ಹೊಸ Redmi Note 7 Pro vs Samsung Galaxy A50 vs Oppo F11 Pro ಪರ್ಫಾರ್ಮೆನ್ಸ್ ಹೋಲಿಕೆಗಳು

ಹೊಸ Redmi Note 7 Pro vs Samsung Galaxy A50 vs Oppo F11 Pro ಪರ್ಫಾರ್ಮೆನ್ಸ್ ಹೋಲಿಕೆಗಳು
HIGHLIGHTS

ಸೆಲ್ಫಿ ಕ್ಯಾಮೆರಾದ ಫೋನ್ಗಳು, ಟ್ರಿಪಲ್ ಕ್ಯಾಮೆರಾ ಸೆಪಟ್ ಫೋನ್ಗಳು ಅಥವಾ ಮ್ಯಾಸ್ಸಿವ್ 48MP ಮೇಗಪಿಕ್ಸೆಲ್ ಕ್ಯಾಮೆರಾದ ಫೋನ್ಗಳು ಲಭ್ಯವಿದೆ.

ಇಂದಿನ ದಿನಗಳಲ್ಲಿ ಕೇವಲ 25,000 ರೂಗಳಲ್ಲಿ ಭರ್ಜರಿಯ ಫೋನ್ಗಳು ಅಂದ್ರೆ ಪಾಪ್ ಅಪ್ ಸೆಲ್ಫಿ ಕ್ಯಾಮೆರಾದ ಫೋನ್ಗಳು, ಟ್ರಿಪಲ್ ಕ್ಯಾಮೆರಾ ಸೆಪಟ್ ಫೋನ್ಗಳು ಅಥವಾ ಮ್ಯಾಸ್ಸಿವ್ 48MP ಮೇಗಪಿಕ್ಸೆಲ್ ಕ್ಯಾಮೆರಾದ ಫೋನ್ಗಳು ಲಭ್ಯವಿದೆ. ಅಲ್ಲದೆ ಈಗಾಗಲೇ CMR ಅಂದ್ರೆ ಸೈಬರ್ಮೀಡಿಯಾ ರಿಸರ್ಚ್ ವರದಿಯ ಪ್ರಕಾರ ಹೊಸ ಸ್ಮಾರ್ಟ್ಫೋನ್ ಖರೀದಿಸುವಾಗ 89% ಜನರಿಗೆ 'ಕ್ಯಾಮೆರಾ' ಅವರ ಮೊದಲ ಪ್ರಾಮುಖ್ಯತೆಯಾಗಿದೆ. ಇದೇ ವರದಿಯ ಪ್ರಕಾರ 79% ಆ ಫೋನಿನ RAM ಅಥವಾ ಒಟ್ಟಾರೆಯ ಪರ್ಫಾರ್ಮೆನ್ಸ್ ಅಥವಾ ಕಾರ್ಯಕ್ಷಮತೆ  ಮುಖ್ಯವಾಗಿ ಗಮನಿಸುತ್ತಾರೆ. 

ಈ ಕಾರಣದಿಂದಾಗಿ ನಾವು ಕೆಲವೇ ವಾರಗಳ ಹಿಂದೆ ಬಿಡುಗಡೆಯಾದ ಹೊಚ್ಚ ಹೊಸ ಸ್ಮಾರ್ಟ್ಫೋನ್ಗಳನ್ನು ಅಂದ್ರೆ ಹೊಸ Redmi Note 7 Pro vs Samsung Galaxy A50 vs Oppo F11 Pro ಸ್ಮಾರ್ಟ್ಫೋನ್ಗಳ ಪರ್ಫಾರ್ಮೆನ್ಸ್ ಹೋಲಿಕೆಗಳನ್ನು ಅದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೋಡೋಣ ಆದರೆ ಯಾವುದೇ ಒಂದು ಫೋನಿನ ಪರ್ಫಾರ್ಮೆನ್ಸ್ ಅಂದ್ರೆ ಕಾರ್ಯಕ್ಷಮತೆಯನ್ನು ನೋಡಬೇಕೇದರೆ ಹಲವಾರು ಅಪ್ಲಿಕೇಶನ್ಗಳ ಮೂಲಕ ಹಾದು ಹೋಗಬೇಕಾಗುತ್ತದೆ.

ಮೊದಲಿಗೆ ಹೇಳಬೇಕೆಂದರೆ ಈ ಮೂರು ಸ್ಮಾರ್ಟ್ಫೋನ್ಗಳಲ್ಲಿ ಬೇರೆ ಬೇರೆ ರೀತಿಯ ಅಂದ್ರೆ ಕ್ವಾಲ್ಕಾಮ್, ಸ್ಯಾಮ್ಸಂಗ್ ಮತ್ತು ಮೀಡಿಯಾಟೆಕ್ ಚಿಪ್ಸೆಟ್ಗಳನ್ನು ಹೊಂದಿವೆ. ಹಾಗಾದರೆ ಈ ಹೊಸ Redmi Note 7 Pro vs Samsung Galaxy A50 vs Oppo F11 Pro ಸ್ಮಾರ್ಟ್ಫೋನ್ಗಳಲ್ಲಿ ಯಾವುದು ಮುಂದೆ ಯಾವುದು ಹಿಂದೆ ಅಂಥ ನಿಮಗೆ ನಾವು ತೋರಿಸುತ್ತೇವೆ.  ನಾವು ಇಲ್ಲಿ ಅದೇ ಅಂದ್ರೆ ಇವುಗಳ ವಿಮರ್ಶೆಯಲ್ಲಿ ಬಳಸಿದ ಬೇಂಚ್ಮಾರ್ಕ್ ಟೆಸ್ಟ್ ಅನ್ನು ಈ ಎಲ್ಲ ಫೋನ್ಗಳಲ್ಲಿ ನಡೆಸಿದೆವು. ಮತ್ತು ಇವುಗಳ ಸ್ಕೋರ್ಗಳನ್ನು ಹೋಲಿಸಿನೋಡಿದೆವು. ಈ ವಿಡಿಯೋ ಒಟ್ಟು ಮೂರು ಹಂತಗಳಲ್ಲಿ ವಿಂಗಡಿಸಲಾಗಿದ್ದು ಅವೆಂದರೆ CPU ಪರ್ಫಾರ್ಮೆನ್ಸ್ , GPU ಪರ್ಫಾರ್ಮೆನ್ಸ್ ಮತ್ತು ಗೇಮಿಂಗ್ ಪರ್ಫಾರ್ಮೆನ್ಸ್. 

ಮೊದಲಿಗೆ CPU ಪರ್ಫಾರ್ಮೆನ್ಸ್ ಟೆಸ್ಟ್ ಮಾಡಲು ಹಲವಾರು ಬಾರಿ ಗೀಕ್ಬೆಂಚ್ ಸಿಂಗಲ್ ಕೋರ್ ಮತ್ತು ಮಲ್ಟಿ ಕೋರ್ ನಡೆಸಿದೆವು. ಇದರಲ್ಲಿ ಈ ಮೂರು ಫೋನ್ಗಳಲ್ಲಿ Redmi Note 7 Pro ಉತ್ತಮವಾದ ಪರ್ಫಾರ್ಮೆನ್ಸ್ ಜೋತೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಇದು 179186 ಸ್ಕೋರ್ ಮಾಡಿತು ಇದೇ ಸಮಯದಲ್ಲಿ Oppo F11 Pro ಎರಡನೇ ಸ್ಥಾನ 148754 ಸ್ಕೋರ್ ಮಾಡಿದರೆ Galaxy A50 ಕಳಪೆ ಪ್ರದರ್ಶನ 128043 ಸ್ಕೋರ್ ನೀಡಿ ಮೂರನೇ ಸ್ಥಾನ ಪಡೆದುಕೊಂಡಿದೆ. ದಿನನಿತ್ಯದ ಬಳಕೆಯ ಆಧಾರದಲ್ಲಿ Oppo F11 Pro ಹೆಚ್ಚು ಸ್ಕೋರ್ ಗಳಿಸಿದೆ.         

ಎರಡನೇಯದಾಗಿ GPU ಪರ್ಫಾರ್ಮೆನ್ಸ್ ಇದರಲ್ಲಿಯೂ ಸಹ Redmi Note 7 Pro ಅತ್ಯುತ್ತಮವಾದ ಪರ್ಫಾರ್ಮೆನ್ಸ್ ಜೋತೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಇದರಲ್ಲಿದೆ ಅಡ್ರಿನೋ 512 ಆದರೆ Oppo F11 Pro ನಂಬಲಾಗದ ಸ್ಕೋರ್ಗಳನ್ನು ನೀಡಿದೆ. ಇದರಲ್ಲಿ ಮೀಡಿಯಾಟೆಕ್ Helio P70ಯೊಂದಿಗೆ ಮಾಲಿ G72 GPU ಹೊಂದಿದೆ. Oppo F11 Pro ಇದರಲ್ಲಿ ನಾವು AI ಪರ್ಫಾರ್ಮೆನ್ಸ್ ಮತ್ತು ಡುಯಲ್ ಕೋರ್ EPU ಪರ್ಫಾರ್ಮೆನ್ಸ್ ಮೆಟಲ್ ಬಾಡಿಯೊಂದಿಗೆ ಇದು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಆದರೂ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 675 ಎಲ್ಲಕ್ಕಿಂತ ವೇಗವಾಗಿದೆ.

ಕೊನೆಯದಾಗಿ ಇವುಗಳ ಗೇಮಿಂಗ್ ಪರ್ಫಾರ್ಮೆನ್ಸ್ ನೋಡಬೇಕೆಂದರೆ ಈ ಮೂರು ಫೋನ್ಗಳಲ್ಲಿ ಪ್ರತಿಯೊಂದರಲ್ಲಿ 15 ನಿಮಿಷ PUB G ಮೊಬೈಲ್ ಗೇಮ್ ಮತ್ತು Asphalt 9 ಆಡಿದೆವು ಇದನ್ನು ನಾವು ಫ್ರೇಮ್ ರೇಟ್ ಸೆನ್ಸಿಬಿಲಿಟಿ ಗೇಮ್ ಬೆಂಚ್ ಮೂಲಕ ರೆಕಾರ್ಡ್ ಸಹ ಮಾಡಿದೆವು. ಇಲ್ಲಿಯೂ ಸಹ Redmi Note 7 Pro ಮಾತ್ರ ಡಿಫಾಲ್ಟ್ ಹೈ ಗ್ರಾಫಿಕ್ ಮೂಲಕ ರನ್ ಮಾಡಿತ್ತು. ಇದು 39% ಫ್ರೇಮ್ ರೇಟ್ ಪರ್ ಸೆಕೆಂಡ್ ಮತ್ತು 93% ಸ್ಟೆಬಿಲಿಟಿಯನ್ನು ರಿಜಿಸ್ಟರ್ ಮಾಡಿತು. ಇದಕ್ಕೆ ಹತ್ತಿರವಾಗಿ Oppo F11 Pro ಸ್ಮಾರ್ಟ್ಫೋನ್ 30% ಮತ್ತು 87% ಸ್ಟೆಬಿಲಿಟಿಯನ್ನು ನೀಡಿದರೆ Samsung Galaxy A50 ಮತ್ತೊಂಮ್ಮೆ ಕಳಪೆ ಪ್ರದರ್ಶನವನ್ನು ನೀಡಿತು.  

ಅಲ್ಲದೆ ನಾವು ಈ ಮೂರು ಫೋನ್ಗಳ ಗ್ರಾಫಿಕ್ಸ್ ಸಹ ಹೋಲಿಸಿ ನೋಡಿದೆವು ಅದರಲ್ಲೂ Redmi Note 7 Pro ಹೆಚ್ಚು ನ್ಯಾಚುರಲ್ ಮತ್ತು ಆಕರ್ಷಕ ಗ್ರಾಫಿಕ್ ಸೆಟ್ಟಿಂಗ್ ನೀಡಿತು. ಎಡಕ್ಕೆ ಉತ್ತರವಾಗಿ ಗೇಮ್ ಅಲ್ಲಿನ ಹುಲ್ಲು, ಬಂಡೆಕಲ್ಲು ಮತ್ತು ವ್ಯಕ್ತಿಯ ಅಂಗಿಯ ಬಣ್ಣ ಈ ರೇಂಜಲ್ಲಿ  ತುಂಬ ಅಕ್ಯುರೇಟ್ ಆಗಿದೆ. ಇವೇಲ್ಲ ಟೆಸ್ಟ್ಗಳ ಮೂಲಕ ಹೊಸ Redmi Note 7 Pro ಬೆಸ್ಟ್ ಪರ್ಫಾರ್ಮೆನ್ಸ್ ಸ್ಮಾರ್ಟ್ಫೋನ್ ಆಗಿದೆ. ಶೀಘ್ರವೇ ನಾನು ನಿಮಗೆ Redmi Note 7 Pro ಕ್ಯಾಮೆರಾವನ್ನು ಬೇರೆ ಬೆಸ್ಟ್ ಸ್ಮಾರ್ಟ್ಫೋನ್ಗಳ ಕ್ಯಾಮೆರಾದೊಂದಿಗೆ ಹೋಲಿಸಿ ಅದರ ಮಾಹಿತಿ ತರಲಿದ್ದೇನೆ.

 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo