ಪ್ರಸ್ತುತ 5 ರಿಂದ 7 ವರ್ಷದೊಳಗಿನವರಿಗೆ ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್ ಉಚಿತ.
ಮಕ್ಕಳ ಆಧಾರ್ ಕಾರ್ಡಗಳ ಬಯೋಮೆಟ್ರಿಕ್‌ಗಳನ್ನು ನವೀಕರಿಸಲು ಸರ್ಕಾರ ಈಗ ಶಾಲೆಗಳಿಗೆ ಹೋಗಲಿದೆ.
ಪ್ರಸ್ತುತ ದೇಶದ 7 ಕೋಟಿಗೂ ಹೆಚ್ಚು ಮಕ್ಕಳು ಇನ್ನೂ ತಮ್ಮ ಬಯೋಮೆಟ್ರಿಕ್‌ಗಳನ್ನು ನವೀಕರಿಸಿಲ್ಲ ಎನ್ನುತ್ತಿರುವ UIDAI.
Biometric Update 2025: ಮಕ್ಕಳಿಗಾಗಿ ಆಧಾರ್‌ನಲ್ಲಿ ಬಯೋಮೆಟ್ರಿಕ್ ಅಪ್ಡೇಟ್ ಮಕ್ಕಳ ಆಧಾರ್ ಕಾರ್ಡಗಳ ಬಯೋಮೆಟ್ರಿಕ್‌ಗಳನ್ನು ನವೀಕರಿಸಲು ಸರ್ಕಾರ ಈಗ ಶಾಲೆಗಳಿಗೆ ಹೋಗಲಿದೆ. ಅಂದರೆ ಪೋಷಕರು ಇನ್ನು ಮುಂದೆ ಆದಾರ್‌ಗೆ ಬೇಟಿ ನೀಡಬೇಕಾಗಿಲ್ಲ. ವಾಸ್ತವವಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಶಾಲೆಗಳಿಗೆ ಹೋಗುವ ಮೂಲಕ ಮಕ್ಕಳ ಆಧಾರ್ ಬಯೋಮೆಟ್ರಿಕ್‌ಗಳನ್ನು ನವೀಕರಿಸುವ ಯೋಜನೆಯನ್ನು ಪ್ರಾರಂಭಿಸಲಿದೆ. ಇದು ಮುಂದಿನ ಎರಡು ತಿಂಗಳಲ್ಲಿ ಹಂತ ಹಂತವಾಗಿ ಪ್ರಾರಂಭವಾಗುತ್ತದೆ. ಈ ಕೆಲಸಕ್ಕಾಗಿ ಶಾಲೆಗಳಲ್ಲಿ ಶಿಬಿರಗಳನ್ನು ಸ್ಥಾಪಿಸಲಾಗುವುದು. ಮಗುವಿಗೆ ಐದು ವರ್ಷ ತುಂಬಿದ ನಂತರ ಆದಾರ್‌ಗಾಗಿ 7 ಕೋಟಿಗೂ ಹೆಚ್ಚು ಮಕ್ಕಳು ಇನ್ನೂ ತಮ್ಮ ಬಯೋಮೆಟ್ರಿಕ್‌ಗಳನ್ನು ನವೀಕರಿಸಿಲ್ಲ ಎಂದು ಯುಐಡಿಎಐ ಸಿಇಒ ಭುವನೇಶ್ ಕುಮಾರ್ ಹೇಳಿದ್ದಾರೆ.
SurveyBiometric Update 2025 ಈ ಯೋಜನೆ ಪ್ರಸ್ತುತ ಪರೀಕ್ಷೆಯಲ್ಲಿದೆ.
ಇದನ್ನು ಮಕ್ಕಳ ಪೋಷಕರ ಒಪ್ಪಿಗೆಯೊಂದಿಗೆ ಶಾಲೆಗಳ ಮೂಲಕ ಮಕ್ಕಳ ಬಯೋಮೆಟ್ರಿಕ್ಸ್ ಅನ್ನು ನವೀಕರಿಸುವ ಯೋಜನೆಯಲ್ಲಿ ಯುಐಡಿಎಐ ಕೆಲಸ ಮಾಡುತ್ತಿದೆ.ಬಯೋಮೆಟ್ರಿಕ್ ಡೇಟಾದ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಕಡ್ಡಾಯ ಬಯೋಮೆಟ್ರಿಕ್ ಅಪ್ಡೇಟ್ ಅತ್ಯಂತ ಮುಖ್ಯವಾಗಿದೆ. ಈ ಅಪ್ಡೇಟ್ ಅನ್ನು ಏಳು ವರ್ಷದೊಳಗೆ ಪೂರ್ಣಗೊಳಿಸದಿದ್ದರೆ ಪ್ರಸ್ತುತ ನಿಯಮಗಳ ಪ್ರಕಾರ ಮಗುವಿನ ಆಧಾರ್ ಸಂಖ್ಯೆ ನಿಷ್ಕ್ರಿಯಗೊಳ್ಳುವ ಅಪಾಯವಿದೆ. ಐದು ರಿಂದ ಎಳು ವರ್ಷದೊಳಗಿನ ಮಕ್ಕಳಿಗೆ ಬಯೋಮೆಟ್ರಿಕ್ ಅಪ್ಡೇಟ್ ಉಚಿತವಾಗಿದೆ. ಆದರೆ ಮಗು 7 ವರ್ಷಕ್ಕಿಂತ ಹೆಚ್ಚಾದ ಮಕ್ಕಳಿಗೆ 100 ರೂ. ತುಲ್ಕವನ್ನು ಪಾವತಿಸಬೇಕಾಗುತ್ತದೆ.

Aadhaar Biometric Update ಕೊನೆಯ ದಿನಾಂಕ!
ದೇಶದಲ್ಲಿ ಸುಮಾರು ಮಗುವಿಗೆ 15 ವರ್ಷ ತುಂಬಿದ ನಂತರ ಅಗತ್ಯವಿರುವ ಎರಡನೇ MBU ಗಾಗಿ ಶಾಲಾ ಆಧಾರಿತ ಬಯೋಮೆಟ್ರಿಕ್ ಅಪ್ಡೇಟ್ ಮಾದರಿಯನ್ನು ವಿಸ್ತರಿಸಲು UIDAI ಯೋಜಿಸುತ್ತಿದೆ ಎಂದು ಕುಮಾರ್ ಮಾಹಿತಿ ನೀಡಿದರು. ಪ್ರಸ್ತುತ ನವಜಾತ ಶಿತುಗಳು ಮತ್ತು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬಯೋಮೆಟ್ರಿಕ್ ಇಲ್ಲದೆ ಆಧಾರ್ ನೀಡಲಾಗುತ್ತದೆ.
ಇದನ್ನೂ ಓದಿ: Samsung Galaxy F36 5G ಅಧಿಕೃತವಾಗಿ ಬಿಡುಗಡೆ! ಆಫರ್ ಬೆಲೆ ಮತ್ತು ಟಾಪ್ 5 ಫೀಚರ್ಗಳೇನು ತಿಳಿಯಿರಿ!
ಆಧಾರ್ ನವೀಕರಿಸುವುದರಿಂದಾಗುವ ಪ್ರಯೋಜನಗಳು:
ನವೀಕರಿಸಿದ ಆಧಾರ್ ಕಾರ್ಡ್ ಶಾಲಾ ಪ್ರವೇಶ, ಪ್ರವೇಶ ಪರೀಕ್ಷೆ ನೋಂದಣಿ ವಿದ್ಯಾರ್ಥಿವೇತನಗಳು ಮತ್ತು ನೇರ ಪ್ರಯೋಜನ ವರ್ಗಾವಣೆ (ಡಿಬಿಟಿ) ಯೋಜನೆ ಸೇರಿದಂತೆ ಹಲವಾರು ಪ್ರಮುಖ ಸೇವೆಗಳನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ. ಹಲವಾರು ಸರ್ಕಾರಿ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಆಧಾರ್ ನಿರ್ಣಾಯಕವಾಗಿದೆ. ಮಕ್ಕಳು ಎಲ್ಲಾ ಪ್ರಯೋಜನಗಳನ್ನು ನಮಯಕ್ಕೆ ಸರಿಯಾಗಿ ಪಡೆಯಬೇಕೆಂದು ನಾವು ಬಯಸುತ್ತೇವೆ. ಶಾಲೆಗಳ ಮೂಲಕ ನಾವು ಮಕ್ಕಳನ್ನು ಅನುಕೂಲಕರ ಮತ್ತು ಪರಿಣಾಮಕಾರಿ ರೀತಿಯಲ್ಲಿ ತಲುಪುವ ಗುರಿಯನ್ನು ಹೊಂದಿದ್ದೇವೆ’ ಎಂದು ಕುಮಾರ್ ಹೇಳಿದರು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile