Realme P3 Ultra 5G ಅತಿ ಶೀಘ್ರದ ಬಿಡುಗಡೆ ಪೋಸ್ಟರ್ ರಿಲೀಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ

HIGHLIGHTS

Realme P3 Ultra 5G ಸ್ಮಾರ್ಟ್ಫೋನ್ ಭಾರತದಲ್ಲಿ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Realme P3 Ultra 5G ಬಗ್ಗೆ ಪ್ರಸ್ತುತ ಯಾವುದೇ ಅಧಿಕೃತ ಮಾಹಿತಿಗಳನ್ನು ಕಂಪನಿ ನೀಡಿಲ್ಲ.

Realme P3 Ultra 5G ಸ್ಮಾರ್ಟ್ಫೋನ್ ಅತಿ ತೆಳ್ಳಗೆ ಆಕರ್ಷಕ ಡಿಸೈನಿಂಗ್‌ನೊಂದಿಗೆ ಬಿಡುಗಡೆಯಾಗಬಹುದು.

Realme P3 Ultra 5G ಅತಿ ಶೀಘ್ರದ ಬಿಡುಗಡೆ ಪೋಸ್ಟರ್ ರಿಲೀಸ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ

Realme P3 Ultra 5G Confirmed to Launch in India: ರಿಯಲ್‌ಮಿ ಸ್ಮಾರ್ಟ್ಫೋನ್ ಬ್ರಾಂಡ್ ಭಾರತದಲ್ಲಿ ತನ್ನ ಮುಂಬರಲಿರುವ Realme P3 Ultra 5G ಅನ್ನು ಅತಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಆದರೆ ಕಂಪನಿ ಈ ಸ್ಮಾರ್ಟ್ಫೋನ್ ಬಗ್ಗೆ ಪ್ರಸ್ತುತ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ನೀಡಿಲ್ಲ. ಹಾಗಾದ್ರೆ ಈ ಮುಂಬರಲಿರುವ Realme P3 Ultra 5G ಸ್ಮಾರ್ಟ್ಫೋನ್ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ.

Digit.in Survey
✅ Thank you for completing the survey!

ಈಗ Realme P3 Ultra 5G ಸರದಿ!

ಈಗಾಗಲೇ ಕಂಪನಿ Realme P3 Series ಅಡಿಯಲ್ಲಿ ಅನೇಕ ಫೋನ್ಗಳನ್ನು ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಈಗ Realme P3 Ultra 5G ಸರದಿಯಾಗಿದ್ದು ಅತಿ ತೆಳ್ಳಾಗಿನ ವಿನ್ಯಾಸದೊಂದಿಗೆ ಭಾರತದಲ್ಲಿ ಬರಲಿದ್ದು ಆದರೆ ಸ್ಮಾರ್ಟ್ಫೋನ್ ಡಿಸೈನಿಂಗ್ ಮಾತ್ರ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದೂ Realme P3 Ultra 5G ಸ್ಮಾರ್ಟ್ಫೋನ್ ಅತಿ ತೆಳ್ಳಗೆ ಆಕರ್ಷಕ ಡಿಸೈನಿಂಗ್‌ನೊಂದಿಗೆ ಬಿಡುಗಡೆಗಳಿರುವ ಬಗ್ಗೆ ಕಂಪನಿ ಸ್ವತಃ ಟ್ವಿಟ್ಟರ್ ಮೂಲಕ ಪೋಸ್ಟ್ ಮಾಡಿದ್ದಾರೆ.

ಈ ರಿಯಲ್‌ಮಿ ತನ್ನ Realme P3 ಸರಣಿಯಲ್ಲಿ ಈಗ ಹೊಸದಾಗಿ ಈ ಅಲ್ಟ್ರಾ (Ultra) ಮಾದರಿಯನ್ನು ಪರಿಚಯಿಸುವ ಯೋಜನೆಯನ್ನು ಪ್ರಕಟಿಸಿದೆ. ರಿಯಲ್‌ಮಿ ಹಂಚಿಕೊಂಡ Realme P3 Ultra 5G ಸ್ಮಾರ್ಟ್ಫೋನ್ ಟೀಸರ್ ಚಿತ್ರವು ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್‌ನೊಂದಿಗೆ ಸ್ಲಿಮ್, ಫ್ಲಾಟ್-ಫ್ರೇಮ್ ವಿನ್ಯಾಸವನ್ನು ಬಹಿರಂಗಪಡಿಸುತ್ತದೆ.

Also Read: ವಾವ್! BSNL ಈ ರಿಚಾರ್ಜ್ ಪ್ಲಾನ್ ಅತಿ ಕಡಿಮೆ ಬೆಲೆಗೆ 70 ಮತ್ತು 150 ದಿನಗಳಿಗೆ ವಿಶೇಷ ಪ್ರಯೋಜನ ನೀಡುತ್ತಿದೆ!

Realme P3 Ultra 5G ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು?

ಫೋನ್ ಅರೆನಾ ವರದಿಯ ಪ್ರಕಾರ “RMX5030” ಮಾದರಿ ಸಂಖ್ಯೆ ಹೊಂದಿರುವ ರಿಯಲ್ಮೆ ಸ್ಮಾರ್ಟ್‌ಫೋನ್ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ ಇದು ಮುಂಬರುವ Realme P3 Ultra 5G ಸ್ಮಾರ್ಟ್ಫೋನ್ ಆಗಿರಬಹುದು ಎಂದು ಊಹಿಸಲಾಗಿದೆ. Realme P3 Ultra 5G ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ಈ ಫೋನ್ 50MP ಪ್ರೈಮರಿ ಸೆನ್ಸರ್ ಡ್ಯುಯಲ್-ಕ್ಯಾಮೆರಾ ಸೆಟಪ್‌ನೊಂದಿಗೆ ನಿರೀಕ್ಷಿಸಬಹುದು. ಆದರೆ ಮುಂಭಾಗದ ಕ್ಯಾಮೆರಾ ಪಂಚ್-ಹೋಲ್ ಕಟೌಟ್‌ನಲ್ಲಿ ಇರಿಸಲಾದ 12MP ಸೆನ್ಸರ್ ಬರಬಹುದು ಎಂದು ನಿರೀಕ್ಷಿಸಲಾಗಿದೆ.

ಅಲ್ಲದೆ ಈ Realme P3 Ultra 5G ಸ್ಮಾರ್ಟ್ಫೋನ್ ಬಗ್ಗೆ ಯಾವುದೇ ಅಧಿಕೃತ ಮಹಿತಿಗಳಿಲ್ಲವಾದರೂ ನಿರೀಕ್ಷೆಯಂತೆ ಇದರಲ್ಲಿ MediaTek Dimensity 8300 ಚಿಪ್‌ಸೆಟ್‌ನಿಂದ 12GB ವರೆಗಿನ LPDDR5X RAM ನೊಂದಿಗೆ ಜೋಡಿಸಲ್ಪಟ್ಟಿರಬಹುದು. ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15-ಆಧಾರಿತ Realme UI 6 ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಕೊನೆಯದಾಗಿ Realme P3 Ultra 5G ಸ್ಮಾರ್ಟ್ಫೋನ್ 80W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 6,000mAh ಬ್ಯಾಟರಿಯನ್ನು ಸಹ ನಿರೀಕ್ಷಿಸಲಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo