Realme Narzo 80x 5G ಮತ್ತು Realme Narzo 80 Pro ನಾಳೆ ಬಿಡುಗಡೆಯಾಗಲು ಸಜ್ಜು! ಬೆಲೆ ಮತ್ತು ಫೀಚರ್ಗಳೇನು?
Realme Narzo 80 Series ಸ್ಮಾರ್ಟ್ಫೋನ್ಗಳು ನಾಳೆ ಬಿಡುಗಡೆಯಾಗಲು ಸಜ್ಜಾಗಿವೆ.
Realme Narzo 80x ಮತ್ತು Realme Narzo 80 Pro ಸ್ಮಾರ್ಟ್ಫೋನ್ ಬಿಡುಗಡೆಯಾಗಲಿವೆ.
Realme Narzo 80 Series ಫೋನ್ಗಳು 9ನೇ ಏಪ್ರಿಲ್ 2025 ರಂದು ಫ್ಲಿಪ್‌ಕಾರ್ಟ್ ಮೂಲಕ ಬರಲಿವೆ.
ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್ಮಿ (Realme) ತನ್ನ ಭಾರತದಲ್ಲಿ ನಾಳೆ ಅಂದ್ರೆ 9ನೇ ಏಪ್ರಿಲ್ 2025 ರಂದು ಈ ಲೇಟೆಸ್ಟ್ Realme Narzo 80x 5G and Realme Narzo 80 Pro ಅಧಿಕೃತವಾಗಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಸ್ಮಾರ್ಟ್ಫೋನ್ ಬೀಡುಗಡೆಗೂ ಮುಂಚೆ ಅನೇಕ ಇಂಟ್ರೆಸ್ಟಿಂಗ್ ಫೀಚರ್ಗಳನ್ನು ಬಹಿರಂಗಪಸಿಡಿದೆ. ಈ ಸ್ಮಾರ್ಟ್ಫೋನ್ಗಳು ಮುಖ್ಯವಾಗಿ ಬಜೆಟ್ ವಿಭಾಗದ ಗೇಮಿಂಗ್ ಗ್ರಾಹಕರನ್ನು ಗುರಿಯಾಗಿಸಿಕೊಂಡಿದ್ದು 6000mAh ಬ್ಯಾಟರಿಯೊಂದಿಗೆ ಸುಮಾರು 20,000 ರೂಗಳೊಳಗೆ ಬಿಡುಗಡೆಯಾಗಲಿದೆ.
Surveyಭಾರತದಲ್ಲಿ Realme Narzo 80 Series ಸ್ಮಾರ್ಟ್‌ಫೋನ್‌ಗಳು

ಪ್ರಸ್ತುತ ಕಂಪನಿ ಈ Realme Narzo 80 Series ಸ್ಮಾರ್ಟ್‌ಫೋನ್‌ಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಪೋಸ್ಟ್ ಮಾಡಿದ್ದು ಈ ಫೋನ್ಗಳನ್ನು ಮುಖ್ಯವಾಗಿ ಗೇಮಿಂಗ್ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆಗೊಳಿಸಿದೆ. ಮೊದಲಿಗೆ ಈ Realme Narzo 80x ಅತ್ಯುತ್ತಮ ಬಿಲ್ಡ್ ಕ್ವಾಲಿಟಿಯೊಂದಿಗೆ ಯಾರೊಬ್ಬರಿ 6000mAh ಬ್ಯಾಟರಿಯೊಂದಿಗೆ ಬರುವುದಾಗಿ ಕಂಪನಿ ಮಾಹಿತಿ ನೀಡಿದೆ. ಇದರ ಕ್ರಮವಾಗಿ ಫೋನ್ MediaTek Dimensity 6400 5G ಪ್ರೊಸೆಸರ್ನೊಂದಿಗೆ ರನ್ ಮಾಡುತ್ತದೆ.
ಮತ್ತೊಂದೆಡೆಯಲ್ಲಿ Realme Narzo 80 Pro ಸ್ಮಾರ್ಟ್ಫೋನ್ ಡಿಸೆಂಟ್ 5500mAh ಬ್ಯಾಟರಿಯೊಂದಿಗೆ MediaTek Dimensity 7400 ಪ್ರೊಸೆಸರ್ನೊಂದಿಗೆ ಪ್ರೊಸೆಸರ್ನೊಂದಿಗೆ ರನ್ ಮಾಡುತ್ತದೆ. ಹೆಚ್ಚುವರಿಯಾಗಿ Realme Narzo 80 Pro ಸ್ಮಾರ್ಟ್ಫೋನ್ ಅತ್ಯುತ್ತಮ ಕ್ಯಾಮೆರಾ ಸೆನ್ಸರ್ ಜೊತೆಗೆ ಬರುತ್ತದೆ. ಅಲ್ಲದೆ ದೊಡ್ಡ ಸ್ಕ್ರೀನ್ ಮತ್ತು ಉತ್ತಮ ಸ್ಟೋರೇಜ್ ಮೂಲಕ ಬರಬಹುದು ಆದರೆ ಈ ಸ್ಮಾರ್ಟ್ಫೋನ್ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳನ್ನು ಕಂಪನಿ ನೀಡಿಲ್ಲ.
Realme Narzo 80 Series ನಿರೀಕ್ಷಿತ ಬೆಲೆ ಮತ್ತು ಲಭ್ಯತೆಗಳೇನು?
ಈ ಮುಂಬರಲಿರುವ Realme Narzo 80 Series ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆಯ ಬಿ ಆಗ್ಗೆ ಮಾತನಾಡುವುದಾದರೆ ಮೊದಲಿಗೆ Realme Narzo 80x ಸ್ಮಾರ್ಟ್ಫೋನ್ ಅನ್ನು ಎರಡು ರೂಪಾಂತರಗಳಲ್ಲಿ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಅನ್ನು 11,999 ರೂಗಳಿಗೆ ನಿರೀಕ್ಷಿಸಲಾಗಿದ್ದು ಮತ್ತೊಂದು ಇದರ 6GB RAM ಮತ್ತು 256GB ಸ್ಟೋರೇಜ್ ಅನ್ನು ಸುಮಾರು 12,999 ರೂಗಳಿಗೆ ನಿರೀಕ್ಷಿಸಲಾಗಿದೆ.
Gamer instincts on! 🎮
— realme narzo India (@realmenarzoIN) April 7, 2025
Drop your epic tag: [Last location] + [Last character you played]
Stand a chance to win exclusive realme goodies!
Are you #ReadyToWin?
Early Access Sale | April 9, 6PM–Midnight
Get the #realmeNARZO80Pro5G under ₹20K!
Know more:… pic.twitter.com/K25ym43VOU
ಇದರ ಕ್ರಮವಾಗಿ Realme Narzo 80 Pro ಸ್ಮಾರ್ಟ್ಫೋನ್ ಸಹ ಎರಡು ರೂಪಾಂತರಗಳಲ್ಲಿ ಆರಂಭಿಕ 8GB RAM ಮತ್ತು 256GB ಸ್ಟೋರೇಜ್ 18,999 ರೂಗಳಿಗೆ ನಿರೀಕ್ಷಿಸಲಾಗಿದ್ದು ಮತ್ತೊಂದು ಇದರ 12GB RAM ಮತ್ತು 256GB ಸ್ಟೋರೇಜ್ ಅನ್ನು ಸುಮಾರು 19,999 ರೂಗಳಿಗೆ ನಿರೀಕ್ಷಿಸಲಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile