AI Girlfriend Cheated a Man: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗರ್ಲ್‌ಫ್ರೆಂಡ್ ವಂಚನೆಗೆ ಬಲಿಯಾಗಿ ಬರೋಬ್ಬರಿ ₹1.53 ಲಕ್ಷ ನಷ್ಟ!

HIGHLIGHTS

ಕರ್ನಾಟಕದ 26 ವರ್ಷದ ಯುವಕನೊಬ್ಬ ಆನ್‌ಲೈನ್‌ನಲ್ಲಿ ವಂಚನೆಗೆ ಬಲಿಯಾಗಿರುವ ಕಹಾನಿ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೊಂದಿರುವ ಗೆಳತಿಯೊಬ್ಬಳು ವ್ಯಕ್ತಿಗೆ ₹1.53 ಲಕ್ಷ ವಂಚಿಸಿದ್ದಾಳೆ.

AI Girlfriend Cheated a Man: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗರ್ಲ್‌ಫ್ರೆಂಡ್ ವಂಚನೆಗೆ ಬಲಿಯಾಗಿ ಬರೋಬ್ಬರಿ ₹1.53 ಲಕ್ಷ ನಷ್ಟ!

AI Girlfriend Cheated a Man: ಡೇಟಿಂಗ್ ಆಪ್‌ನಲ್ಲಿ ಶುರುವಾದ ಸಂಭಾಷಣೆಯ ಹಿನ್ನಲೆಯಲ್ಲಿ ಕರ್ನಾಟಕದ 26 ವರ್ಷದ ಯುವಕನೊಬ್ಬ ಆನ್‌ಲೈನ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗರ್ಲ್‌ಫ್ರೆಂಡ್ ವಂಚಕರ ಕೈಗೆ ಸಿಲುಕಿ ದೊಡ್ಡ ಮೊತ್ತದ ಹಣ ಕಳೆದುಕೊಂಡಿದ್ದಾನೆ. ಮೊದಲು ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಸಾಮಾನ್ಯ ಚಾಟಿಂಗ್ ಆಗಿ ಶುರುವಾದ ಈ ವಿಷಯ ಆಮೇಲೆ ಬ್ಲ್ಯಾಕ್‌ಮೇಲ್ ಹಂತಕ್ಕೆ ತಲುಪಿದೆ. ಸೈಬರ್ ಕ್ರಿಮಿನಲ್‌ಗಳು ಮಹಿಳೆಯೊಬ್ಬರ ನಕಲಿ AI ಚಿತ್ರ ಅಥವಾ ಅವತಾರವನ್ನು ಬಳಸಿ ಯುವಕನನ್ನು ಮರಳು ಮಾಡಿದ್ದಾರೆ. ಆತನಿಗೆ ಗೊತ್ತಿಲ್ಲದಂತೆ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಬರೋಬ್ಬರಿ ₹1.53 ಲಕ್ಷ ಹಣವನ್ನು ಸುಲಿಗೆ ಮಾಡಿದ್ದಾರೆ.

Digit.in Survey
✅ Thank you for completing the survey!

Also Read: ಅಮೆಜಾನ್ ಅಲ್ಲ, ಫ್ಲಿಪ್‌ಕಾರ್ಟ್ ಅಲ್ಲ! ಈ ಅಂಗಡಿಗಳಲ್ಲಿ iPhone 16 Plus ನಂಬಲಾಗದಷ್ಟು ಕಡಿಮೆ ಬೆಲೆಗೆ ಲಭ್ಯವಿದೆ

AI Girlfriend Cheated a Man: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗರ್ಲ್‌ಫ್ರೆಂಡ್

ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದರಿಂದ ಬೇಸತ್ತ ಯುವಕ ಈಗ ಬೆಂಗಳೂರಿನ ಸೆಂಟ್ರಲ್ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಒಂದು ವೇಳೆ ಹಣ ನೀಡದಿದ್ದರೆ ಆತನ ನಗ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಹಣಕ್ಕಾಗಿ ಪೀಡನೆ ಮತ್ತು ಸುಲಿಗೆ ತನ್ನ ಮಾನ ಹರಾಜಾಗುತ್ತದೆ ಎಂಬ ಭಯದಿಂದ ಯುವಕ ಕೇಳಿದಷ್ಟು ಹಣವನ್ನು ಕಳುಹಿಸಲು ಒಪ್ಪಿದ್ದಾನೆ. ಎಫ್‌ಐಆರ್ (FIR) ಪ್ರಕಾರ ಆತ ತನ್ನ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ ₹60,000 ಮತ್ತು ತನ್ನ ಗೆಳೆಯನ ಕೋಟಕ್ ಬ್ಯಾಂಕ್ ಖಾತೆಯಿಂದ ₹93,000 ವರ್ಗಾಯಿಸಿದ್ದಾನೆ. ಹೀಗೆ ಒಟ್ಟು ₹1.53 ಲಕ್ಷ ಹಣವನ್ನು ವಂಚಕರ ಕೈಗಿಟ್ಟಿದ್ದಾನೆ.

AI Girlfriend Cheated a Man

ಈ ಹಣವನ್ನು ಆರೋಪಿಗಳು ಎಸ್‌ಬಿಎಂ (SBM) ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಬೇರೆ ಬೇರೆ ಯುಪಿಐ (UPI) ಐಡಿಗಳ ಮೂಲಕ ಪಡೆದುಕೊಂಡಿದ್ದಾರೆ. ಇಷ್ಟಾದರೂ ವಂಚಕರ ಹಸಿವು ನೀಗಲಿಲ್ಲ ಅವರು ಮತ್ತೆ ಹಣಕ್ಕಾಗಿ ಡಿಮ್ಯಾಂಡ್ ಮಾಡಿದಾಗ ಯುವಕನಿಗೆ ಇದು ಕೊನೆಯಾಗದ ಕಾಟ ಎಂದು ಅರ್ಥವಾಗಿ ಪೊಲೀಸರ ಮೊರೆ ಹೋಗಿದ್ದಾನೆ. ಪೊಲೀಸ್ ತನಿಖೆಯಲ್ಲಿ ಬಯಲಾದ ಶಾಕಿಂಗ್ ಸತ್ಯ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ ಒಂದು ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ವಿಡಿಯೋ ಕಾಲ್‌ನಲ್ಲಿ ಯುವಕನ ಜೊತೆ ಮಾತನಾಡಿದ್ದು ನಿಜವಾದ ಮಹಿಳೆಯಲ್ಲ! ವಂಚನೆಯ ಜಾಲ ಹೆಣೆಯಲು ಆರೋಪಿಗಳು Artificial Intelligence ಹೆಣ್ಣಿನ ಅವತಾರವನ್ನು ಬಳಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಇದು ಕೇವಲ ಒಬ್ಬ ವ್ಯಕ್ತಿ ಮಾಡಿದ ಕೆಲಸವಲ್ಲ ಇದರ ಹಿಂದೆ ದೊಡ್ಡ ಸೈಬರ್ ಕ್ರಿಮಿನಲ್ ಗ್ಯಾಂಗ್ ಇರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯಕ್ಕೆ ಐಟಿ ಆಕ್ಟ್ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಬ್ಯಾಂಕ್ ವಹಿವಾಟು ಮತ್ತು ಡಿಜಿಟಲ್ ಪುರಾವೆಗಳ ಆಧಾರದ ಮೇಲೆ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಂಚನೆಗೆ ಬಲೆ ಹಾಕಿದ್ದು ಹೇಗೆ?

ದೂರಿನ ವಿವರದ ಪ್ರಕಾರ ಯುವಕ ಹ್ಯಾಪನ್ (Happn – Dating App) ಎಂಬ ಡೇಟಿಂಗ್ ಆಪ್‌ನಲ್ಲಿ ತನ್ನ ಪ್ರೊಫೈಲ್ ತೆರೆದಿದ್ದ. ಅಲ್ಲಿ ‘ಇಶಾನಿ’ ಎಂಬ ಹೆಸರಿನ ಮಹಿಳೆಯಿಂದ ಆತನಿಗೆ ಮೆಸೇಜ್ ಬಂದಿತ್ತು. ಇಬ್ಬರೂ ದಿನಾಲೂ ಚಾಟ್ ಮಾಡುತ್ತಾ ಹತ್ತಿರವಾದರು ಆಮೇಲೆ ಫೋನ್ ನಂಬರ್ ವಿನಿಮಯ ಮಾಡಿಕೊಂಡು ವಾಟ್ಸಾಪ್‌ನಲ್ಲಿ ಮಾತನಾಡಲು ಶುರು ಮಾಡಿದರು. 5ನೇ ಜನವರಿ 2026 ರಂದು ಇಶಾನಿ ಆ ಯುವಕನಿಗೆ ವಿಡಿಯೋ ಕಾಲ್ ಮಾಡಿದ್ದಾಳೆ. ಈ ಕರೆಯ ಸಮಯದಲ್ಲಿ ಅವಳು ಬಟ್ಟೆಯಿಲ್ಲದೆ ಕಾಣಿಸಿಕೊಂಡು ಯುವಕನಿಗೂ ಬಟ್ಟೆ ಬಿಚ್ಚುವಂತೆ ಪ್ರಚೋದಿಸಿದ್ದಾಳೆ.

ಯುವಕ ಆಕೆ ಹೇಳಿದಂತೆ ಮಾಡಿದಾಗ ಅತ್ತ ಕಡೆ ವಂಚಕರು ಆ ವಿಡಿಯೋವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಕರೆ ಕಟ್ ಆದ ಕೆಲವೇ ಕ್ಷಣಗಳಲ್ಲಿ ಯುವಕನ ಫೋನ್‌ಗೆ ಅದೇ ವಿಡಿಯೋದ ಸ್ಕ್ರೀನ್ ಶಾಟ್‌ಗಳು ಬಂದಿವೆ. ಹೇಳಿದಷ್ಟು ಹಣ ಕೊಡದಿದ್ದರೆ ಈ ವಿಡಿಯೋವನ್ನು ನಿನ್ನ ಫ್ರೆಂಡ್ಸ್ ಮತ್ತು ಸಂಬಂಧಿಕರಿಗೆ ಕಳುಹಿಸುತ್ತೇವೆ” ಎಂದು ಆರೋಪಿಗಳು ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದ್ದಾರೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo