Samsung Galaxy M36 5G: ಸ್ಯಾಮ್‌ಸಂಗ್‌ನ ಮುಂಬರಲಿರುವ ಬಜೆಟ್ 5G ಸ್ಮಾರ್ಟ್ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್!

HIGHLIGHTS

Samsung Galaxy M36 5G ಸ್ಮಾರ್ಟ್ಫೋನ್ 50MP OIS ಪ್ರೈಮರಿ ಕ್ಯಾಮೆರಾದೊಂದಿಗೆ ಬರಲಿದೆ.

Samsung Galaxy M36 5G ಸ್ಮಾರ್ಟ್‌ಫೋನ್ ಹೊಸ ವಿನ್ಯಾಸ ಮತ್ತು Exynos 1380 ಪ್ರೊಸೆಸರ್‌ನೊಂದಿಗೆ ಬರುವ ನಿರೀಕ್ಷೆ.

Samsung Galaxy M36 5G ಸ್ಮಾರ್ಟ್ಫೋನ್ 45W ಫಾಸ್ಟ್ ಚಾರ್ಜಿಂಗ್ ಮತ್ತು ಬೃಹತ್ 5000mAh ಬ್ಯಾಟರಿಯೊಂದಿಗೆ ಬರಲಿದೆ.

Samsung Galaxy M36 5G: ಸ್ಯಾಮ್‌ಸಂಗ್‌ನ ಮುಂಬರಲಿರುವ ಬಜೆಟ್ 5G ಸ್ಮಾರ್ಟ್ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್!

ಸ್ಯಾಮ್‌ಸಂಗ್ ಭಾರತದಲ್ಲಿ ತನ್ನ ಮುಂಬರಲಿರುವ ಹೊಸ Samsung Galaxy M36 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ Samsung Galaxy M36 5G ಸ್ಮಾರ್ಟ್ಫೋನ್ ಬೆಲೆಯನ್ನು ನೋಡುವುದದಾದರೆ ಆರಂಭಿಕ ಸುಮಾರು ರೂ. 20,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗುವ ನಿರೀಕ್ಷೆಗಳಿವೆ. ಈ 5G ಸ್ಮಾರ್ಟ್ ಫೋನ್ ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಉತ್ತಮ ಸ್ಪರ್ಧೆಯನ್ನು ನೀಡಲಿದೆ. ಇದು ಉತ್ತಮ ಕಾರ್ಯಕ್ಷಮತೆ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುವ ನಿರೀಕ್ಷೆಯಿದೆ. ಈ Samsung Galaxy M36 5G ಸ್ಮಾರ್ಟ್ಫೋನ್ 45W ಫಾಸ್ಟ್ ಚಾರ್ಜಿಂಗ್ ಮತ್ತು ಬೃಹತ್ 5000mAh ಬ್ಯಾಟರಿಯೊಂದಿಗೆ ಬರಲಿದೆ.

ಭಾರತದಲ್ಲಿ Samsung Galaxy M36 5G ನಿರೀಕ್ಷಿತ ಡಿಸ್ಪ್ಲೇ ಮತ್ತು ಹಾರ್ಡ್ವೇರ್ ವಿವರಗಳು:

ಸದ್ಯಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ Samsung Galaxy M36 5G ಸ್ಮಾರ್ಟ್ಫೋನ್ 6.7 ಇಂಚಿನ Full HD+ Super AMOLED ಡಿಸ್‌ಪ್ಲೇ ಹೊಂದಿದ್ದು ಇದು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದು ದೈನಂದಿನ ಬಳಕೆಗೆ ಮತ್ತು ಗೇಮಿಂಗ್‌ಗೆ ಅತ್ಯುತ್ತಮ ವೀಕ್ಷಣೆಯ ಅನುಭವವನ್ನು ನೀಡಲಿದೆ. Exynos 1380 ಪ್ರೊಸೆಸರ್‌ನಿಂದ ಚಾಲಿತವಾಗಿರುವ ಈ ಸ್ಮಾರ್ಟ್‌ಫೋನ್ ಇತ್ತೀಚಿನ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಂನೊಂದಿಗೆ One UI 7 ಅನ್ನು ರನ್ ಮಾಡುತ್ತದೆ. ಇದು ನಯವಾದ ಮತ್ತು ಪ್ರತಿಕ್ರಿಯಾತ್ಮಕ ಬಳಕೆದಾರ ಅನುಭವವನ್ನು ಖಚಿತಪಡಿಸುತ್ತದೆ.

Samsung Galaxy M36 5G

Samsung Galaxy M36 5G ನಿರೀಕ್ಷಿತ ಕ್ಯಾಮೆರಾ ಮತ್ತು ಬ್ಯಾಟರಿ ವಿವರಗಳು:

ಕ್ಯಾಮೆರಾ ವಿಭಾಗದಲ್ಲಿ Samsung Galaxy M36 5G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ. 50MP ಪ್ರೈಮರಿ ಸೆನ್ಸಾರ್ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ ಬರುತ್ತದೆ. ಇದು ಸ್ಥಿರ ಮತ್ತು ಸ್ಪಷ್ಟವಾದ ಫೋಟೋಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಇದರ ಜೊತೆಗೆ 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 5MP ಮ್ಯಾಕ್ರೋ ಲೆನ್ಸ್ ಇರಲಿದೆ. ಸೆಲ್ಫಿಗಾಗಿ 12MP ಮುಂಭಾಗದ ಕ್ಯಾಮೆರಾ ನಿರೀಕ್ಷಿಸಲಾಗಿದೆ.

Also Read: BSNL Quantum 5G: ಬಿಎಸ್‌ಎನ್‌ಎಲ್‌ನ ಹೊಸ ‘Quantum 5G FWA’ ಸೇವೆ ಪ್ರಾರಂಭ! ಸಿಮ್ ಇಲ್ಲದೆ ಇಂಟರ್ನೆಟ್ ಬಳಸಬಹುದಂತೆ!

ಬ್ಯಾಟರಿ ಸಾಮರ್ಥ್ಯದ ವಿಚಾರದಲ್ಲಿ ಈ ಫೋನ್ 5000mAh ದೊಡ್ಡ ಬ್ಯಾಟರಿಯನ್ನು ಹೊಂದಿದ್ದು 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ. ಇದು ಇಡೀ ದಿನ ಬಳಕೆದಾರರಿಗೆ ಸಾಕಷ್ಟು ಪವರ್ ನೀಡುತ್ತದೆ. ಒಟ್ಟಾರೆ ಈ ಮುಂಬರಲಿರುವ Samsung Galaxy M36 5G ಬೆಲೆಗೆ ತಕ್ಕಂತೆ ಉತ್ತಮ ವೈಶಿಷ್ಟ್ಯಗಳನ್ನು ಒದಗಿಸಲು ಸಿದ್ಧವಾಗಿದೆ. ಆದರೆ ಕಂಪನಿಯ ಅಧಿಕೃತ ಬೆಲೆ ಮತ್ತು ಫೀಚರ್ಗಾಗಿ ಇನ್ನೂ ಕೆಲವು ದಿನ ಕಾಯಬೇಕಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo