OnePlus 7 Pro ಅಲ್ಮೊನ್ಡ್ ಎಡಿಷನ್ ಇಂದು ಮಧ್ಯಾಹ್ನ 12ಕ್ಕೆ ಮೊದಲ ಬಾರಿಗೆ ಮಾರಾಟಕ್ಕೆ ಬರಲಿದೆ

OnePlus 7 Pro ಅಲ್ಮೊನ್ಡ್ ಎಡಿಷನ್ ಇಂದು ಮಧ್ಯಾಹ್ನ 12ಕ್ಕೆ ಮೊದಲ ಬಾರಿಗೆ ಮಾರಾಟಕ್ಕೆ ಬರಲಿದೆ
HIGHLIGHTS

ಇದು ನಿಮಗೆ 6GB + 128GB, 8GB + 256GB ಮತ್ತು 12GB + 256GB ರೂಪಾಂತರಗಳನ್ನುಬಿಡುಗಡೆಗೊಳಿಸಿದೆ.

ಭಾರತದಲ್ಲಿ ಆಂಡ್ರಾಯ್ಡ್ ಐಷಾರಾಮಿ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ ಒನ್‌ಪ್ಲಸ್ 7 ಪ್ರೊ ತನ್ನ ಹೊಸ ಬಾದಾಮಿ ಅಂದ್ರೆ OnePlus 7 Pro ಅಲ್ಮೊನ್ಡ್ ಎಡಿಷನ್ ಸ್ಮಾರ್ಟ್ಫೋನನ್ನು ಇಂದು ಭಾರತದಲ್ಲಿ ಮಾರಾಟಕ್ಕೆ ಸಿದ್ದಗೊಳಿಸಿದೆ. ಅಮೆಜಾನ್ ಇಂಡಿಯಾ OnePlus 7 Pro ಸ್ಮಾರ್ಟ್ಫೋನ್ಗಳನ್ನು ಎಲ್ಲ ಚಿಲ್ಲರೆ ವ್ಯಾಪಾರಿಗಳು ಮತ್ತು ಒನ್‌ಪ್ಲಸ್ ಪಾಲುದಾರ ಸ್ಟೋರ್ಗಳ ಮೂಲಕ ಮಧ್ಯಾಹ್ನ 12 ಗಂಟೆಗೆ ಈ ಫೋನ್ ಲಭ್ಯಗೊಳಿಸಲಿದೆ. ಇದು ದೇಶದಲ್ಲಿ ಬಿಡುಗಡೆಯಾಗಲಿರುವ ಒನ್‌ಪ್ಲಸ್ 7 ಪ್ರೊನ ಕೊನೆಯ ರೂಪಾಂತರವಾಗಿದೆ. ಒನ್‌ಪ್ಲಸ್ ಈಗಾಗಲೇ 6GB + 128GB, 8GB + 256GB ಮತ್ತು 12GB + 256GB ರೂಪಾಂತರಗಳನ್ನು ಮಿರರ್ ಗ್ರೇ ಮತ್ತು ನೆಬ್ಯುಲಾ ಬ್ಲೂ ಬಣ್ಣಗಳಲ್ಲಿ ಮಾರಾಟ ಮಾಡುತ್ತಿದೆ. ಈಗ ಇದು ನಿಮಗೆ ಹೊಸ ಬಾದಾಮಿ ಅಂದ್ರೆ ಅಲ್ಮೊನ್ಡ್ ಎಡಿಷನ್ ಸಹ ಲಭ್ಯವಾಗಲಿದೆ.  

OnePlus 7 Pro Almond variant 8GB RAM 256GB = 52,999

OnePlus 7 Pro Mirror Grey 6GB RAM 128GB = 48,999

OnePlus 7 Pro Mirror Grey 8GB RAM 256GB = 52,999

OnePlus 7 Pro Nebula Blue 8GB RAM 256GB = 52,999

OnePlus 7 Pro Nebula Blue 12GB RAM 256GB = 57,999

OnePlus 7 Pro ಸ್ಪೆಸಿಫಿಕೇಷನ್ ಮಾಹಿತಿ

ಈ ಸ್ಮಾರ್ಟ್ಫೋನ್ ಡ್ಯುಯಲ್ ಸಿಮ್ (ನ್ಯಾನೋ) ಜೊತೆಗೆ ಆಂಡ್ರಾಯ್ಡ್ 9.0 ಪೈ ಆಧಾರಿತ ಆಕ್ಸಿಜನ್ಓಎಸ್ ಆಪರೇಟಿಂಗ್ ಸಿಸ್ಟಮ್ ಅನ್ನು ನಡೆಸುತ್ತದೆ. ಇದು 6.67 ಇಂಚಿನ ಪೂರ್ಣ ಎಚ್ಡಿ + ಫ್ಯೂಲ್ಡ್ ಅಮೋಲೆಡ್ ಡಿಸ್ಪ್ಲೇಯನ್ನು 19.5: 9 ಅಸ್ಪೆಟ್ ರೇಷು ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು 90Hz ನ ರಿಫ್ರೆಶನ್ನು  ಹೊಂದಿದೆ. ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 ಎಸ್ಒಸಿನಿಂದ ಪವರನ್ನು ಹೊಂದಿದೆ. ಇದು ಅಡ್ರಿನೊ 640 ಜಿಪಿಯು ಮತ್ತು 12GB ಯ LPDDR 4x ರಾಮ್ನೊಂದಿಗೆ ಸೇರಿಕೊಂಡಿರುತ್ತದೆ.

ಇಮೇಜಿಂಗ್ ಫ್ರಂಟ್ನಲ್ಲಿ f/ 1.6 ಅಪರ್ಚರ್ನೊಂದಿಗೆ 48MP ಮೆಗಾಪಿಕ್ಸೆಲ್ ಪ್ರೈಮರಿ ಶೂಟರ್ ಅನ್ನು ಹೊಂದಿರುವ ಒಂದು ಟ್ರಿಪಲ್ ಕ್ಯಾಮೆರಾ ಸೆಟಪ್ನೊಂದಿಗೆ ಬರುತ್ತದೆ. f/ 2.4 ಅಪರ್ಚರ್ನೊಂದಿಗೆ 16MP ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ಗಳು ಮತ್ತು f/ 2.4 ಟೆಲಿಫೋಟೋ ಲೆನ್ಸ್ನ 8MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. 16MP ಮೆಗಾಪಿಕ್ಸೆಲ್ ಫ್ರಂಟ್ ಶೂಟರ್ ಆನ್ಬೋರ್ಡ್ ಮತ್ತು ಪಾಪ್ ಅಪ್ ಸೆಲ್ಫಿ ಕ್ಯಾಮೆರಾ ಘಟಕದಲ್ಲಿ ಇದೆ. ಇತರ ವಿಶೇಷತೆಗಳೆಂದರೆ 256GB UFS 3.0 2 ಲೇನ್ ಸ್ಟೋರೇಜ್ ವಾರ್ಪ್ ಚಾರ್ಜ್ 30 ವೇಗದ ಚಾರ್ಜಿಂಗ್, 4G VoLTE, Wi-Fi 802.11ac, ಬ್ಲೂಟೂತ್ v5.0, NFC, GPS ಮತ್ತು USB ಟೈಪ್- ಸಿ (v3.1 ಜನ್ 1) ಪೋರ್ಟ್ಗಳನ್ನು ಒಳಗೊಂಡಿದೆ.

ಇಮೇಜ್ ಸೋರ್ಸ್

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo