BSNL ಗ್ರಾಹಕರು ತಿಂಗಳಿಗೆ ಕೇವಲ 125 ರೂಗಳನ್ನು ಖರ್ಚು ಮಾಡಿ ವರ್ಷಪೂರ್ತಿ Unlimited Calls ಮತ್ತು Data ಆನಂದಿಸಿ!

BSNL ಗ್ರಾಹಕರು ತಿಂಗಳಿಗೆ ಕೇವಲ 125 ರೂಗಳನ್ನು ಖರ್ಚು ಮಾಡಿ ವರ್ಷಪೂರ್ತಿ Unlimited Calls ಮತ್ತು Data ಆನಂದಿಸಿ!
HIGHLIGHTS

BSNL ಈಗಾಗಲೇ ಹೆಚ್ಚು ಜನರು ಇಷ್ಟಪಡುವ ₹1,499 ರೂಗಳ ರಿಚಾರ್ಜ್ ಯೋಜನೆಯಾಗಿದೆ.

ಹೋಳಿ ಹಬ್ಬದ ಕೊಡುಗೆಯಾಗಿ BSNL ರಿಚಾರ್ಜ್ ಯೋಜನೆಯಲ್ಲಿ 29 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ನೀಡುತ್ತಿದೆ.

ತಿಂಗಳ ಲೆಕ್ಕಾಚಾರದಲ್ಲಿ ನೋಡುವುದಾದರೆ ಕೇವಲ 125 ರೂಗಳನ್ನು ಖರ್ಚು ಮಾಡಿ ಜಬರದಸ್ತ್ ಪ್ರಯೋಜನ ಆನಂದಿಸಬಹುದು.

BSNL Rs. 1499 Recharge Plan Explained: ದೇಶದ ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ ಬಿಎಸ್ಎನ್ಎಲ್ ಈ ಬಾರಿ ಹೋಳಿ ಹಬ್ಬಕ್ಕಾಗಿ (Holi Festival In 2025) ಜಬರದಸ್ತ್ ರಿಚಾರ್ಜ್ ಯೋಜನೆಯೊಂದನ್ನು ಪ್ರಕಟಿಸಿದೆ. ಈ BSNL ಯೋಜನೆಯನ್ನು ತಿಂಗಳ ಲೆಕ್ಕಾಚಾರದಲ್ಲಿ ನೋಡುವುದಾದರೆ ಕೇವಲ 125 ರೂಗಳನ್ನು ಖರ್ಚು ಮಾಡಿ ಜಬರದಸ್ತ್ ಪ್ರಯೋಜನಗಳನ್ನು ಅನುಭವಿಸಬಹುದು. ಹಾಗಾದ್ರೆ ಈ BSNL Rs. 1499 Recharge Plan ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯಿರಿ.

ಬಿಎಸ್ಎನ್ಎಲ್ ರೂ. 1499 ರಿಚಾರ್ಜ್ ಪ್ಲಾನ್ ಮಾಹಿತಿ:

ಪ್ರಸ್ತುತ ಬಿಎಸ್ಎನ್ಎಲ್ ತಮ್ಮ ಬಳಕೆದಾರರಿಗೆ ಹೋಳಿ ಹಬ್ಬದ (Holi Festival In 2025) ಸಂದರ್ಭದಲ್ಲಿ ಅದೇ ಹಳೆಯ ಯೋಜನೆಯನ್ನು ಕೊಂಚ ಪರಿಷ್ಕರಿಸಿದೆ. BSNL ಈಗಾಗಲೇ ಹೆಚ್ಚು ಜನರು ಇಷ್ಟಪಡುವ 1499 ರೂಗಳ ರಿಚಾರ್ಜ್ ಯೋಜನೆಯಲ್ಲಿ ಹೆಚ್ಚುವರಿಯ ಪ್ರಯೋಜನಗಳನ್ನು ನೀಡುವ ಮೂಲಕ ಬಿಎಸ್ಎನ್ಎಲ್ ಗ್ರಾಹಕರಿಗೆ ಸಂತಸವನ್ನು ಹಂಚಿಕೊಂಡಿದೆ. ಗ್ರಾಹಕರಿಗೆ ಈಗ ಈ 1499 ರೂಗಳ ರಿಚಾರ್ಜ್ ಯೋಜನೆಯಲ್ಲಿ 336 ದಿನಗ ಬದಲಿಗೆ ಬರೋಬ್ಬರಿ 336 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ.

BSNL Rs. 1499 Recharge Plan Explained
BSNL Rs. 1499 Recharge Plan Explained

BSNL ತನ್ನ ಅತ್ಯಂತ ಜನಪ್ರಿಯ ದೀರ್ಘಾವಧಿಯ ಯೋಜನೆಗೆ ಹೆಚ್ಚುವರಿಯಾಗಿ 29 ದಿನಗಳ ವ್ಯಾಲಿಡಿಟಿಯನ್ನು ಸೇರಿಸಿದೆ. 1,499 ರೂಗಳ ರರಿಚಾರ್ಜ್ ಯೋಜನೆಯಲ್ಲಿ ಈಗ 365 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಸಾಮಾನ್ಯವಾಗಿ ಇದರಲ್ಲಿ 336 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ ಎನ್ನುವುದನ್ನು ಗಮನಿಸಬೇಕು. ವಿಶೇಷವಾಗಿ ಈ BSNL Holi Offer 2025 ರಿಚಾರ್ಜ್ ಯೋಜನೆಯ ಕೊಡುಗೆ 31ನೇ ಮಾರ್ಚ 2025 ವರಗೆ ಮಾತ್ರ ಮಾನ್ಯವಾಗಿರುತ್ತದೆ ಎನ್ನುವುದನ್ನು ಗಮನದಲ್ಲಿಡಿ.

Also Read: ಫ್ಲಿಪ್‌ಕಾರ್ಟ್‌ನಲ್ಲಿ Nothing Phone (3a) Series ಇಂದು ಮೊದಲ ಮಾರಾಟ! ಡಿಸ್ಕೌಂಟ್ ಬೆಲೆ ಮತ್ತು ಫೀಚರ್ಗಳೇನು?

ವಿಶೇಷವೆಂದರೆ ಈ ಹೆಚ್ಚುವರಿ ಮಾನ್ಯತೆಯ ಅವಧಿಗೆ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ. ಇದಲ್ಲದೆ ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕರೆ ಮತ್ತು ಅನಿಯಮಿತ ಡೇಟಾ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಹೆಚ್ಚುವರಿಯಾಗಿ ಕಂಪನಿ ಸ್ವತಃ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇದರ ಬಗ್ಗೆ ಪೋಸ್ಟ್ ಸಹ ಮಾಡಿದೆ. ಇನ್ನೂ ಈ ರಿಚಾರ್ಜ್ ಮಾಡದ ಗ್ರಾಹಕರು ಇಂದೇ ಈ ರಿಚಾರ್ಜ್ ಮಾಡಿಕೊಂಡು 29 ದಿನ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಿರಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo