ಭಾರತದಲ್ಲಿ Realme P4 Series ಬಿಡುಗಡೆಯ ಡೇಟ್ ಕಂಫಾರ್ಮ್! ಲೈವ್ ಸ್ಟ್ರೀಮ್ ಎಲ್ಲಿ? ಫೀಚರ್ ಮತ್ತು ಬೆಲೆ ಎಷ್ಟು?
Realme P4 Series ಮುಂಬರಲಿರುವ ರಿಯಲ್‌ಮಿ ಸ್ಮಾರ್ಟ್ ಫೋನ್ಗಳ ಬಿಡುಗಡೆ ಕಂಫಾರ್ಮ್
Realme P4 Series ಸ್ಮಾರ್ಟ್ ಫೋನ್ಗಳು 20ನೇ ಆಗಸ್ಟ್ 2025 ರಂದು ಅಧಿಕೃತವಾಗಿ ಬಿಡುಗಡೆಗೆ ಸಜ್ಜು.
Realme P4 Series ಬಿಡುಗಡೆಯ ಲೈವ್ ಸ್ಟ್ರೀಮ್ ಎಲ್ಲಿ ಮತ್ತು ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ.
Realme P4 Series India launch: ಭಾರತದಲ್ಲಿ ಮುಂಬರಲಿರುವ ರಿಯಲ್‌ಮಿ ಸ್ಮಾರ್ಟ್ ಫೋನ್ಗಳ ಬಿಡುಗಡೆ ಕಂಫಾರ್ಮ್ ಆಗಿದೆ. ಕಂಪನಿ ಈ ಸರಣಿಯಲ್ಲಿ Realme P4 5G ಮತ್ತು Realme P4 Pro 5G ಎಂಬ ಎರಡು ಸ್ಮಾರ್ಟ್ಫೋನ್ಗಳನ್ನು 20ನೇ ಆಗಸ್ಟ್ 2025 ರಂದು ಅಧಿಕೃತವಾಗಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಸ್ಮಾರ್ಟ್ಫೋನ್ ಲೇಟೆಸ್ಟ್ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಬರಲಿವೆ. ಸ್ಮಾರ್ಟ್ಫೋನ್ಗಳ ಲೈವ್ ಸ್ಟ್ರೀಮ್ ಅನ್ನು ಆಸಕ್ತ ಬಳಕೆದಾರರು ರಿಯಲ್‌ಮಿ ಆಫೀಶಿಯಲ್ ಯುಟ್ಯೂಬ್ ಚಾನಲ್ ಮೂಲಕ ವೀಕ್ಷಿಸಬಹುದು.
SurveyRealme P4 Series ಬಿಡುಗಡೆಗೆ ಡೇಟ್ ಕಂಫಾರ್ಮ್!
ಭಾರತದಲ್ಲಿ ಈ ಮುಂಬರಲಿರುವ ರಿಯಲ್‌ಮಿ ಸ್ಮಾರ್ಟ್ ಫೋನ್ಗಳ ಬಿಡುಗಡೆಯನ್ನು ಕಂಫಾರ್ಮ್ ಮಾಡಿದೆ. ಸ್ಮಾರ್ಟ್ಫೋನ್ ಅನ್ನು ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಪರಿಚಯಿಸಲಿದ್ದು ಪ್ರಸ್ತುತ ಈ ಸ್ಮಾರ್ಟ್ಫೋನ್ಗಳ ಮೈಕ್ರೋಸೈಟ್ ಪೇಜ್ ಅನ್ನು ಲೈವ್ ಮಾಡಿದೆ. ಪ್ರಸ್ತುತ ಈ ಫೋನ್ಗಳು Snapdragon 7 Gen ಚಿಪ್ ಮತ್ತು 7000mAh ಬ್ಯಾಟರಿಯೊಂದಿಗೆ ಪವರ್ಫುಲ್ ಫೀಚರ್ಗಳನ್ನು ಸುಮಾರು 30,000 ರೂಗಳೊಳಗೆ ಪರಿಚಾಯಿಸುವ ನಿರೀಕ್ಷೆಗಳಿವೆ. ನೇರವಾಗಿ ಕಂಪನಿಯ ಪ್ರಾಡಕ್ಟ್ ಹೇಗಿದೆ ಏನೇನೆಲ್ಲ ಹೊಂದಿದೆ ಮತ್ತು ಬಳಕೆದಾರರು ಯಾವ ಯಾವ ರೀತಿ ಬಳಸಬಹುದು ಎಂಬ ಪ್ರತಿಯೊಂದು ಸಣ್ಣ ಸಣ್ಣ ಮಾಹಿತಿಯನ್ನು ಕಂಪನಿ ನೆರವಾಗಿ ಪರಿಚಯಿಸುವ ಸನ್ನಿವೇಶದಲ್ಲಿ ನೀವು ಭಾಗಿಯಾಗಬಹುದು.
Realme P4 Series ಲೈವ್ ಸ್ಟ್ರೀಮ್ ಎಲ್ಲಿ? ನಿರೀಕ್ಷಿತ ಫೀಚರ್ಗಳೇನು ತಿಳಿಯಿರಿ!
ಈಗಾಗಲೇ ಮೇಲೆ ತಿಳಿಸಿರುವಂತೆ ಈ ಮುಂಬರಲಿರುವ ಸ್ಮಾರ್ಟ್ಫೋನ್ಗಳ ಲೈವ್ ಸ್ಟ್ರೀಮ್ ಅನ್ನು ಆಸಕ್ತ ಬಳಕೆದಾರರು ರಿಯಲ್‌ಮಿ ಇಂಡಿಯಾದ ಅಧಿಕೃತ ಯುಟ್ಯೂಬ್ ಚಾನಲ್ ಮೂಲಕ ವೀಕ್ಷಿಸಬಹುದು. ಪ್ರಸ್ತುತ ಈ ಸ್ಮಾರ್ಟ್ಫೋನ್ ಬಗ್ಗೆ ಕೆಲವು ಫೀಚರ್ ಬಹಿರಂಗವಾಗಿದ್ದು ಕೆಳಗೆ ನೀವು ಅವುಗಳ ಒಂದು ಲುಕ್ ಕಾಣಬಹುದು.
- ಡಿಸ್ಪ್ಲೇ: 4D Curved AMOLED, 144Hz high refresh rate
- ಕ್ಯಾಮೆರಾ: Advanced AI camera setup
- ಆಪರೇಟಿಂಗ್ ಸಿಸ್ಟಮ್: Android 15 with Realme UI
- ವೇರಿಯಂಟ್: Realme P4 5G & Realme P4 Pro 5G
- ಪ್ರೋಸೇಸರ್: Snapdragon 7 Gen
- ಬ್ಯಾಟರಿ: 7000mAh (fast charging support)
Also Read: 43 Inch Smart TV: ಅಮೆಜಾನ್ ಸೇಲ್‌ನಲ್ಲಿ 43 ಇಂಚಿನ LG ಸ್ಮಾರ್ಟ್ ಟಿವಿಯ ಮೇಲೆ ಭರ್ಜರಿ ಡಿಸ್ಕೌಂಟ್ಗಳು!
ರಿಯಲ್‌ಮಿ P4 Series ನಿರೀಕ್ಷಿತ ಬೆಲೆ ಮತ್ತು ಲಭ್ಯತೆ:
ಭಾರತದಲ್ಲಿ ಮುಂಬರಲಿರುವ ಈ ಸ್ಮಾರ್ಟ್ಫೋನ್ ಬೆಲೆಯನ್ನು ನೋಡುವುದಾದರೆ ಆರಂಭಿಕ ಮಾದರಿಯನ್ನು ಸುಮಾರು ₹28,000 – ₹30,000 ಒಳಗಿನ ಪ್ರೈಸ್ ರೇಂಜ್‌ನಲ್ಲಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಯಾಕೆಂದರೆ ಕಂಪನಿ ಇದರ ಬಗ್ಗೆ ಈಗಾಗಲೇ ಪೋಸ್ಟ್ ಮಾಡಿದ್ದು ಅಂಡರ್ 30ಎಂದು ಸೂಚಿಸಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ಗಳ ಲಭ್ಯತೆಯನ್ನು ನೋಡುವುದಾದರೆ ಇದು ಪ್ರತ್ಯೇಕವಾಗಿ Flipkart ಮತ್ತು Realme Official Store ಮೂಲಕ ಬಿಡುಗಡೆಯ ನಂತರ ಮಾರಾಟಕ್ಕೆ ಲಭ್ಯವಾಗಲಿವೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile