8GB RAM ಮತ್ತು 6000mAh ಬ್ಯಾಟರಿಯೊಂದಿಗೆ Realme P3x 5G ಕೈಗೆಟಕುವ ಬೆಲೆಗೆ ಬಿಡುಗಡೆ!

8GB RAM ಮತ್ತು 6000mAh ಬ್ಯಾಟರಿಯೊಂದಿಗೆ Realme P3x 5G ಕೈಗೆಟಕುವ ಬೆಲೆಗೆ ಬಿಡುಗಡೆ!
HIGHLIGHTS

Realme P3x 5G ಸ್ಮಾರ್ಟ್ಫೋನ್ ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.

Realme P3x 5G ಸ್ಮಾರ್ಟ್ಫೋನ್ Dimensity 6400 ಚಿಪ್‌ನೊಂದಿಗೆ ಕೇವಲ 13,999 ರೂಗಳಿಗೆ ಪರಿಚಯ.

Realme P3x 5G ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾ ಮತ್ತು 6000mAh ಬ್ಯಾಟರಿಯೊಂದಿಗೆ SuperVOOC ಬೆಂಬಲಿಸುತ್ತದೆ.

Realme P3x 5G Officially Launched: ಚೀನಾದ ಸ್ಮಾರ್ಟ್ಫೋನ್ ತಯಾರಕ ಕಂಪನಿ ರಿಯಲ್ಮಿ (Realme) ಬಜೆಟ್ ಬೆಲೆಯ ಶ್ರೇಣಿಯಲ್ಲಿ 50MP ಪ್ರೈಮರಿ ಕ್ಯಾಮೆರಾ ಮತ್ತು 6000mAh ಬ್ಯಾಟರಿಯೊಂದಿಗೆ ಹೊಸ 5G ಸ್ಮಾರ್ಟ್ಫೋನ್ ಪರಿಚಯಿಸಿದೆ. ಇಂತಹ ಅನೇಕ ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ Realme P3x 5G ಸ್ಮಾರ್ಟ್ಫೋನ್ 18ನೇ ಫೆಬ್ರವರಿ 2025 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಬೆಲೆಯಲ್ಲಿ ನೀವು ಫೋನ್‌ನಲ್ಲಿ ಪ್ರೀಮಿಯಂ ವಿನ್ಯಾಸದೊಂದಿಗೆ ಪವರ್ಫುಲ್ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. Realme P3x 5G ಫೋನಿನ ಆಫರ್ ಬೆಲೆ ಎಷ್ಟು? ಮತ್ತು ಇತರ ವಿಶೇಷಣಗಳೇನು ಎಲ್ಲವನ್ನು ತಿಳಿಯಿರಿ.

Realme P3x 5G ಕೈಗೆಟಕುವ ಬೆಲೆಗೆ ಬಿಡುಗಡೆ!

Realme P3x 5G ಫೋನಿನ ಮೂಲ ರೂಪಾಂತರದ ಬೆಲೆ 13,999 ರೂಪಾಯಿಯಾಗಿದೆ. ಇದು 6GB RAM ಮತ್ತು 128GB ಸಂಗ್ರಹವನ್ನು ಹೊಂದಿದೆ. ಹಾಗಾಗಿ 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಟಾಪ್ ವೇರಿಯಂಟ್ ಫೋನ್‌ನ ಬೆಲೆ 14,999 ರೂಪಾಯಿಯಾಗಿದೆ. ಆಸಕ್ತ ಬಳಕೆದಾರರು ಆಯ್ದ ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು 1000 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯಬಹುದು.

News About Realme P3x 5G

ಈ ಮೂಲಕ Realme P3x 5G ಆರಂಭಿಕ ರೂಪಾಂತರವನ್ನು ಕೇವಲ 12,999 ರೂಗಳಿಗೆ ಈ ಸ್ಮಾರ್ಟ್ಫೋನ್‌ ಖರೀದಿಸಬಹುದು. ಇದರ ಲಭ್ಯತೆಯ ಬಗ್ಗೆ ಹೇಳುವುದಾದರೆ ಈ Realme P3x 5G ಫೋನ್‌ನ ಮಾರಾಟ 28 ನೇ ಫೆಬ್ರವರಿ 2025 ರಂದು ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಗಲಿದೆ. ಈ ಸ್ಮಾರ್ಟ್‌ಫೋನ್ ಮಿಡ್‌ನೈಟ್ ಬ್ಲೂ, ಲೂನಾರ್ ಸಿಲ್ವರ್ ಮತ್ತು ಸ್ಟೆಲ್ಲರ್ ಪಿಂಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ.

Also Read: 6GB RAM ಮತ್ತು 48MP ಕ್ಯಾಮೆರಾದ ರಿಯಲ್‌ಮಿ Gaming Smartphone ಮೇಲೆ 3500 ರೂಗಳವರೆಗೆ ಡಿಸ್ಕೌಂಟ್!

ರಿಯಲ್‌ಮಿ P3x 5G ​​ವೈಶಿಷ್ಟ್ಯಗಳು ಮತ್ತು ವಿಶೇಷಣಗಳು:

Realme P3x 5G ಫೋನ್ 6.72 ಇಂಚಿನ FHD+ 120Hz LCD ಸ್ಕ್ರೀನ್ ಹೊಂದಿದೆ. Realme P3x 5G ಸ್ಮಾರ್ಟ್‌ಫೋನ್ ಅನ್ನು ಪ್ರೀಮಿಯಂ ಸಸ್ಯಾಹಾರಿ ಚರ್ಮದ ವಿನ್ಯಾಸದೊಂದಿಗೆ ಬಿಡುಗಡೆ ಮಾಡಲಾಗಿದೆ. ಈ Realme P3x 5G ಫೋನ್ 50MP ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಅದರೊಂದಿಗೆ LED ಫ್ಲ್ಯಾಷ್ ಹೊಂದಿರುವ ದ್ವಿತೀಯ ಹಿಂಬದಿಯ ಕ್ಯಾಮೆರಾವನ್ನು ಒದಗಿಸಲಾಗಿದೆ. ಸೆಲ್ಫಿ ಪ್ರಿಯರಿಗಾಗಿ ಫೋನ್ 8MP ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿರುತ್ತದೆ.

News About Realme P3x 5G
News About Realme P3x 5G

ಇದರಲ್ಲಿ ವೇಗ ಮತ್ತು ಬಹುಕಾರ್ಯಕಕ್ಕಾಗಿ MediaTek Dimensity 6400 ಪ್ರೊಸೆಸರ್ನಿಂದ ನಡೆಸಲ್ಪಡುವ ಮೊದಲ ಫೋನ್ ಆಗಿದ್ದು ಇದು 8GB ವರೆಗೆ RAM ಮತ್ತು 10GB ವರೆಗೆ ವರ್ಚುವಲ್ RAM ಅನ್ನು ಪಡೆಯುತ್ತದೆ. ಇದು ಧೂಳು ಮತ್ತು ನೀರಿನ ಪ್ರತಿರೋಧ ಮತ್ತು ಮಿಲಿಟರಿ ದರ್ಜೆಯ ಆಘಾತ ನಿರೋಧಕತೆಗಾಗಿ IP68 + IP69 ರೇಟಿಂಗ್ ಅನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ One UI 6.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಪವರ್ ಬ್ಯಾಕಪ್‌ಗಾಗಿ ಈ ಫೋನ್ 45W SuperVOOC ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 6000mAh ಬ್ಯಾಟರಿಯನ್ನು ಪಡೆಯುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo