ಭಾರತದಲ್ಲಿ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ತಮ್ಮ ಗ್ರಾಹಕರಿಗೆ ಕೈಗೆಟಕುವ ಬೆಲೆಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿದೆ. ಈ ಲೇಖನದಲ್ಲಿ ಅದೇ ಮಾದರಿಯ ಕಾಂಬೋ ಪ್ರಯೋಜನಗಳನ್ನು ನೀಡುವ 899 ರೂಗಳ ರಿಚಾರ್ಜ್ ಯೋಜನೆಯೊಂದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೋಡುವುದಾದರೆ ರಿಲಯನ್ಸ್ ಜಿಯೋ ಒಂದೇ ಯೋಜನೆಯಲ್ಲಿ ಕರೆ ಮತ್ತು 5G ಡೇಟಾದೊಂದಿಗೆ ಬರೋಬ್ಬರಿ 90 ದಿನಗಳಿಗೆ ಉಚಿತ JioHostar ಚಂದಾದಾರಿಕೆಯನ್ನು ನೀಡುವ ಏಕೈಕ ರಿಚಾರ್ಜ್ ಯೋಜನೆ ಇದಾಗಿದೆ.
Survey
✅ Thank you for completing the survey!
IPL 2025 ಪ್ರಯೋಜನ ನೀಡುವ ಜಿಯೋದ ಬೆಸ್ಟ್ ಕಾಂಬೋ ಪ್ಲಾನ್!
ಐಪಿಎಲ್ (IPL 2025) ಹತ್ತಿರವಾಗುತ್ತಿದ್ದಂತೆ ಆರಂಭಿಸಿದ ಈ ಜಿಯೋ 90 ದಿನಗಳವರೆಗೆ ಉಚಿತ ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಸಹ ನೀಡುತ್ತಿದೆ. ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ (Reliance Jio) ಕಂಪನಿಯು ಅನಿಯಮಿತ ಕರೆಗಳು, ಹೈ-ಸ್ಪೀಡ್ ಡೇಟಾ ಮತ್ತು OTT ಪ್ರಯೋಜನಗಳನ್ನು ನೀಡುವ 90 ದಿನಗಳ ಯೋಜನೆಯನ್ನು ಪ್ರಾರಂಭಿಸಿದೆ.
ಈ ಮೂಲಕ ಒಮ್ಮೆ ರಿಚಾರ್ಜ್ ಮಾಡಿಕೊಂಡರೆ 3 ತಿಂಗಳು ಅಥವಾ 90 ದಿನಗಳಿಗೆ ರಿಚಾರ್ಜ್ ಮಾಡುವ ತಲೆ ನೋವಿಲ್ಲದೆ ಅನ್ಲಿಮಿಟೆಡ್ ವಾಯ್ಸ್ ಕರೆ, 5G ಡೇಟಾದೊಂದಿಗೆ ಉಚಿತ ಉಚಿತ JioHostar ಚಂದಾದಾರಿಕೆಯನ್ನು ಆನಂದಿಸಬಹುದು. ಇದು ಕೈಗೆಟುಕುವ ಬೆಲೆಯಲ್ಲಿ ದೀರ್ಘಾವಧಿಯ ಮಾನ್ಯತೆಯೊಂದಿಗೆ ಬರುವುದರೊಂದಿಗೆ ಐಪಿಎಲ್ (IPL 2025) ಪ್ರಿಯರಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ.
ಜಿಯೋದ 899 ರೂಗಳ ರಿಚಾರ್ಜ್ ಯೋಜನೆ
ರಿಲಯನ್ಸ್ ಜಿಯೋ ಹೊಸ 899 ರೂ. ಪ್ರಿಪೇಯ್ಡ್ ಯೋಜನೆಯೊಂದಿಗೆ ತನ್ನ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿದ್ದು ಈ ಯೋಜನೆಯಲ್ಲಿ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ನೀಡುವುದರೊಂದಿಗೆ ಪ್ರತಿದಿನ 2GB ಡೇಟಾದೊಂದಿಗೆ ಒಟ್ಟು 180GB ಡೇಟಾವನ್ನು ನೀಡುತ್ತದೆ. ಅಲ್ಲದೆ ಹೆಚ್ಚುವರಿಯಾಗಿ 20GB ಡೇಟಾವನ್ನು ಸಹ ನೀಡುತ್ತಿದೆ. ಇದು ಮಾಸಿಕ ರೀಚಾರ್ಜ್‌ಗಳ ತೊಂದರೆಯನ್ನು ತಪ್ಪಿಸಲು ಬಯಸುವ ಬಳಕೆದಾರರಿಗೆ ಕೈಗೆಟುಕುವ ದೀರ್ಘಾವಧಿಯ ಆಯ್ಕೆಯನ್ನು ಒದಗಿಸುತ್ತದೆ. ಸಮಂಜಸವಾದ ಬೆಲೆಯಲ್ಲಿ ದೀರ್ಘಾವಧಿಯ ಮಾನ್ಯತೆಯನ್ನು ಬಯಸುವವರಿಗೆ ಈ ಯೋಜನೆ ಸೂಕ್ತವಾಗಿದೆ.
Reliance Jio Rs. 899 recharge plan
ಇದು ಬಳಕೆದಾರರಿಗೆ ಹೆಚ್ಚುವರಿ ವೆಚ್ಚವಿಲ್ಲದೆ ಲೈವ್ ಕ್ರಿಕೆಟ್ ಪಂದ್ಯಗಳು, ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. ಡೇಟಾ ಮತ್ತು ಮನರಂಜನಾ ಪ್ರಯೋಜನಗಳ ಹೊರತಾಗಿ ಜಿಯೋ ಬಳಕೆದಾರರಿಗೆ 50GB ಉಚಿತ ಕ್ಲೌಡ್ ಸ್ಟೋರೇಜ್ ಅನ್ನು ಸಹ ಒದಗಿಸುತ್ತಿದೆ. ಇದು ಪ್ರಮುಖ ಫೈಲ್‌ಗಳು ಮತ್ತು ಮಾಧ್ಯಮಗಳನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಲು ಸುಲಭಗೊಳಿಸುತ್ತದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile