Digital Ration Card ಅಂದ್ರೆ ಏನು? ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಇದರ ಪ್ರಯೋಜನಗಳೇನು ತಿಳಿಯಿರಿ

HIGHLIGHTS

ಡಿಜಿಟಲ್ ರೇಷನ್ ಕಾರ್ಡ್ ಈಗ ಸಾಮಾನ್ಯ ಪಡಿತರ ಚೀಟಿಗಿಂತ ಒಂದು ಹೆಜ್ಜೆ ಮುಂದೆ ನಿಲ್ಲುತ್ತದೆ.

ಇದು ಪ್ಲಾಸ್ಟಿಕ್ ಕಾರ್ಡ್ ಅಥವಾ ಕಾಗದದ ಪ್ರತಿಗಿಂತ ಭಿನ್ನವಾಗಿದ್ದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಡಬಹುದು.

ಇದರಲ್ಲಿ ಬಳಕೆದಾರರ ಮಾಹಿತಿಗಳನ್ನು QR ಕೋಡ್ ಮತ್ತು ಬಾರ್ ಕೋಡ್ ಜೊತೆಗೆ ಸೇರಿಸಲಾಗುತ್ತದೆ.

Digital Ration Card ಅಂದ್ರೆ ಏನು? ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಇದರ ಪ್ರಯೋಜನಗಳೇನು ತಿಳಿಯಿರಿ

ಭಾರತದಲ್ಲಿ ಹೆಚ್ಚು ಪ್ರಾಮುಖ್ಯತೆಗಳನ್ನು ಹೊಂದಿರುವ ಸರ್ಕಾರಿ ದಾಖಲೆಗಳಲ್ಲಿ ಒಂದಾಗಿರುವ ಈ ರೇಷನ್ ಕಾರ್ಡ್ ಈಗ ಸಾಮಾನ್ಯ ಪಡಿತರ ಚೀಟಿಗಿಂತ ಒಂದು ಹೆಜ್ಜೆ ಮುಂದೆ ನಿಲ್ಲುತ್ತದೆ. ಈ ಹೊಸ Digital Ration Card ಅನ್ನೋದು ಹೊಸ ಡಿಜಿಟಲ್ ರೂಪವಾಗಿದೆ. ಇದು ಪ್ಲಾಸ್ಟಿಕ್ ಕಾರ್ಡ್ ಅಥವಾ ಕಾಗದದ ಪ್ರತಿಗಿಂತ ಭಿನ್ನವಾಗಿದ್ದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸಂಗ್ರಹವಾಗುವ ಒಂದು ಎಲೆಕ್ಟ್ರಾನಿಕ್ ದಾಖಲೆಯಾಗಿದೆ. ಇದರಲ್ಲಿ ಬಳಕೆದಾರರ ಮಾಹಿತಿಗಳನ್ನು QR ಕೋಡ್ ಮತ್ತು ಬಾರ್ ಕೋಡ್ ಜೊತೆಗೆ ಸೇರಿಸಿದ್ದು ಅಡ್ವಾನ್ಸ್ ಮತ್ತು ಹೆಚ್ಚು ಸುರಕ್ಷಿತ ಫೀಚರ್ಗಳೊಂದಿಗೆ ಬರುತ್ತದೆ.

Digit.in Survey
✅ Thank you for completing the survey!

ಸಾಮಾನ್ಯ ರೇಷನ್ ಕಾರ್ಡ್ ಮತ್ತು ಡಿಜಿಟಲ್ ರೇಷನ್ ಕಾರ್ಡ್ ನಡುವಿನ ವ್ಯತ್ಯಾಸಗಳೇನು?

ಸಾಮಾನ್ಯ ಪಡಿತರ ಚೀಟಿಯು ಸರ್ಕಾರವು ಅರ್ಹ ಮನೆಗಳಿಗೆ ನೀಡುವ ಭೌತಿಕ ದಾಖಲೆಯಾಗಿದೆ. ಪ್ರಮುಖ ವ್ಯತ್ಯಾಸವೆಂದರೆ ಅವುಗಳ ಸ್ವರೂಪ ಮತ್ತು ಅವು ಕಾರ್ಯನಿರ್ವಹಿಸುವ ವ್ಯವಸ್ಥೆಯಲ್ಲಿ ಡಿಜಿಟಲ್ ಕಾರ್ಡ್‌ಗಳು ಆನ್‌ಲೈನ್, ನೆಟ್‌ವರ್ಕ್ ಮಾಡಲಾದ ಮೂಲಸೌಕರ್ಯದ ಭಾಗವಾಗಿದ್ದು ಆಧುನಿಕ ಫೀಚರ್ಗಳನ್ನು ಸುಗಮಗೊಳಿಸುತ್ತದೆ. ಆದರೆ ಸಾಮಾನ್ಯ ಕಾರ್ಡ್‌ಗಳು ಸಾಂಪ್ರದಾಯಿಕ ಕಾಗದದ ದಾಖಲೆಗಳಾಗಿದ್ದು ಇವು ಅರಿಯುವುದು ಅಥವಾ ಹಳೆಯಾದಾಗುವ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗುತ್ತದೆ ಆದರೆ ಡಿಜಿಟಲ್ ಕಾರ್ಡ್ ಬಗ್ಗೆ ಇಂತಹ ಯಾವುದೇ ಚಿಂತೆ ಇರೋಲ್ಲ. ಇವನ್ನು ನಿಮ್ಮ ಫೋನಲ್ಲಿ ಇಡಬಹುದು.

Digital Ration Card

ಒಂದು ರಾಷ್ಟ್ರ ಒಂದು ಪಡಿತರ ಚೀಟಿ (ONORC) ಯೋಜನೆಯ ಭಾಗ:

ಇದು ಹೊಸ ಡಿಜಿಟಲ್ ರೇಷನ್ ಕಾರ್ಡ್ ಕೇಂದ್ರ ಸರ್ಕಾರದ ಒಂದು ರಾಷ್ಟ್ರ ಒಂದು ಪಡಿತರ ಚೀಟಿ (One Nation, One Card) ಯೋಜನೆಯಡಿ ದೇಶದ ಯಾವುದೇ ರಾಜ್ಯದಲ್ಲಿರುವ ನ್ಯಾಯಬೆಲೆ ಅಂಗಡಿ ಅಥವಾ ಪಡಿತರ ಕೇಂದ್ರದಿಂದ ನೀವು ಸುಲಭವಾಗಿ ಪಡಿತರ ಪಡೆಯಬಹುದು. ಇದು ನಿಮ್ಮ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊಂದಿಗೆ ನೇರವಾಗಿ ಜೋಡಿಸಲ್ಪಟ್ಟಿರುತ್ತದೆ. ಹಾಗಾದ್ರೆ ಡಿಜಿಟಲ್ ರೇಷನ್ ಕಾರ್ಡ್ ಪ್ರಮುಖ ಪ್ರಯೋಜನಗಳೇನು ಮತ್ತು ಇದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಡೌನ್ಲೋಡ್ ಮಾಡುವುದು ಹೇಗೆ ಎಲ್ಲವನ್ನು ತಿಳಿಯಿರಿ.

ಹೊಸ ಡಿಜಿಟಲ್ ರೇಷನ್ ಕಾರ್ಡ್ (Digital Ration Card) ಪ್ರಮುಖ ಪ್ರಯೋಜನಗಳು:

  • ಸುರಕ್ಷತೆ ಮತ್ತು ಸುಲಭ ಲಭ್ಯತೆ: ನಿಮ್ಮ ಫೋನ್ಲ್ಲಿ ಇರುವುದರಿಂದ ಡಿಜಿಟಲ್ ರೇಷನ್ ಕಾರ್ಡ್ ಕಳೆದುಹೋಗುವ ಅಥವಾ ಹಾಳಾಗುವ ಭಯವಿಲ್ಲ. ತುರ್ತು ಸಂದರ್ಭದಲ್ಲಿ ನೀವು ಇದನ್ನು ಸುಲಭವಾಗಿ ತೋರಿಸಬಹುದು.
  • ಪಾರದರ್ಶಕತೆ ಮತ್ತು ಭ್ರಷ್ಟಾಚಾರ ನಿಯಂತ್ರಣ: ಇದು ಪಡಿತರ ವಿತರಣಾ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸುತ್ತದೆ. ನಕಲಿ ಕಾರ್ಡ್ಗಳನ್ನು ತಡೆಯಲು ಸಹಾಯ ಮಾಡುತ್ತದೆ. ನ್ಯಾಯಬೆಲೆ ಅಂಗಡಿಗಳಲ್ಲಿ ನೀವು ಎಷ್ಟು ಪಡಿತರ ತೆಗೆದುಕೊಂಡಿದ್ದೀರಿ ಎಂಬುದರ ಮಾಹಿತಿ ದಾಖಲಾಗುತ್ತದೆ.
  • ವಲಸೆ ಕಾರ್ಮಿಕರಿಗೆ ಸಹಾಯಕ: ಕೆಲಸ ಅರಸಿ ಬೇರೆ ರಾಜ್ಯಗಳಿಗೆ ಹೋಗುವ ವಲಸೆ ಕಾರ್ಮಿಕರಿಗೆ ಇದು ತುಂಬಾ ಉಪಯುಕ್ತವಾಗಿದೆ. ಅವರು ಯಾವುದೇ ರಾಜ್ಯದಲ್ಲಿ ತಮ್ಮ ಪಡಿತರವನ್ನು ಪಡೆಯಲು ಸಾಧ್ಯವಾಗುತ್ತದೆ.
  • ಗುರುತಿನ ಪುರಾವೆ: ಇದು ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಮತ್ತು ಗುರುತಿನ ಪುರಾವೆಯಾಗಿ ಬಳಸಲು ಸಹ ಉಪಯುಕ್ತವಾಗಿದೆ.

ಡಿಜಿಟಲ್ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಹೊಸ ಡಿಜಿಟಲ್ ರೇಷನ್ ಕಾರ್ಡ್ ಪಡೆಯಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:
  • ಮೊದಲಿಗೆ ನಿಮ್ಮ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಅಲ್ಲಿ ‘ಹೊಸ ರೇಷನ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿ’ ಅಥವಾ ‘Apply for New Ration Card’ ಎಂಬ ಆಯ್ಕೆಯನ್ನು ಹುಡುಕಿ ಕ್ಲಿಕ್ ಮಾಡಿ.
  • ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡಿ. ನಿಮ್ಮ ವೈಯಕ್ತಿಕ ಮಾಹಿತಿ, ಕುಟುಂಬದ ಸದಸ್ಯರ ಮಾಹಿತಿ ಮತ್ತು ವಿಳಾಸದ ವಿವರಗಳನ್ನು ನಮೂದಿಸಿ.
Digital Ration Card
Digital Ration Card
  • ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಿ. ಸಾಮಾನ್ಯವಾಗಿ ಇದಕ್ಕೆ ಆಧಾರ್ ಕಾರ್ಡ್, ವೋಟರ್ ಐಡಿ, ವಿಳಾಸದ ಪುರಾವೆ, ಆದಾಯ ಪ್ರಮಾಣಪತ್ರ ಮತ್ತು ಕುಟುಂಬದ ಭಾವಚಿತ್ರ ಬೇಕಾಗುತ್ತದೆ.
  • ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ಒಂದು ನೋಂದಣಿ ಸಂಖ್ಯೆ (Registration number) ಅಥವಾ ಅರ್ಜಿ ಸಂಖ್ಯೆ ಸಿಗುತ್ತದೆ. ಇದರ ಮೂಲಕ ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು. ಕೆಲವು ರಾಜ್ಯಗಳಲ್ಲಿ ಕಾಮನ್ ಸರ್ವಿಸ್ ಸೆಂಟರ್ಗಳಲ್ಲಿ (CSC) ಅರ್ಜಿ ಸಲ್ಲಿಸಬಹುದು.

ಡಿಜಿಟಲ್ ರೇಷನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ?

ರಾಜ್ಯದ ಅಧಿಕೃತ ಪೋರ್ಟಲ್: ನಿಮ್ಮ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಹೋಗಿ. ಅಲ್ಲಿ ‘ಡೌನ್ಲೋಡ್ ಇ-ರೇಷನ್ ಕಾರ್ಡ್’ ಅಥವಾ ‘Print Ration Card’ ಎಂಬ ಆಯ್ಕೆ ಇರುತ್ತದೆ. ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ. ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಯನ್ನು ನಮೂದಿಸಿ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

‘ಮೇರಾ ರೇಷನ್’ ಮೊಬೈಲ್ ಅಪ್ಲಿಕೇಶನ್: ಕೇಂದ್ರ ಸರ್ಕಾರದ ‘ಮೇರಾ ರೇಷನ್’ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ. ಈ ಅಪ್ಲಿಕೇಶನ್ಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, ನಿಮ್ಮ ಕಾರ್ಡ್ ಡಿಜಿಟಲ್ ಪ್ರತಿಯನ್ನು ನೀವು ನೋಡಬಹುದು ಮತ್ತು ಉಳಿಸಿಕೊಳ್ಳಬಹುದು.

ಎಲ್ಲಿಂದ ಅರ್ಜಿ ಸಲ್ಲಿಸಬಹುದು: ಮೈಸ್ಕೀಮ್ , ಡಿಜಿಲಾಕರ್ ಮತ್ತು ರಾಷ್ಟ್ರೀಯ ಪೋರ್ಟಲ್ ಆಫ್ ಇಂಡಿಯಾದಂತಹ ಪೋರ್ಟಲ್‌ಗಳ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸುವುದು, ಸ್ಥಿತಿ ಟ್ರ್ಯಾಕಿಂಗ್ ಮತ್ತು ಪಡಿತರ ಚೀಟಿಗಳನ್ನು ಡೌನ್‌ಲೋಡ್ ಮಾಡುವುದನ್ನು ಸುಗಮಗೊಳಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo