Lava Blaze AMOLED 2 5G ಸ್ಮಾರ್ಟ್ಫೋನ್ ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು ತಿಳಿಯಿರಿ!

HIGHLIGHTS

Lava Blaze AMOLED 2 5G ಸ್ಮಾರ್ಟ್‌ಫೋನ್‌ ಇಂದು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

Lava Blaze AMOLED 2 5G ಫೋನ್‌ ಫೆದರ್ ವೈಟ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಬಣ್ಣಗಳಲ್ಲಿ ಪರಿಚಾಯಿಸಿದೆ.

Lava Blaze AMOLED 2 5G ಫೋನ್‌ನ 6GB RAM ಮತ್ತು 128GB ಸ್ಟೋರೇಜ್ 13,499 ರೂಗಳಿಗೆ ಪಟ್ಟಿಯಾಗಿದೆ.

Lava Blaze AMOLED 2 5G ಸ್ಮಾರ್ಟ್ಫೋನ್ ಬಿಡುಗಡೆ! ಬೆಲೆ ಮತ್ತು ಟಾಪ್ ಫೀಚರ್ಗಳೇನು ತಿಳಿಯಿರಿ!

ಭಾರತದ ಸ್ವದೇಶಿ ಲಾವಾ ಸ್ಮಾರ್ಟ್ಫೋನ್ ಬ್ರಾಂಡ್ ಇಂದು ಸದ್ದಿಲ್ಲದೇ ತನ್ನ ಹೊಚ್ಚ ಹೊಸ Lava Blaze AMOLED 2 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಲಾವಾ ಕಂಪನಿಯು ಭಾರತದಲ್ಲಿ ತನ್ನ 5G ಮೊಬೈಲ್ ಫೋನ್ ಸರಣಿಯನ್ನು ವಿಸ್ತರಿಸಿದ್ದು ಈ ಸ್ಮಾರ್ಟ್ಫೋನ್ ಫೆದರ್ ವೈಟ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಪರಿಚಾಯಿಸಿದೆ. ಈ ಸ್ಮಾರ್ಟ್ಫೋನ್ ನಿಮಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 7060 ಪ್ರೊಸೆಸರ್, ಅತ್ಯುತ್ತಮ AMOLED ಡಿಸ್ಪ್ಲೇ, 50MP ಬ್ಯಾಕ್ ಕ್ಯಾಮೆರಾ ಮತ್ತು 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಇದರ ಆಫರ್ ಬೆಲೆ ಮತ್ತು ಫೀಚರ್ಗಳೊಂದಿಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂತ ಹಂತವಾಗಿ ಪರಿಶೀಲಿಸಬಹುದು.

Digit.in Survey
✅ Thank you for completing the survey!

Lava Blaze AMOLED 2 5G ಬೆಲೆ ಮತ್ತು ಲಭ್ಯತೆ

ಲಾವಾ ಬ್ಲೇಜ್ AMOLED 2 5G ಸ್ಮಾರ್ಟ್‌ಫೋನ್‌ ಕೇವಲ ಒಂದೇ ಒಂದು ಮಾದರಿಯಲ್ಲಿ ಪರಿಚಾಯಿಸಲಾಗಿದ್ದು ಇದರ ಬೆಲೆ 6GB RAM ಮತ್ತು 128GB ಸ್ಟೋರೇಜ್ ಕಾನ್ಫಿಗರೇಶನ್‌ಗೆ 13,499 ರೂಗಳಾಗಿವೆ. ಈ ಸ್ಮಾರ್ಟ್ಫೋನ್ ಮೊದಲ ಮಾರಾಟವನ್ನು 16ನೇ ಆಗಸ್ಟ್ 2025 ರಂದು ಅಮೆಜಾನ್ ಮೂಲಕ ಮಾರಾಟ ಪ್ರಾರಂಭವಾಗಲಿದೆ. ಅಲ್ಲದೆ ಹೆಚ್ಚುವರಿಯಾಗಿ ಈ ಲಾವಾ ಮಾದರಿಯ ಮನೆ ಬಾಗಿಲಿನ ಮಾರಾಟದ ನಂತರದ ಸೇವೆಯನ್ನು ಘೋಷಿಸಿದ್ದು ಖರೀದಿಯ ನಂತರ ಗ್ರಾಹಕರಿಗೆ ನೇರ ಬೆಂಬಲವನ್ನು ನೀಡುತ್ತದೆ.

Also Read: Dolby Digital Soundbar ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಅದ್ದೂರಿಯ ಡಿಸ್ಕೌಂಟ್‌ಗಳೊಂದಿಗೆ ಲಭ್ಯ!

ಲಾವಾ Blaze AMOLED 2 5G ವಿಶೇಷಣಗಳು ಮತ್ತು ಫೀಚರ್ಗಳೇನು?

ಲಾವಾ ಬ್ಲೇಜ್ AMOLED 2 5G 120Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ ಪೂರ್ಣ HD+ AMOLED ಡಿಸ್ಪ್ಲೇಯನ್ನು ಹೊಂದಿದೆ. ಮತ್ತು ಮುಂಭಾಗದ ಕ್ಯಾಮೆರಾಕ್ಕಾಗಿ ಹೋಲ್-ಪಂಚ್ ಕಟೌಟ್ ಅನ್ನು ಹೊಂದಿದೆ. ಸ್ಮಾರ್ಟ್ ಫೋನ್ ಸೋನಿ IMX752 ಸೆನ್ಸರ್ ಅನ್ನು ಬಳಸಿಕೊಂಡು 50MP AI ಪ್ರೈಮರಿ ಬ್ಯಾಕ್ ಕ್ಯಾಮೆರಾದೊಂದಿಗೆ ಬರುತ್ತದೆ. ಜೊತೆಗೆ LED ಫ್ಲ್ಯಾಷ್ ಅನ್ನು ಹೊಂದಿದೆ. ಮುಂಭಾಗದ ಕ್ಯಾಮೆರಾವು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8MP ಸಂವೇದಕವನ್ನು ಹೊಂದಿದೆ.

Lava Blaze AMOLED 2 5G

ಈ ಲಾವಾ ಬ್ಲೇಜ್ AMOLED 2 5G ಮೀಡಿಯಾ ಟೆಕ್ ಡೈಮೆನ್ಸಿಟಿ 7060 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು 6GB LPDDR5 RAM ಮತ್ತು 128GB UFS 3.1 ಇಂಟರ್ನಲ್ ಸ್ಟೋರೇಜ್ ಜೋಡಿಸಲ್ಪಟ್ಟಿದೆ. ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 15 ಔಟ್ ಆಫ್ ದಿ ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಒಂದು ಪ್ರಮುಖ ಆಂಡ್ರಾಯ್ಡ್ ಆವೃತ್ತಿಯ ನವೀಕರಣವನ್ನು ಸ್ವೀಕರಿಸುತ್ತದೆ. ಇದು ಎರಡು ವರ್ಷಗಳ ಭದ್ರತಾ ಪ್ಯಾಚ್‌ಗಳೊಂದಿಗೆ ಆಂಡ್ರಾಯ್ಡ್ 16 ಜೊತೆಗೆ ಬರುತ್ತದೆ.

ಇದಲ್ಲದೆ ಈ ಸ್ಮಾರ್ಟ್ಫೋನ್ ಬಯೋಮೆಟ್ರಿಕ್ ದೃಢೀಕರಣವನ್ನು ನಿರ್ವಹಿಸುವ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಬರುತ್ತದೆ. ಹೆಚ್ಚುವರಿಯಾಗಿ ಇದು ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು ಮತ್ತು ವಿಸ್ತೃತ ಬಳಕೆಯ ಸಮಯದಲ್ಲಿ ಶಾಖ ನಿರ್ವಹಣೆಗೆ ಸಹಾಯ ಮಾಡಲು ಮೀಸಲಾದ ಕೂಲಿಂಗ್ ಚೇಂಬರ್‌ನೊಂದಿಗೆ ಸಜ್ಜುಗೊಂಡಿದೆ. ಇದಲ್ಲದೆ ಸಾಧನವು 33W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo