ಇಂದು Oppo F11 Pro ಮಾರ್ವೆಲ್ ಅವೆಂಜರ್ಸ್ ಲಿಮಿಟೆಡ್ ಎಡಿಷನ್ ಅಮೆಜಾನ್ ಮೂಲಕ ಸೇಲ್ ಆಗಲಿದೆ.

ಇಂದು Oppo F11 Pro ಮಾರ್ವೆಲ್ ಅವೆಂಜರ್ಸ್ ಲಿಮಿಟೆಡ್ ಎಡಿಷನ್ ಅಮೆಜಾನ್ ಮೂಲಕ ಸೇಲ್ ಆಗಲಿದೆ.
HIGHLIGHTS

Oppo F11 Pro ಹಿಂಭಾಗದಲ್ಲಿ 48MP + 5MP ಇಮೇಜಿಂಗ್ ಕ್ಯಾಮೆರಾ ಸೆಟಪನ್ನು ಒಳಗೊಂಡಿದೆ.

Oppo ಇತ್ತೀಚೆಗೆ ಮಾರ್ವೆಲ್ ಸ್ಟುಡಿಯೋಸ್ ಸಹಯೋಗದೊಂದಿಗೆ F11 ಸರಣಿಯ ವಿಶೇಷ ಆವೃತ್ತಿಯನ್ನು ಅನಾವರಣಗೊಳಿಸಿತು. ಅಲ್ಲದೆ ಇದನ್ನು ಕಳೆದ ವಾರದಿಂದ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇಯಾದ ಮಾರ್ಗವನ್ನು ಮಾಡಲಿದೆ ಎಂದು ಘೋಷಿಸಲಾಯಿತು. ಈ Oppo F11 Pro ಮಾರ್ವೆಲ್ ಅವೆಂಜರ್ಸ್ ಲಿಮಿಟೆಡ್ ಆವೃತ್ತಿ ಎಂದು ಕರೆಯಲ್ಪಡುವ ಸ್ಮಾರ್ಟ್ಫೋನ್ ಇಂದು ಇ-ಕಾಮೋರ್ಸ್ ವೆಬ್ಸೈಟ್ ಅಮೆಜಾನ್ ಮೂಲಕ ಸೇಲ್ ಆಗಲಿದೆ. ಅಲ್ಲದೆ ಈ ಅದ್ದೂರಿ ಸ್ಮಾರ್ಟ್ಫೋನಿನ ಬೆಲೆ ಕೇವಲ 27,990 ರೂಗಳಾಗಿವೆ. ಇದರ ಮೊದಲ ಆವೃತ್ತಿ 24,990 ರೂಗಳಲ್ಲಿ ಲಭ್ಯವಿದೆ. 

OPPO F11 Pro Avengers Limited Edition ಇಲ್ಲಿಂದ ಖರೀದಿಸಿ. 

OPPO F11 Pro ನ ಮಾರ್ವೆಲ್ ಅವೆಂಜರ್ಸ್ ಲಿಮಿಟೆಡ್ ಎಡಿಷನ್ ಇಂದು ಅಂದ್ರೆ 1ನೇ ಮೇ 2019 ರಿಂದ ಪ್ರಾರಂಭವಾಗಲಿದೆ. ಇದೀಗ ನಿಮ್ಮ ಕೈಗಳಳ್ಳಿ ನೀವೊಂದನ್ನು ಪಡೆಯಲು ಬಯಸಿದರೆ ಈ ಸ್ಮಾರ್ಟ್ಫೋನ್ ಪ್ರೀ ಆರ್ಡರ್ಗಳ ಮೂಲಕ ಬುಕ್ ಮಾಡಿ ಪಡೆಯಬವುದು. ನಾವು ಹಿಂದೆ ಊಹಿಸಿದಂತೆ ಮತ್ತು ಮೇಲೆ ಹೇಳಿರುವಂತೆ ಈ ಲಿಮಿಟೆಡ್ ಎಡಿಷನ್ ಸ್ಮಾರ್ಟ್ಫೋನ್ 27,990 ರೂಗಳ ಬೆಲೆಯಲ್ಲಿ ಲಭ್ಯವಾಗುತ್ತದೆ. Oppo F11 Pro ಮಾರ್ವೆಲ್ ಅವೆಂಜರ್ಸ್ ಲಿಮಿಟೆಡ್ ಎಡಿಷನ್ ಕಾಸ್ಮೆಟಿಕ್ ಅಪ್ಗ್ರೇಡ್ ಹೊರತುಪಡಿಸಿ ಇದರ ಮೊದಲ ಆವೃತ್ತಿಗಿಂತ ನಿರ್ದಿಷ್ಟತೆಯ ಬಗ್ಗೆ ಬೇರೆ ಯಾವುದೇ ಬದಲಾವಣೆಯನ್ನು ನೋಡಲು ಸಾಧ್ಯವಿಲ್ಲ. 

Oppo F11 Pro ಸ್ಪೆಸಿಫಿಕೇಷನ್ 
Oppo F11 Pro ಮಾರ್ವೆಲ್ ಅವೆಂಜರ್ಸ್ ಲಿಮಿಟೆಡ್ ಎಡಿಷನ್ ಫುಲ್ HD + ರೆಸಲ್ಯೂಷನ್ ಹೊಂದಿರುವ 6.5 ಇಂಚಿನ ಐಪಿಎಸ್ ಎಲ್ಸಿಡಿ ಡಿಸ್ಪ್ಲೇಯನ್ನು ಇದು ಒಳಗೊಂಡಿದೆ. ಇದರ ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ಪಾಪ್ ಅಪ್ ಸೆಲ್ಫಿಯಲ್ಲಿ ಇರಿಸಲಾಗಿದೆ. ಈ ಫೋನಿನ ಹಿಂಭಾಗವು 48MP + 5MP ಇಮೇಜಿಂಗ್ ಸೆಟಪ್ ಅನ್ನು ಸ್ಪೋರ್ಟ್ ಮಾಡುತ್ತದೆ. ಹುಡ್ ಅಡಿಯಲ್ಲಿ ನೀವು 6GB RAM ಮತ್ತು 128GB ಸ್ಟೋರೇಜ್ ಹೆಲಿಯೊ P70 CPU ಅನ್ನು ಪಡೆದುಕೊಳ್ಳುತ್ತೀರಿ. ಈ ಫೋನ್ 4000mAh ಬ್ಯಾಟರಿಯನ್ನು VOOC ಫ್ಲ್ಯಾಶ್ ಚಾರ್ಜ್ 3.0 ಅನ್ನು ಬೆಂಬಲಿಸುತ್ತದೆ. ಅಲ್ಲದೆ ಆಂಡ್ರಾಯ್ಡ್ 9.0 ಪೈ ಆಧಾರಿತ ColorOS 6.0 ಅನ್ನು ಅವೆಂಜರ್ಸ್ ಥೀಮ್ನೊಂದಿಗೆ ಫೋನ್ ರನ್ ಮಾಡುತ್ತದೆ.

Oppo F11 Pro ಮಾರ್ವೆಲ್ ಅವೆಂಜರ್ಸ್ ಲಿಮಿಟೆಡ್ ಎಡಿಷನ್ ಹೊರಭಾಗದಲ್ಲಿ ಹೊಸ ವಿನ್ಯಾಸದ ಬಣ್ಣದ ಕೆಲಸವನ್ನು ಪಡೆಯುತ್ತದೆ. ಹೆಚ್ಚಿನ ಫೋನ್ ಉಕ್ಕಿನ ನೀಲಿ ಲೇಪನವನ್ನು ಪಡೆಯುತ್ತದೆ. ಇದು ಬೆಳಕಿನ ಮೇಲೆ ಬೀಳುವ ಕೋನವನ್ನು ಅವಲಂಬಿಸಿ ತೀವ್ರತೆಯನ್ನು ಬದಲಾಯಿಸುತ್ತದೆ. ಸಂಪೂರ್ಣ ಹಿಂಭಾಗದ ಫಲಕವು ಸಂಕೀರ್ಣ ಷಡ್ಭುಜೀಯ ಮಾದರಿಯಿಂದ ಅಲಂಕರಿಸಲ್ಪಟ್ಟಿದೆ. ವಿನ್ಯಾಸವನ್ನು ಪೂರ್ಣಗೊಳಿಸಲು ದಪ್ಪ ಕೆಂಪು ಬಣ್ಣದಲ್ಲಿ ಐಕಾನ್ ಅವೆಂಜರ್ಸ್ ಲೋಗೋವಿದೆ. ಕ್ಯಾಮೆರಾ ಸೆಟಪ್ಗಿಂತ ಸ್ವಲ್ಪವೇ ಲಾಂಛನದ ಸಣ್ಣ ಆವೃತ್ತಿಯನ್ನು ಮುದ್ರಿಸಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo