ಹೊಸ Aadhaar ಆಪ್ ಬಿಡುಗಡೆ; ಆಧಾರ್‌ನಲ್ಲಿ ಮೊಬೈಲ್ ನಂಬರ್ ಅಪ್‌ಡೇಟ್ ಮಾಡುವುದು ಇನ್ನು ತುಂಬಾ ಸರಳ
UIDAI ಹೊಸ Aadhaar ಮೊಬೈಲ್ ಅಪ್ಲಿಕೇಶನ್ ಪರಿಚಯಿಸಿದೆ
ಫೇಸ್ ಐಡೆಟಿಂಟಿ ಮೂಲಕ ತಮ್ಮ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಬಹುದು
ಇಂಟರ್ನೆಟ್ ಕನೆಕ್ಷನ್ ಇಲ್ಲದಿದ್ದರೂ ಆಧಾರ್ ಪರಿಶೀಲನೆಯನ್ನು ಮಾಡಬಹುದಾಗಿದೆ
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಹೊಸ Aadhaar ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ Aadhaar ಅಪ್ಲಿಕೇಶನ್ ಹಳೆಯ mAadhaar ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಬದಲಾಯಿಸಿದ್ದು ಈಗ ಅಪ್‌ಡೇಟ್ ಆಗಿರುವ ಸುರಕ್ಷಿತ ಮತ್ತು ಹೊಸ ಫೀಚರ್ಸ್‌ಗಳ ಆವೃತ್ತಿಯಾಗಿ ಬಂದಿದೆ. ಬಿಡುಗಡೆ ಆಗಿರುವ ನೂತನ ಅಪ್ಲಿಕೇಶನ್‌ನಲ್ಲಿ ಸುಧಾರಿತ ಬಳಕೆದಾರ ಇಂಟರ್ಫೇಸ್, ವೇಗವಾದ ಕಾರ್ಯಕ್ಷಮತೆ, ಹೆಚ್ಚಿದ ಭದ್ರತಾ ವೈಶಿಷ್ಟ್ಯಗಳು ಮತ್ತು ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳಿಗೆ ಆಧಾರ್ ಸಂಬಂಧಿತ ಸೇವೆಗಳಿಗೆ ಉತ್ತಮ ಬೆಂಬಲ ಒದಗಿಸಲಿದೆ. ಅಂದಹಾಗೆ ಹಳೆಯ mAadhaar ಆಪ್‌ನಿಂದ ಹೊಸ Aadhaar ಆಪ್‌ಗೆ ಬದಲಾವಣೆ ಕಡ್ಡಾಯ ಎನ್ನಲಾಗಿದೆ. ಏಕೆಂದರೆ UIDAIಯು ಹಳೆಯ mAadhaar ಆಪ್ ಸಪೋರ್ಟ್ ಕ್ರಮೇಣ ತೆಗೆದುಹಾಕಲಾಗುವುದು ಎಂದು ಸೂಚಿಸಿದೆ.
SurveyAlso Read : OnePlus 13 ಬೆಲೆಯಲ್ಲಿ 8,000 ರೂಗಳ ನೇರ ಡಿಸ್ಕೌಂಟ್! ಈ ಜಬರ್ದಸ್ತ್ ಆಫರ್ ಎಲ್ಲಿ ಗೊತ್ತಾ?
ನೂತನ ಆಧಾರ್ ಕಾರ್ಡ್ ಬಳಕೆದಾರರಿಗೆ ಆಧಾರ್ ಕಾರ್ಡ್ ಹಂಚಿಕೊಳ್ಳುವಾಗ ತೋರಿಸಲು ಬಯಸುವ ವಿವರಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಈ ಆಯ್ಕೆಯನ್ನು ಬಳಸುವುದರಿಂದ ಜನರು ಆಧಾರ್ ಕಾರ್ಡ್‌ನ ಪೂರ್ಣ ನಕಲು ಪ್ರತಿಗಳನ್ನು ನೀಡುವುದನ್ನು ತಪ್ಪಿಸಬಹುದು. ಅಲ್ಲದೇ ಅವರ ವೈಯಕ್ತಿಕ ಡೇಟಾದ ದುರುಪಯೋಗ ಆಗುವುದನ್ನು ತಪ್ಪಿಸಬಹುದು. ಹೋಟೆಲ್ ಚೆಕ್-ಇನ್‌ಗಳು ಅಥವಾ ಸಿಮ್ ಕಾರ್ಡ್ ಪರಿಶೀಲನೆಯಂತಹ ಸಂದರ್ಭಗಳಲ್ಲಿ ಇದು ಅನುಕೂಲಕರ ಎನಿಸಲಿದೆ.

ಹೊಸ Aadhaar ಆಪ್‌ನಲ್ಲಿ ಆಫ್‌ಲೈನ್ ಗುರುತಿನ ಪರಿಶೀಲನೆ
ನೂತನ Aadhaar ಆಪ್‌ನಲ್ಲಿ ಇಂಟರ್ನೆಟ್ ಕನೆಕ್ಷನ್ ಇಲ್ಲದಿದ್ದರೂ ಆಧಾರ್ ಪರಿಶೀಲನೆಯನ್ನು ಮಾಡಬಹುದಾಗಿದೆ. ಹೀಗಾಗಿ ಈ ಆಪ್ ಆಕ್ಟಿವ್ ಇಂಟರ್ನೆಟ್ ಕನೆಕ್ಷನ್ ಅಗತ್ಯ ಇರುವುದಿಲ್ಲ. ಈ ಆಯ್ಕೆಯು ಗುರುತಿನ ಪರಿಶೀಲನೆಗಳನ್ನು ಸರಳ ಮಾಡುವ ಉದ್ದೇಶವನ್ನು ಹೊಂದಿದ್ದು, ಮುಖ್ಯವಾಗಿ ನೆಟ್‌ವರ್ಕ್ ಇರದ ಸ್ಥಳಗಳಲ್ಲಿ ಹೆಚ್ಚು ನೆರವಾಗಬಹುದು. ಇನ್ನು ಹೊಸ Aadhaar ಆಪ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ತಮ್ಮ ಡಿಜಿಟಲ್ ಗುರುತನ್ನು ತೋರಿಸಲು ನೆರವಾಗಲಿದೆ. ಹಾಗೆಯೇ ಶೇರ್ ಮಾಡಲು ಹಾಗೂ ಅಗತ್ಯ ಸಂದರ್ಭಗಳಲ್ಲಿ ಪರಿಶೀಲಿಸಲು ಅನುವು ಮಾಡಿಕೊಡುತ್ತದೆ. QR ಆಧಾರಿತ ಪರಿಶೀಲನೆ, ಗೌಪ್ಯತೆ ಮತ್ತು ಬಳಕೆಯ ಸುಲಭತೆಯನ್ನು ಖಚಿತಪಡಿಸಿಕೊಳ್ಳುವಾಗ ಭೌತಿಕ ದಾಖಲೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಲಾಗಿದೆ.
ನೂತನ Aadhaar ಆಪ್‌ನಲ್ಲಿ ಮೊಬೈಲ್ ಸಂಖ್ಯೆ ಅಪ್‌ಡೇಟ್ ಮಾಡಬಹುದು
ಬಳಕೆದಾರರು OTP ಮತ್ತು ಫೇಸ್ ಐಡೆಟಿಂಟಿ ಮೂಲಕ ತಮ್ಮ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಲು ಈ ನೂತನ Aadhaar ಆಪ್ ಅನುಮತಿಸುತ್ತದೆ ಎನ್ನಲಾಗಿದೆ. ಈ ಸೇವೆಯನ್ನು ಬಳಕೆದಾರರು ಯಾವುದೇ ಸ್ಥಳದಿಂದ ಹಾಗೂ ಯಾವುದೇ ಸಮಯದಲ್ಲಿ ಮಾಡಬಹುದು ಎಂದು UIDAI ಹೇಳಿದೆ. ಈ ಫೀಚರ್ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡುವ ಸಲುವಾಗಿ ಜನರು ಸೇವಾ ಕೇಂದ್ರಗಳಿಗೆ ಭೇಟಿ ನೀಡುವ ಅಗತ್ಯವನ್ನು ತೆಗೆದುಹಾಕುತ್ತದೆ. ಅಲ್ಲದೇ ಆಧಾರ್ ಅಪ್‌ಡೇಟ್‌ಗಳನ್ನು ಇನ್ನಷ್ಟು ಸರಳಗೊಳಿಸುತ್ತದೆ. ಹಾಗೆಯೇ ಹೊಸ ಆಧಾರ್ ಆಪ್‌ನಲ್ಲಿ ಅತ್ಯುತ್ತಮ ಸುರಕ್ಷತೆಗಾಗಿ ಒಂದು ಟ್ಯಾಪ್ ಬಯೋಮೆಟ್ರಿಕ್ಸ್ ಲಾಕ್ ಸೌಲಭ್ಯ ನೀಡಲಾಗಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile