Moto Razr 60 Ultra 5G ಫ್ಲಿಪ್ ಸ್ಮಾರ್ಟ್‌ಫೋನ್‌ ಬಿಡುಗಡೆ! ಇದರ ಬೆಲೆ, ಫೀಚರ್, ವಿಶೇಷತೆ ಮತ್ತು ಸೇಲ್ ಮಾಹಿತಿ ಇಲ್ಲಿದೆ!

HIGHLIGHTS

ಭಾರತದಲ್ಲಿ Moto Razr 60 Ultra 5G ಸ್ಮಾರ್ಟ್ಫೋನ್ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

Moto Razr 60 Ultra 5G ಸ್ಮಾರ್ಟ್ಫೋನ್ 165Hz ರಿಫ್ರೆಶ್ ರೇಟ್‌ನೊಂದಿಗೆ 50MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

Moto Razr 60 Ultra 5G ಸ್ಮಾರ್ಟ್ಫೋನ್ 16GB RAM ಮತ್ತು 512GB ಸ್ಟೋರೇಜ್ 89,999 ರೂಗಳಿಗೆ ಪರಿಚಯಿಸಿದೆ.

Moto Razr 60 Ultra 5G ಫ್ಲಿಪ್ ಸ್ಮಾರ್ಟ್‌ಫೋನ್‌ ಬಿಡುಗಡೆ! ಇದರ ಬೆಲೆ, ಫೀಚರ್, ವಿಶೇಷತೆ ಮತ್ತು ಸೇಲ್ ಮಾಹಿತಿ ಇಲ್ಲಿದೆ!

Moto Razr 60 Ultra 5G has launched in India: ಅಮೇರಿಕದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಮೊಟೊರೊಲಾ (Motorola) ತನ್ನ ಲೇಟೆಸ್ಟ್ ಮತ್ತು ಪ್ರೀಮಿಯಂ Moto Razr 60 Ultra 5G ಫ್ಲಿಪ್ ಸ್ಮಾರ್ಟ್‌ಫೋನ್‌ ಭಾರತ ಸೇರಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದು ವರ್ಷದ ಮೊದಲ ಫ್ಲಿಪ್ ಫೋನ್ ಆಗಿದ್ದು ಈ ಫೋನ್ ಈಗಾಗಲೇ 2024 ರಲ್ಲಿ ಬಿಡುಗಡೆಯಾದ ಹಳೆಯ Moto Razr 50 Ultra 5G ಉತ್ತರಾಧಿಕಾರಿಯಾಗಿದೆ. ಸ್ಮಾರ್ಟ್‌ಫೋನ್‌ ಫ್ಲಿಪ್ ವಿಶೇಷತೆಯನ್ನು ನೋಡುವುದಾದರೆ 165Hz ರಿಫ್ರೆಶ್ ರೇಟ್‌ನೊಂದಿಗೆ 50MP ಸೆಲ್ಫಿ ಕ್ಯಾಮೆರಾದೊಂದಿಗೆ ಆರಂಭಿಕ 16GB RAM ಮತ್ತು 512GB ಸ್ಟೋರೇಜ್ ಪರಿಚಯಿಸಿದೆ.

Moto Razr 60 Ultra 5G ಫೀಚರ್ ಮತ್ತು ವೈಶಿಷ್ಟಗಳೇನು?

Moto Razr 60 Ultra 5G ಫ್ಲಿಪ್ ಸ್ಮಾರ್ಟ್‌ಫೋನ್‌ 4 ಇಂಚಿನ LTPO ಫ್ಲೆಕ್ಸಿಬಲ್ pOLED ಡಿಸ್ಪ್ಲೇಯೊಂದಿಗೆ 165Hz ವರೆಗೆ ರಿಫ್ರೆಶ್ ದರ ಮತ್ತು 3,000 nits ಗರಿಷ್ಠ ಹೊಳಪಿನೊಂದಿಗೆ ಬಿಡುಗಡೆ ಮಾಡಲಾಗಿದೆ. ಅದನ್ನು ಮೀರಿ ಫೋನ್ ಸಂರಕ್ಷಿತ ಗೊರಿಲ್ಲಾ ಗ್ಲಾಸ್ ಸೆರಾಮಿಕ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. Moto Razr 60 Ultra 5G ಫ್ಲಿಪ್ ಸ್ಮಾರ್ಟ್‌ಫೋನ್‌ 165Hz ರಿಫ್ರೆಶ್ ದರ ಮತ್ತು 4,500 ನಿಟ್ಸ್ ಗರಿಷ್ಠ ಹೊಳಪಿನೊಂದಿಗೆ 6.96 ಇಂಚಿನ LTPO AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ. ಅದನ್ನು ಮೀರಿ ಫೋನ್ ಡಾಲ್ಬಿ ವಿಷನ್ ಅನ್ನು ಸಹ ಹೊಂದಿರುತ್ತದೆ.

Moto Razr 60 Ultra 5G ಫ್ಲಿಪ್ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 15 ಔಟ್ ಆಫ್ ದಿ ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಮೋಟೋ ರೇಜರ್ 60 ಅಲ್ಟ್ರಾ IOS ನೊಂದಿಗೆ 50Mp ಮುಖ್ಯ ಕ್ಯಾಮೆರಾವನ್ನು ಹೊಂದಿರುತ್ತದೆ. ಜೊತೆಗೆ ಮ್ಯಾಕ್ರೋ ಆಗಿ ಕಾರ್ಯನಿರ್ವಹಿಸುವ 5Mp ಅಲ್ಟ್ರಾವೈಡ್ ಲೆನ್ಸ್ ಜೊತೆಗೆ ಇದು 50Mp ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. 

ಇದನ್ನೂ ಓದಿ: ಬರೋಬ್ಬರಿ 50 ಇಂಚಿನ ಲೇಟೆಸ್ಟ್ QLED Google Smart TV ಅಮೆಜಾನ್‌ನಲ್ಲಿ ₹25,000 ರೂಗಳೊಳಗೆ ಮಾರಾಟ!

Moto Razr 60 Ultra 5G ಫ್ಲಿಪ್ ಸ್ಮಾರ್ಟ್‌ಫೋನ್‌ IP68 ವಾಟರ್ ಮತ್ತು ಡಸ್ಟ್ ಪ್ರೂಫ್ ಹೊಂದಿದೆ. ಈ ಫ್ಲಿಪ್ ಫೋನ್‌ಗಳೊಂದಿಗೆ ಸಾಮಾನ್ಯವಾಗಿ ಕಷ್ಟಕರವಾದ ಕೆಲಸವಾಗಿದೆ. Moto Razr 60 Ultra 5G ಫ್ಲಿಪ್ ಸ್ಮಾರ್ಟ್‌ಫೋನ್‌ 4700 mAh ಬ್ಯಾಟರಿಯನ್ನು ಹೊಂದಿದ್ದು ಬಾಕ್ಸ್ ಒಳಗೆ 68W ಚಾರ್ಜರ್ ಅನ್ನು ಹೊಂದಿದೆ. ಇದಲ್ಲದೆ ಫೋನ್ 30W ವೈರ್‌ಲೆಸ್ ಚಾರ್ಜಿಂಗ್ ಜೊತೆಗೆ 5W ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

Moto Razr 60 Ultra 5G ಸ್ಮಾರ್ಟ್‌ಫೋನ್‌ ಆಫರ್ ಬೆಲೆ ಎಷ್ಟು?

Moto Razr 60 Ultra 5G ಫ್ಲಿಪ್ ಸ್ಮಾರ್ಟ್‌ಫೋನ್‌ ಪ್ಯಾಂಟೋನ್ ಪ್ರಮಾಣೀಕೃತ ಶೇಡ್‌ಗಳಾದ ಸ್ಕಾರಬ್, ಮೌಂಟೇನ್ ಟ್ರೈಲ್ ಮತ್ತು ರಿಯೊ ರೆಡ್‌ನಲ್ಲಿ ಲಭ್ಯವಿರುತ್ತದೆ. ಮೋಟೋ ರೇಜರ್ 60 ಅಲ್ಟ್ರಾ ಸ್ಮಾರ್ಟ್ ಫೋನ್ ಪ್ರಸ್ತುತ ಒಂದೇ ಒಂದು ಮಾದರಿಯಲ್ಲಿ ಲಭ್ಯವಿದ್ದು 16GB RAM ಮತ್ತು 512GB ಸ್ಟೋರೇಜ್ 89,999 ರೂಗಳಿಗೆ ಪರಿಚಯವಾಗಿದೆ. ಅಲ್ಲದೆ ಈ ಫೋನ್ ಅನ್ನು ಅಮೆಜಾನ್, ರಿಲಯನ್ಸ್ ಡಿಜಿಟಲ್ ಮತ್ತು ಇತರ ಚಿಲ್ಲರೆ ಅಂಗಡಿಗಳಲ್ಲಿ ಇದೆ 21ನೇ ಮೇ 2025 ರಿಂದ ಮಾರಾಟಕ್ಕೆ ಲಭ್ಯವಿರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo