OpenAI ತನ್ನ ಹೊಸ ಚಾಟ್‌ಜಿಪಿಟಿ ಗೋ (ChatGPT Go) ಎಂಬ ಟೂಲ್ ಪರಿಚಯಿಸಿದೆ.
ಚಾಟ್‌ಜಿಪಿಟಿ ಗೋ (ChatGPT Go) ಎಂಬ ಟೂಲ್ ಪ್ರತ್ಯೇಕವಾಗಿ ಭಾರತಕ್ಕಾಗಿ ರಚಿಸಲಾಗಿದೆ.
ChatGPT Go ಇದರ ಪ್ರಯೋಜನಗಳೇನು? ಬೆಲೆ ಎಷ್ಟು? ಮತ್ತು ಪಡೆಯೋದು ಹೇಗೆ ತಿಳಿಯಿರಿ.
ಓಪನ್‌ಎಐ ಅಧಿಕೃತವಾಗಿ ಭಾರತೀಯ ಬಳಕೆದಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮತ್ತೊಂದು ಚಂದಾದಾರಿಕೆ ಶ್ರೇಣಿಯನ್ನು ಘೋಷಿಸಿದೆ. ಹೊಸ ಚಾಟ್‌ಜಿಪಿಟಿ ಗೋ (ChatGPT Go) ಎಂದು ಕರೆಯಲ್ಪಡುವ ಈ ಟೂಲ್ ಪ್ರತ್ಯೇಕವಾಗಿ ಭಾರತಕ್ಕಾಗಿ ರಚಿಸಲಾಗಿದೆ. ಯಾಕೆಂದರೆ ಭಾರತ ಅತಿ ವೇಗವಾಗಿ ಬೆಳೆಯುತ್ತಿರುವ AI ಬಳಕೆದಾರರನ್ನು ಹೊಂದಿರುವ ಮಾರುಕಟ್ಟೆಯಾಗಿದ್ದು ಚಾಟ್‌ಜಿಪಿಟಿ ಗೋ ನಿರ್ದಿಷ್ಟ ಯೋಜನೆ ಹೊಂದಿರುವ ಮೊದಲ ದೇಶವಾಗಿದೆ. ಆಸಕ್ತ ಗ್ರಾಹಕರು UPI ಪೇಮೆಂಟ್ ಮಾಡಿ ಚಂದಾದಾರಿಕೆಯನ್ನು ಖರೀದಿಸಬಹುದು. ಹಾಗಾದ್ರೆ ಈ ಹೊಸ ಚಾಟ್‌ಜಿಪಿಟಿ ಗೋ ಬೆಲೆ ಎಷ್ಟು? ಇದರ ಪ್ರಯೋಜನಗಳೇನು? ಮತ್ತು ಇದನ್ನು ಪಡೆಯುವುದು ಹೇಗೆ ಈ ಕೆಳಗೆ ತಿಳಿಯಬಹುದು.
SurveyAlso Read: 43 ಇಂಚಿನ 4K Google Smart TV ಅಮೆಜಾನ್ ಸೇಲ್‌ನಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ!
ChatGPT Go ಪ್ರಯೋಜನಗಳೇನು?
ಇದು ಕೈಗೆಟುಕುವ ಬೆಲೆಯಲ್ಲಿ AI ಸಹಾಯವನ್ನು ಬಯಸುವ ಬಳಕೆದಾರರಿಗಾಗಿ ಚಾಟ್‌ಜಿಪಿಟಿ ಗೋ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಒದಗಿಸುತ್ತದೆ. ಉಚಿತ ಆವೃತ್ತಿಗಿಂತ ChatGPT Go ಯೋಜನೆಯು ಗಮನಾರ್ಹ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಬಳಕೆದಾರರಿಗೆ OpenAI ಪ್ರಮುಖ GPT-5 ಮಾದರಿಗೆ ವಿಸ್ತೃತ ಪ್ರವೇಶವನ್ನು ನೀಡುತ್ತದೆ.
- ಉಚಿತ ಆವೃತ್ತಿಗೆ ಹೋಲಿಸಿದರೆ ವೇಗವಾದ ಪ್ರತಿಕ್ರಿಯೆ ಸಮಯವನ್ನು ಹೊಂದಿದೆ ಕೆಳಿದ್ದೆಲ್ಲ ತಕ್ಷಣ ಸಿಗಿತ್ತೇ.
- ಹೆಚ್ಚು ಗೊಂಡಲಗಲಿಲ್ಲದೆ ಇದರ ಬಳಕೆ ಸಿಕ್ಕಾಪಟ್ಟೆ ಸಿಂಪಲ್ ಮತ್ತು ಕ್ಲೀನ್ ಆಗಿದೆ.
- ಇದರಲ್ಲಿ ಬರವಣಿಗೆಗಳು, ಇಮೇಲ್‌ಗಳು, ಯಾವುದೇ ಕಲಿಕೆ ಮತ್ತು ಅನುವಾದಗಳಿಗೆ ಬೆಂಬಲಿಸುತ್ತದೆ.
- ಪ್ರತಿಯೊಬ್ಬರಿಗೆ ಅದರಲ್ಲೂ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಮೊಬೈಲ್ ಸ್ನೇಹಿ ಇಂಟರ್ಫೇಸ್ ಹೊಂದಿದೆ.
- ಪ್ರಸ್ತುತ ChatGPT Plus ಬಯಸುವವರು ಕೊಂಚ ಕಡಿಮೆ ಬೆಲೆಯಲ್ಲಿ ಅದಕ್ಕೆ ಪರ್ಯಾಯವಾಗಿ ಇದನ್ನು ಬಳಸಬಹುದು.
We just launched ChatGPT Go in India, a new subscription tier that gives users in India more access to our most popular features: 10x higher message limits, 10x more image generations, 10x more file uploads, and 2x longer memory compared with our free tier. All for Rs. 399. 🇮🇳
— Nick Turley (@nickaturley) August 19, 2025
ಭಾರತದಲ್ಲಿ ChatGPT Go ಬೆಲೆ ಎಷ್ಟು?
ಭಾರತದಲ್ಲಿ ಚಾಟ್‌ಜಿಪಿಟಿ ಗೋ ಬೆಲೆ ಸಾಮಾನ್ಯ ChatGPT Plus ಯೋಜನೆಗಿಂತ ಕಡಿಮೆಯಿರುತ್ತದೆ. ಓಪನ್‌ಎಐ ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ChatGPT Go ಎಂಬ ಹೊಸ ಕೈಗೆಟುಕುವ ಚಂದಾದಾರಿಕೆ ಯೋಜನೆಯನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ತಿಂಗಳಿಗೆ ಕೇವಲ ₹399 ಬೆಲೆಗೆ ನಿಗಡಿಪಡಿಸಲಾಗಿದೆ. ಇದನ್ನು ಬಳಕೆದಾರರು ಉಪಯಿ UPI ಮೂಲಕ ಖರೀದಿಸಬಹುದು. ಈ ಶ್ರೇಣಿಯು ಉಚಿತ ಆವೃತ್ತಿ ಮತ್ತು ಪ್ರೀಮಿಯಂ ChatGPT Plus ಯೋಜನೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಭಾರತದಲ್ಲಿ ಚಾಟ್‌ಜಿಪಿಟಿ ಗೋ ಪಡೆಯುವುದು ಹೇಗೆ?
ಭಾರತೀಯ ಬಳಕೆದಾರರು ಅಧಿಕೃತ OpenAI ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಚಾಟ್‌ಜಿಪಿಟಿ ಗೋ ಅನ್ನು ಪ್ರವೇಶಿಸಬಹುದು. ಸೈನ್ ಅಪ್ ಮಾಡಿ ಅಥವಾ ಲಾಗಿನ್ ಮಾಡಿ ಮತ್ತು ಚಂದಾದಾರಿಕೆಗಳ ಅಡಿಯಲ್ಲಿ ಚಾಟ್‌ಜಿಪಿಟಿ ಗೋ ಯೋಜನೆಯನ್ನು ಆಯ್ಕೆಮಾಡಿ. ಅಂತರರಾಷ್ಟ್ರೀಯ ಕಾರ್ಡ್‌ಗಳು, UPI ಅಥವಾ ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಪಾವತಿಯನ್ನು ಮಾಡಬಹುದು. ಚಂದಾದಾರರಾದ ನಂತರ ಬಳಕೆದಾರರು ತಕ್ಷಣವೇ ಎಲ್ಲಾ ಸಾಧನಗಳಲ್ಲಿ ಚಾಟ್‌ಜಿಪಿಟಿ ಗೋ ಅನ್ನು ಬಳಸಲು ಪ್ರಾರಂಭಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile