OPPO Find X9s: ಡ್ಯುಯಲ್ 200MP ಕ್ಯಾಮೆರಾ ಜೊತೆಗೆ ಎಂಟ್ರಿ ಕೊಡಲಿದೆ ಒಪ್ಪೋದ ಹೊಸ ಸ್ಮಾರ್ಟ್‌ಫೋನ್!
OPPO Find X9s ಸ್ಮಾರ್ಟ್‌ಫೋನ್ ಕಾಂಪ್ಯಾಕ್ಟ್ ಮಾದರಿಯಲ್ಲಿ ಎಂಟ್ರಿ ಕೊಡಲಿದೆ
OPPO Find X9s ಡ್ಯುಯಲ್ 200MP ಕ್ಯಾಮೆರಾ ಸೆಟ್‌ಅಪ್ ಹೊಂದಿರಲಿದೆ
OPPO Find X9s ಮೊಬೈಲ್ 7,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವ ನಿರೀಕ್ಷೆಗಳಿವೆ
ಒಪ್ಪೋ ಸಂಸ್ಥೆಯು ಇತ್ತೀಚಿನ OPPO Find X9 ಲೈನ್‌ಅಪ್‌ನಲ್ಲಿ ಫೈಂಡ್ X9 ಮತ್ತು ಫೈಂಡ್ X9 ಪ್ರೊ ಮಾಡೆಲ್‌ಗಳನ್ನು ಪರಿಚಯಿಸಿದೆ. ಈ ಫ್ಲ್ಯಾಗ್‌ಶಿಪ್ ಫೋನ್‌ಗಳು ಮಾರುಕಟ್ಟೆಯಲ್ಲಿ ಈಗಾಗಲೇ ಭಾರೀ ಸದ್ದು ಮಾಡಿದೆ. ಸಂಸ್ಥೆಯು ಇದೀಗ ಹೊಸದಾಗಿ OPPO Find X9s ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಸಜ್ಜಾಗುತ್ತಿದ್ದು ಇದು Find X ಲೈನ್‌ಅಪ್‌ನಲ್ಲಿ ಮೂರನೇ ಫೋನ್ ಆಗಲಿದೆ. ಬರಲಿರುವ OPPO Find X9s ಸ್ಮಾರ್ಟ್‌ಫೋನ್ ಸಣ್ಣ ಡಿಸ್‌ಪ್ಲೇ ರಚನೆ ಪಡೆದಿರಲಿದ್ದು ಇದು ಕಾಂಪ್ಯಾಕ್ಟ್ ಮಾದರಿಯಲ್ಲಿ ಇರಲಿದೆ ಎನ್ನಲಾಗಿದೆ. ಮುಖ್ಯವಾಗಿ ಈ ಮೊಬೈಲ್ ಕ್ಯಾಮೆರಾ ಅಪ್‌ಡೇಟ್ ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಪಕ್ಕಾ ಎನ್ನಲಾಗಿದೆ. OPPO Find X9s ಕುರಿತ ಇನ್ನಷ್ಟು ವಿವರಗಳನ್ನು ಮುಂದೆ ತಿಳಿಯೋಣ.
SurveyAlso Read : WhatsApp ನಿಂದ ಹೊಸ ಫೀಚರ್ಸ್ ಘೋಷಣೆ; ಇದು ಸೈಬರ್ ದಾಳಿಗಳಿಂದ ಹೆಚ್ಚಿನ ಸುರಕ್ಷತೆ ನೀಡಲಿದೆ
OPPO Find X9s ಫೋನಿನಲ್ಲಿ 200MP ಕ್ಯಾಮೆರಾ ಸೆಟ್‌ಅಪ್
ಕೆಲವು ಟಿಪ್‌ಸ್ಟಾರ್ ಮಾಹಿತಿಗಳ ಪ್ರಕಾರ OPPO ಕಂಪನಿಯ ಮುಂಬರುವ ಫೋನ್ Find X9s ಎಂದು ಹೇಳಲಾಗಿದೆ. ಹಾಗೆಯೇ ಈ ಮೊಬೈಲ್ ಕಾಂಪ್ಯಾಕ್ಟ್ ಮಾದರಿಯಲ್ಲಿ ಇರಲಿದೆ ಎನ್ನಲಾಗಿದೆ. ಇನ್ನು ಫೋನಿನ ಪ್ರಮುಖ ಹೈಲೈಟ್ ಎಂದರೆ ಅದರ ಕ್ಯಾಮೆರಾ ಆಗಿರಲಿದೆ. ಮುಂಬರುವ ಫೋನಿನ ಡ್ಯುಯಲ್ 200MP ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರುತ್ತದೆ. ಇದರಲ್ಲಿ ಒಂದು ಕ್ಯಾಮೆರಾ ಪ್ರಾಥಮಿಕ ಸೆನ್ಸಾರ್ ಮತ್ತು ಇನ್ನೊಂದು ಕ್ಯಾಮೆರಾ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಹೊಂದಿರಲಿದೆ ಎಂದು ಲೀಕ್ ವರದಿಗಳಿಂದ ತಿಳಿದು ಬಂದಿದೆ. ಹಾಗೆಯೇ ಒಪ್ಪೋ Find X9s ಮೊಬೈಲ್ ಮೂರನೇ ಕ್ಯಾಮೆರಾ ಸೆನ್ಸಾರ್ 50MP ಅಲ್ಟ್ರಾ-ವೈಡ್ ಆಗಿರಲಿದೆ.

OPPO Find X9s ಫೋನಿನ ನಿರೀಕ್ಷಿತ ಫೀಚರ್ಸ್ ಮಾಹಿತಿ
OPPO Find X9s ಮೊಬೈಲ್ 6.3 ಇಂಚಿನ LIPO ಡಿಸ್‌ಪ್ಲೇ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತದೆ. ಇನ್ನು ಅದರ ಡಿಸ್‌ಪ್ಲೇಯು ಕಡಿಮೆ ಬೆಜೆಲ್ ರಚನೆ ಪಡೆದಿರಲಿದ್ದು, ಇದು ಪೂರ್ಣ ಸ್ಕ್ರೀನ್ ವೀಕ್ಷಣೆಗೆ ಅನುಕೂಲ ನೀಡಲಿದೆ. ಹಾಗೆಯೇ ಬರಲಿರುವ ದೈತ್ಯ ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 7,000mAh ಅಥವಾ ಅದಕ್ಕಿಂತ ಹೆಚ್ಚಿನ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಪಡೆದಿರುವ ಸಾಧ್ಯತೆಗಳು ಇವೆ. ಅಲ್ಲದೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಪಡೆಯುವ ನಿರೀಕ್ಷೆಗಳು ಇವೆ.
ಅದೇ ರೀತಿ OPPO Find X9s ಫೋನ್ MediaTek Dimensity 9500+ SoC ಚಿಪ್‌ಸೆಟ್ ಪ್ರೊಸೆಸರ್ ಅನ್ನು ಒಳಗೊಂಡಿರಬಹುದು. ಈ ಹಿಂದಿನ ಒಪ್ಪೋ ಫೈಂಡ್ X8s ಫೋನಿನಲ್ಲಿ ಬಳಸಲಾದ 3nm Dimensity 9400+ ಚಿಪ್‌ಸೆಟ್‌ಗಿಂತ ಅಪ್‌ಗ್ರೇಡ್ ಮಾದರಿ ಹೊಂದಿರಲಿದೆ ಎನ್ನಲಾಗಿದೆ. ಅಲ್ಲದೇ ಈ ಫೋನ್ IP69 ಅಥವಾ IP69K ರೇಟಿಂಗ್ ಆಯ್ಕೆಯೊಂದಿಗೆ ಬರಲಿದ್ದು ಪೂರ್ಣ ನೀರಿನ ಪ್ರತಿರೋಧವನ್ನು ಸಹ ಪಡೆಯುವ ಸೌಲಭ್ಯ ಇರಲಿದೆ. ಒಟ್ಟಾರೇಯಾಗಿ ಮುಂಬರುವ ನೂತನ OPPO Find X9s ಮೊಬೈಲ್ ಆಕರ್ಷಕ ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಫೋನ್ ಇರಲಿದೆ. ಕ್ಯಾಮೆರಾ ಆಯ್ಕೆ, ಪ್ರೊಸೆಸರ್ ಹಾಗೂ ಬ್ಯಾಟರಿ ಬ್ಯಾಕ್‌ಅಪ್ ನಂತಹ ಫೀಚರ್ಸ್‌ಗಳಲ್ಲಿ ಹೆಚ್ಚಿನ ಅಪ್‌ಗ್ರೇಡ್ ಹೊಂದಿರುವ ನಿರೀಕ್ಷೆಗಳು ಇವೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile