Dhurandhar OTT Release: Netflix ಒಟಿಟಿಯಲ್ಲಿ ಧುರಂಧರ್ ಸ್ಟ್ರೀಮಿಂಗ್ ಶುರು!
Dhurandhar ಸಿನಿಮಾ Netflix ಪ್ಲಾಟ್‌ಫಾರ್ಮ್ ನಲ್ಲಿ ಲಭ್ಯ
Netflix ನಲ್ಲಿ Dhurandhar ಸಿನಿಮಾ ಹಿಂದಿ, ತಮಿಳು ಹಾಗೂ ತೆಲಗು ಭಾಷೆಗಳಲ್ಲಿ ಲಭ್ಯ
Netflix ನಲ್ಲಿ ಸಿನಿಮಾದ ಕೆಲವು ದೃಶ್ಯಗಳು ಮತ್ತು ಸಂಭಾಷಣೆಗಳಗೆ ಸೆನ್ಸಾರ್ ಮಾಡಲಾಗಿದೆ
ಬಹುನಿರೀಕ್ಷಿತ ಹಾಗೂ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಒಂದಾದ Dhurandhar ಅಂತೂ OTT ಪ್ಲಾಟ್‌ಫಾರ್ಮ್ ಗೆ ಕಾಲಿಟ್ಟಿದೆ. ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡು ಗಲ್ಲಾ ಪೆಟ್ಟಿಗೆಯಲ್ಲಿ 1200 ಕೋಟಿ ರೂಗಳನ್ನು ದಾಟಿದ ಬಳಿಕ ಇದೀಗ ಓಟಿಟಿಗೆ ಬಂದಿದೆ. ಆದಿತ್ಯ ಧಾರ್ ನಿರ್ದೇಶನದ ಈ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ನಟ Ranveer Singh ಅವರು RAW ಏಜೆಂಟ್ ಆಗಿ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರದಲ್ಲಿ ಅವರು ಕರಾಚಿಯ ಭೂಗತ ಲೋಕದಲ್ಲಿ ರಹಸ್ಯ ಕಾರ್ಯಾಚರಣೆಯನ್ನು ಕೈಗೊಳ್ಳುತ್ತಾರೆ. ಸಿನಿಮಾವು ನೈಜ್ಯ ಘಟನೆಗಳಿಂದ ಪ್ರೇರಿತವಾಗಿದ್ದು, ಸಿನಿಮಾದ ಸಿಕ್ವೆಲ್‌ಗಳು ಪ್ರೇಕ್ಷಕರ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುತ್ತದೆ.
SurveyAlso Read : ಭರ್ಜರಿ ಆಫರ್‌ನಲ್ಲಿ iPhone 16 ಖರೀದಿಸಲು ಇದಕ್ಕಿಂತ ಒಳ್ಳೆಯ ಸಮಯ ಇನ್ನೊಂದಿಲ್ಲ!
Dhurandhar ಈಗ OTT ಪ್ಲಾಟ್‌ಫಾರ್ಮ್ನಲ್ಲಿ ಲಭ್ಯ
ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿರುವ Dhurandhar ಸಿನಿಮಾ ಜನವರಿ 30, 2026 ರಂದು Netflix ಪ್ಲಾಟ್‌ಫಾರ್ಮ್ನಲ್ಲಿಗೆ ರಿಲೀಸ್ ಆಗಿದೆ. ಈ ಬಗ್ಗೆ ನೆಟ್‌ಫ್ಲಿಕ್ಸ್ ತನ್ನ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದೆ. Netflix ನಲ್ಲಿ ಧುರಂಧರ್ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯ ಆಗಿದೆ. ಸಿನಿಮಾ ಒಟಿಟಿ ವೇದಿಕೆಗೆನೋ ಬಿಡುಗಡೆ ಆಗಿದೆ ಆದರೆ ಕೆಲವು ದೃಶ್ಯಗಳು ಮತ್ತು ಸಂಭಾಷಣೆಗಳಗೆ ಸೆನ್ಸಾರ್ ಮಾಡಲಾಗಿದೆ ಎಂದು ಸಿನಿ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

Dhurandhar ಚಿತ್ರದ ಕಥೆ ಏನು?
ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿರುವ Dhurandhar ಸಿನಿಮಾ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಜಸ್ಕಿರತ್ ಸಿಂಗ್ ಅವರ ಕಥೆಯನ್ನು ಹೇಳುತ್ತದೆ. ಈ ಪಾತ್ರದಲ್ಲಿ ರಣವೀರ್ ಸಿಂಗ್ ಅಭಿನಯಿಸಿದ್ದಾರೆ. ಗುಪ್ತಚರ ದಳದ ಮುಖ್ಯಸ್ಥ ಅಜಯ್ ಸನ್ಯಾಲ್ (ಆರ್. ಮಾಧವನ್) ಜಸ್ಕಿರತ್‌ನನ್ನು ರಹಸ್ಯ ಮತ್ತು ಅಪಾಯಕಾರಿ ಕಾರ್ಯಾಚರಣೆಗೆ ಆಯ್ಕೆ ಮಾಡಿದಾಗ ಅವನ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ಮುಂದೆ ಜಸ್ಕಿರತ್ ಸಿಂಗ್‌ನನ್ನು ಫೇಕ್ ಐಡೆಂಟಿಟಿ ಬಳಸಿ ಕರಾಚಿಗೆ ಕಳುಹಿಸಲಾಗುತ್ತದೆ.
ಅಪರಾಧ ಜಾಲಗಳಿಗೆ ಹೆಸರುವಾಸಿಯಾದ ಲಿಯಾರಿ ಪ್ರದೇಶಕ್ಕೆ ಪ್ರವೇಶಿಸುತ್ತಾನೆ. ಅವನು ಭೂಗತ ಜಗತ್ತಿನ ಭಾಗವಾಗುತ್ತಾನೆ. ಆದರೆ ಅವನ ನಿಜವಾದ ಗುರಿ ಐಎಸ್‌ಐ ಮತ್ತು ಭಯೋತ್ಪಾದಕ ಗುಂಪುಗಳ ನಡುವಿನ ಸಂಪರ್ಕವನ್ನು ಮುರಿಯುವುದು ಆಗಿರುತ್ತದೆ. ಪ್ರಬಲ ದರೋಡೆಕೋರ ರೆಹಮಾನ್ ಡಕೈತ್ ಆಗಮನದೊಂದಿಗೆ ಈ ಕಾರ್ಯಾಚರಣೆಯು ಹೆಚ್ಚು ಅಪಾಯಕಾರಿಯಾಗುತ್ತದೆ. ಧುರಂಧರ್ ಸಿನಿಮಾವು IC-814 ಅಪಹರಣ ಮತ್ತು 2001 ರ ಸಂಸತ್ತಿನ ದಾಳಿಯಂತಹ ನೈಜ್ಯ ಘಟನೆಗಳಿಂದ ಪ್ರೇರಿತವಾಗಿದೆ.
Dhurandhar ಸಿನಿಮಾದ ತಾರಾಗಣ
Dhurandhar ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶಿಸಿದ್ದಾರೆ. ಈ ಸಿನಿಮಾದ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ನಟಿಸಿದ್ದಾರೆ. ಅಂದಹಾಗೆ ಈ ಸಿನಿಮಾ ಹಲವು ದಾಖಲೆ ಹಿಂದಿಕ್ಕಿ ಈಗಾಗಲೇ ಭಾರತದಲ್ಲಿ 1200 ಕೋಟಿ ರೂ ಗಳಿಗೂ ಅಧಿಕ ಗಳಿಕೆ ಮಾಡಿದೆ ಎನ್ನಲಾಗಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile