iPhone 17 Price Drop: ಫ್ಲಿಪ್ಕಾರ್ಟ್ ರಿಪಬ್ಲಿಕ್ ಡೇ ಮಾರಾಟದಲ್ಲಿ 75,000 ರೂಗಳೊಳಗೆ ಖರೀದಿಸುವ ಸುವರ್ಣವಾಕಾಶ!
ಫ್ಲಿಪ್‌ಕಾರ್ಟ್ ಗಣರಾಜ್ಯೋತ್ಸವ ಮಾರಾಟ (Republic Day Sale 2026) ಅನ್ನು ಇದೆ 17ನೇ ಜನವರಿ 2026 ರಿಂದ ಆರಂಭಿಸುತ್ತಿದೆ.
ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ನಲ್ಲಿ ಲೈವ್ ಆಗಿದ್ದು ಜನಪ್ರಿಯ ಐಫೋನ್ 17 ಮೇಲೆ ಕಂಪನಿಯು ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.
ಫ್ಲಿಪ್‌ಕಾರ್ಟ್ ಮಾರಾಟದಲ್ಲಿ iPhone 17 ಅನ್ನು ಕೇವಲ ₹74,990 ರೂಗಳ ಆರಂಭಿಕ ಬೆಲೆಯಲ್ಲಿ ಪಡೆಯಬಹುದು ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.
iPhone 17 Price Drop: ಭಾರತದ ಪ್ರಮುಖ ಇ-ಕಾಮರ್ಸ್ ಸಂಸ್ಥೆಯಾದ ಫ್ಲಿಪ್‌ಕಾರ್ಟ್ ತನ್ನ ಬಹುನಿರೀಕ್ಷಿತ ಗಣರಾಜ್ಯೋತ್ಸವ ಮಾರಾಟ (Republic Day Sale 2026) ಅನ್ನು ಇದೆ 17ನೇ ಜನವರಿ 2026 ರಿಂದ ಆರಂಭಿಸುತ್ತಿದೆ. ಈ ಭರ್ಜರಿ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಬ್ಲೂಟೂತ್ ಸ್ಪೀಕರ್‌ಗಳು, ಸ್ಮಾರ್ಟ್ ವಾಚ್‌ಗಳು, ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ದೊಡ್ಡ ಮಟ್ಟದ ಡಿಸ್ಕೌಂಟ್ ಸಿಗಲಿದೆ. ವಿಶೇಷವೇನೆಂದರೆ ಈ ಸೇಲ್ ಆರಂಭಕ್ಕೂ ಮುನ್ನವೇ ಕೆಲವು ‘ಅರ್ಲಿ ಡೀಲ್ಸ್’ (Early Deals) ಈಗ ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ನಲ್ಲಿ ಲೈವ್ ಆಗಿದ್ದು ಜನಪ್ರಿಯ iPhone 17 ಮೇಲೆ ಕಂಪನಿಯು ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.
Surveyಫ್ಲಿಪ್ಕಾರ್ಟ್ ರಿಪಬ್ಲಿಕ್ ಡೇ ಮಾರಾಟದಲ್ಲಿ iPhone 17 Price Drop
ನೀವು ಹೊಸ ಐಫೋನ್ ಖರೀದಿಸುವ ಪ್ಲಾನ್‌ನಲ್ಲಿದ್ದರೆ ಇದು ಸುವರ್ಣಾವಕಾಶ. ಈ ಬಾರಿಯ ಗಣರಾಜ್ಯೋತ್ಸವ ಮಾರಾಟದಲ್ಲಿ iPhone 17 ಅನ್ನು ಕೇವಲ ₹74,990 ರೂಗಳ ಆರಂಭಿಕ ಬೆಲೆಯಲ್ಲಿ ಪಡೆಯಬಹುದು ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ. ಈ ಬೆಲೆಯಲ್ಲಿ ನೇರ ರಿಯಾಯಿತಿ, ಬ್ಯಾಂಕ್ ಆಫರ್‌ಗಳು ಮತ್ತು ಎಕ್ಸ್‌ಚೇಂಜ್ ಬೋನಸ್ ಅಂದರೆ ನಿಮ್ಮ ಹಳೆಯ ಫೋನ್ ನೀಡಿ ಹೊಸ ಫೋನ್ ಪಡೆಯುವುದು ಎಲ್ಲವೂ ಸೇರಿವೆ. ಈ ಫೋನ್ ಲ್ಯಾವೆಂಡರ್, ಮಿಸ್ಟ್ ಬ್ಲೂ, ಸೇಜ್ ಗ್ರೀನ್, ವೈಟ್ ಮತ್ತು ಬ್ಲ್ಯಾಕ್ ಎಂಬ ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

ಸೆಪ್ಟೆಂಬರ್ 2025 ರಲ್ಲಿ ಈ ಫೋನ್ ಬಿಡುಗಡೆಯಾದಾಗ ಇದರ 256GB ಮಾದರಿಯ ಬೆಲೆ ₹82,900 ಆಗಿತ್ತು. ಆದರೆ ಈಗಿನ ಆಫರ್‌ನಲ್ಲಿ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಐಫೋನ್ 17 ಹಳೆಯ ಐಫೋನ್ 16 ಗಿಂತ ಸಾಕಷ್ಟು ಅಪ್‌ಗ್ರೇಡ್ ಹೊಂದಿದೆ. ಇದರಲ್ಲಿ 6.3-ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಇದ್ದು ಮೊದಲ ಬಾರಿಗೆ 120Hz ರಿಫ್ರೆಶ್ ರೇಟ್ ನೀಡಲಾಗಿದೆ. ಇದರಿಂದ ಫೋನ್ ಬಳಸುವ ಅನುಭವ ತುಂಬಾ ಸ್ಮೂತ್ ಆಗಿರುತ್ತದೆ. ಅಲ್ಲದೆ ಇದು 3,000 ನಿಟ್ಸ್ ಬ್ರೈಟ್‌ನೆಸ್ ಮತ್ತು ಬಲಿಷ್ಠವಾದ ‘ಸೆರಾಮಿಕ್ ಶೀಲ್ಡ್ 2’ ರಕ್ಷಣೆಯನ್ನು ಹೊಂದಿದೆ.
ಪವರ್ಫುಲ್ ಪ್ರೊಸೆಸರ್ ಮತ್ತು ಕ್ಯಾಮೆರಾ ವೈಶಿಷ್ಟ್ಯಗಳು
ಐಫೋನ್ 17 ಆಪಲ್‌ನ ಅತ್ಯಾಧುನಿಕ A19 ಚಿಪ್‌ಸೆಟ್ ನಿಂದ ಕಾರ್ಯನಿರ್ವಹಿಸುತ್ತದೆ. ಇದು iPhone 16 ಗಿಂತ ಶೇಕಡಾ 40% ರಷ್ಟು ವೇಗವಾದ ಕಾರ್ಯಕ್ಷಮತೆ (CPU Performance) ನೀಡುತ್ತದೆ ಎಂದು ಕಂಪನಿ ಹೇಳಿದೆ. ಗೇಮಿಂಗ್ ಮಾಡುವವರಿಗೆ ಮತ್ತು ಅತಿ ಹೆಚ್ಚು ಆ್ಯಪ್ ಬಳಸುವವರಿಗೆ ಇದು ಹೇಳಿಮಾಡಿಸಿದಂತಿದೆ. ಕ್ಯಾಮೆರಾ ವಿಚಾರಕ್ಕೆ ಬಂದರೆ ಹಿಂಭಾಗದಲ್ಲಿ ಎರಡು 48MP ಮೆಗಾಪಿಕ್ಸೆಲ್ ಕ್ಯಾಮೆರಾಗಳಿವೆ (ಪ್ರೈಮರಿ ಮತ್ತು ಅಲ್ಟ್ರಾವೈಡ್). ಸೆಲ್ಫಿಗಾಗಿ ಇದರಲ್ಲಿ 18MP ಮೆಗಾಪಿಕ್ಸೆಲ್‌ನ ‘ಸೆಂಟರ್ ಸ್ಟೇಜ್’ ಕ್ಯಾಮೆರಾ ಇದ್ದು ವಿಡಿಯೋ ಕಾಲ್ ಮಾಡುವಾಗ ಇದು ತುಂಬಾ ಸ್ಮಾರ್ಟ್ ಆಗಿ ಕೆಲಸ ಮಾಡುತ್ತದೆ.
ಬ್ಯಾಂಕ್ ಆಫರ್‌ಗಳು ಮತ್ತು ಸೇಲ್ ದಿನಾಂಕ:
ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಸೇಲ್ ಜನವರಿ 17 ರಂದು ಎಲ್ಲರಿಗೂ ಲಭ್ಯವಾಗಲಿದೆ. ಆದರೆ ನೀವು ಫ್ಲಿಪ್‌ಕಾರ್ಟ್ ‘ಪ್ಲಸ್’ (Plus) ಅಥವಾ ‘ಬ್ಲಾಕ್’ ಚಂದಾದಾರರಾಗಿದ್ದರೆ ನಿಮಗೆ 24 ಗಂಟೆಗಳ ಮುಂಚಿತವಾಗಿ ಅಂದರೆ ಜನವರಿ 16 ರಂದೇ ಈ ಡೀಲ್‌ಗಳನ್ನು ಪಡೆಯುವ ಅವಕಾಶವಿರುತ್ತದೆ. ಖರೀದಿಯ ಸಮಯದಲ್ಲಿ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ಶೇಕಡಾ 10 ರಷ್ಟು ತಕ್ಷಣದ ರಿಯಾಯಿತಿ ಸಿಗಲಿದೆ. ಉಳಿದಂತೆ ಇತರ ಬ್ಯಾಂಕ್ ಕಾರ್ಡ್‌ಗಳ ಮೇಲೆ ಶೇಕಡಾ 15 ರಷ್ಟು ಡಿಸ್ಕೌಂಟ್ ಮತ್ತು ಸುಲಭ ಕಂತುಗಳ (EMI) ಸೌಲಭ್ಯ ಕೂಡ ಲಭ್ಯವಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile