BSNL Quantum 5G: ಬಿಎಸ್‌ಎನ್‌ಎಲ್‌ನ ಹೊಸ ‘Quantum 5G FWA’ ಸೇವೆ ಪ್ರಾರಂಭ! ಸಿಮ್ ಇಲ್ಲದೆ ಇಂಟರ್ನೆಟ್ ಬಳಸಬಹುದಂತೆ!

HIGHLIGHTS

ಬಿಎಸ್‌ಎನ್‌ಎಲ್ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ತನ್ನ 5G ಸೇವೆಯ ಹೆಸರನ್ನು ಘೋಷಿಸಿದೆ.

BSNL Quantum 5G FWA' ಸೇವೆಯ ಬೆಲೆ ತಿಂಗಳಿಗೆ 999 ರೂಗಳಿಂದ ಪ್ರಾರಂಭವಾಗುವ ನಿರೀಕ್ಷೆಗಳಿವೆ.

BSNL ಸೇವೆಯ ಅಡಿಯಲ್ಲಿ ಗ್ರಾಹಕರು ವೇಗದ ನೆಟ್‌ವರ್ಕ್ ವೇಗ ಮತ್ತು ಸಿಮ್-ರಹಿತ ಕಾರ್ಯಾಚರಣೆಯನ್ನು ಪಡೆಯುತ್ತಾರೆ.

BSNL Quantum 5G: ಬಿಎಸ್‌ಎನ್‌ಎಲ್‌ನ ಹೊಸ ‘Quantum 5G FWA’ ಸೇವೆ ಪ್ರಾರಂಭ! ಸಿಮ್ ಇಲ್ಲದೆ ಇಂಟರ್ನೆಟ್ ಬಳಸಬಹುದಂತೆ!

BSNL Q-5G in India: ಬಿಎಸ್‌ಎನ್‌ಎಲ್ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ತನ್ನ 5G ಸೇವೆಯ ಹೆಸರನ್ನು ಘೋಷಿಸಿದೆ. ಬಿಎಸ್ಎನ್ಎಲ್ ತನ್ನ ಕ್ವಾಂಟಮ್ 5G ಅಂದರೆ ‘ಫಿಕ್ಸೆಡ್ ವೈರ್‌ಲೆಸ್ ಆಕ್ಸೆಸ್ (FWA)’ ಸೇವೆಯನ್ನು ಭಾರತದಲ್ಲಿ ವಿಶೇಷವಾಗಿ ಹೈದರಾಬಾದ್‌ನಲ್ಲಿ ಮೃದುವಾಗಿ ಬಿಡುಗಡೆ ಮಾಡಿದೆ. ಇದರ ಬೆಲೆಯನ್ನು ನೋಡುವುದಾದರೆ 100Mbps ಅನ್ನು ಸುಮಾರು ₹999 ಮತ್ತು 300Mbps ವೇಗವನ್ನು ಕೇವಲ ₹1,499 ರೂ.ಗಳಿಂದ ಪ್ರಾರಂಭವಾಗುತ್ತದೆ. BSNL ಕಂಪನಿಯು ಬುಧವಾರ ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ತನ್ನ 5G ಸೇವೆಯ ವಿವರಗಳನ್ನು ಹಂಚಿಕೊಂಡಿದೆ. ಕಂಪನಿಯು ತನ್ನ 5G ಸೇವೆಯ ಹೆಸರು Q-5G ಎಂದು ಹೇಳಿದೆ ಇದರಲ್ಲಿ Q ಅಂದರೆ ಕ್ವಾಂಟಮ್ (Quantum 5G FWA) ಸಂಕ್ಷಿಪ್ತ ರೂಪವಾಗಿದೆ.

ಬಿಎಸ್‌ಎನ್‌ಎಲ್ ಕ್ವಾಂಟಮ್ (BSNL Quantum 5G FWA) ಟೆಕ್ನಾಲಜಿ:

ಈ Fixed Wireless Access (FWA) ಸೇವೆಯ ಅಡಿಯಲ್ಲಿ ಗ್ರಾಹಕರು ವೇಗದ ನೆಟ್‌ವರ್ಕ್ ವೇಗ ಮತ್ತು ಸಿಮ್-ರಹಿತ ಕಾರ್ಯಾಚರಣೆಯನ್ನು ಬಳಸಬಹುದಂತೆ ಎಂದು ಕಂಪನಿ ಹೇಳುತ್ತದೆ ಆದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ನೀಡಿಲ್ಲ. ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಿದೆ. BSNL ಕಂಪನಿಯು ತಮ್ಮ 5G ಸೇವೆಯ ಹೆಸರು Q-5G ಎಂದು ಹೇಳಿದೆ. ಸರ್ಕಾರಿ ಟೆಲಿಕಾಂ ಕಂಪನಿಯು ಈ ಹೆಸರನ್ನು ಜನರು ಆಯ್ಕೆ ಮಾಡಿದ್ದಾರೆ ಎಂದು ಹೇಳುತ್ತದೆ. ಇದು BSNL 5G ನೆಟ್‌ವರ್ಕ್‌ನ ಪವರ್, ವೇಗ ಮತ್ತು ಭವಿಷ್ಯವನ್ನು ಪ್ರತಿಬಿಂಬಿಸುತ್ತದೆ.

ಇದರೊಂದಿಗೆ ಬ್ಯಾಂಡ್ ಆಯ್ದ ವಲಯಗಳಲ್ಲಿ ಕ್ವಾಂಟಮ್ 5G FWA ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯನ್ನು ವ್ಯವಹಾರಗಳು ಮತ್ತು ಉದ್ಯಮಗಳಿಗಾಗಿ ಪ್ರಾರಂಭಿಸಲಾಗಿದೆ. ಇದು ಪ್ರಸ್ತುತ ಅಂತಿಮ ಗ್ರಾಹಕರಿಗೆ ಲಭ್ಯವಿರುವುದಿಲ್ಲ. ಇದು ಯಾವುದೇ ವೈರ್ ಅಥವಾ ಸಿಮ್ ಇಲ್ಲದೆ ಕಾರ್ಯನಿರ್ವಹಿಸುವ ಮೊದಲ 5G FWA ಸೇವೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸೇವೆಯನ್ನು ಸ್ಥಳೀಯ ತಂತ್ರಜ್ಞಾನದ ಸಹಾಯದಿಂದ ಜನರಿಗೆ ತಲುಪಿಸಲಾಗುತ್ತದೆ.

Also Read: OPPO Reno 14 Series: ಭಾರತದಲ್ಲಿ ಒಪ್ಪೋ ತನ್ನ ಪವರ್ಫುಲ್ 5G ಸ್ಮಾರ್ಟ್ಫೋನ್ ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗಿದೆ!

BSNL Q-5G FWA ಸೇವೆಗೆ ಎಷ್ಟು ವೆಚ್ಚವಾಗುತ್ತದೆ?

ಈ ಬಿಎಸ್ಎನ್ಎಲ್ ಕ್ವಾಂಟಮ್ 5G FWA ಕೇವಲ ಹೈ-ಸ್ಪೀಡ್ ಡೇಟಾವನ್ನು ಮಾತ್ರ ನೀಡುತ್ತದೆ ಎಂದು ಟೆಲಿಕಾಂ ಆಪರೇಟರ್ ಹೇಳಿದೆ. ಕಂಪನಿಯು ತನ್ನ 4G ಸೇವೆಯನ್ನು ಸುಧಾರಿಸುತ್ತಿದೆ ಮತ್ತು 5G ಸೇವೆಯನ್ನು ಪ್ರಾರಂಭಿಸಲು ಸಹ ಸಿದ್ಧತೆ ನಡೆಸುತ್ತಿದೆ. ಇದರಲ್ಲಿ ನಿಮಗೆ ಯಾವುದೇ ಧ್ವನಿ ಕರೆ ಸೇವೆ ಸಿಗುವುದಿಲ್ಲ ಎನ್ನುವುದನ್ನು ಗಮಂದಲ್ಲಿಡಬೇಕಾದ ವಿಷಯವಾಗಿದೆ.

ಈ ಸೇವೆಯ ಬೆಲೆ ತಿಂಗಳಿಗೆ ಪರಿಚಯಾತ್ಮಕ ಯೋಜನೆಗಳ ಬೆಲೆಗಳು 100Mbps ಅನ್ನು ಸುಮಾರು ₹999 ಮತ್ತು 300Mbps ವೇಗವನ್ನು ಕೇವಲ ₹1,499 ರೂ.ಗಳಿಂದ ಪ್ರಾರಂಭವಾಗುತ್ತದೆ. ಸುಮಾರು ಒಂದು ವಾರದ ಹಿಂದೆ BSNL ತನ್ನ 5G ಸೇವೆಯ ಹೆಸರನ್ನು ಸೂಚಿಸಲು ಜನರನ್ನು ಕೇಳಿತ್ತು ಇದಲ್ಲದೆ ಕಂಪನಿಯು ಒಂದು ಲಕ್ಷ ಹೆಚ್ಚುವರಿ ಟವರ್‌ಗಳ ಮೂಲಕ ತನ್ನ 4G ಸೇವೆಯನ್ನು ಸುಧಾರಿಸಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo