6GB, 8GB ಮತ್ತು 12GB ಯ RAM ಆಯ್ಕೆಗಳೊಂದಿಗೆ ಜೋಡಿಸಲಾದ ಸ್ನಾಪ್ಡ್ರಾಗನ್ 855 ಪ್ರೊಸೆಸರ್ನಿಂದ ಫೋನ್ ಪವರ್ ಹೊಂದಿದೆ.
ನೂಬಿಯಾ ಅಂತಿಮವಾಗಿ ಇದೇ ಜೂನ್ 17 ರಂದು ಭಾರತದಲ್ಲಿ ತನ್ನ ಇತ್ತೀಚಿನ ಗೇಮಿಂಗ್ ಸ್ಮಾರ್ಟ್ಫೋನ್ Nubia Red Magic 3 ಅನ್ನು ಪ್ರಾರಂಭಿಸುವುದಾಗಿ ದೃಢಪಡಿಸಿದೆ. ಬ್ರ್ಯಾಂಡ್ ಅದರ ಹೊಸ ಗೇಮಿಂಗ್ ಸ್ಮಾರ್ಟ್ಫೋನ್ ಅನ್ನು ಪ್ರಾರಂಭಿಸಲು ಫ್ಲಿಪ್ಕಾರ್ಟ್ ಜೊತೆ ಸಹಭಾಗಿತ್ವ ಹೊಂದಿದ್ದು ಈ ಪಾಲುದಾರಿಕೆಯೊಂದಿಗೆ ಫ್ಲಿಪ್ಕಾರ್ಟ್ ಅದರ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಅನ್ನು ಈಗಾಗಲೇ 'ನೋಟಿಫೀ ಮಿ' ಬಟನ್ ಅನ್ನು ನವೀಕರಿಸಿದೆ. ಅಲ್ಲಿ ಬಳಕೆದಾರರು ಗೇಮಿಂಗ್ ವಲಯದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ನೋಡಬಹುದಾಗಿದೆ. ಮತ್ತು ಗೇಮಿಂಗ್ ಸ್ಮಾರ್ಟ್ಫೋನ್ ಖರೀದಿಸಲು ನೋಂದಾಯಿಸಬಹುದು.
ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ Xiaomi ಕಂಪನಿಯ ಬ್ಲಾಕ್ ಶಾರ್ಕ್ 2 ಗೆ ನೇರವಾಗಿ ಈ ಸ್ಮಾರ್ಟ್ಫೋನ್ ಪ್ರತಿಸ್ಪರ್ಧಿಯಾಗಿ ಗೇಮಿಂಗ್ ಸ್ಮಾರ್ಟ್ಫೋನ್ ಇರುತ್ತದೆ. ಇದರ 6GB ಯ RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕಾಗಿ ಬ್ಲ್ಯಾಕ್ ಶಾರ್ಕ್ 2 ನಿಮಗೆ 39,999 ದರದಲ್ಲಿ ಬೆಲೆ ನಿಗದಿಪಡಿಸಲಾಗಿದೆ. ಇದರ ಪ್ರೀಮಿಯಂ ಆವೃತ್ತಿ 49,999 ರೂಗಳೊಂದಿಗೆ 12GB ಯ RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಈ ವರ್ಷ ಚೀನಾದಲ್ಲಿ ಇದರ ನುಬಿಯಾ ಮ್ಯಾಜಿಕ್ 3 ಅನ್ನು ಪ್ರಾರಂಭಿಸಲಾಯಿತು.
ಈ ಸ್ಮಾರ್ಟ್ಫೋನ್ 6.65 ಇಂಚಿನ 2340 x1080 ಪಿಕ್ಸೆಲ್ಗಳು ಪೂರ್ಣ HD+ 19.5: 9 ಅಸ್ಪೆಟ್ ರೇಷುವಿನೊಂದಿಗೆ ಅಮೋಲೆಡ್ ರಿಫ್ರೆಶ್ ರೇಟ್ನೊಂದಿಗಿನ ಡಿಸ್ಪ್ಲೇಯನ್ನು ಒಳಗೊಂಡಿದೆ. ಅಲ್ಲದೆ 430ppi ಡೆನ್ಸಿಸಿಟಿಯನ್ನು ಇದು ಒಳಗೊಂಡಿದೆ. ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 9.0 ಪೈ ಆಧರಿಸಿ ರೆಡ್ ಮ್ಯಾಜಿಕ್ ಓಎಸ್ 2.0 ಅನ್ನು ನಡೆಸುತ್ತದೆ. ಮತ್ತು 5000mAh ಬ್ಯಾಟರಿಯಿಂದ 27W ವೇಗದ ಚಾರ್ಜಿಂಗ್ನೊಂದಿಗೆ ಉತ್ತೇಜನ ನೀಡಿದೆ. 6GB, 8GB ಮತ್ತು 12GB ಯ RAM ಆಯ್ಕೆಗಳೊಂದಿಗೆ ಜೋಡಿಸಲಾದ ಸ್ನಾಪ್ಡ್ರಾಗನ್ 855 ಪ್ರೊಸೆಸರ್ನಿಂದ ಫೋನ್ ಪವರ್ ಹೊಂದಿದೆ. ಅದರಂತೆ 64GB, 128GB, ಮತ್ತು 256GB ಯ ಇಂಟರ್ನಲ್ ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ.
ಇದು ಆಂತರಿಕ ಟರ್ಬೊ ಫ್ಯಾನ್ನೊಂದಿಗೆ ದ್ರವ ತಂಪಾಗಿಸುವ ತಂತ್ರಜ್ಞಾನವನ್ನು ಹೊಂದಿದೆ. ಅದು ಪರಿಣಾಮಕಾರಿ ಶಾಖ ವರ್ಗಾವಣೆಯನ್ನು 500% ಪ್ರತಿಶತದಷ್ಟು ಹೆಚ್ಚಿಸುತ್ತದೆ. ಆಪ್ಟಿಕ್ಸ್ಗಾಗಿ ಸೋನಿ IMX586 ಸೆನ್ಸರ್ 0.8MP ಮೈಕ್ರೋ ಪಿಕ್ಸೆಲ್ ಗಾತ್ರ f/ 1.75 ಅಪರ್ಚರ್ ಡ್ಯುಯಲ್ ಎಲ್ಇಡಿ ಫ್ಲ್ಯಾಷ್ ಹೊಂದಿರುವ 48MP ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾದೊಂದಿಗೆ ಸ್ಮಾರ್ಟ್ಫೋನ್ ಬರುತ್ತದೆ. ಮುಂಭಾಗದಲ್ಲಿ ಇದು 16MP ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದೆ / 2.0 ಅಪರ್ಚರ್ AI ಬ್ಯೂಟಿ ಲಕ್ಷಣಗಳು ಮತ್ತು ಫೇಸ್ ಅನ್ಲಾಕ್ಗೆ ಬೆಂಬಲಿಸುತ್ತದೆ.
Ravi Rao
Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile