iQOO Neo 10R ಸೂಪರ್ ಡಿಸೈನಿಂಗ್ ಮತ್ತು ಪವರ್ಫುಲ್ ಫೀಚರ್ಗಳೊಂದಿಗೆ ಬಿಡುಗಡೆಗೆ ಡೇಟ್ ಕಂಫಾರ್ಮ್!
iQOO ಗೇಮಿಂಗ್ ವಿಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಬಜೆಟ್ ಸ್ಮಾರ್ಟ್ಫೋನ್ ಬ್ರಾಂಡ್!
iQOO Neo 10R ಬಗ್ಗೆ ಅಮೆಜಾನ್ ಮೈಕ್ರೋಸೈಟ್ ಪೇಜ್ ಲೈವ್ ಆಗಿದ್ದು ಒಂದಿಷ್ಟು ಮಾಹಿತಿಗಳನ್ನು ನೀಡಿದೆ.
iQOO Neo 10R ಸೂಪರ್ ಡಿಸೈನಿಂಗ್ ಮತ್ತು ಪವರ್ಫುಲ್ ಫೀಚರ್ಗಳೊಂದಿಗೆ 11 ಫೆಬ್ರವರಿಗೆ ಬಿಡುಗಡೆಯಾಗಲು ಸಜ್ಜು!
iQOO Neo 10R Confirmed to launch in India: ಭಾರತದಲ್ಲಿ ಗೇಮಿಂಗ್ ವಿಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಬಜೆಟ್ ಸ್ಮಾರ್ಟ್ಫೋನ್ ಬ್ರಾಂಡ್ iQOO ತನ್ನ ಮುಂಬರಲಿರುವ ಹೊಸ iQOO Neo 10R ಸೂಪರ್ ಡಿಸೈನಿಂಗ್ ಮತ್ತು ಪವರ್ಫುಲ್ ಫೀಚರ್ಗಳೊಂದಿಗೆ ಇದೆ ತಿಂಗಳು ಬಿಡುಗಡೆಗೊಳಿಸಲು ಅಧಿಕೃತವಾಗಿ ಟ್ವಿಟ್ಟರ್ ಖಾತೆಯ ಮೂಲಕ ಘೋಷಿಸಿದೆ. iQOO ಇದರ ಬಗ್ಗೆ ಬಿಡುಗಡೆಗೂ Snapdragon 8 Elite ಸೇರಿ ಮುಂಚೆ ಅನೇಕ ಫೀಚರ್ಗಳ ಬಗ್ಗೆ ಮಾಹಿತಿ ನೀಡಿದ್ದು ಇದರ ಆಧಾರದ ಮೇರೆಗೆ ಸ್ಮಾರ್ಟ್ಫೋನ್ ಸುಮಾರು 25,000 ರೂಗಳೊಳಗೆ ಬರುವುದಾಗಿ ನಿರೀಕ್ಷಿಸಲಾಗಿದೆ.
iQOO Neo 10R ಲಾಂಚ್ ಇನ್ ಇಂಡಿಯಾ:
ಈ iQOO Neo 10R ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಅಮೆಜಾನ್ ವಿಶೇಷವಾಗಿದ್ದು ಪ್ರಸ್ತುತ ಎರಡು ಡ್ಯುಯಲ್ ಟೋನ್ ರೇಜಿಂಗ್ ಬ್ಲೂ ಮತ್ತು ಆರೆಂಜ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದ್ದು ಈಗಾಗಲೇ ಪೋಸ್ಟ್ ಮೂಲಕ ಹೇಳಿರುವಂತೆ ಈ ಹೊಸ iQOO Neo 10R ಸೂಪರ್ ಡಿಸೈನಿಂಗ್ ಮತ್ತು ಪವರ್ಫುಲ್ ಫೀಚರ್ಗಳೊಂದಿಗೆ ಇದೆ ತಿಂಗಳು 11ನೇ ಫೆಬ್ರವರಿ 2025 ರಂದು ಬಿಡುಗಡೆಗೊಳಿಸುವುದಾಗಿ ಕಂಪನಿ ಅಧಿಕೃತವಾಗಿ ಟ್ವಿಟ್ಟರ್ ಖಾತೆಯ ಮೂಲಕ ಘೋಷಿಸಿದೆ. ಇದನ್ನು ನೀವು ಐಕ್ಯೂ ಅಧಿಕೃತ ಯುಟ್ಯೂಬ್ ಚಾನಲ್ ಮತ್ತು ಅಮೆಜಾನ್ ಮೂಲಕ ಇದರ ಲೈವ್ ಸ್ಟ್ರೀಮ್ ಮತ್ತು ಹೆಚ್ಚುವರಿಯ ಮಾಹಿತಿಯನ್ನು ಪಡೆಯಬಹುದು.
Get ready for the ultimate revolution in performance and design with the #iQOONeo10R! ⚡
— iQOO India (@IqooInd) February 4, 2025
Launching on 11th March—mark your calendars! 🗓️
Available exclusively on on @amazonIN and https://t.co/bXttwlZo3N#AmazonSpecials #PowerToPlay #iQOONeo10R pic.twitter.com/7B0T2MVkUx
iQOO Neo 10R ನಿರೀಕ್ಷಿತ ಫೀಚರ್ಗಳು:
iQOO Neo 10R ಸ್ಮಾರ್ಟ್ಫೋನ್ 1.5K OLED TCL C8 ಡಿಸ್ಪ್ಲೇಯನ್ನು 144Hz ವರೆಗಿನ ರಿಫ್ರೆಶ್ ದರದೊಂದಿಗೆ ಹೊಂದಿಕೆಯಾಗುವ ನಿರೀಕ್ಷೆಯಿದೆ. iQOO Neo 10R ಸ್ಮಾರ್ಟ್ಫೋನ್ ಪ್ರೈಮರಿ 50MP ಮೆಗಾಪಿಕ್ಸೆಲ್ ಸೋನಿ LYT-600 ಪ್ರೈಮರಿ ಸೆನ್ಸರ್ ಮತ್ತೊಂದು 8MP ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಶೂಟರ್ ಹೊಂದ್ದಿದ್ದು ಇದರಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಡಿಸ್ಪ್ಲೇಯಲ್ಲಿ ನೀಡುವ ಸಾಧ್ಯತೆಗಳಿವೆ.
iQOO Neo 10R ಸ್ಮಾರ್ಟ್ಫೋನ್ 8GB RAM ಮತ್ತು 256GB ಸ್ಟೋರೇಜ್ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಬರುವ ನಿರೀಕ್ಷೆಗಳಿವೆ. ಈ iQOO Neo 10R ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8s Gen 3 ಪ್ರೊಸೆಸರ್ನಿಂದ LPDDR5x RAM ಮತ್ತು UFS 4.0 ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಚಾಲಿತವಾಗಿದೆ ಎಂದು ದೃಢಪಡಿಸಲಾಗಿದೆ. ಈ ಫೋನ್ 80W ವೈರ್ಡ್ PD ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ದೊಡ್ಡದಾದ 6400mAh ಬ್ಯಾಟರಿಯನ್ನು ಹೊಂದುವ ನಿರೀಕ್ಷೆಯಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile