Netflix Offer: ನೆಟ್ಫ್ಲಿಸ್ ₹199 ರೂಗಳಲ್ಲಿ ತಿಂಗಳ ವ್ಯಾಲಿಡಿಟಿಯೊಂದಿಗೆ ಹೊಸ ಮೊಬೈಲ್ ಪ್ಲಾನನ್ನು ಬಿಡುಗಡೆಗೊಳಿಸಿದೆ

Netflix Offer: ನೆಟ್ಫ್ಲಿಸ್ ₹199 ರೂಗಳಲ್ಲಿ ತಿಂಗಳ ವ್ಯಾಲಿಡಿಟಿಯೊಂದಿಗೆ ಹೊಸ ಮೊಬೈಲ್ ಪ್ಲಾನನ್ನು ಬಿಡುಗಡೆಗೊಳಿಸಿದೆ
HIGHLIGHTS

Netflix 199 ರೂಗಳ ಈ ಯೋಜನೆಯನ್ನು ಭಾರತೀಯ ಮೊಬೈಲ್ ಮತ್ತು ಟ್ಯಾಬ್ಲೆಟ್ ಬಳಕೆದಾರರಿಗೆ ಮಾತ್ರ ಪರಿಚಯಿಸಲಾಗಿದೆ.

Netflix 199 ರೂಗಳ ಈ ಯೋಜನೆಯನ್ನು ಭಾರತೀಯ ಬಳಕೆದಾರರಿಗೆ ಕೋರಿಕೆಯ ಮೇರೆಗೆ ಮಾತ್ರ ವಿಶೇಷವಾಗಿ ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ.

ನೆಟ್‌ಫ್ಲಿಕ್ಸ್ ಅಂತಿಮವಾಗಿ ಭಾರತೀಯ ಬಳಕೆದಾರರಿಗಾಗಿ ಕಡಿಮೆ ಬೆಲೆಯ ಮೊಬೈಲ್ ಚಂದಾದಾರಿಕೆ ಯೋಜನೆಯನ್ನು ನೀಡುತ್ತಿದೆ. ಈ ಚಂದಾದಾರಿಕೆಯ ಬೆಲೆ 199 ರೂಗಳು ಮಾತ್ರ. ಈ ಯೋಜನೆಯಡಿಯಲ್ಲಿ ಬಳಕೆದಾರರು SD ಗುಣಮಟ್ಟದಲ್ಲಿ ಮಾತ್ರ ವೀಡಿಯೊಗಳನ್ನು ಸ್ಟ್ರೀಮ್ ಮಾಡಲು ಸಾಧ್ಯವಾಗುತ್ತದೆ. ಈ ಯೋಜನೆಯನ್ನು ಭಾರತೀಯ ಮೊಬೈಲ್ ಮತ್ತು ಟ್ಯಾಬ್ಲೆಟ್ ಬಳಕೆದಾರರಿಗೆ ಮಾತ್ರ ಪರಿಚಯಿಸಲಾಗಿದೆ. ಕಂಪನಿಯ ಸ್ಟ್ಯಾಂಡರ್ಡ್ ಪ್ಲಾನ್ ಬೇಕಿದ್ದರೆ 499 ರೂಗಳ ಯೋಜನೆಯನ್ನು ಪಡೆಯುವ ಪ್ಲಾನಿಗೆ ಹೋಲಿಸಿದರೆ ಈ ಯೋಜನೆ ತುಂಬಾ ಕಡಿಮೆಯಾಗಿದೆ. ಈ ಯೋಜನೆಯನ್ನು ಭಾರತೀಯ ಬಳಕೆದಾರರಿಗೆ ಕೋರಿಕೆಯ ಮೇರೆಗೆ ಮಾತ್ರ ವಿಶೇಷವಾಗಿ ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ.

https://dbpost.com/wp-content/uploads/2018/11/Netflix.jpg

ನೆಟ್‌ಫ್ಲಿಕ್ಸ್‌ನ ಉತ್ಪನ್ನ ಇನ್ನೋವೇಶನ್ ನಿರ್ದೇಶಕರಾದ ಅಜಯ್ ಅರೋರಾ “ನಮ್ಮ ಭಾರತೀಯ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಅವರ ವೀಡಿಯೊಗಳಿಗಿಂತ ಹೆಚ್ಚಿನ ವೀಡಿಯೊಗಳನ್ನು ನೋಡುತ್ತಾರೆ. ಅವರು ನಮ್ಮ ಪ್ರದರ್ಶನಗಳು ಮತ್ತು ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡಲು ಇಷ್ಟಪಡುತ್ತಾರೆ. ಈ ಹೊಸ ಯೋಜನೆಯು ನೆಟ್‌ಫ್ಲಿಕ್ಸ್ ಅನ್ನು ತಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸಲು ಬಯಸುವವರಿಗೆ ಇನ್ನಷ್ಟು ಸುಲಭವಾಗಿ ಮತ್ತು ಉತ್ತಮವಾಗಿಸುತ್ತದೆ ಎಂದು ನಾವು ನಂಬುತ್ತೇವೆಂದು ತಿಳಿಸಿದ್ದಾರೆ.

https://edge.alluremedia.com.au/m/l/2019/01/Netflix-phone.jpg

ಇಂದಿನಿಂದ ಈ ಯೋಜನೆ ಲಭ್ಯವಾಗಿದೆ. ಇದರಲ್ಲಿ SD ಗುಣಮಟ್ಟದಲ್ಲಿ ವೀಡಿಯೊವನ್ನು ಸ್ಟ್ರೀಮ್ ಮಾಡಬಹುದು. ಇದರಲ್ಲಿ ಬಳಕೆದಾರರಿಗೆ ಕೇವಲ ಒಂದು ಸ್ಕ್ರೀನ್ ಮಾತ್ರ ನೀಡಲಾಗುತ್ತಿದೆ. ಕಡಿಮೆ ವೆಚ್ಚದ ಯೋಜನೆಗಳಿಂದಾಗಿ ಟಿವಿಯಲ್ಲಿ ಕನೆಕ್ಟ್ ಮಾಡಿ ನೋಡುವ ಸೌಲಭ್ಯದ ಬೆಂಬಲವನ್ನು ಇದಕ್ಕೆ ನೀಡಲಾಗಿಲ್ಲ. ಕಂಪನಿಯು ಮೊಬೈಲ್ ಆಧಾರಿತ ಯೋಜನೆಯನ್ನು ಮಾತ್ರ ಪ್ರಾರಂಭಿಸಿದೆ. ಏಕೆಂದರೆ ನೆಟ್‌ಫ್ಲಿಕ್ಸ್‌ನಲ್ಲಿ ಸೈನ್ ಅಪ್ ಮಾಡಿ ಮೊಬೈಲಲ್ಲಿ ನೋಡುವವವರ ಶೇಕಡಾವಾರು ಪ್ರಮಾಣ ಭಾರತದಲ್ಲಿ ಹೆಚ್ಚಾಗಿದೆ. 

ಈ ಯೋಜನೆಯನ್ನು ಪ್ರಸ್ತುತ ಪರೀಕ್ಷಿಸಲಾಗುತ್ತಿದೆ. ಇದರ ನಂತರ ಇದು 499, 649 ಮತ್ತು 799 ರೂಗಳ ಬಂಡವಾಳವನ್ನು ಸೇರಲಿದೆ. ಈ ಹಿಂದೆ ಕಂಪನಿಯು 250 ರೂಗಳ ಯೋಜನೆಯನ್ನು ಯೋಜಿಸುತ್ತಿತ್ತು ಆದರೆ ಅದನ್ನು ಪ್ರಾರಂಭಿಸಲು ಕಂಪನಿಯು ಅದನ್ನು ಮರು ಯೋಚಿಸಬೇಕಾಗಿತ್ತು. ಹಾಟ್‌ಸ್ಟಾರ್‌ಗಾಗಿ ಬಳಕೆದಾರರು ತಿಂಗಳಿಗೆ 299 ರೂ.ಗಳ ಶುಲ್ಕವನ್ನು ಪಾವತಿಸಬೇಕಾಗುವುದನ್ನು ಗಮನದಲ್ಲಿಡಿ. ಅದೇ ಸಮಯದಲ್ಲಿ ಅಮೆಜಾನ್ ಪ್ರೈಮ್ ತಿಂಗಳಿಗೆ 129 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಇಮೇಜ್ ಸೋರ್ಸ್

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo