ಬಿಎಸ್ಎನ್ಎಲ್ ತಮ್ಮ ಗ್ರಾಹಕರಿಗೆ ಜಬರ್ದಸ್ತ್ ಆಫರ್ ಇಂದು ಕೊನೆಗೊಳ್ಳಲಿದೆ.
ಬರೋಬ್ಬರಿ 400GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು ಲಿಮಿಟೆಡ್ ಸಮಯಕ್ಕೆ ಲಭ್ಯ.
ಬಿಎಸ್ಎನ್ಎಲ್ 400 ರೂಗಳಿಗೆ 400GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು 40 ದಿನಗಳಿಗೆ ಲಭ್ಯ.
BSNL Flash Plan: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಪ್ರಸ್ತುತ ಭಾರತದಾದ್ಯಂತ 4G ಸಂಪರ್ಕಕ್ಕೆ ಅಪ್‌ಗ್ರೇಡ್ ಆಗುತ್ತಿದೆ. ಕಂಪನಿಯು ಇತ್ತೀಚೆಗೆ 90,000 4G ಟವರ್‌ಗಳನ್ನು ಸ್ಥಾಪಿಸುವತ್ತ ಸಾಗುತ್ತಿದೆ ಎಂದು ತಿಳಿಸಿದೆ. ಈ ಸಂದರ್ಭವನ್ನು ಆಚರಿಸಲು ಟೆಲಿಕಾಂ ಕಂಪನಿಯು ಸೀಮಿತ ಅವಧಿಯ ಫ್ಲ್ಯಾಶ್ ಸೇಲ್ ಅನ್ನು ಪರಿಚಯಿಸಿದೆ. ಈ ಪ್ಲಾನ್ ಇಂದು ಅಂದ್ರೆ ೧ನೇ ಜೂಲೈ ೨೦೨೫ ವರೆಗೆ ಮಾತ್ರ ಲಭ್ಯವಿದ್ದು ಇನ್ನೂ ಯಾರ್ಯಾರು ರಿಚಾರ್ಜ್ ಮಾಡಿಕೊಂಡಿಲ್ಲವಾದರೆ ಈ ಡೀಲ್ ಜಾರುವ ಮುಂಚೆ ರಿಚಾರ್ಜ್ ಮಾಡಿಕೊಳ್ಳಿ.
Surveyಈ ವಿಶೇಷ ಕೊಡುಗೆಯ ಅಡಿಯಲ್ಲಿ ಬಳಕೆದಾರರು ಕೇವಲ 1 ರೂ.ಗೆ 1GB ಇಂಟರ್ನೆಟ್ ಅನ್ನು ಬಳಸಬಹುದು. ನೀವು ಆನ್‌ಲೈನ್ ವಿಷಯವನ್ನು ಸ್ಟ್ರೀಮ್ ಮಾಡುವವರಾಗಿದ್ದರೆ ಅಥವಾ ಸ್ಮಾರ್ಟ್‌ಫೋನ್ ಮೂಲಕ ಆನ್‌ಲೈನ್ ಗೇಮಿಂಗ್ ಆಡುವವರಾಗಿದ್ದರೆ ಈ ಕೊಡುಗೆಯು ಉತ್ತಮ ಉಪಯೋಗವನ್ನು ಪಡೆಯಬಹುದು.
BSNL Flash Plan: 400 ರೂಗಳಿಗೆ 400GB ಡೇಟಾ!
ಬಿಎಸ್ಎನ್ಎಲ್ ಫ್ಲಾಶ್ ಸೇಲ್ ಅಡಿಯಲ್ಲಿ ಬಳಕೆದಾರರು ಕೇವಲ 400 ರೂಗಳಿಗೆ 400GB ಇಂಟರ್ನೆಟ್ ಪಡೆಯಬಹುದು. ಈ ವಿಶೇಷ ಕೊಡುಗೆ 40 ದಿನಗಳ ಮಾನ್ಯತೆಯನ್ನು ಹೊಂದಿದೆ. ಆದಾಗ್ಯೂ ವಿಶೇಷ ಕೊಡುಗೆಯ ಮಾನ್ಯತೆ ಜೂನ್ 28 ರಿಂದ ಜುಲೈ 1 ರವರೆಗೆ ಇರುವುದರಿಂದ ಬಳಕೆದಾರರು ತ್ವರೆ ಮಾಡಬೇಕು. ನೀವು ಆಫರ್ ಪಡೆಯಲು ಬಯಸಿದರೆ ನೀವು ಬಿಎಸ್ಎನ್ಎಲ್ ಅಧಿಕೃತ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ರೀಚಾರ್ಜ್ ಮಾಡಬಹುದು.
BSNL celebrates the milestone of 90,000 towers with a limited-time Flash Sale.
— BSNL India (@BSNLCorporate) June 30, 2025
Get 400GB for just ₹400, with 40 days validity.
Tomorrow is the last day to benefit from this offer.
Experience trusted, nationwide connectivity with BSNL.
Recharge Now – https://t.co/yDeFrwK5vt… pic.twitter.com/lz7Kv4iKlm
BSNL ಬಜೆಟ್ ಯೋಜನೆ:
ನೀವು ವರ್ಷದ ಬಹುಪಾಲು ಅನಿಯಮಿತ ಕರೆ ಪ್ರಯೋಜನವನ್ನು ನೀಡುವ ಬಜೆಟ್ ಯೋಜನೆಯನ್ನು ಹುಡುಕುತ್ತಿದ್ದರೆ, ನೀವು ರೂ. 1499 ಯೋಜನೆಯನ್ನು ಆಯ್ಕೆ ಮಾಡಬಹುದು. ಈ ಯೋಜನೆಯು 336 ದಿನಗಳ ಮಾನ್ಯತೆಯೊಂದಿಗೆ ದೇಶದ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ. ಬಳಕೆದಾರರು 24GB ಡೇಟಾ ಜೊತೆಗೆ ದಿನಕ್ಕೆ 100 SMS ಅನ್ನು ಸಹ ಪಡೆಯುತ್ತಾರೆ. ಈ ಹಿಂದೆ ಈ ಯೋಜನೆ 365 ದಿನಗಳವರೆಗೆ ಮಾನ್ಯವಾಗಿತ್ತು. ಆದಾಗ್ಯೂ ಈ ಯೋಜನೆಯಲ್ಲಿ ನೀವು ಯಾವುದೇ ಉಚಿತ ಕೊಡುಗೆಗಳನ್ನು ಪಡೆಯುವುದಿಲ್ಲ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile