OPPO Find X8 Pro 5G ಮೇಲೆ ಬರೋಬ್ಬರಿ 10,000 ರೂಗಳ ಭಾರಿ ಡಿಸ್ಕೌಂಟ್! ಬೆಸ್ಟ್ ಆಫರ್ ಮತ್ತು ಫೀಚರ್ಗಳೇನು?

HIGHLIGHTS

ಲೇಟೆಸ್ಟ್ OPPO Find X8 Pro 5G ಸ್ಮಾರ್ಟ್‌ಫೋನ್ ಮೇಲೆ ಭಾರಿ ಬೆಲೆ ಕಡಿತ.

OPPO Find X8 Pro 5G ಸ್ಮಾರ್ಟ್‌ಫೋನ್ ಸದ್ದಿಲ್ಲದೇ 10,000 ರೂಗಳ ಬೆಲೆಯನ್ನು ಇಳಿಸಿದೆ.

OPPO Find X8 Pro 5G ಫೋನ್ ಖರೀದಿಸಲು ಯಾವುದೇ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಬಹುದು.

OPPO Find X8 Pro 5G ಮೇಲೆ ಬರೋಬ್ಬರಿ 10,000 ರೂಗಳ ಭಾರಿ ಡಿಸ್ಕೌಂಟ್! ಬೆಸ್ಟ್ ಆಫರ್ ಮತ್ತು ಫೀಚರ್ಗಳೇನು?

OPPO Find X8 Pro 5G Price Cut: ಭಾರತದಲ್ಲಿ ಒಪ್ಪೋ ಸ್ಮಾರ್ಟ್ಫೋನ್ ಕಂಪನಿ ತನ್ನ ಲೇಟೆಸ್ಟ್ ಮತ್ತು ಜಬರ್ದಸ್ತ್ OPPO Find X8 Pro 5G ಸ್ಮಾರ್ಟ್‌ಫೋನ್ ಅನ್ನು ಕೆಲವೇ ದಿನಗಳ ಹಿಂದೆ ಲೇಟೆಸ್ಟ್ ಫೀಚರ್ಗಳೊಂದಿಗೆ ಭಾರತೀಯ ಮಾರುಕಟ್ಟೆಗೇ ಬಿಡುಗಡೆಗೊಳಿಸಿದೆ. ಪ್ರಸ್ತುತ ಈ ಸ್ಮಾರ್ಟ್ಫೋನ್ ಭಾರಿ ಸದ್ದು ಮಾಡುತ್ತಿರುವ ಕಾರಣವೆಂದರೆ ಇದರ ಮೇಲೆ ಕಂಪನಿ ಸದ್ದಿಲ್ಲದೇ 10,000 ರೂಗಳ ಬೆಲೆಯನ್ನು ಇಳಿಸಿದೆ. ಈ ಫೋನ್ ಫ್ಲಿಪ್ಕಾರ್ಟ್ ಮಾರಾಟದಡಿಯಲ್ಲಿ ಸುಮಾರು ₹99,999 ರೂಗಳಿಗೆ ಪಟ್ಟಿ ಮಾಡಲಾಗಿದೆ.

Digit.in Survey
✅ Thank you for completing the survey!

ಈ ಲೇಟೆಸ್ಟ್ OPPO Find X8 Pro 5G ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಇದರ ಆಫರ್ ಬೆಲೆ ಮತ್ತು ಹೈಲೈಟ್ ಫೀಚರ್ಗಳನೊಮ್ಮೆ ಪರಿಶೀಲಿಸುವುದು ಉತ್ತಮವಾಗಿದೆ. OPPO Find X8 Pro 5G ಸ್ಮಾರ್ಟ್ ಫೋನ್ ಅನ್ನು ನೀವು ಯಾವುದೇ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಖರೀದಿಸುವ ಬಳಕೆದಾರರು ಬರೋಬ್ಬರಿ 10,000 ರೂಗಳವರೆಗಿನ ಡಿಸ್ಕೌಂಟ್‌ಗಳನ್ನು ಪಡೆಯುವುದರೊಂದಿಗೆ ಸುಮಾರು ₹89,999 ರೂಗಳಿಗೆ ಖರೀದಿಸಬಹುದು.

ಭಾರತದಲ್ಲಿ OPPO Find X8 Pro 5G ಆಫರ್ ಬೆಲೆ ಎಷ್ಟು?

OPPO Find X8 Pro 5G ಸ್ಮಾರ್ಟ್ಫೋನ್‌ ಒಂದೇ ಒಂದು ರೂಪಾಂತದರಲ್ಲಿ ಫ್ಲಿಪ್ಕಾರ್ಟ್ ಮೂಲಕ ಲಭ್ಯವಿದ್ದು ಇದರ ಆರಂಭಿಕ 16GB RAM ಮತ್ತು 512GB ಸ್ಟೋರೇಜ್ ರೂಪಾಂತರವನ್ನು ₹99,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು OPPO Find X8 Pro 5G ಸ್ಮಾರ್ಟ್ ಫೋನ್ ಅನ್ನು ನೀವು ಯಾವುದೇ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಖರೀದಿಸುವ ಬಳಕೆದಾರರು ಬರೋಬ್ಬರಿ 10,000 ರೂಗಳವರೆಗಿನ ಡಿಸ್ಕೌಂಟ್‌ಗಳನ್ನು ಪಡೆಯುವುದರೊಂದಿಗೆ ಸುಮಾರು ₹89,999 ರೂಗಳಿಗೆ ಖರೀದಿಸಬಹುದು.

OPPO Find X8 Pro 5G Price Cut In India 2025

ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ OPPO Find X8 Pro 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 43,150 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

ಭಾರತದಲ್ಲಿ OPPO Find X8 Pro 5G ಫೀಚರ್ ಮತ್ತು ವಿಶೇಷಣಗಳೇನು?

Oppo Find X8 Pro 5G ಸ್ಮಾರ್ಟ್‌ಫೋನ್ 6.78 ಇಂಚಿನ LTPO AMOLED ಸ್ಕ್ರೀನ್ ಜೊತೆಗೆ 1,264×2,780 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಸ್ಮಾರ್ಟ್ಫೋನ್ ಡ್ಯುಯಲ್-ಸಿಮ್ ಬೆಂಬಲದೊಂದಿಗೆ ಕಸ್ಟಮ್ ColorOS 15 ಸ್ಕಿನ್‌ನೊಂದಿಗೆ Android 15 ನಲ್ಲಿ ಕಾರ್ಯನಿರ್ವಹಿಸುತ್ತವೆ. ಅತ್ಯಾಧುನಿಕ 3nm ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾದ MediaTek ನ Dimensity 9400 ಪ್ರೊಸೆಸರ್‌ನಿಂದ ನಡೆಸಲ್ಪಡುವ ಈ ಸರಣಿಯು 16GB LPDDR5X RAM ಮತ್ತು 512GB UFS 4.0 ವರೆಗಿನ ಸ್ಟೋರೇಜ್ ಬೆಂಬಲಿಸುತ್ತದೆ.

Also Read: 43 Inch 4K QLED Dolby Atmos Smart TV: ಅಮೆಜಾನ್‌ನಲ್ಲಿ 43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ ಕೈಗೆಟಕುವ ಬೆಲೆಗೆ ಮಾರಾಟ!

ಕ್ವಾಡ್-ಕ್ಯಾಮೆರಾ ಸೆಟಪ್ನೊಂದಿಗೆ 50MP ಪ್ರೈಮರಿ ಕ್ಯಾಮೆರಾ LYT-808, f/1.6 ಹೊಂದಿದ್ದು ಮತ್ತೊಂದು 50MP ಅಲ್ಟ್ರಾವೈಡ್ ಸೆನ್ಸರ್, 3x ಆಪ್ಟಿಕಲ್ ಜೂಮ್‌ನೊಂದಿಗೆ 50MP ಟೆಲಿಫೋಟೋ ಲೆನ್ಸ್ ಮತ್ತು 6x ಆಪ್ಟಿಕಲ್ ಜೂಮ್ ನೀಡುವ 50MP ಸೋನಿ IMX858 ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಇದು 5G, 4G LTE, Wi-Fi 7, ಬ್ಲೂಟೂತ್ 5.4, NFC ಮತ್ತು GPS ಗಳನ್ನು ಬೆಂಬಲಿಸುತ್ತದೆ. ಅವುಗಳು ಉಪಕರಣಗಳನ್ನು ನಿಯಂತ್ರಿಸಲು IR ಟ್ರಾನ್ಸ್‌ಮಿಟರ್ ಮತ್ತು USB-C ಪೋರ್ಟ್ ಅನ್ನು ಸಹ ಒಳಗೊಂಡಿರುತ್ತವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo