Airtel Offer 2023: ಕೇವಲ 150 ರೂಗಳಿಗೆ Netflix ಪ್ರೀಮಿಯಂ ಭರ್ಜರಿ ಆಫರ್!

Airtel Offer 2023: ಕೇವಲ 150 ರೂಗಳಿಗೆ Netflix ಪ್ರೀಮಿಯಂ ಭರ್ಜರಿ ಆಫರ್!
HIGHLIGHTS

ಭಾರ್ತಿ ಏರ್‌ಟೆಲ್‌ನಿಂದ ಸಿಗುವ ಅತ್ಯಂತ ದುಬಾರಿ ಪೋಸ್ಟ್‌ಪೇಯ್ಡ್ ಪ್ಯಾಕೇಜ್ ಇದಾಗಿದೆ.

Netflix ತಿಂಗಳಿಗೆ 649 ರೂಪಾಯಿ ವೆಚ್ಚವಾಗುತ್ತದೆ. ಆದರೆ ಭಾರ್ತಿ ಏರ್‌ಟೆಲ್ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಕೇವಲ 150 ರೂಪಾಯಿಗಳಿಗೆ ಲಭ್ಯ

ಟೆಲ್ಕೊದಿಂದ ನೀಡುವ ಅತ್ಯಂತ ದುಬಾರಿ ಪೋಸ್ಟ್‌ಪೇಯ್ಡ್ ಯೋಜನೆ ಭಾರ್ತಿ ಏರ್‌ಟೆಲ್‌ನ ರೂ 1499 ಪೋಸ್ಟ್‌ಪೇಯ್ಡ್ ಪ್ಯಾಕೇಜ್ ಆಗಿದೆ.

Airtel Offer 2023: ಸಾಮಾನ್ಯವಾಗಿ ನಿಮಗೆ ನೆಟ್‌ಫ್ಲಿಕ್ಸ್ ಪ್ರೀಮಿಯಂ ಯೋಜನೆಯು ತಿಂಗಳಿಗೆ 649 ರೂ ವೆಚ್ಚವಾಗಿದೆ. ಭಾರ್ತಿ ಏರ್‌ಟೆಲ್ ಪೋಸ್ಟ್‌ಪೇಯ್ಡ್ ಗ್ರಾಹಕರಾಗಿದ್ದರೆ ನೀವು ಈ ಪ್ಲಾನ್‌ ಪಡೆಯಬಹುದು. ಇದು ರೂ 500 ರ ರಿಯಾಯಿತಿಯಂತೆ ಕೇವಲ 150 ರೂಗಳಿಗೆ ಲಭ್ಯವಿದೆ. ಏರ್‌ಟೆಲ್‌ನ ಎಷ್ಟು ಯೋಜನೆಗಳು ನೆಟ್‌ಫ್ಲಿಕ್ಸ್ ಅನ್ನು ಒಳಗೊಂಡಿವೆ ಎನ್ನುವುದಾದರೆ ದೇಶದ ಉನ್ನತ ಪೋಸ್ಟ್‌ಪೇಯ್ಡ್ ಮೊಬೈಲ್ ಸೇವಾ ಪೂರೈಕೆದಾರ ಐದರಲ್ಲಿ ಇಬ್ಬರು ಭಾರ್ತಿ ಏರ್‌ಟೆಲ್ ನವರಾಗಿದ್ದಾರೆ. ಟೆಲ್ಕೊದ ಎರಡು ಪೋಸ್ಟ್‌ಪೇಯ್ಡ್ ಯೋಜನೆಗಳು ನೆಟ್‌ಫ್ಲಿಕ್ಸ್‌ ಅನ್ನು ಉಚಿತವಾಗಿ ನೀಡುತ್ತಿದೆ. ಸ್ವಾಭಾವಿಕವಾಗಿ ಈ ಪೋಸ್ಟ್‌ಪೇಯ್ಡ್ ಯೋಜನೆಗಳು ಒಳಗೊಂಡಿರುವ ಪ್ರಯೋಜನಗಳ ಕಾರಣ ನೀವು ಪ್ರೀಮಿಯಂ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಈಗ ಅವುಗಳನ್ನು ಮತ್ತು ಅವುಗಳ ಪ್ರಯೋಜನಗಳನ್ನು ನೋಡೋಣ.

ಏರ್‌ಟೆಲ್ ರೂ. 1499 ಪೋಸ್ಟ್‌ಪೇಯ್ಡ್ ಪ್ಲಾನ್

ಟೆಲ್ಕೊದಿಂದ ನೀಡುವ ಅತ್ಯಂತ ದುಬಾರಿ ಪೋಸ್ಟ್‌ಪೇಯ್ಡ್ ಯೋಜನೆ ಭಾರ್ತಿ ಏರ್‌ಟೆಲ್‌ನ ರೂ 1499 ಪೋಸ್ಟ್‌ಪೇಯ್ಡ್ ಪ್ಯಾಕೇಜ್ ಆಗಿದೆ. ಈ ಯೋಜನೆಯಲ್ಲಿ ಗ್ರಾಹಕರು ಅನ್‌ ಲಿಮಿಟೆಡ್ ಕರೆಗಳ ಜೊತೆಗೆ ತಿಂಗಳಿಗೆ 200GB ಡೇಟಾವನ್ನು ಪಡೆಯುತ್ತಾರೆ. ಕುಟುಂಬದ ಸದಸ್ಯರಿಗೆ ನಾಲ್ಕು ಉಚಿತ ಆಡ್-ಆನ್ ರೇಗುಲರ್ ವಾಯ್ಸ್ ಕಾಂನೆಕ್ಷನ್ಸ್ ಮತ್ತು  ಪ್ರತಿಯೊಂದೂ ಆಡ್-ಆನ್ ಕಾಂನೆಕ್ಷನ್ಸ್ ಗೆ 200GB ಡೇಟಾ ರೋಲ್‌ಓವರ್‌ನೊಂದಿಗೆ 30GB ಡೇಟಾವನ್ನು ನೀಡಲಾಗುತ್ತದೆ.ಈ ಪ್ಯಾಕೇಜ್‌ನೊಂದಿಗೆ ಬಳಕೆದಾರರು ಪ್ರತಿದಿನ 100 SMS ಅನ್ನು ಪಡೆಯಬಹುದು.

ಅಷ್ಟೇ ಅಲ್ಲದೇ ಬಳಕೆದಾರರು Dish+ Hotstar ಅನ್ನು ಒಂದು ವರ್ಷಕ್ಕೆ, ಆರು ತಿಂಗಳ Amazon Prime ಸದಸ್ಯತ್ವ ಮತ್ತು ಮಾಸಿಕ Netflix ಸ್ಟ್ಯಾಂಡರ್ಡ್ ಚಂದಾದಾರಿಕೆಯನ್ನು ಹೆಚ್ಚುವರಿ ಪ್ರಯೋಜನವಾಗಿ ಪಡೆದುಕೊಳ್ಳುತ್ತಾರೆ. ಪ್ರತಿ 12 ಬಿಲ್ಲಿಂಗ್ ಸೈಕಲ್‌ಗಳಲ್ಲಿ ಗ್ರಾಹಕರು ವಲಯ B ಗಾಗಿ 10-ದಿನದ ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್ ಅನ್ನು ಸಹ ಪಡೆಯುತ್ತಾರೆ. ರೂ 1499 ಪ್ಲಾನ್ ಹೊಂದಿರುವ ಗ್ರಾಹಕರು ನೆಟ್‌ಫ್ಲಿಕ್ಸ್ ಪ್ರೀಮಿಯಂ ಅನ್ನು ಪಡೆಯಲು ತಿಂಗಳಿಗೆ ಹೆಚ್ಚುವರಿ ರೂ 150 ಪಾವತಿಸಬಹುದು.

ಏರ್‌ಟೆಲ್ ರೂ 1199 ಪೋಸ್ಟ್‌ಪೇಯ್ಡ್ ಪ್ಲಾನ್

ಏರ್‌ಟೆಲ್‌ನಿಂದ ರೂ 1199 ಪೋಸ್ಟ್‌ಪೇಯ್ಡ್ ಪ್ಯಾಕೇಜ್‌ನೊಂದಿಗೆ ನೀವು ಇನ್ನೂ ಮೂರು ಆಡ್-ಆನ್ ರೇಗುಲರ್ ವಾಯ್ಸ್ ಕಾಂನೆಕ್ಷನ್ಸ್ ಉಚಿತವಾಗಿ ಪಡೆಯಬಹುದು. ಪ್ರತಿ ತಿಂಗಳು 150GB ಡೇಟಾ ಮತ್ತು ಅನ್ ಲಿಮಿಟೆಡ್ ವಯ್ಸ್ ಕರೆಗಳನ್ನ ಪಡೆಯಬಹುದು. ಗ್ರಾಹಕರು ಪ್ರತಿ ಹೆಚ್ಚುವರಿ ಕಾಂನೆಕ್ಷನ್ ಗೆ 200GB ವರೆಗೆ ರೋಲ್‌ಓವರ್‌ನೊಂದಿಗೆ 30GB ಡೇಟಾವನ್ನು ಪಡೆಯುತ್ತಾರೆ. ಈ ಕಾಂನೆಕ್ಷನ್ ನೊಂದಿಗೆ ಪ್ರತಿ ದಿನವೂ 100 SMS ಸಹ ಸಿಗಲಿದೆ. ಹೆಚ್ಚುವರಿಯಾಗಿ ಈ ಪ್ಯಾಕೇಜ್ Netflix Basic, ಆರು ತಿಂಗಳ Amazon Prime ಸದಸ್ಯತ್ವ, ಒಂದು ವರ್ಷದ Disney+ Hotstar, Wynk ಪ್ರೀಮಿಯಂ ಮತ್ತು ಹ್ಯಾಂಡ್‌ಸೆಟ್ ಪ್ರೊಟೆಕ್ಷನ್ ನೀಡುತ್ತದೆ. ಭಾರತದಲ್ಲಿ ಎರಡನೇ ಅತಿ ದೊಡ್ಡ ಪೋಸ್ಟ್‌ಪೇಯ್ಡ್ ಮೊಬೈಲ್ ಗ್ರಾಹಕರ ನೆಲೆಯನ್ನು ಈಗ ಏರ್‌ಟೆಲ್ ಹೊಂದಿದೆ.ಇದು ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ 5G ಅನ್ನು ಹೊರತರಲು ಪ್ರಾರಂಭಿಸಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo