Digit.in
  • ಸುದ್ದಿಗಳು
  • ಫೀಚರ್‌ಗಳು
  • ಹೇಗೆ?
  • ವೆಬ್ ಸ್ಟೋರಿ
  • English
  • Hindi
  • Tamil
  • Kannada
  • Telugu
  • Malayalam
  • Bangla
  • Marathi
Login / Register is disabled Login
Home » News » Apps » WhatsApp ನಿಂದ ಹೊಸ ಫೀಚರ್ಸ್‌ ಘೋಷಣೆ; ಇದು ಸೈಬರ್ ದಾಳಿಗಳಿಂದ ಹೆಚ್ಚಿನ ಸುರಕ್ಷತೆ ನೀಡಲಿದೆ

WhatsApp ನಿಂದ ಹೊಸ ಫೀಚರ್ಸ್‌ ಘೋಷಣೆ; ಇದು ಸೈಬರ್ ದಾಳಿಗಳಿಂದ ಹೆಚ್ಚಿನ ಸುರಕ್ಷತೆ ನೀಡಲಿದೆ

By Manthesh B | Updated on 28-Jan-2026
Add DIGIT as a preferred source
Follow Us on Google News Follow Us
HIGHLIGHTS

WhatsApp ಸಂಸ್ಥೆಯು Strict Account Settings ಆಯ್ಕೆ ಘೋಷಿಸಿದೆ

ವಾಟ್ಸಾಪ್‌ನ ಈ ಹೊಸ ಆಯ್ಕೆ ಬಳಕೆದಾರರಿಗೆ ಸೈಬರ್ ದಾಳಿಗಳಿಂದ ಸುರಕ್ಷತೆ ನೀಡಲಿದೆ

WhatsApp ನಿಂದ ಹೊಸ ಫೀಚರ್ಸ್‌ ಘೋಷಣೆ; ಇದು ಸೈಬರ್ ದಾಳಿಗಳಿಂದ ಹೆಚ್ಚಿನ ಸುರಕ್ಷತೆ ನೀಡಲಿದೆ
Manthesh B Manthesh B
28-Jan-2026

ಜನಪ್ರಿಯ ಮೆಸೆಜಿಂಗ್ ಆಪ್‌ WhatsApp ತನ್ನ ಬಳಕೆದಾರರ ಮಾಹಿತಿಗಳಿಗೆ ಹೆಚ್ಚಿನ ಸುರಕ್ಷತೆಗಳನ್ನು ನೀಡುತ್ತಾ ಬಂದಿದೆ. ಅದರ ಮುಂದುವರಿದ ಭಾಗವಾಗಿ ವಾಟ್ಸಾಪ್‌ ಆನ್‌ಲೈನ್ ಬೆದರಿಕೆಗಳ ವಿರುದ್ಧ ಬಳಕೆದಾರರಿಗೆ ಸುರಕ್ಷತೆ ಒದಗಿಸಲು ವಿನ್ಯಾಸಗೊಳಿಸಲಾದ ಹೊಸ ಭದ್ರತಾ ಫೀಚರ್ಸ್‌ಗಳನ್ನು ವಾಟ್ಸಾಪ್ ಘೋಷಿಸಿದೆ. ಈ ನೂತನ ಸುರಕ್ಷತಾ ಆಯ್ಕೆಯನ್ನು Strict Account Settings ಎಂದು ಕರೆಯಲಾಗುತ್ತದೆ. ಇದು ಉದ್ದೇಶಿತ ಬಳಕೆದಾರರ ಖಾತೆಯನ್ನು ನಿರ್ಬಂಧಿತ ಸೆಟ್ಟಿಂಗ್‌ಗೆ ಲಾಕ್ ಮಾಡುತ್ತದೆ. ಅವರ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಇಲ್ಲದ ವ್ಯಕ್ತಿಗಳಿಂದ ಸ್ವೀಕರಿಸಿದ ಅಟ್ಯಾಚ್‌ಮೆಂಟುಗಳನ್ನು ಮತ್ತು ಇತರ ಮಾಧ್ಯಮಗಳನ್ನು ನಿರ್ಬಂಧಿಸುವ ಆಯ್ಕೆ ಇದಾಗಿದೆ ಎನ್ನಲಾಗಿದೆ.

Digit.in Survey
✅ Thank you for completing the survey!

Also Read : Vivo V50 5G ಬೆಲೆಯಲ್ಲಿ 7,500ರೂಗಳ ಇಳಿಕೆ! ಈ ಫೋನಿನಲ್ಲಿ Snapdragon ಪ್ರೊಸೆಸರ್, 50MP ಕ್ಯಾಮೆರಾ ಇದೆ

WhatsApp ಆಪ್‌ನಲ್ಲಿ ಹೊಸ ಸುರಕ್ಷತ ಫೀಚರ್‌ ಆಯ್ಕೆ

ಮೆಟಾ ಮಾಲೀಕತ್ವದ ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ WhatsApp ಇದೀಗ Strict Account Settings ಎಂಬ ಹೊಸ ಆಯ್ಕೆಯನ್ನು ಪ್ರಾಯೋಗಿಕವಾಗಿ ಪರಿಚಯಿಸಿದೆ. ವಾಟ್ಸಾಪ್ ತನ್ನ ಅಧಿಕೃತ ಬ್ಲಾಗ್ ಪೋಸ್ಟ್‌ನಲ್ಲಿ ನೀಡಿರುವ ಮಾಹಿತಿಯಂತೆ, ಈ ಕಟ್ಟುನಿಟ್ಟಾದ ಖಾತೆ ಸೆಟ್ಟಿಂಗ್‌ಗಳನ್ನು ವಿಶೇಷವಾಗಿ ಸೈಬರ್ ದಾಳಿಗಳ ಅಪಾಯ ಹೆಚ್ಚಿರುವ ಪತ್ರಕರ್ತರು ಹಾಗೂ ಸಾರ್ವಜನಿಕ ಸಂಪರ್ಕದಲ್ಲಿರುವ ವ್ಯಕ್ತಿಗಳ ಸುರಕ್ಷತೆಗಾಗಿ ರೂಪಿಸಲಾಗಿದೆ. ಬಳಕೆದಾರರು ಈ ಆಯ್ಕೆಯನ್ನು ಆಕ್ಟಿವ್ ಮಾಡಿದರೆ, WhatsApp ಖಾತೆಯಲ್ಲಿ ಒಂದು ರೀತಿಯ ಲಾಕ್‌ಡೌನ್ ಮೋಡ್ ಆನ್ ಆಗುತ್ತದೆ. ಇದರಿಂದ ಅಪ್ಲಿಕೇಶನ್‌ನ ಕೆಲವು ಕಾರ್ಯಗಳು ಸೀಮಿತವಾಗಿದ್ದು, ಬಳಕೆದಾರರ ಖಾತೆಗೆ ಹೆಚ್ಚುವರಿ ಭದ್ರತೆ ಒದಗಿಸುತ್ತದೆ.

ವಾಟ್ಸಾಪ್‌ನ ಹೊಸ Strict Account Settings ಆಯ್ಕೆಯು ಬಿಡುಗಡೆ ಹಂತದಲ್ಲಿದೆ. ಹೀಗಾಗಿ ಸದ್ಯ ಎಲ್ಲ ಬಳಕೆದಾರರಿಗೆ ಈ ಆಯ್ಕೆ ತಕ್ಷಣ ಲಭ್ಯ ಇರುವುದಿಲ್ಲ. ಈ ಆಯ್ಕೆಯು ಎಲ್ಲರಿಗೂ ಲಭ್ಯವಾದ ಬಳಿಕ ಫೀಚರ್ಸ್‌ ಅನ್ನು ಸೆಟ್ ಮಾಡಬಹುದು. ಅದಕ್ಕಾಗಿ ಬಳಕೆದಾರರು WhatsApp ಆಪ್‌ನಲ್ಲಿ Settings > Privacy > Advanced inside ಆಯ್ಕೆಗೆ ಹೋಗುವ ಮೂಲಕ ಅದನ್ನು ಸಕ್ರಿಯ ಮಾಡಬಹುದು. ಅಂದಾಹಗೆ Strict Account Settings ಸಂಭಾಷಣೆಗಳನ್ನು ಖಾಸಗಿಯಾಗಿ ಮತ್ತು ಸುರಕ್ಷಿತವಾಗಿಡಲು WhatsApp ನ ನಿರಂತರ ಪ್ರಯತ್ನವನ್ನು ತೋರಿಸುತ್ತದೆ.

ಸೈಬರ್ ದಾಳಿಗಳು ಹಾಗೂ ಸ್ಪೈವೇರ್‌ಗಳಿಂದ ಹೆಚ್ಚಿದ ಅಪಾಯ ಎದುರಿಸುತ್ತಿರುವ ವ್ಯಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ವಾಟ್ಸಾಪ್‌ ತನ್ನ ಇತ್ತೀಚಿನ ಅಪ್‌ಡೇಟ್‌ ಭಾಗವಾಗಿ Strict Account Settings ಆಯ್ಕೆಯನ್ನು ಲಭ್ಯ ಮಾಡಲಿದೆ. ಈ ಹೊಸ ಭದ್ರತಾ ಆಯ್ಕೆಗಳ ಮೂಲಕ ಬಳಕೆದಾರರ ಸುರಕ್ಷತೆಯನ್ನು ಇನ್ನಷ್ಟು ಬಲಪಡಿಸಲು ಮೆಟಾ ಮಾಲೀಕತ್ವದ ವಾಟ್ಸಾಪ್‌ ಮುಂದಾಗಿದೆ.

ಇದರೊಂದಿಗೆ ಸಂಭಾವ್ಯ ಭದ್ರತಾ ಉಲ್ಲಂಘನೆಗಳಿಂದ ಫೋಟೋಗಳು, ವೀಡಿಯೊಗಳು ಮತ್ತು ಟೆಕ್ಸ್ಟ್ ಮೆಸೆಜ್‌ಗಳನ್ನು ರಕ್ಷಿಸಲು Rust ಎಂಬ ಪ್ರೋಗ್ರಾಮಿಂಗ್ ಭಾಷೆಯನ್ನೂ ಸಹ ಸಂಸ್ಥೆಯು ಹೊರತಂದಿದೆ. ಹೀಗಾಗಿ ಬಳಕೆದಾರರ ವಿಶ್ವಾಸದಿಂದ ಫೋಟೋ, ವಿಡಿಯೋ ಶೇರ್ ಮಾಡಬಹುದು ಹಾಗೂ ಚಾಟ್ ಮಾಡಬಹುದು. ಇನ್ನು ಸಂಸ್ಥೆಯ ಮಾಹಿತಿ ಪ್ರಕಾರ, ರಸ್ಟ್ ಎನ್ನುವುದು ಮೆಮೊರಿ-ಸುರಕ್ಷಿತ ಭಾಷೆಯಾಗಿದೆ. ಇದನ್ನು ವಾಟ್ಸಾಪ್‌ನ ಕ್ರಾಸ್-ಪ್ಲಾಟ್‌ಫಾರ್ಮ್ C++ ಲೈಬ್ರರಿಯಾದ wamedia ಜೊತೆಗೆ ಸಮಾನಾಂತರವಾಗಿ ಅಭಿವೃದ್ಧಿಪಡಿಸಲಾಗಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Latest Article
ಭಾರತದಲ್ಲಿ Redmi Note 17 Pro ಸರಣಿ ಬಿಡುಗಡೆಗೆ ದಿನಾಂಕ ನಿಗದಿ; ಅಚ್ಚರಿಯ ಫೀಚರ್ಸ್‌ ನಿರೀಕ್ಷೆ ಭಾರತದಲ್ಲಿ Redmi Note 17 Pro ಸರಣಿ ಬಿಡುಗಡೆಗೆ ದಿನಾಂಕ ನಿಗದಿ; ಅಚ್ಚರಿಯ ಫೀಚರ್ಸ್‌ ನಿರೀಕ್ಷೆ
Redmi 17 5G ಮೊಬೈಲ್‌ ನಾಳೆಯಿಂದ ಖರೀದಿಗೆ ಲಭ್ಯ; ಫೀಚರ್ಸ್‌ ಹಾಗೂ ಬೆಲೆ ಗಮನಿಸಿ Redmi 17 5G ಮೊಬೈಲ್‌ ನಾಳೆಯಿಂದ ಖರೀದಿಗೆ ಲಭ್ಯ; ಫೀಚರ್ಸ್‌ ಹಾಗೂ ಬೆಲೆ ಗಮನಿಸಿ
ಇಂದಿನಿಂದ Vivo T5 ಮೊಬೈಲ್‌ ಮಾರಾಟ ಪ್ರಾರಂಭ; 7,050mAh ಬ್ಯಾಟರಿ ಸೌಲಭ್ಯ ಇಂದಿನಿಂದ Vivo T5 ಮೊಬೈಲ್‌ ಮಾರಾಟ ಪ್ರಾರಂಭ; 7,050mAh ಬ್ಯಾಟರಿ ಸೌಲಭ್ಯ
iPhone 17 Pro Max ಖರೀದಿಸುವ ಗ್ರಾಹಕರಿಗೆ ಭಾರೀ ಗುಡ್‌ನ್ಯೂಸ್‌; ಐಫೋನ್‌ ಖರೀದಿಸಲು ಇದುವೇ ಸೂಕ್ತ ಸಮಯ! iPhone 17 Pro Max ಖರೀದಿಸುವ ಗ್ರಾಹಕರಿಗೆ ಭಾರೀ ಗುಡ್‌ನ್ಯೂಸ್‌; ಐಫೋನ್‌ ಖರೀದಿಸಲು ಇದುವೇ ಸೂಕ್ತ ಸಮಯ!
Apple Launch Event 2026: ಭಾರತದಲ್ಲಿ iPhone 18 Pro ಸರಣಿಯ ಬೆಲೆ ಎಷ್ಟಿರಬಹುದು? ಇಲ್ಲಿದೆ ನಿರೀಕ್ಷಿತ ಮಾಹಿತಿ Apple Launch Event 2026: ಭಾರತದಲ್ಲಿ iPhone 18 Pro ಸರಣಿಯ ಬೆಲೆ ಎಷ್ಟಿರಬಹುದು? ಇಲ್ಲಿದೆ ನಿರೀಕ್ಷಿತ ಮಾಹಿತಿ
Most Searched Mobile Phones
  • Best Phones Under 10000
  • Best Phones Under 20000
  • Best Phones Under 30000
  • Upcoming Phones in 2026
  • Latest Mobile Phones
Latest Phones
  • Google Pixel 11
  • Google Pixel 11 Pro
  • Google Pixel 11 Pro XL
  • Samsung Galaxy Z Flip 8
  • Samsung Galaxy Z Fold 8
Mobile Recharge Plans
  • Airtel Recharge Plans
  • BSNL Recharge Plans
  • Reliance JIO Recharge Plans
  • VI Recharge Plans
Kannada Tech News
  • Telecom: ಈ ರಿಚಾರ್ಜ್ ಮಾಡ್ಕೊಳ್ಳಿ JioHotstar, Netflix ಮತ್ತು ZEE5 ಎಲ್ಲ ಉಚಿತ!
  • How To: ನಿಮ್ಮ ಹೆಸರಿನಲ್ಲಿ ಎಷ್ಟು SIM Card ಬಳಕೆಯಲ್ಲಿವೆ ನಿಮಗೊತ್ತಾ?
  • icon
  • icon
  • icon
  • icon
SUBSCRIBE Subscribe for the industry's biggest tech news
Enter your email to get notified about our new solutions
By submitting your email, you agree to our
Terms and Privacy Notice.
CONNECT WITH US
  • icon Times Center, FC-6, 1st Floor, Sector 16A, Film City, Noida - 201301
  • icon (+91-120-6776999)
    (1800 121 0005)
  • icon Suggestion: editor@digit.in
    Business: business@digit.in
    Website: sales@digit.in
© 2026 Digit.in, All rights reserved
  • icon
  • icon
  • icon
  • icon
icon
  • About Us
  • Contact Us
  • Advertise with us
  • Regulatory
  • Terms & Conditions
  • Privacy Policy
  • Disclaimer
© 2026 Digit.in, All rights reserved
Digit.in
Logo
Digit.in
Logo