್ 5G ಯೋಜನೆಯ ಬೆಲೆ ₹349 ರೂಗಳಾಗಿದ್ದು ಇದು ರಿಲಯನ್ಸ್ ಜಿಯೋದ ಸುಮಾರು 230 ಮಿಲಿಯನ್ ಬಳಕೆದಾರರಿಗೆ 18 ತಿಂಗಳವರೆಗೆ Gemini 3 ಪ್ರವೇಶವನ್ನು ನೀಡುತ್ತದೆ. ಇದು ಅವರಿಗೆ ಸುಧಾರಿತ AI ಪರಿಕರಗಳನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.
ಈ ಹಿಂದೆ ಈ ಆಫರ್ ಯುವಜನರಿಗೆ ಮಾತ್ರ ಸೀಮಿತವಾಗಿತ್ತು ಆದರೆ ಈಗ ಇದನ್ನು ಎಲ್ಲಾ ಅನ್‌ಲಿಮಿಟೆಡ್ 5G ಬಳಕೆದಾರರಿಗೆ ವಿಸ್ತರಿಸಲಾಗಿದ್ದು ರಿಲಯನ್ಸ್ ಜಿಯೋದ ವಿಶಾಲ ಬಳಕೆದಾರ ನೆಲೆಗೆ ಪ್ರಯೋಜನವನ್ನು ನೀಡುತ್ತದೆ. ಈ ವಿಸ್ತರಣೆಯೊಂದಿಗೆ ಪ್ರತಿಯೊಬ್ಬ ಅರ್ಹ ಜಿಯೋ ಅನ್‌ಲಿಮಿಟೆಡ್ 5G ಬಳಕೆದಾರರು ಸುಮಾರು 35,100 ರೂಪಾಯಿಗಳ ಮೌಲ್ಯದ ಜೆಮಿನಿ ಪ್ರೊ ಯೋಜನೆಯನ್ನು 18 ತಿಂಗಳವರೆಗೆ ಸಂಪೂರ್ಣವಾಗಿ ಉಚಿತವಾಗಿ ಆನಂದಿಸಬಹುದು. ಇದು ಸುಧಾರಿತ AI ಅನ್ನು ಪ್ರತಿಯೊಬ್ಬ ಭಾರತೀಯರಿಗೂ ಲಭ್ಯವಾಗುವಂತೆ ಮಾಡುವ ಜಿಯೋದ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಇದರಲ್ಲಿ Jio ಬಳಕೆದಾರರಿಗೆ ಏನೇನು ಲಭ್ಯ?
ಈ ಹೊಸ ಕೊಡುಗೆಯು ಬಳಕೆದಾರರಿಗೆ ₹35,100 ಬೆಲೆಯ ಜೆಮಿನಿ ಪ್ರೊ ಪ್ಲಾನ್ 18 ತಿಂಗಳವರೆಗೆ ಜಿಯೋ ಅನ್‌ಲಿಮಿಟೆಡ್ 5G ಪ್ರವೇಶ ಮತ್ತು ಇತ್ತೀಚಿನ ಜೆಮಿನಿ 3 ಮಾದರಿಯನ್ನು ನೀಡುತ್ತದೆ. ಬಳಕೆದಾರರು MyJio ಅಪ್ಲಿಕೇಶನ್ ಮೂಲಕ ‘ಕ್ಲೈಮ್ ನೌ’ ಬ್ಯಾನರ್ ಮೂಲಕ ಅದನ್ನು ತಕ್ಷಣವೇ ಸಕ್ರಿಯಗೊಳಿಸಬಹುದು. ಈ ಕೊಡುಗೆ ಇಂದು ಅಂದರೆ 19ನೇ ನವೆಂಬರ್ 2025 ರಿಂದ ಪ್ರಾರಂಭವಾಗುತ್ತದೆ. ಅಕ್ಟೋಬರ್‌ನಲ್ಲಿ ಗೂಗಲ್, ರಿಲಯನ್ಸ್ ಇಂಡಸ್ಟ್ರೀಸ್‌ನ AI ಅಂಗವಾದ ರಿಲಯನ್ಸ್ ಇಂಟೆಲಿಜೆನ್ಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡು ಆಯ್ದ ರಿಲಯನ್ಸ್ ಜಿಯೋ ಬಳಕೆದಾರರಿಗೆ 18 ತಿಂಗಳ ಅವಧಿಗೆ ಗೂಗಲ್ AI ಪ್ರೊ ಯೋಜನೆಯನ್ನು ನೀಡಿತು ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile