ಕನ್ಫರ್ಮ್ ಆಯ್ತು Vivo V70 ಸರಣಿ ಲಾಂಚ್ ಡೇಟ್! ಕುತೂಹಲ ಹೆಚ್ಚಿಸಿದ ಬೆಲೆ ಮತ್ತು ಫೀಚರ್ಸ್
Vivo V70 ಸರಣಿಯು ಫೆಬ್ರವರಿ 19 ರಂದು ಮಾರುಕಟ್ಟೆ ಪ್ರವೇಶಿಸಲಿದೆ
ಈ ಸರಣಿಯು Vivo V70 ಮತ್ತು Vivo V70 Elite ಮಾಡೆಲ್‌ಗಳನ್ನು ಒಳಗೊಂಡಿರಲಿದೆ
Vivo V70 ಸರಣಿಯು Snapdragon 8 ಪ್ರೊಸೆಸರ್ ಹೊಂದಿರಲಿದೆ
Vivo ಮೊಬೈಲ್ ಕಂಪನಿಯು Vivo V70 ಸರಣಿಯ ಮುಂದಿನ ಆವೃತ್ತಿಯಾದ Vivo V70 ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ Vivo V70 ಸರಣಿಯು Vivo V70 ಮತ್ತು Vivo V70 Elite ಹೆಸರಿನ ಮಾಡೆಲ್‌ಗಳನ್ನು ಒಳಗೊಂಡಿರುವುದು ಬಹುತೇಕ ಖಚಿತವಾಗಿದೆ. ಇನ್ನು ಈ ನೂತನ ಸರಣಿಯನ್ನು ಇದೇ ತಿಂಗಳ ಮೂರನೇ ವಾರದಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಈ ಸರಣಿಯ ಮೊಬೈಲ್‌ಗಳು ಕ್ವಾಲ್ಕಮ್ Snapdragon 8 ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿರುವ ಸಾಧ್ಯತೆಗಳು ಇವೆ. ಇದರೊಂದಿಗೆ ಈ ಮೊಬೈಲ್‌ಗಳು Zeiss ಕ್ಯಾಮೆರಾ ವ್ಯವಸ್ಥೆಯನ್ನು ಒಳಗೊಂಡಿರುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಇನ್ನುಳಿದಂತೆ Vivo V70 ಸರಣಿಯ ಲಾಂಚ್ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಭಾರತದಲ್ಲಿ Zebronics ನಿಂದ ಎರಡು ಹೊಸ ಸೌಂಡ್‌ಬಾರ್ ಬಿಡುಗಡೆ! ಬೆಲೆ ಮತ್ತು ಫೀಚರ್ಸ್ ತಿಳಿಯಿರಿ
Vivo V70 ಸರಣಿ ಬಿಡುಗಡೆ ದಿನಾಂಕ ನಿಗದಿ
Vivo ಮೊಬೈಲ್ ಕಂಪನಿಯು ಪರಿಚಯಿಸಲು ಸಜ್ಜಾಗಿರುವ Vivo V70 ಸರಣಿಯು ಇದೇ February 19, 2026 ರಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ ಎಂದು ವಿವೋ ಸಂಸ್ಥೆಯು ಖಚಿತಪಡಿಸಿದೆ. ಈ ಸರಣಿಯಲ್ಲಿ Vivo V70 ಮತ್ತು Vivo V70 Elite ಮಾಡೆಲ್‌ಗಳು ಎಂಟ್ರಿ ಕೊಡುವ ಬಹುತೇಕ ನಿಕ್ಕಿ ಎನ್ನಲಾಗಿದೆ. Vivo V70 ಸರಣಿಯ ಕುರಿತಾಗಿ Flipkart ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋ ಪೇಜ್ ಕೂಡಾ ತೆರೆಯಲಾಗಿದೆ. ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಸರಣಿಯ ಬೆಲೆಯ ಬಗ್ಗೆ ಅಧಿಕೃತವಾಗಿ ಕಂಪನಿಯು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

Vivo V70 ನಿರೀಕ್ಷಿತ ಫೀಚರ್ಸ್ ಹೀಗಿವೆ
Vivo V70 ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 6.59 ಇಂಚಿನ AMOLED ಡಿಸ್‌ಪ್ಲೇ ಅನ್ನು ಪಡೆದಿರಲಿದೆ ಎಂದು ಹೇಳಲಾಗುತ್ತದೆ. ಅಲ್ಲದೇ ಈ ಮೊಬೈಲ್ Snapdragon 7 Gen 4 ಚಿಪ್‌ಸೆಟ್ ಪ್ರೊಸೆಸರ್ ಅನ್ನು ಪಡೆದಿರಬಹುದು ಎನ್ನಲಾಗಿದೆ. ಇದಕ್ಕೆ ಅನುಗುಣವಾಗಿ 12GB RAM ಮತ್ತು 256GB ಸ್ಟೋರೇಜ್ ಆಯ್ಕೆಗಳು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಮೊಬೈಲ್ 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,500 mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯದಲ್ಲಿ ಮಾರುಕಟ್ಟೆ ಪ್ರವೇಶಿಸಬಹುದು ಎಂದು ಲೀಕ್ ಮಾಹಿತಿಗಳು ಸೂಚಿಸುತ್ತದೆ. ಇನ್ನು ಈ ಮೊಬೈಲ್ 50MP + 8MP + 50MP ಸಾಮರ್ಥ್ಯದ Zeiss ಕ್ಯಾಮೆರಾ ಸೆನ್ಸಾರ್ ಆಯ್ಕೆ ಪಡೆದಿರಲಿದೆ.
Vivo V70 Elite ನಿರೀಕ್ಷಿತ ಫೀಚರ್ಸ್
Vivo V70 Elite ಸ್ಮಾರ್ಟ್‌ಫೋನ್ 6.59 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ 120Hz ರಿಫ್ರೆಶ್ ರೇಟ್ ಸೌಲಭ್ಯ ಪಡೆದಿರುವ ಸಾಧ್ಯತೆಗಳು ಇವೆ. ಈ ಫೋನ್ Qualcomm Snapdragon 8s Gen 3 ಚಿಪ್‌ಸೆಟ್ ಪ್ರೊಸೆಸರ್ ಅನ್ನು ಪಡೆದಿರಬಹುದು ಎಂದು ಹೇಳಲಾಗಿದೆ. ಅಲ್ಲದೇ ಈ ಫೋನ್ 6,500mAh ಬ್ಯಾಟರಿ ಆಯ್ಕೆ ಹೊಂದಿರುವ ಜೊತೆಗೆ 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಅನ್ನು ಸಹ ಒಳಗೊಂಡಿರಬಹುದು ಎಂದು ಲೀಕ್ ವರದಿಗಳು ಸೂಚಿಸುತ್ತವೆ. ಹಾಗೆಯೇ ಹಿಂಭಾಗದಲ್ಲಿ Zeiss ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಇರಲಿದ್ದು ಅವುಗಳು ಕ್ರಮವಾಗಿ 50MP + 50MP + 50MP ಕ್ಯಾಮೆರಾ ಸೆನ್ಸಾರ್ ಆಯ್ಕೆ ಪಡೆದಿರಲಿದೆ. ಸೆಲ್ಫಿಗಾಗಿ ಸಹ 50MP ಕ್ಯಾಮೆರಾ ಸೌಲಭ್ಯ ನೀಡಬಹುದು.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile