ಮುಂಬರಲಿರುವ Google Pixel 10 Series ಬಿಡುಗಡೆಗೆ ಡೇಟ್ ಕಂಫಾರ್ಮ್ ಮಾಡಿದ ಗೂಗಲ್!

HIGHLIGHTS

Google Pixel 10 Series ಮುಂದಿನ ತಿಂಗಳು 21ನೇ ಆಗಸ್ಟ್ 2025 ರಂದು ಬಿಡುಗಡೆಯಾಗಲಿವೆ.

ಗೂಗಲ್ ಈ ಸರಣಿಯಲ್ಲಿ Google Pixel 10 ಮತ್ತು Google Pixel 10 Pro ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಿದೆ.

Google ಮೇಡ್ ಬೈ ಗೂಗಲ್ ಕಾರ್ಯಕ್ರಮವನ್ನು 20ನೇ ಆಗಸ್ಟ್ 2025 ರಂದು ನಡೆಸುವುದಾಗಿ ಅಧಿಕೃತವಾಗಿ ದೃಢಪಡಿಸಿದೆ.

ಮುಂಬರಲಿರುವ Google Pixel 10 Series ಬಿಡುಗಡೆಗೆ ಡೇಟ್ ಕಂಫಾರ್ಮ್ ಮಾಡಿದ ಗೂಗಲ್!

Google Pixel 10 Series: ಗೂಗಲ್ ತನ್ನ ವಾರ್ಷಿಕ ಮೇಡ್ ಬೈ ಗೂಗಲ್ ಕಾರ್ಯಕ್ರಮವನ್ನು 20ನೇ ಆಗಸ್ಟ್ 2025 ರಂದು ನಡೆಸುವುದಾಗಿ ಅಧಿಕೃತವಾಗಿ ದೃಢಪಡಿಸಿದೆ. ಈ ಕಾರ್ಯಕ್ರಮದ ಭಾಗವಾಗಿ ಕಂಪನಿಯು ಬಹು ನಿರೀಕ್ಷಿತ ಪಿಕ್ಸೆಲ್ 10 ಸರಣಿಯನ್ನು ಒಂದು ದಿನದ ನಂತರ ಅನಾವರಣಗೊಳಿಸಲಿದೆ. ಈ ಘೋಷಣೆಯ ನಂತರ Google Pixel 10 Pro ಸ್ಮಾರ್ಟ್ಫೋನ್ ಬಗ್ಗೆ 13 ಸೆಕೆಂಡ್‌ಗಳ ಸಣ್ಣ ಟೀಸರ್ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿತು ಇದು ಹೊಸ ವಿನ್ಯಾಸದ ಒಂದು ಸಣ್ಣ ನೋಟವನ್ನು ಮತ್ತು ಖರೀದಿದಾರರಿಗೆ ವಿಶೇಷ ಬಿಡುಗಡೆ ದಿನದ ಕೊಡುಗೆಯನ್ನು ನೀಡುತ್ತದೆ. ಗೂಗಲ್ ಇಐ ಫೋನ್ಗಳ ವೀಡಿಯೊ ನಮಗೆ ಸ್ಮಾರ್ಟ್‌ಫೋನ್‌ನ ಮೊದಲ ಸ್ಪಷ್ಟ ನೋಟವನ್ನು ನೀಡುತ್ತದೆ.

Digit.in Survey
✅ Thank you for completing the survey!

ಮುಂದಿನ ತಿಂಗಳು Google Pixel 10 Series ಬಿಡುಗಡೆ:

ಗೂಗಲ್ ತನ್ನ ಬಹುನಿರೀಕ್ಷಿತ ಪಿಕ್ಸೆಲ್ ಸರಣಿಯ ಬಿಡುಗಡೆಯನ್ನು ಅಧಿಕೃತವಾಗಿ ದೃಢಪಡಿಸಿದೆ. ಮುಂದಿನ ತಿಂಗಳು 21ನೇ ಆಗಸ್ಟ್ 2025 ರಂದು ನಡೆಯುವ ಮೇಡ್ ಬೈ ಗೂಗಲ್ ಕಾರ್ಯಕ್ರಮದಲ್ಲಿ Google Pixel 10 ಮತ್ತು Google Pixel 10 Pro ಸ್ಮಾರ್ಟ್‌ಫೋನ್‌ಗಳನ್ನು ಹೊಸ ಲೈನ್ಅಪ್ ಅನ್ನು ಅನಾವರಣಗೊಳಿಸಲಾಗುವುದು. ಗೂಗಲ್‌ನ ಮುಂದಿನ ಪೀಳಿಗೆಯ ಸ್ಮಾರ್ಟ್‌ಫೋನ್‌ಗಳಿಂದ ಹೊಸ AI ಫೀಚರ್ಗಳು ಮತ್ತು ಕ್ಯಾಮೆರಾ ನಾವೀನ್ಯತೆಗಳನ್ನು ನಿರೀಕ್ಷಿಸಬಹುದು. ಇದರಲ್ಲಿ ಅಸಾಧಾರಣ ಬಳಕೆದಾರ ಅನುಭವಕ್ಕಾಗಿ ಅವರ ಬದ್ಧತೆಯನ್ನು ಮುಂದುವರಿಸಬಹುದು.

Google Pixel 10 Series Launch

Google Pixel 10 ನಿರೀಕ್ಷಿತ ಬೆಲೆ ಮತ್ತು ವಿಶೇಷಣಗಳು:

ಸ್ಟ್ಯಾಂಡರ್ಡ್ ಪಿಕ್ಸೆಲ್ 10 ಗೂಗಲ್‌ನ ಹೊಸ ಟೆನ್ಸರ್ G5 ಚಿಪ್ ಅನ್ನು ಹೊಂದಿದ್ದು 12GB RAM ಮತ್ತು 128GB ಅಥವಾ 256GB ಸ್ಟೋರೇಜ್ನೊಂದಿಗೆ ಜೋಡಿಯಾಗಿದೆ ಎಂದು ವದಂತಿಗಳಿವೆ. ಇದು 120Hz ರಿಫ್ರೆಶ್ ದರದೊಂದಿಗೆ 6.3 ಇಂಚಿನ LTPO OLED ಡಿಸ್ಪ್ಲೇಯನ್ನು ಹೊಂದುವ ನಿರೀಕ್ಷೆಯಿದೆ. ಗಮನಾರ್ಹವಾದ ಅಪ್‌ಗ್ರೇಡ್ ಎಂದರೆ ಟೆಲಿಫೋಟೋ ಲೆನ್ಸ್ ಸೇರಿದಂತೆ ವದಂತಿಯ ಟ್ರಿಪಲ್ ಕ್ಯಾಮೆರಾ ಸೆಟಪ್ ಇದು ಮೂಲ ಮಾದರಿಗೆ ಮೊದಲನೆಯದು ಸುಮಾರು ಬೆಲೆಯನ್ನು ₹80,000 ರೂಗಳಿಗೆ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: 55 ಇಂಚಿನ 3 ಜಬರದಸ್ತ್ Smart TV ಮೇಲೆ ಬಂಪರ್ ಡಿಸ್ಕೌಂಟ್! ಕೈಗೆಟಕುವ ಬೆಲೆಗೆ ಬ್ರಾಂಡೆಡ್ ಸ್ಮಾರ್ಟ್ ಟಿವಿಗಳು!

Google Pixel 10 Pro ನಿರೀಕ್ಷಿತ ಬೆಲೆ ಮತ್ತು ವಿಶೇಷಣಗಳು:

ಈ Google Pixel 10 Pro ಸ್ಮಾರ್ಟ್ಫೋನ್ ಟೆನ್ಸರ್ G5 ಚಿಪ್ ಮತ್ತು 16GB RAM ವರೆಗಿನ ಸಾಮರ್ಥ್ಯದೊಂದಿಗೆ ಇನ್ನೂ ಹೆಚ್ಚಿನ ಪವರ್ ಅನ್ನು ನೀಡುವ ನಿರೀಕ್ಷೆಯಿದೆ. ಇದು 6.3 ಇಂಚಿನ ಅಥವಾ 6.8 ಇಂಚಿನ LTPO OLED ಡಿಸ್ಪ್ಲೇಯನ್ನು 3000 ನಿಟ್ಸ್ ವರೆಗಿನ ಗರಿಷ್ಠ ಹೊಳಪನ್ನು ಹೊಂದಿರುವ ಸಾಧ್ಯತೆಯಿದೆ. ಈ Google Pixel 10 Pro ಸ್ಮಾರ್ಟ್ಫೋನ್ ಮಾದರಿಯು 50MP ಪ್ರೈಮರಿ 48MP ಅಲ್ಟ್ರಾವೈಡ್ ಮತ್ತು 48MP 5x ಟೆಲಿಫೋಟೋ ಲೆನ್ಸ್ ಸೇರಿದಂತೆ ವರ್ಧಿತ ಕ್ಯಾಮೆರಾ ಸಾಮರ್ಥ್ಯಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ. ಅಲ್ಲದೆ ಬೆಲೆಗಳು ₹1,11,990 ರೂಗಳಿಗೆ ಆಸುಪಾಸಿನಲ್ಲಿ ಪ್ರಾರಂಭವಾಗಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo