108MP ಕ್ಯಾಮೆರಾ ಮತ್ತು 5000 mAh ಬ್ಯಾಟರಿಯ Infinix ಫೋನ್ ಇಂದಿನನಿಂದ ಮಾರಾಟ ಶುರು!

108MP ಕ್ಯಾಮೆರಾ ಮತ್ತು 5000 mAh ಬ್ಯಾಟರಿಯ Infinix ಫೋನ್ ಇಂದಿನನಿಂದ ಮಾರಾಟ ಶುರು!
HIGHLIGHTS

ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಇನ್ಫಿನಿಕ್ಸ್‌ (Infinix) ಕಂಪನಿ ಕಡಿಮೆ ಬೆಲೆಗೆ ಆಕರ್ಷಕ ಫೋನ್​ಗಳನ್ನು ಬಿಡುಗಡೆ

Infinix Note 12 Pro 5G 108MP ಮೆಗಾಫಿಕ್ಸೆಲ್​ನ ಆಕರ್ಷಕ ಕ್ಯಾಮೆರಾ ಲಭ್ಯ

Infinix Note 12 Pro 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ.

ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಇನ್ಫಿನಿಕ್ಸ್‌ (Infinix) ಕಂಪನಿ ಕಡಿಮೆ ಬೆಲೆಗೆ ಆಕರ್ಷಕ ಫೋನ್​ಗಳನ್ನು ಬಿಡುಗಡೆ ಮಾಡುವುದಕ್ಕಾಗಿ ಹೆಸರುವಾಸಿ. ಇದಕ್ಕಾಗಿಯೆ ಮಾರುಕಟ್ಟೆಯಲ್ಲಿ ಈ ಕಂಪನಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಇತ್ತೀಚೆಗಷ್ಟೆ ಇನ್ಫಿನಿಕ್ಸ್‌ ಮೊಬೈಲ್ ಕಂಪನಿ ಭಾರತದಲ್ಲಿ ಇನ್ಫಿನಿಕ್ಸ್‌ ನೋಟ್‌ 12 ಸರಣಿ (Infinix Note 12 series) ಅನಾವರಣಮಾಡಿತ್ತು. ಇದರಲ್ಲಿ ಇನ್ಫಿನಿಕ್ಸ್‌ ನೋಟ್‌ 12 ಮತ್ತು Infinix Note 12 Pro 5G ಸ್ಮಾರ್ಟ್‌ಫೋನ್​ಗಳಿದ್ದವು. ಇದೀಗ ಇನ್ಫಿನಿಕ್ಸ್‌ ನೋಟ್‌ 12 ಸರಣಿಯನ್ನು ಹೊಸ 5G ಅವತಾರದಲ್ಲಿ ಕಂಪನಿ ಬಿಡುಗಡೆ ಮಾಡಿದೆ. ಬರೋಬ್ಬರಿ 108MP ಮೆಗಾಫಿಕ್ಸೆಲ್​ನ ಆಕರ್ಷಕ ಕ್ಯಾಮೆರಾ, ಡಿಸ್‌ಪ್ಲೇ, ಭರ್ಜರಿ ಬ್ಯಾಟರಿ ಹಾಗೂ ಪ್ರೊಸೆಸರ್‌ ಒಳಗೊಂಡ ಈ ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಬೆಲೆಗೆ ಲಭ್ಯವಿರುವುದು ವಿಶೇಷ. 

Infinix Note 12 ಸರಣಿಯ ವಿಶೇಷಣಗಳು 

ಇನ್ಫಿನಿಕ್ಸ್‌ ನೋಟ್‌ 12 5G ಸ್ಮಾರ್ಟ್‌ಫೋನ್‌ 1080×2400 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 810 5G ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಬಲದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. 33W ಟೈಪ್-ಸಿ ಫಾಸ್ಟ್ ಚಾರ್ಜಿಂಗ್‌ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿ ಕೂಡ ಇದೆ.

ಇತ್ತ Infinix Note 12 Pro 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. 6nm ಮೀಡಿಯಾ ಟೆಕ್ ಡೈಮೆನ್ಸಿಟಿ 810 5G ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. Infinix Note 12 Pro 5G ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 108MP ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದು Quad LED ಫ್ಲ್ಯಾಷ್ ಒಳಗೊಂಡಿದೆ. ಇದಲ್ಲದೆ 16ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ ಡ್ಯುಯಲ್ LED ಫ್ಲ್ಯಾಷ್‌ ಹೊಂದಿದೆ. 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W ಟೈಪ್-ಸಿ ಫಾಸ್ಟ್ ಚಾರ್ಜರ್‌ ಬೆಂಬಲಿಸಲಿದೆ. ಒಂದು ಗಂಟೆ 30 ನಿಮಿಷಗಳ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳುತ್ತದೆ.

Infinix Note 12 ಸರಣಿಯ ಬೆಲೆ ಮತ್ತು ಆಫರ್ 

ಭಾರತದಲ್ಲಿ ಇನ್ಫಿನಿಕ್ಸ್‌ ನೋಟ್‌ 12 5G ಸ್ಮಾರ್ಟ್‌ಫೋನ್‌ ಬೆಲೆ 14,999 ರೂ. ಆಗಿದೆ. Infinix Note 12 Pro 5G ಸ್ಮಾರ್ಟ್‌ಫೋನ್‌ 17,999 ರೂ. ಬೆಲೆಯನ್ನು ಹೊಂದಿದೆ. ಈ ಎರಡೂ ಫೋನ್‌ಗಳು ಭಾರತದಲ್ಲಿ ಜುಲೈ 14 ರಿಂದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಾಗಲಿವೆ. ಪ್ರಿ ಬುಕ್ಕಿಂಗ್‌ ಮಾಡಿದರೆ 1,000 ರೂಪಾಯಿಗಳ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಅಲ್ಲದೆ ಆಕ್ಸಿಸ್‌ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಪಾವತಿ ಮಾಡುವ ಗ್ರಾಹಕರು 1,500 ರೂ. ಆಫರ್‌ ಪಡದುಕೊಳ್ಳಬಹುದಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo