Samsung Galaxy A16 5G ಬೆಲೆ ಕಡಿತ! ಹೊಸ ಆಫರ್ ಬೆಲೆ ಎಷ್ಟು ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳೇನು ತಿಳಿಯಿರಿ!
ಅಮೆಜಾನ್ನಲ್ಲಿ Samsung Galaxy A16 5G ಸ್ಮಾರ್ಟ್ಫೋನ್ ಮೇಲೆ ಸದ್ದಿಲ್ಲದೇ ಬೆಲೆ ಕಡಿತವಾಗಿದೆ.
Samsung Galaxy A16 5Gಬ್ಯಾಂಕ್ ಆಫರ್ ಮತ್ತು ವಿನಿಮಯ ಬೋನಸ್ (Exchange Offer) ಸೇರಿಸಿ ಅತಿ ಕಡಿಮೆ ಬೆಲೆಗೆ ಮಾರಾಟ.
Samsung Galaxy A16 5G ಫೋನ್ ಸೂಪರ್ AMOLED ಡಿಸ್ಪ್ಲೇಯೊಂದಿಗೆ 6GB RAM ಮತ್ತು 50MP ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ.
ಭಾರತದಲ್ಲಿ ಸ್ಯಾಮ್‌ಸಂಗ್ ತನ್ನ ಜನಪ್ರಿಯ ಮತ್ತು ಹೆಚ್ಚು ಮಾರಾಟವಾದ Samsung Galaxy A16 5G ಸ್ಮಾರ್ಟ್ಫೋನ್ ಮೇಲೆ ಸದ್ದಿಲ್ಲದೇ ಬೆಲೆ ಕಡಿತಗೊಳಿಸಿದೆ. ಕಂಪನಿ ಇದನ್ನು ಪ್ರಸ್ತುತ ಅಮೆಜಾನ್ ಮೂಲಕ ಮಾರಾಟ ಮಾಡುತ್ತಿದ್ದು ಬ್ಯಾಂಕ್ ಆಫರ್ ಜೊತೆಗೆ ವಿನಿಮಯ ಬೋನಸ್ (Exchange Offer) ಸಹ ನೀಡಿ ಅತಿ ಕಡಿಮೆ ಬೆಲೆಗೆ ಈ ಪವರ್ಫುಲ್ ಸ್ಮಾರ್ಟ್ಫೋನ್ ಖರೀದಿಸುವ ಸುವರ್ಣಾವಕಾಶವನ್ನು ಕಂಪನಿ ನೀಡುತ್ತಿದೆ. ಇದರಲ್ಲಿನ ಇಂಟ್ರೆಸ್ಟಿಂಗ್ ಫೀಚರ್ ನೋಡುವುದಾದರೆ ಸೂಪರ್ AMOLED ಡಿಸ್ಪ್ಲೇಯೊಂದಿಗೆ 6GB RAM ಮತ್ತು 50MP ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಹಾಗಾದ್ರೆ Samsung Galaxy A16 5G ಸ್ಮಾರ್ಟ್ಫೋನ್ ಆಫರ್ ಬೆಲೆ ಎಷ್ಟು ಮತ್ತು ಫೀಚರ್ಗಳೇನು ತಿಳಿಯಿರಿ.
Samsung Galaxy A16 5G ಸ್ಮಾರ್ಟ್ಫೋನ್ ಆಫರ್ ಬೆಲೆ ಎಷ್ಟು?
Samsung Galaxy A16 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಮೂರು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹15,499 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹16,999 ರೂಗಳಿಗೆ ಮತ್ತು ಕೊನೆಯದಾಗಿ ಇದರ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹19,999 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಆದರೆ ಆಸಕ್ತ ಬಳಕೆದಾರರು ಇದನ್ನು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1000 ರೂಗಳ ಡಿಸ್ಕೌಂಟ್ ಪಡೆಯುವ ಮೂಲಕ Samsung Galaxy A16 5G ಸ್ಮಾರ್ಟ್ಫೋನ್ ಆರಂಭಿಕ ಮಾದರಿ ಕೇವಲ 14,499 ರೂಗಳಿಗೆ ಖರೀದಿಸಬಹುದು. ಅಲ್ಲದೆ Samsung Galaxy A16 5G ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು.
ಇದನ್ನೂ ಓದಿ: ಬರೋಬ್ಬರಿ 50 ಇಂಚಿನ ಲೇಟೆಸ್ಟ್ QLED Google Smart TV ಅಮೆಜಾನ್‌ನಲ್ಲಿ ₹25,000 ರೂಗಳೊಳಗೆ ಮಾರಾಟ!
ಈ Samsung Galaxy A16 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 14,600 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Samsung Galaxy A16 5G ಹೈಲೈಟ್ ಫೀಚರ್‌ಗಳೇನು?
Samsung Galaxy A16 5G ಸ್ಮಾರ್ಟ್ಫೋನ್ 6.7 ಇಂಚಿನ ಪೂರ್ಣ HD+ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದ್ದು, 90Hz ವರೆಗಿನ ರಿಫ್ರೆಶ್ ದರಕ್ಕೆ ಬೆಂಬಲವನ್ನು ಹೊಂದಿದೆ. ಸ್ಮಾರ್ಟ್ಫೋನ್ ನಿಮಗೆ 50MP ಪ್ರೈಮರಿ ಶೂಟರ್ ಮತ್ತು 5MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪೊ ನೀಡುತ್ತದೆ. ಅಲ್ಲದೆ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಫೋನ್ ಮುಂಭಾಗದಲ್ಲಿ 13MP ಲೆನ್ಸ್ ನೀಡಲಾಗಿದೆ.
ಈ ಶ್ರೇಣಿಯಲ್ಲಿರುವ ಇತರ ಫೋನ್‌ಗಳಿಗಿಂತ ಭಿನ್ನವಾಗಿ ನಿಮಗೆ ಇನ್-ಡಿಸ್ಪ್ಲೇ ಸೆನ್ಸರ್ ಬದಲಿಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ನೀಡುತ್ತದೆ.Samsung Galaxy A16 5G ಸ್ಮಾರ್ಟ್ಫೋನ್ MediaTek Dimensity 6300 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು ಹೆಚ್ಚುವರಿಯ ಸ್ಟೋರೇಜ್ ವಿಸ್ತರಣೆಗೆ ಮೈಕ್ರೊ SD ಕಾರ್ಡ್ ಮೂಲಕ ವಿಸ್ತರಿಸುವ ಸಾಧ್ಯತೆಯಿದೆ. ಇದು ಆಂಡ್ರಾಯ್ಡ್ 14 ಆಧಾರಿತ ಸ್ಯಾಮ್‌ಸಂಗ್ One UI ನಲ್ಲಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: FREE Amazon Prime: ನಿಮಗೆ ಉಚಿತವಾಗಿ ಅಮೆಜಾನ್ ಪ್ರೈಮ್ ಬೇಕಾ? ಹಾಗಾದ್ರೆ ಈ ಪ್ಲಾನ್ ರಿಚಾರ್ಜ್ ಮಾಡಿಕೊಳ್ಳಿ ಸಾಕು!
ಈ ಫೋನ್ ಬರೋಬ್ಬರಿ 6 ವರ್ಷಗಳ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮತ್ತು 6 ವರ್ಷಗಳ ಸೆಕ್ಯೂರಿಟಿ ಪ್ಯಾಚ್ ನೀಡುವ ಭರವಸೆ ನೀಡುತ್ತದೆ. Samsung Galaxy A16 5G ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು 25W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಹೆಚ್ಚುವರಿಯಾಗಿ ಇದು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP54 ರೇಟಿಂಗ್‌ನೊಂದಿಗೆ ಬರುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile