Realme C55 vs Infinix Hot 30i: ಫೋನ್‌ಗಳ ಟಾಪ್ 5 ಫೀಚರ್‌ ಹೋಲಿಕೆ! ಯಾವುದು ಬೆಸ್ಟ್ ನೀವೇ ಹೇಳಿ!

Realme C55 vs Infinix Hot 30i: ಫೋನ್‌ಗಳ ಟಾಪ್ 5 ಫೀಚರ್‌ ಹೋಲಿಕೆ! ಯಾವುದು ಬೆಸ್ಟ್ ನೀವೇ ಹೇಳಿ!
HIGHLIGHTS

Infinix Hot 30i ಕಂಪನಿಯ ಹಾಟ್ ಸರಣಿಯ ಮೂಲಕ ಪರಿಚಯಿಸಲಾದ ಕಡಿಮೆ ಬೆಲೆಯ ಫೋನ್ ಇದಾಗಿದೆ.

Realme C55 vs Infinix Hot 30i ಫೋನ್‌ಗಳ ಟಾಪ್ 5 ಫೀಚರ್‌ ಹೋಲಿಕೆ!

Realme C55 vs Infinix Hot 30i ಇವುಗಳು ಸಾಕಷ್ಟು ಆಕರ್ಷಕ ಫೀಚರ್ಗಳನ್ನು ಒಳಗೊಂಡಿದೆ.

Realme C55 vs Infinix Hot 30i: ಭಾರತದಲ್ಲಿ ಸ್ಮಾರ್ಟ್ಫೋನ್ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಂತೆ ಇದೀಗ ಬಜೆಟ್ ಸ್ನೇಹಿ ಬೆಲೆಯಲ್ಲಿ ಅತ್ಯಾಕರ್ಷಕ ಸ್ಮಾರ್ಟ್ಫೋನ್ಗಳಾದ Realme C55 ಮತ್ತು Infinix Hot 30i ಸ್ಮಾರ್ಟ್ಫೋನ್ಗಳನ್ನು ಅನಾವರಣ ಮಾಡಲಾಗಿದೆ. Realme C55 ಕೈಗೆಟುಕುವ ದರದಲ್ಲಿ ಲಭ್ಯವಾಗುವ ಸಿ ಸರಣಿ ಫೋನ್ ಆಗಿದೆ. ಇನ್ನು Infinix Hot 30i ಕಂಪನಿಯ ಹಾಟ್ ಸರಣಿಯ ಮೂಲಕ ಪರಿಚಯಿಸಲಾದ ಅಗ್ಗದ ಫೋನ್ ಇದಾಗಿದೆ. ಈ ಸ್ಮಾರ್ಟ್ಫೋನ್ ಗಳ ಬಗ್ಗೆ ಹೇಳುವುದಾದರೆ ಇವುಗಳು ಸಾಕಷ್ಟು ಆಕರ್ಷಕ ಫೀಚರ್ಗಳನ್ನು ಒಳಗೊಂಡಿದೆ.

Realme C55 vs Infinix Hot 30i ಡಿಸ್ಪ್ಲೇ:

Realme C55 ಸ್ಮಾರ್ಟ್ಫೋನ್ 6.7 ಇಂಚಿನ ಫುಲ್ HD+ LCD ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಫೋನ್ 392 PPI ಡೆನ್ಸಿಟಿ ಅನ್ನು ಹೊಂದಿದೆ. ಇದು ಮೊದಲ C-ಸರಣಿ ಮಾದರಿ ಫೋನ್ ಆಗಿದ್ದು ಪಂಚ್ ಹೋಲ್ ನಾಚ್ ವಿನ್ಯಾಸವು ದೊಡ್ಡ ಡಿಸ್ಪ್ಲೇ ಹೊಂದಲು ಸಹಾಯಕವಾಗಿದೆ. Infinix Hot 30i ಸ್ಮಾರ್ಟ್ಫೋನ್ 6.6 ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಫೋನ್ 267 PPI ಡೆನ್ಸಿಟಿ ಅನ್ನು ಹೊಂದಿದ್ದು ಈ ಡಿಸ್ಪ್ಲೇ ವಾಟರ್ ಡ್ರಾಪ್ ನಾಚ್ ಶೈಲಿಯನ್ನು ಹೊಂದಿದೆ.

Realme C55 vs Infinix Hot 30i ಕ್ಯಾಮೆರಾ:

Realme C55 ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದೆ. ಇದರಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಆಯ್ಕೆನ್ನು ನೀಡಲಾಗಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ. Infinix Hot 30i ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದ್ದು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ.

Realme C55 vs Infinix Hot 30i ಪ್ರೊಸೆಸರ್:

Realme C55 ಸ್ಮಾರ್ಟ್ಫೋನ್ ಮೀಡಿಯಾಟೆಕ್ ಹಿಲಿಯೋ G88 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು 13 ಆಧಾರಿತ Realme UI 4.0 ನಲ್ಲಿ ರನ್ ಆಗಲಿದೆ. ಇನ್ನುಳಿದಂತೆ ಈ ಫೋನ್ ಮೂರು ವೇರಿಯಂಟ್ಗಳಲ್ಲಿ ಲಭ್ಯವಿದ್ದು 4GB/6GB/8GB RAM ಹಾಗೂ 64GB/128GB ಇಂಟರ್ನಲ್  ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ. Infinix Hot 30i ಸ್ಮಾರ್ಟ್ಫೋನ್ ಮೀಡಿಯಾಟೆಕ್ ಹಿಲಿಯೋ G37 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್ v12 ಬೆಂಬಲದೊಂದಿಗೆ ರನ್ ಆಗಲಿದೆ. ಹಾಗೆಯೇ 16GB RAM ಮತ್ತು 64 GB ಇಂಟರ್ನಲ್  ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸ್ಟೋರೇಜ್ ಸ್ಪೇಸ್ ಅನ್ನು ವಿಸ್ತರಿಸಬಹುದು.

Realme C55 vs Infinix Hot 30i ಬ್ಯಾಟರಿ:

Realme C55 ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಹಾಗೆಯೇ 33W ಫಾಸ್ಟ್ ಚಾರ್ಜಿಂಗ್ ಅನ್ನು ಇದು ಬೆಂಬಲಿಸುತ್ತದೆ. ಈ ಮೂಲಕ ಅತ್ಯಂತ ವೇಗವಾಗಿ ಮೊಬೈಲ್ ಚಾರ್ಜ್ ಆಗಲಿದೆ. Infinix Hot 30i ಸ್ಮಾರ್ಟ್ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಸಾಮರ್ಥ್ಯವನ್ನು ಈ ಫೋನ್ ಹೊಂದಿದೆ.

Realme C55 vs Infinix Hot 30i ಬೆಲೆ:

Realme C55 ಸನ್-ಶವರ್ ಮತ್ತು ರೈನಿ ನೈಟ್ ಕಲರ್‌ಗಳ ಆಯ್ಕೆಯಲ್ಲಿ ರೂ 10,999 ರ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ. Infinix Hot 30i ಮಾರಿಗೋಲ್ಡ್, ಡೈಮಂಡ್ ವೈಟ್, ಗ್ಲೇಸಿಯರ್ ಬ್ಲೂ ಮತ್ತು ಮಿರರ್ ಬ್ಲ್ಯಾಕ್ ಕಲರ್‌ಗಳ ಆಯ್ಕೆಯಲ್ಲಿ ರೂ 8,999 ರ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo