Nokia C12 Pro: ನೋಕಿಯಾದಿಂದ ಅತ್ಯುತ್ತಮ ಫೋನ್ ಕೇವಲ 6,999 ರೂಗಳಿಗೆ ಲಭ್ಯ! ಇದರ ವಿಶೇಷತೆಗಳೇನು?

Nokia C12 Pro: ನೋಕಿಯಾದಿಂದ ಅತ್ಯುತ್ತಮ ಫೋನ್ ಕೇವಲ 6,999 ರೂಗಳಿಗೆ ಲಭ್ಯ! ಇದರ ವಿಶೇಷತೆಗಳೇನು?
HIGHLIGHTS

Nokia C12 Pro ಇತ್ತೀಚಿನ ಎಂಟ್ರಿ-ಲೆವೆಲ್ ಸ್ಮಾರ್ಟ್‌ಫೋನ್ ಕೇವಲ 6,999 ರೂಗಳಿಗೆ ಲಭ್ಯ!

HMD ಗ್ಲೋಬಲ್ ಭಾರತದಲ್ಲಿ Nokia C12 Pro ಫೋನ್‌ ಅನ್ನು ಕೈಗೆಟಕುವ ಬೆಲೆಗೆ ಪರಿಚಯಿಸಿದೆ

Nokia C12 Pro ಸ್ಮಾರ್ಟ್ಫೋನ್ nokia.com, ಇ-ಕಾಮರ್ಸ್ ಸೈಟ್‌ಗಳು ಮತ್ತು ಅಧಿಕೃತ ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯ

Nokia C12 Pro: ವಿಶ್ವದ ಅತಿ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ನೋಕಿಯಾ ಇತ್ತೀಚಿನ ಎಂಟ್ರಿ-ಲೆವೆಲ್ ಸ್ಮಾರ್ಟ್‌ಫೋನ್ ಆಗಿದ್ದು ಈ ಫೋನ್‌ ಅನ್ನು ಭಾರತದಲ್ಲಿ HMD ಗ್ಲೋಬಲ್ ಪರಿಚಯಿಸಿದೆ. ಇದು Nokia ಬ್ರ್ಯಾಂಡ್ ಹೊಂದಿರುವ ಹ್ಯಾಂಡ್‌ಸೆಟ್‌ಗಳನ್ನು ತಯಾರಿಸುವ ಹಕ್ಕನ್ನು ಹೊಂದಿದೆ. ಕಡಿಮೆ ಬೆಲೆಯ Nokia ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಪ್ರೊಸೆಸರ್‌ ಮತ್ತು 6.3 ಇಂಚಿನ HD+ ಡಿಸ್ಪ್ಲೇ ಹೊಂದಿದೆ. ಈ Nokia C12 Pro ಆಕರ್ಷಕ ನಾರ್ಡಿಕ್ ವಿನ್ಯಾಸ ಮತ್ತು ಡಿಟ್ಯಾಚೇಬಲ್ ಬ್ಯಾಟರಿಯನ್ನು ಹೊಂದಿದೆ.

Nokia C12 Pro ಬೆಲೆ ಮತ್ತು ಲಭ್ಯತೆ:

Nokia C12 Pro ನ 2GB RAM ಮತ್ತು 3GB RAM ರೂಪಾಂತರಗಳು ಕ್ರಮವಾಗಿ ರೂ 6,999 ಮತ್ತು ರೂ 7,499 ಕ್ಕೆ ಲಭ್ಯವಿದೆ. ಈ ಫೋನ್ ಲೈಟ್ ಮಿಂಟ್, ಚಾರ್ಕೋಲ್ ಮತ್ತು ಡಾರ್ಕ್ ಸಯಾನ್ ಕಲರ್‌ಗಳ ಆಯ್ಕೆಯಲ್ಲಿ ಲಭ್ಯವಿದೆ. ಖರೀದಿಗಾಗಿ ಆನ್‌ಲೈನ್‌ನಲ್ಲಿ Nokia.com ಮತ್ತು ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ದೇಶದ ಅಧಿಕೃತ ಆಫ್‌ಲೈನ್ ಸ್ಟೋರ್‌ಗಳಲ್ಲಿ ಈ ಫೋನ್‌ ಲಭ್ಯವಿದೆ.

Nokia C12 Pro ಫೀಚರ್‌ಗಳು:

Nokia C12 Pro ಸ್ಮಾರ್ಟ್ಫೋನ್ 6.3 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಇದು 720×1600 ರೆಸಲ್ಯೂಶನ್ ಒಳಗೊಂಡಿದ್ದು ಇದನ್ನು ರಕ್ಷಿಸಲು ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯ ಮೇಲೆ 2D ಟಫ್ನೆಡ್ ಗ್ಲಾಸ್ ಲೇಯರ್ ಅನ್ನು ಹೊಂದಿದೆ. ಆಕ್ಟಾ-ಕೋರ್ Unisoc SC9863A1 ಪ್ರೊಸೆಸರ್‌ ಮತ್ತು 3GB ಯವರೆಗಿನ RAM ಸ್ಮಾರ್ಟ್‌ಫೋನ್‌ಗೆ ಶಕ್ತಿ ನೀಡುತ್ತದೆ. ಸ್ಮಾರ್ಟ್‌ಫೋನ್ 64GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರುತ್ತದೆ. ಇದನ್ನು ಮೈಕ್ರೊ SD ಕಾರ್ಡ್ ಬಳಸುವ ಮೂಲಕ ಹೆಚ್ಚಿಸಬಹುದು. Nokia C12 ಫೋನ್ 4000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ ಮತ್ತು 10W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

Nokia C12 ಎರಡು ವರ್ಷಗಳ ನಿಯಮಿತ ಭದ್ರತಾ ಪ್ಯಾಚ್‌ಗಳನ್ನು ನೀಡುತ್ತದೆ ಮತ್ತು Android 12 Go ಆವೃತ್ತಿ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ ಜೊತೆಗೆ 12 ತಿಂಗಳ ಬದಲಿ ಗ್ಯಾರಂಟಿಯೊಂದಿಗೆ ಈ ಸ್ಮಾರ್ಟ್‌ಫೋನ್‌ ಬರುತ್ತದೆ. ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್‌ಗಳು ಮತ್ತು LED ಫ್ಲ್ಯಾಷ್‌ನೊಂದಿಗೆ 8MP ಸಿಂಗಲ್-ಲೆನ್ಸ್ ಬ್ಯಾಕ್ ಕ್ಯಾಮೆರಾವನ್ನು ಎಂಟ್ರಿ-ಲೆವೆಲ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನೊಂದಿಗೆ ಸೇರಿಸಲಾಗಿದೆ. ಮುಂಭಾಗದಲ್ಲಿ 5MP ಸೆಲ್ಫಿ ಕ್ಯಾಮೆರಾವಿದೆ. ಹೆಚ್ಚುವರಿಯಾಗಿ ಸ್ಮಾರ್ಟ್ಫೋನ್ IP52 ರೇಟಿಂಗ್ನೊಂದಿಗೆ ಸ್ಪ್ಲಾಶ್ ಮತ್ತು ಧೂಳು-ನಿರೋಧಕವಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo