Lava Blaze Duo 3 5G Launched: ಭಾರತದ ಸ್ವದೇಶಿ ಬ್ರ್ಯಾಂಡ್ ಆಗಿರುವ ಲಾವಾ ತನ್ನ ಹೊಸ ಸ್ಮಾರ್ಟ್‌ಫೋನ್ ಲಾವಾ ಬ್ಲೇಜ್ ಡುಯೊ 3 5G ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಫೀಚರ್‌ಗಳನ್ನು ನೀಡುವ ಮೂಲಕ ಈ ಫೋನ್ ಮೊಬೈಲ್ ಮೊಬೈಲ್ ಇಂಟರ್ನೆಟ್ ಸಂಚಲನ ಮೂಡಿಸಿದೆ. ವಿಶೇಷವಾಗಿ ಈ ಬೆಲೆಯ ಆಸುಪಾಸಿನಲ್ಲಿ ಡ್ಯುಯಲ್ ಡಿಸ್ಪ್ಲೇ ಅಂದರೆ ಎರಡು ಪರದೆಯ ಮೊದಲ ಫೋನ್ ಇದೆ.
ಈ ಫೋನಿನ ಪ್ರಮುಖ ಆಕರ್ಷಣೆ ಇದರ ಡ್ಯುಯಲ್ ಅಮೋಲೆಡ್ (ಡ್ಯುಯಲ್ AMOLED) ಡಿಸ್ಪ್ಲೇ ಸೆಟಪ್. ಇದರ ಮುಖ್ಯ ಪರದೆ 6.67-ಇಂಚಿನ FHD+ AMOLED ಆಗಿದ್ದು 120Hz ರಿಫ್ರೆಶ್ ರೇಟ್ ಹೊಂದಿದೆ. ಈ ವಿಡಿಯೋ ನೋಡುವುದು ಮತ್ತು ಆಟ ಆಡುವುದು ತುಂಬಾ ಸ್ಮೂತ್ ಆಗಿರುತ್ತದೆ. ಇದರ ಜೊತೆಗೆ ಫೋನಿನ ಹಿಂಭಾಗದಲ್ಲಿ ಕ್ಯಾಮೆರಾ ಪಕ್ಕದಲ್ಲಿ ಒಂದು ಪುಟ್ಟ 1.6 ಇಂಚಿನ ಸೆಕೆಂಡರಿ ಡಿಸ್‌ಪ್ಲೇ ನೀಡಲಾಗುತ್ತದೆ. ಈ ಸಣ್ಣ ಪರದೆಯ ಮೂಲಕ ನೀವು ನೋಟಿಫಿಕೇಶನ್‌ಗಳನ್ನು ನೋಡಬಹುದು ಮತ್ತು ಮ್ಯೂಸಿಕ್ ನಿಯಂತ್ರಣ ಮಾಡಬಹುದು. ಈ ಹಿಂಬದಿಯ ಡಿಸ್ಪ್ಲೇಯನ್ನು ವ್ಯೂಫೈಂಡರ್ ಆಗಿ ಬಳಸಿ ಫೋನಿನ 50MP Sony IMX752 ಮುಖ್ಯ ಕ್ಯಾಮೆರಾದಿಂದಲೇ ಅತ್ಯುತ್ತಮ ಗುಣಮಟ್ಟದ ಸೆಲ್ಫಿಗಳು ತೆಗೆದುಕೊಳ್ಳುತ್ತದೆ. ಈ ವಿಡಿಯೋ ಕಾಲ್‌ಗಳಿಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ಕೂಡ ಇದೆ.
Lava Blaze Duo 3 5G ಹಾರ್ಡ್‌ವೇರ್ ಮತ್ತು ಬ್ಯಾಟರಿ
ಈ ಸ್ಮಾರ್ಟ್ಫೋನ್ ಪರ್ಫಾರ್ಮೆನ್ಸ್ ಬಗ್ಗೆ ಹೇಳುವುದಾದರೆ ಮೀಡಿಯಾ ಟೆಕ್ ಡೈಮೆನ್ಸಿಟಿ 7060 ಪ್ರೊಸೆಸರ್ ಅನ್ನು ಬಳಸಲಾಗಿದೆ. ಇದು 5G ನೆಟ್‌ವರ್ಕ್‌ನಲ್ಲಿ ವೇಗವಾಗಿ ಕೆಲಸ ಮಾಡುತ್ತದೆ. ಇದರಲ್ಲಿ 6GB RAM (ಇನ್ನೊಂದು 6GB ವರ್ಚುವಲ್ RAM ಸೇರಿಸುವ ಅವಕಾಶವಿದೆ) ಮತ್ತು 128GB ಇಂಟರ್ನಲ್ ಸ್ಟೋರೇಜ್ ನೀಡಲಾಗುತ್ತದೆ. ಸಾಫ್ಟ್ವೇರ್ ವಿಷಯದಲ್ಲಿ ಲಾವಾ ವಿಶೇಷ ಗಮನ ಹರಿಸಿದ್ದು ಯಾವುದೇ ಅನಗತ್ಯ ಆಪ್ಗಳಿಲ್ಲದ (Bloatware-free) ಪ್ಯೂರ್ Android 15 ಅನ್ನು ನೀಡಲಾಗಿದೆ. ಇನ್ನು ಪವರ್ ಫುಲ್ ಆಗಿರಲು 5,000mAh ಬ್ಯಾಟರಿ ಇದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ. ಫೋನಿನ ಸುರಕ್ಷತೆಗಾಗಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಕೂಡ ಇದೆ.
Lava Blaze Duo 3 5G ಬೆಲೆ ಮತ್ತು ಲಭ್ಯತೆ
ಬೆಲೆಯ ವಿಷಯದಲ್ಲಿ ಲಾವಾ ಮಧ್ಯಮ ವರ್ಗದ ಗ್ರಾಹಕರು ಸಿಹಿಸುದ್ದಿ ನೀಡಿದ್ದಾರೆ. ಈ Lava Blaze Duo 3 ಫೋನಿನ ಬೆಲೆ ಕೇವಲ ₹16,999 ಆಗಿದೆ. ಇದು ಮೂನ್‌ಲೈಟ್ ಬ್ಲಾಕ್ ಮತ್ತು ಇಂಪೀರಿಯಲ್ ಗೋಲ್ಡ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಇಂದಿನಿಂದಲೇ ಅಂದರೆ 19ನೇ ಜನವರಿ 2026 ನೀವು ಇದನ್ನು Amazon India, ಲಾವಾ ಅಧಿಕೃತ ವೆಬ್‌ಸೈಟ್ ಮತ್ತು ನಿಮ್ಮ ಹತ್ತಿರದ ಮೊಬೈಲ್ ಅಂಗಡಿಗಳಲ್ಲಿ ಖರೀದಿಸಬಹುದು. ಆರಂಭಿಕ ಕೊಡುಗೆಯಾಗಿ ಬ್ಯಾಂಕ್ ಕಾರ್ಡ್‌ಗಳ ಮೇಲೆ ಹೆಚ್ಚಿನ ಡಿಸ್ಕೌಂಟ್ ಕೂಡ ಸಿಗುವ ಸಾಧ್ಯತೆಯಿದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile