13MP ಕ್ಯಾಮೆರಾ ಮತ್ತು 3 ದಿನಗಳ ಬ್ಯಾಟರಿವುಳ್ಳ ಫೋನ್ ಬಿಡುಗಡೆ! ಬೆಲೆ ಕೇವಲ ₹7999 ರೂಗಳಿಂದ ಆರಂಭ!

13MP ಕ್ಯಾಮೆರಾ ಮತ್ತು 3 ದಿನಗಳ ಬ್ಯಾಟರಿವುಳ್ಳ ಫೋನ್ ಬಿಡುಗಡೆ! ಬೆಲೆ ಕೇವಲ ₹7999 ರೂಗಳಿಂದ ಆರಂಭ!
HIGHLIGHTS

ನೋಕಿಯಾ ಬ್ರ್ಯಾಂಡ್ Nokia C22 ಸ್ಮಾರ್ಟ್‌ಫೋನ್‌ಗಳು ದೀರ್ಘ ಬಾಳಿಕೆಗೆ ಹೆಸರುವಾಸಿಯಾಗಿದೆ.

Nokia C22 ಯುನಿಸಾಕ್ SC9863A ಆಕ್ಟೋ ಕೋರ್ ಪ್ರೊಸೆಸರ್‌ ನಿಂದ ಚಾಲಿತವಾಗಿದೆ.

Nokia C22 ಸ್ಮಾರ್ಟ್‌ಫೋನ್ 6.5 ಇಂಚಿನ HD+ LCD ಡಿಸ್‌ಪ್ಲೇಯನ್ನು ಹೊಂದಿದೆ.

Nokia C22 Price: ನೋಕಿಯಾ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳು ದೀರ್ಘ ಬಾಳಿಕೆಗೆ ಹೆಸರುವಾಸಿಯಾಗಿದೆ. HMD ಗ್ಲೋಬಲ್ ಭಾರತದಲ್ಲಿ ಅತ್ಯದ್ಭುತ ಹೊಸ ಸ್ಮಾರ್ಟ್‌ಫೋನ್‌ ಪರಿಚಯಿಸಿದ್ದು  ಈ ಫೋನ್‌ ಉತ್ತಮ ವಿನ್ಯಾಸ ಹಾಗೂ ಫೀಚರ್ಸ್‌ನೊಂದಿಗೆ ಬಿಡುಗಡೆಗೊಂಡಿದೆ. ಇದು ಯುನಿಸಾಕ್ SC9863A ಆಕ್ಟೋ ಕೋರ್ ಪ್ರೊಸೆಸರ್‌ ನಿಂದ ಚಾಲಿತವಾಗಿದೆ. ಈ ಫೋನ್ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಿದೆ. ಸ್ಪ್ಲಾಶ್ ಮತ್ತು ಧೂಳಿನ ರಕ್ಷಣೆಗಾಗಿ ಈ ಫೋನ್‌ IP52 ಪ್ರಮಾಣೀಕೃತವಾಗಿದೆ. ಹಾಗೆಯೇ 2GB/4GB RAM ನ ಎರಡು ವೇರಿಯಂಟ್‌ನಲ್ಲಿ ಈ ಫೋನ್‌ ಲಭ್ಯವಾಗಲಿದೆ. Nokia C22 ಪ್ರಮುಖ ಫೀಚರ್‌ಗಳ ಡಿಟೈಲ್ಸ್‌ ಇಲ್ಲಿದೆ ನೋಡಿ.

Nokia C22 ಫೀಚರ್ಸ್:

Nokia C22 ಸ್ಮಾರ್ಟ್‌ಫೋನ್ 6.5 ಇಂಚಿನ HD+ LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನ್ 720×1600 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 60Hz ರಿಫ್ರೆಶ್ ದರವನ್ನು ಒಳಗೊಂಡಿದೆ. Nokia C22 ಯುನಿಸಾಕ್ SC9863A ಆಕ್ಟೋ ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವುದರ ಜೊತೆಗೆ IMG8322 GPU ಅನ್ನು ಹೊಂದಿದೆ. ಇದರಿಂದ ಉತ್ತಮ ಕಾರ್ಯಕ್ಷಮತೆಯನ್ನು ಪಡೆದುಕೊಳ್ಳಬಹುದು. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ ಅನ್ನು ಒಳಗೊಂಡಿದೆ. ಇದರೊಂದಿಗೆ 2GB/4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್‌ ಹೊಂದಿರಲಿದೆ. ಅಷ್ಟೇ ಅಲ್ಲದೆ ಮೆಮೊರಿ ಕಾರ್ಡ್ ಬಳಸಲು ಮೈಕ್ರೋ SD ಕಾರ್ಡ್ ಸ್ಲಾಟ್ ಆಯ್ಕೆ ಸಹ ಈ ಫೋನ್‌ನಲ್ಲಿ ನೀಡಲಾಗಿದೆ.

Nokia C22 ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್ ಹೊಂದಿದ್ದು ಇದರಲ್ಲಿ 13MP ಕ್ಯಾಮೆರಾ ಹಾಗೂ 2MP ಡೆಪ್ತ್ ಸೆನ್ಸಾರ್‌ ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೆ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಈ ಫೋನ್‌ನಲ್ಲಿ 8MP ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇಷ್ಟೇ ಅಲ್ಲದೆ LED ಫ್ಲ್ಯಾಶ್‌ ನೊಂದಿಗೆ ಇನ್ನು ಹಲವಾರು ಕ್ಯಾಮೆರಾ ಫೀಚರ್ಸ್‌ ಅನ್ನು ಈ ಫೋನ್‌ ಒಳಗೊಂಡಿದೆ.

Nokia C22 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವುದರ ಜೊತೆಗೆ 10W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಅಲ್ಲದೆ ಸ್ಪ್ಲಾಶ್ ಮತ್ತು ಧೂಳಿನ ರಕ್ಷಣೆಗಾಗಿ IP52 ರೇಟಿಂಗ್‌ ಹೊಂದಿದ್ದು ಈ ಫೋನ್‌ ಅನ್ನು ಫಿಂಗರ್ ಪ್ರಿಂಟ್ ಸೆನ್ಸಾರ್‌ನೊಂದಿಗೆ ಹಲವು ಅತ್ಯುತ್ತಮ ಫೀಚರ್‌ಗಳ ಮೂಲಕ ಪರಿಚಯಿಸಲಾಗಿದೆ.

Nokia C22 ಬೆಲೆ ಮತ್ತು ಲಭ್ಯತೆ:

Nokia C22 ಸ್ಮಾರ್ಟ್ಫೋನ್ ಆರಂಭಿಕ 2GB RAM ಹೊಂದಿರುವ ಸ್ಮಾರ್ಟ್‌ಫೋನ್‌ನ ಬೆಲೆ 7,999 ರೂಳಾಗಿದ್ದು ಇದರ ಮತ್ತೊಂದು 4GB RAM ವೇರಿಯಂಟ್‌ನ ಬೆಲೆ 8,499 ರೂಗಳಾಗಿದೆ. ಪ್ರಸ್ತುತ ಈ ಫೋನ್ ಆಫ್‌ಲೈನ್ ಸ್ಟೋರ್‌ಗಳು ಲಭ್ಯವಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo