8GB RAM ಮತ್ತು 50MP Ultra ಕ್ಯಾಮೆರಾದೊಂದಿಗೆ OPPO A5 Pro 5G ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು?

HIGHLIGHTS

ಭಾರತದಲ್ಲಿ ಇಂದು OPPO A5 Pro 5G ಅಧಿಕೃತವಾಗಿ ಬಿಡುಗಡೆಯಾಗಿದೆ.

OPPO A5 Pro 5G ಸ್ಮಾರ್ಟ್ಫೋನ್ 5800mAh ಬ್ಯಾಟರಿ ಮತ್ತು 50MP Ultra ಕ್ಯಾಮೆರಾದೊಂದಿಗೆ ಪರಿಚಯಿಸಿದೆ.

OPPO A5 Pro 5G ಸ್ಮಾರ್ಟ್ಫೋನ್ ಆರಂಭಿಕ 8GB RAM ಮಾದರಿ ಬ್ಯಾಂಕ್ ಆಫರ್ ಜೊತೆಗೆ 17,999 ರೂಗಳಿಗೆ ಪಟ್ಟಿಯಾಗಿದೆ.

8GB RAM ಮತ್ತು 50MP Ultra ಕ್ಯಾಮೆರಾದೊಂದಿಗೆ OPPO A5 Pro 5G ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು?

OPPO A5 Pro 5G Price in India: ನಿಮಗೊಂದು ಅತ್ಯುತ್ತಮ ಬಜೆಟ್ ವಿಭಾಗದ ಫುಲ್ ಫೀಚರ್ ಲೋಡೆಡ್ ಸ್ಮಾರ್ಟ್ ಫೋನ್ ಹುಡುಕುತ್ತಿದ್ದರೆ ಬರೋಬ್ಬರಿ 8GB RAM ಮತ್ತು 50MP Ultra ಕ್ಯಾಮೆರಾದೊಂದಿಗೆ OPPO A5 Pro 5G ಸ್ಮಾರ್ಟ್ಫೋನ್ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಒಪ್ಪೋ ಇಂಡಿಯಾದ ವೆಬ್‌ಸೈಟ್‌ ಮತ್ತು ಅಮೆಜಾನ್ ಮೂಲಕ ಈಗಾಗಲೇ ಮಾರಾಟಕ್ಕೆ ಪಟ್ಟಿ ಮಾಡಲಾಗಿದ್ದು ಬಿಡುಗಡೆಯ ದಿನದಿಂದಲೇ ಖರೀದಿಗೆ ಲಭ್ಯವಿದೆ. OPPO A5 Pro 5G ಸ್ಮಾರ್ಟ್ ಫೋನ್ ಫೀಚರ್ ಅಥವಾ ವಿಶೇಷತೆಯನ್ನು ನೋಡುವುದಾದರೆ 8GB RAM ಮತ್ತು 50MP Ultra ಕ್ಯಾಮೆರಾದೊಂದಿಗೆ ಹೆಚ್ಚು ಆಕರ್ಷಿಸುತ್ತದೆ.

Digit.in Survey
✅ Thank you for completing the survey!

ಭಾರತದಲ್ಲಿ OPPO A5 Pro 5G ಆಫರ್ ಬೆಲೆ ಮತ್ತು ಲಭ್ಯತೆ:

OPPO A5 Pro 5G ಸ್ಮಾರ್ಟ್ಫೋನ್ ಬೆಲೆಯ ಬಗ್ಗೆ ಮಾತನಾಡುವುದಾದರೆ ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಮಾದರಿಗೆ 17,999 ರಿಂದ ಪ್ರಾರಂಭವಾದರೆ ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ಮಾದರಿಗೆ 19,999 ರೂಗಳಾಗಿವೆ.

OPPO A5 Pro 5G Price in India
OPPO A5 Pro 5G Price in India

ಆದರೆ ಆಸಕ್ತ ಬಳಕೆದಾರರು ಇದನ್ನು SBI Bank, IDFC Bank, BOB Bank, DBS Bank ಮತ್ತು Federal Bank ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳ ಹೆಚ್ಚುವರಿಯ ಲಿಮಿಟೆಡ್ ಸಮಯದ ಡಿಸ್ಕೌಂಟ್ ಸಹ ಪಡೆಯಬಹುದು. ಈ ಮೂಲಕ OPPO A5 Pro 5G ಸ್ಮಾರ್ಟ್ಫೋನ್ ಆರಂಭಿಕ ಮಾದರಿಯನ್ನು ಕೇವಲ 16,499 ರೂಗಳಿಗೆ ಖರೀದಿಸಬಹುದು.

ಇಡನ್ನು ಓದಿ: ಪೂರ್ತಿ 90 ದಿನಗಳಿಗೆ ಉಚಿತ JioHostar, ಅನ್ಲಿಮಿಟೆಡ್ ಕರೆ ಮತ್ತು 5G ಡೇಟಾ ನೀಡುವ ಜಬರ್ದಸ್ತ್ Jio ಪ್ಲಾನ್!

OPPO A5 Pro 5G ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ OPPO A5 Pro 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 16,450 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

ಭಾರತದಲ್ಲಿ OPPO A5 Pro 5G ಫೀಚರ್ ಮತ್ತು ಟಾಪ್ ಫೀಚರ್ಗಳೇನು?

OPPO A5 Pro 5G ಸ್ಮಾರ್ಟ್‌ಫೋನ್ ದೊಡ್ಡ ಡಿಸ್‌ಪ್ಲೇಯನ್ನು ಹೊಂದಿದ್ದು 120Hz ರಿಫ್ರೆಶ್ ದರ ಮತ್ತು 1000nits ಗರಿಷ್ಠ ಬ್ರೈಟ್‌ನೆಸ್ ಬೆಂಬಲವನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ MediaTek Dimensity 6300 ಪ್ರೊಸೆಸರ್‌ನೊಂದಿಗೆ 8GB ವರೆಗಿನ RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. RAM ಬೂಸ್ಟ್ ತಂತ್ರಜ್ಞಾನ ಲಭ್ಯವಿದೆ ಮತ್ತು ಈ ಸ್ಮಾರ್ಟ್ ಫೋನ್ 45W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ದೊಡ್ಡ 5800mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಆಂಡ್ರಾಯ್ಡ್ 15 ಆಧಾರಿತ ColorOS 15 ನೊಂದಿಗೆ ಬಳಕೆದಾರರು ಪ್ರವೇಶಿಸಬಹುದಾದ AI ಟೂಲ್‌ಬಾಕ್ಸ್‌ನೊಂದಿಗೆ AI ವೈಶಿಷ್ಟ್ಯಗಳಿಗೆ ಬೆಂಬಲವಿದೆ.

ಕ್ಯಾಮೆರಾ ವಿಭಾಗದಲ್ಲಿ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು 50MP ಪ್ರೈಮರಿ ಸೆನ್ಸರ್ ಮತ್ತು 2MP ಪೋರ್ಟ್ರೇಟ್ ಕ್ಯಾಮೆರಾವನ್ನು ಹೊಂದಿದೆ. ಸ್ಮಾರ್ಟ್ಫೋನ್ 8MP ಸೆಲ್ಫಿ ಸೆನ್ಸರ್ ಸಹ ಹೊಂದಿದೆ. ವರ್ಧಿತ ಮತ್ತು ಸುಗಮ ಗೇಮಿಂಗ್ ಅನುಭವಕ್ಕಾಗಿ OPPO ಸಾಧನದಲ್ಲಿ 1100mm ಗ್ರ್ಯಾಫೈಟ್ ಮತ್ತು ಥರ್ಮಲ್ ಜೆಲ್ ಅನ್ನು ಸಹ ಸಂಯೋಜಿಸಿದೆ. ಇದು ದೀರ್ಘ ಗೇಮಿಂಗ್ ಅವಧಿಗಳಲ್ಲಿ ನಿಮ್ಮ ಫೋನ್ ಸಾಧ್ಯವಾದಷ್ಟು ತಂಪಾಗಿರುತ್ತದೆ ಎಂದು ಖಚಿತಪಡಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo