BSNL Spark Plan: ಬರೋಬ್ಬರಿ 3300GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು ಕೇವಲ 399 ರೂಗಳಿಗೆ ಲಭ್ಯ!

HIGHLIGHTS

ಗ್ರಾಹಕರು ಕೇವಲ ₹399 ಮಾಸಿಕ ದರದಲ್ಲಿ 50Mbps ವೇಗದೊಂದಿಗೆ ಬರೋಬ್ಬರಿ 3,300GB ಆನಂದಿಸಬಹುದು.

ಈ ವಿಶೇಷ ರಿಯಾಯಿತಿ ದರವು ಮೊದಲ ಹನ್ನೆರಡು ತಿಂಗಳು ಇರಲಿದೆ ನಂತರ ₹449 ಸಾಮಾನ್ಯ ದರಕ್ಕೆ ಬದಲಾಗುತ್ತದೆ.

ಈ ಯೋಜನೆ ಭಾರತದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಬೇಕಾದರೂ ಉಚಿತವಾಗಿ ಅನ್‌ಲಿಮಿಟೆಡ್ ಕರೆ ಮಾಡುವ ಸೌಲಭ್ಯವನ್ನು ನೀಡುತ್ತದೆ.

BSNL Spark Plan: ಬರೋಬ್ಬರಿ 3300GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು ಕೇವಲ 399 ರೂಗಳಿಗೆ ಲಭ್ಯ!

ಬಿಎಸ್ಎನ್ಎಲ್ (BSNL) ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಲಾಭ ನೀಡುವ ಸ್ಪಾರ್ಕ್ ಫೈಬರ್ (BSNL Spark Plan) ಎಂಬ ವಿಶೇಷ ಬ್ರಾಡ್ಬ್ಯಾಂಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆ ತಿಂಗಳ ಬಾಡಿಗೆ ಕೇವಲ ₹399 ಆಗಿದ್ದು, ಇದು ಹೊಸದಾಗಿ ಇಂಟರ್ನೆಟ್ ಸಂಪರ್ಕ ಪಡೆಯುವವರಿಗೆ ತುಂಬಾ ಅನುಕೂಲಕರವಾಗಿದೆ. ಈ ಪ್ಲಾನ್‌ನಲ್ಲಿ ನಿಮಗೆ ತಿಂಗಳಿಗೆ 3,300GB ವರೆಗೆ ಅತಿ ವೇಗದ ಇಂಟರ್ನೆಟ್ ಡೇಟಾ ಸಿಗುತ್ತದೆ. ಇಂಟರ್ನೆಟ್ ವೇಗವು ಪ್ರತಿ ಸೆಕೆಂಡಿಗೆ 50Mbps ವರೆಗೆ ಇರುತ್ತದೆ. ಒಂದು ವೇಳೆ ನೀವು ತಿಂಗಳ ಮಿತಿಯಾದ 3,300GB ಖಾಲಿ ಮಾಡಿದರೆ ಇಂಟರ್ನೆಟ್ ಸಂಪೂರ್ಣವಾಗಿ ನಿಲ್ಲುವುದಿಲ್ಲ ಬದಲಾಗಿ ವೇಗವು 4Mbps ಸೇರಿವೆ. ಇದರ ಜೊತೆಗೆ ಯಾವುದೇ ನೆಟ್‌ವರ್ಕ್‌ಗೆ ಉಚಿತವಾಗಿ ಎಷ್ಟು ಬೇಕಾದರೂ ಅನ್ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ (STD) ಕರೆಗಳನ್ನು ಮಾಡಬಹುದು.

Digit.in Survey
✅ Thank you for completing the survey!

Also Read: Laptops Deals: ಅಮೆಜಾನ್ ಮಾರಾಟದಲ್ಲಿ ಈ ಅತ್ಯುತ್ತಮ ಲ್ಯಾಪ್ಟಾಪ್ಗಳ ಮೇಲೆ ಭರ್ಜರಿ ಡೀಲ್ ಮತ್ತು ಡಿಸ್ಕೌಂಟ್ಗಳು!

BSNL Spark Plan ಯೋಜನೆಯ ಬೆಲೆ ಮತ್ತು ಪ್ರಯೋಜನಗಳೇನು?

ತನ್ನ ಹೊಸ ಸ್ಪಾರ್ಕ್ ಯೋಜನೆಯಡಿಯಲ್ಲಿ ಬಿಎಸ್ಎನ್ಎಲ್ ತನ್ನ ಫೈಬರ್ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಮಾಸಿಕ 399 ರೂ.ಗಳಿಗೆ 50Mbps ವೇಗದಲ್ಲಿ 3,300GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತಿದೆ. ಹೆಚ್ಚಿನ ವೇಗದ ಇಂಟರ್ನೆಟ್ ಜೊತೆಗೆ ಗ್ರಾಹಕರು ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಸಹ ಪಡೆಯುತ್ತಾರೆ. ಇದರರ್ಥ 400 ರೂ.ಗಿಂತ ಕಡಿಮೆ ಬೆಲೆಗೆ BSNL ಗ್ರಾಹಕರು ಪ್ರತಿ ತಿಂಗಳು 3300 GB ಯ ಬೃಹತ್ ಡೇಟಾವನ್ನು ಪಡೆಯಲಿದ್ದಾರೆ. ಸ್ಪಾರ್ಕ್ ಯೋಜನೆಯಡಿಯಲ್ಲಿ ಈ ಕೊಡುಗೆ ಮೊದಲ 12 ತಿಂಗಳುಗಳಿಗೆ ಮಾತ್ರ ಮಾನ್ಯವಾಗಿರುತ್ತದೆ.

BSNL Spark Plan

ಇದು 13ನೇ ತಿಂಗಳಿನಿಂದ ಅಂದರೆ ಯೋಜನೆಯನ್ನು ಖರೀದಿಸಿದ ಒಂದು ವರ್ಷದ ನಂತರ ಬಳಕೆದಾರರು ಅದೇ ಯೋಜನೆಗೆ ತಿಂಗಳಿಗೆ 449 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. ಆದಾಗ್ಯೂ ಈ ಯೋಜನೆಯು ಯಾವುದೇ OTT ಚಂದಾದಾರಿಕೆಯನ್ನು ಒಳಗೊಂಡಿಲ್ಲ ಮತ್ತು ಮೂಲಭೂತ ಮನೆಯ ಅಗತ್ಯಗಳಿಗೆ ಅಥವಾ ಮನೆಯಿಂದ ಕೆಲಸ ಮಾಡುವವರಿಗೆ ಸೂಕ್ತ ಯೋಜನೆಯಾಗಿದೆ. ಅನಿಯಮಿತ ಕರೆಗಳ ಜೊತೆಗೆ ಹೆಚ್ಚಿನ ವೇಗದ ಡೇಟಾದ ಪ್ರಯೋಜನವನ್ನು ನೀಡುವ ಈ ಯೋಜನೆಯು ಸಾಮಾನ್ಯ ಬಳಕೆಗೆ ಸಾಕಷ್ಟು ಉತ್ತಮವಾಗಿರುತ್ತದೆ.

ಬಿಎಸ್ಎನ್ಎಲ್ ಸ್ಪಾರ್ಕ್ ಪ್ಲಾನ್ ಆಫರ್ ಪಡೆಯಲು ಏನು ಮಾಡಬೇಕು?

ಬಿಎಸ್ಎನ್ಎಲ್ ಫೈಬರ್ ಕೊಡುಗೆಯನ್ನು ಪಡೆಯಲು ಆಸಕ್ತಿ ಹೊಂದಿರುವ ಗ್ರಾಹಕರು ಬಿಎಸ್ಎನ್ಎಲ್ನ ಅಧಿಕೃತ ವಾಟ್ಸಾಪ್ ಸಂಖ್ಯೆ 1800 4444 ಗೆ ‘HI’ ಎಂದು ಬರೆಯುವ ಮೂಲಕ ಸಂದೇಶವನ್ನು ಕಳುಹಿಸುವ ಮೂಲಕ ಯೋಜನೆಯನ್ನು ಸಕ್ರಿಯಗೊಳಿಸಬಹುದು. ಈ ₹399 ರ ರಿಯಾಯಿತಿ ದರವು ಮೊದಲ 12 ತಿಂಗಳವರೆಗೆ ಮಾತ್ರ ಇರುತ್ತದೆ, ನಂತರ ಇದು ಸಾಮಾನ್ಯ ‘ಫೈಬರ್ ಬೇಸಿಕ್’ (₹449) ಯೋಜನೆಗೆ ಬದಲಾಗುತ್ತದೆ.

5000GB ಡೇಟಾದೊಂದಿಗೆ BSNL ನ ಸೂಪರ್‌ಸ್ಟಾರ್ ಪ್ರೀಮಿಯಂ ಯೋಜನೆ:

ಬಿಎಸ್ಎನ್ಎಲ್ ತನ್ನ ಸೂಪರ್ ಸ್ಟಾರ್ ಪ್ರೀಮಿಯಂ ವೈಫೈ ಪ್ಲಾನ್ ನ ಬೆಲೆಯನ್ನು ಕಡಿಮೆ ಮಾಡಿದ್ದು ಕಂಪನಿಯು ಅದರ ಮೇಲೆ 20% ರಿಯಾಯಿತಿಯನ್ನು ನೀಡುತ್ತಿದೆ. ಈ ಹಬ್ಬದ ಋತುವಿನಲ್ಲಿ ನೀವು ಬಿಎಸ್ಎನ್ಎಲ್ ನ ರೂ. 999 ಬ್ರಾಡ್ ಬ್ಯಾಂಡ್ ಪ್ಲಾನ್ ಅನ್ನು ಕೇವಲ ರೂ. 799 ಗೆ ಪಡೆಯುತ್ತೀರಿ ಮತ್ತು ಈ ವಿಶೇಷ ಕೊಡುಗೆಯ ಮೂಲಕ ಈ ಪ್ಲಾನ್ 12 ತಿಂಗಳು ಅಂದರೆ ಒಂದು ವರ್ಷಕ್ಕೆ ಮಾನ್ಯವಾಗಿರುತ್ತದೆ. ಸೂಪರ್ ಸ್ಟಾರ್ ಪ್ರೀಮಿಯಂ ವೈ-ಫೈ ಪ್ಲಾನ್ ಗೆ ಅಪ್ ಗ್ರೇಡ್ ಆಗಲು 12 ತಿಂಗಳ ಮುಂಗಡ ಪಾವತಿಯನ್ನು ಮಾಡಬೇಕಾಗುತ್ತದೆ ಮತ್ತು ಈ ಮಾಸಿಕ ವೈ-ಫೈ ಪ್ಲಾನ್ ಅನ್ನು ರೂ. 799 ಗೆ ಪಡೆಯಬಹುದು. ಇದು ಪ್ರತಿ ತಿಂಗಳು 5000 ಜಿಬಿ ಡೇಟಾವನ್ನು ಒದಗಿಸುತ್ತದೆ ಮತ್ತು ಇದರ ವೇಗ 200 Mbps ಆಗಿರುತ್ತದೆ ಅಂದರೆ ಅತಿ ವೇಗದ ಇಂಟರ್ನೆಟ್ ಆಗಿರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo