200MP ಕ್ಯಾಮೆರಾದ Redmi Note 15 Pro 5G ಸರಣಿ ಭಾರತದಲ್ಲಿ ಬಿಡುಗಡೆ! ಬೆಲೆ ಎಷ್ಟು ಹಾಗೂ ಫೀಚರ್ಸ್ ಹೇಗಿವೆ?

HIGHLIGHTS

Redmi Note 15 Pro 5G ಸರಣಿಯು ಫೋನ್‌ಗಳು ಇದೇ ಫೆಬ್ರವರಿ 4 ರಂದು ಮಾರಾಟಕ್ಕೆ ಬರಲಿವೆ

Redmi Note 15 Pro 5G ಸರಣಿ ಫೋನ್‌ಗಳು ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ

Redmi Note 15 Pro 5G ಸರಣಿ ಫೋನ್‌ಗಳು 6,500mAh ಬ್ಯಾಟರಿ ಸಪೋರ್ಟ್‌ ಪಡೆದುಕೊಂಡಿದೆ

200MP ಕ್ಯಾಮೆರಾದ Redmi Note 15 Pro 5G ಸರಣಿ ಭಾರತದಲ್ಲಿ ಬಿಡುಗಡೆ! ಬೆಲೆ ಎಷ್ಟು ಹಾಗೂ ಫೀಚರ್ಸ್ ಹೇಗಿವೆ?

ರೆಡ್ಮಿ ಬ್ರ್ಯಾಂಡ್‌ನ ಬಹುನಿರೀಕ್ಷಿತ Redmi Note 15 Pro 5G ಸ್ಮಾರ್ಟ್‌ಫೋನ್‌ ಸರಣಿಯು ಇಂದು (ಜನವರಿ 29 ರಂದು) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಿದೆ. ಸಂಸ್ಥೆಯ ಈ ನೂತನ ಸರಣಿಯು ಎರಡು ವೇರಿಯಂಟ್‌ ಆಯ್ಕೆಗಳೊಂದಿಗೆ ಲಾಂಚ್ ಆಗಿದ್ದು, ಅವುಗಳು ಕ್ರಮವಾಗಿ Redmi Note 15 Pro 5G ಮತ್ತು Redmi Note 15 Pro+ 5G ಮಾಡೆಲ್‌ ಆಗಿವೆ. ಇನ್ನು ಈ ಎರಡು ಮೊಬೈಲ್‌ಗಳು ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, 200 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿವೆ ಜೊತೆಗೆ 144Hz ಸ್ಕ್ರೀನ್‌ ರಿಫ್ರೆಶ್ ರೇಟ್‌ ಸೌಲಭ್ಯ ಪಡೆದಿವೆ. ಅಲ್ಲದೇ ಈ ಮೊಬೈಲ್‌ಗಳು 6,500mAh ಬ್ಯಾಟರಿ ಸಪೋರ್ಟ್‌ ಒಳಗೊಂಡಿವೆ. ಹಾಗಾದರೇ Redmi Note 15 Pro ಸ್ಮಾರ್ಟ್‌ಫೋನ್‌ ಸರಣಿಯ ಫೀಚರ್ಸ್ ಹಾಗೂ ಬೆಲೆ ಮಾಹಿತಿ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Jio ಟೆಲಿಕಾಂನ ಈ ಪ್ಲಾನ್‌ಗಳಲ್ಲಿ ಸಿಗುತ್ತೆ 84 ದಿನಗಳ ವ್ಯಾಲಿಡಿಟಿ, 168GB ಡೇಟಾ ಸೌಲಭ್ಯ!

Redmi Note 15 Pro 5G ಸರಣಿಯ ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ Redmi Note 15 Pro 5G ಫೋನ್‌ ಎರಡು ವೇರಿಯಂಟ್‌ ಆಯ್ಕೆಯಲ್ಲಿ ಲಾಂಚ್ ಆಗಿದೆ. ಆರಂಭಿಕ 8GB RAM +128GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 29,999 ರೂಗಳು ಆಗಿದೆ. ಹಾಗೆಯೇ ಇದರ 8GB + 256GB ಸ್ಟೋರೇಜ್‌ ವೇರಿಯಂಟ್‌ 31,999 ರೂಗಳ ಬೆಲೆಯಲ್ಲಿ ಲಭ್ಯ ಇದೆ. ಇನ್ನು ಈ ಫೋನ್‌ ಸಿಲ್ವರ್ ಆಶ್, ಮಿರಾಜ್ ಬ್ಲೂ ಮತ್ತು ಕಾರ್ಬನ್ ಬ್ಲ್ಯಾಕ್ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಆಗಲಿವೆ. ಇನ್ನು ಫೆಬ್ರವರಿ 4 ರಂದು ಫೋನ್‌ಗಳು ಮಾರಾಟಕ್ಕೆ ಬರಲಿವೆ.

Redmi Note 15 Pro+ 5G ಫೋನ್‌ ಮೂರು ವೇರಿಯಂಟ್‌ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ ಆರಂಭಿಕ 8GB RAM +128GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 37,999 ರೂಗಳು ಆಗಿದೆ. ಹಾಗೆಯೇ ಇದರ 12GB + 256GB ಸ್ಟೋರೇಜ್‌ ವೇರಿಯಂಟ್‌ 39,999 ರೂಗಳ ಬೆಲೆಯಲ್ಲಿ ಲಭ್ಯ. ಅಲ್ಲದೇ 12GB + 512GB ಸ್ಟೋರೇಜ್‌ ವೇರಿಯಂಟ್‌ ದರವು 43,999 ರೂಗಳು ಆಗಿದೆ. ಈ ಫೋನ್‌ ಕಾಫಿ ಮೋಚಾ, ಮಿರಾಜ್ ಬ್ಲೂ ಮತ್ತು ಕಾರ್ಬನ್ ಬ್ಲ್ಯಾಕ್ ಬಣ್ಣಗಳಲ್ಲಿ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಆಗಲಿವೆ. ಆಸಕ್ತ ಖರೀದಿದಾರರು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ EMI ಗಳನ್ನು ಬಳಸಿಕೊಂಡು ರೂ. 3,000 ವರೆಗಿನ ಇನ್‌ಸ್ಟಂಟ್‌ ರಿಯಾಯಿತಿಯನ್ನು ಪಡೆಯಬಹುದು.

Redmi Note 15 Pro 5G ಫೋನಿನ ಫೀಚರ್ಸ್‌

Redmi Note 15 Pro 5G ಮೊಬೈಲ್‌ 6.83 ಇಂಚಿನ AMOLED ಡಿಸ್‌ಪ್ಲೇ ಪಡೆದಿದ್ದು, ಇದು 1.5K 1,280 x 2,772 ಪಿಕ್ಸೆಲ್‌ಗಳು ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಅಲ್ಲದೇ ಈ ಸ್ಕ್ರೀನ್ 120Hz ರಿಫ್ರೆಶ್ ರೇಟ್‌ ಜೊತೆಗೆ 3,200 ನಿಟ್‌ಗಳ ಬ್ರೈಟ್ನೆಸ್‌ ಪಡೆದಿದೆ. ಇದರ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ. ಹಾಗೆಯೇ ಇದು MediaTek Dimensity 7400-Ultra ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿರುವ ಜೊತೆಗೆ ಆಂಡ್ರಾಯ್ಡ್ 15 ಆಧಾರಿತ ಹೈಪರ್‌ಓಎಸ್ 2 ನಲ್ಲಿ ಕಾರ್ಯನಿರ್ವಹಿಸುತ್ತವೆ. ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದೆ. ಪ್ರಾಥಮಿಕ ಕ್ಯಾಮೆರಾ 200MP ಸೆನ್ಸಾರ್ ಆಗಿದ್ದು ಸೆಕೆಂಡರಿ ಕ್ಯಾಮೆರಾವು 8MP ಸೆನ್ಸಾರ್‌ನಲ್ಲಿದೆ. ಇದರೊಂದಿಗೆ 20MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಫೋನ್‌ 45W ಫಾಸ್ಟ್ ಚಾರ್ಜಿಂಗ್ ಮತ್ತು 22.5W ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,580mAh ಬ್ಯಾಟರಿಯನ್ನು ಹೊಂದಿದೆ.

Redmi Note 15 Pro+ 5G ಮೊಬೈಲ್‌ನ ಫೀಚರ್ಸ್‌

ಈ ಸ್ಮಾರ್ಟ್‌ಫೋನ್‌ ಸಹ 6.83 ಇಂಚಿನ AMOLED ಡಿಸ್‌ಪ್ಲೇ ಹೊಂದಿರುವ ಜೊತೆಗೆ 1.5K 1,280 x 2,772 ಪಿಕ್ಸೆಲ್‌ಗಳು ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಸ್ಕ್ರೀನ್ 120Hz ರಿಫ್ರೆಶ್ ರೇಟ್‌ ಜೊತೆಗೆ 3,200 ನಿಟ್‌ಗಳ ಬ್ರೈಟ್ನೆಸ್‌ ಒಳಗೊಂಡಿದೆ. ಇದರ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ. ಇದು Snapdragon 7s Gen 4 ಚಿಪ್‌ಸೆಟ್‌ ಪ್ರೊಸೆಸರ್‌ ಪಡೆದಿರುವ ಜೊತೆಗೆ ಆಂಡ್ರಾಯ್ಡ್ 15 ಆಧಾರಿತ ಹೈಪರ್‌ಓಎಸ್ 2 ನಲ್ಲಿ ಕೆಸಲ ಮಾಡಲಿದೆ. ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು ಕ್ಯಾಮೆರಾಗಳು ಕ್ರಮವಾಗಿ 200MP ಸೆನ್ಸಾರ್ ಮತ್ತು 8MP ಸೆನ್ಸಾರ್‌ನಲ್ಲಿ ಇವೆ. ಇದರೊಂದಿಗೆ 32MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಫೋನ್‌ 6,500mAh ಬ್ಯಾಟರಿಯನ್ನು ಹೊಂದಿದ್ದು ಇದಕ್ಕೆ ಪೂರಕವಾಗಿ 100W ವೈರ್ಡ್ ಚಾರ್ಜಿಂಗ್ ಮತ್ತು 22.5W ರಿವರ್ಸ್ ವೈರ್ಡ್ ಚಾರ್ಜಿಂಗ್‌ ವ್ಯವಸ್ಥೆ ಒಳಗೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo