ಒಂದೇ ಚಾರ್ಜ್‌ನಲ್ಲಿ 45 ಘಂಟೆಗಳ ಪ್ಲೇಟೈಮ್ ನೀಡುವ Probuds N31 ಕೇವಲ 999 ರೂಗಳಿಗೆ ಲಭ್ಯ!

ಒಂದೇ ಚಾರ್ಜ್‌ನಲ್ಲಿ 45 ಘಂಟೆಗಳ ಪ್ಲೇಟೈಮ್ ನೀಡುವ Probuds N31 ಕೇವಲ 999 ರೂಗಳಿಗೆ ಲಭ್ಯ!
HIGHLIGHTS

ಭಾರತೀಯ ಟೆಕ್ನಾಲಜಿ ಕಂಪನಿ ಲಾವಾ (LAVA) ಸ್ಮಾರ್ಟ್ಫೋನ್ ನಂತರ ಈಗ ತನ್ನ ಹೊಸ ನೆಕ್‌ಬ್ಯಾಂಡ್‌ ಅನ್ನು ಬಿಡುಗಡೆಗೊಳಿಸಿದೆ.

ಈ ಹೊಸ Lava Probuds N31 ನೆಕ್‌ಬ್ಯಾಂಡ್‌ ಇದರ ಬೆಲೆ ಮತ್ತು ಇದರ ಕೆಲವು ಅತ್ಯುತ್ತಮ ಫೀಚರ್ ಅನ್ನು ಈ ಲೇಖನದಲ್ಲಿ ತಿಳಿಯಿರಿ.

Lava Probuds N31 ನೆಕ್‌ಬ್ಯಾಂಡ್‌ ಈಗ ಮಾರಾಟಕ್ಕೆ ಲಭ್ಯವಿದ್ದು ನೀವು ಇದನ್ನು ಕೇವಲ 999 ರೂಗಳಿಗೆ ಮಾತ್ರ ಖರೀದಿಸಬಹುದು.

Lava Probuds N31: ಭಾರತೀಯ ಟೆಕ್ನಾಲಜಿ ಕಂಪನಿ ಲಾವಾ (LAVA) ಸ್ಮಾರ್ಟ್ಫೋನ್ ನಂತರ ಈಗ ತನ್ನ ಹೊಸ ನೆಕ್‌ಬ್ಯಾಂಡ್‌ ಅನ್ನು ಬಿಡುಗಡೆಗೊಳಿಸಿದೆ. ಈ ನೆಕ್‌ಬ್ಯಾಂಡ್‌ ನಿಜಕ್ಕೂ ಬೇರೆ ಬ್ರ್ಯಾಂಡ್ಗಳಿಗೆ ನೇರ ಠಕ್ಕರ್ ನೀಡುತ್ತಿದ್ದು ತುಂಬಾ ಕೈಗೆಟುಕುವ ಬೆಲೆಗೆ ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಹೊಸ Lava Probuds N31 ನೆಕ್‌ಬ್ಯಾಂಡ್‌ ಇದರ ಬೆಲೆ ಮತ್ತು ಇದರ ಕೆಲವು ಅತ್ಯುತ್ತಮ ಫೀಚರ್ ಅನ್ನು ಈ ಲೇಖನದಲ್ಲಿ ತಿಳಿಯಿರಿ. ಈಗಾಗಲೇ ಇದು ಅಮೆಜಾನ್ ಮೂಲಕ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಈ Lava Probuds N31 ನೆಕ್‌ಬ್ಯಾಂಡ್‌ ಆಗಲೇ ಮಾರುಕಟ್ಟೆಯಲ್ಲಿರುವ Boult ProBass Curve X, boAt Rockerz 245 v2 ಮತ್ತು Zebronics Zeb Evolve ನೊಂದಿಗೆ ಸ್ಪರ್ಧಿಸುತ್ತದೆ. 

Lava Probuds N31 ನೆಕ್‌ಬ್ಯಾಂಡ್‌ ಬೆಲೆ ಮತ್ತು ಲಭ್ಯತೆ

ಈ ಹೊಸ Lava Probuds N31 ನೆಕ್‌ಬ್ಯಾಂಡ್‌ ಈಗ ಮಾರಾಟಕ್ಕೆ ಲಭ್ಯವಿದ್ದು ನೀವು ಇದನ್ನು ಕೇವಲ 999 ರೂಗಳಿಗೆ ಮಾತ್ರ ಖರೀದಿಸಬಹುದು. ಗ್ರಾಹಕರು ಅಧಿಕೃತ ಲಾವಾ ಇ-ಸ್ಟೋರ್ ಮತ್ತು ಅಮೆಜಾನ್ ಇಂಡಿಯಾ ಮೂಲಕ Lava Probuds N31 ಅನ್ನು ಖರೀದಿಸಬಹುದು. Lava Probuds N31 ಒಟ್ಟಾರೆಯಾಗಿ ಮೂರು Panther Black, Wild Red ಮತ್ತು Flirefly Green ಬಣ್ಣಗಳ ಆಯ್ಕೆಗಳಲ್ಲಿ ಬಿಡುಗಡೆಯಾಗಿದ್ದು ಖರೀದಿಗೆ ಲಭ್ಯವಿದೆ.

Lava Probuds N31 ನೆಕ್‌ಬ್ಯಾಂಡ್‌ ಫೀಚರ್ಗಳು

Lava ProBuds N31 ನೆಕ್‌ಬ್ಯಾಂಡ್‌ IPX6 ನೀರು-ನಿರೋಧಕ ರೇಟಿಂಗ್‌ನೊಂದಿಗೆ ಡುಯಲ್ ಡಿವೈಸ್ ಕನೆಕ್ಟಿವಿಟಿಯನ್ನು ಸಹ ಹೊಂದಿದೆ. ಅಂದರೆ ನಿಮ್ಮ ಬೆವರಿಂದ ಈ ರಿದರೂ ಕೆಡುವುದಿಲ್ಲ. ಇದು ಗಟ್ಟಿಮುಟ್ಟಾದ ವಿನ್ಯಾಸ ಮತ್ತು ದೂರದ ಬಳಕೆಗೆ ಉತ್ತಮವಾಗಿದೆ. ಇದರ ವಿಶೇಷವೆಂದರೆ ಈಗಾಗಲೇ ಮೇಲೆ ತಿಳಿಸಿರುವಂತೆ ಇವುಗಳಲ್ಲಿ ಡ್ಯುಯಲ್ ಡಿವೈಸ್ ಕನೆಕ್ಟಿವಿಟಿ ನೀಡಲಾಗಿದೆ. ಅಂದರೆ ನೀವು ಈ ನೆಕ್‌ಬ್ಯಾಂಡ್‌ ಅನ್ನು ಏಕಕಾಲದಲ್ಲಿ ಎರಡು ಡಿವೈಸ್ಗಳಿಗೆ ಕನೆಕ್ಟ್ ಮಾಡಿ ಬಳಸಬಹುದು. ಇಯರ್‌ಬಡ್‌ಗಳು ಮ್ಯಾಗ್ನೆಟಿಕ್ ಲಾಕ್ ಮತ್ತು ತ್ವರಿತ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿವೆ. 

ನೆಕ್‌ಬ್ಯಾಂಡ್‌ನಲ್ಲಿರುವ ಬಟನ್‌ಗಳಂತಹ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಇದನ್ನು ಸಂಗೀತವನ್ನು ನಿಯಂತ್ರಿಸಲು ಕರೆಗಳಿಗಾಗಿ ನೀವು  Google Assistant ಮತ್ತು Apple Siri ಬಳಸಬಹುದು. ಅಲ್ಲದೆ ಲೇಟೆಸ್ಟ್ V5.3 Bluetooth  ಕನೆಕ್ಟಿವಿಟಿಯೊಂದಿಗೆ Probuds N31 ನೆಕ್‌ಬ್ಯಾಂಡ್‌ ನಿಮಗೆ ದೊಡ್ಡದಾದ ಅಂದ್ರೆ 280mAh ಬ್ಯಾಟರಿ ಪೂರ್ಣ ಚಾರ್ಜ್‌ನಲ್ಲಿ 45+ ಘಂಟೆಗಳ  ಪ್ಲೇಬ್ಯಾಕ್ ಸಮಯವನ್ನು ಒದಗಿಸುತ್ತದೆ. ಇಯರ್‌ಫೋನ್‌ಗಳು ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿವೆ. USB ಟೈಪ್ C ಚಾರ್ಜಿಂಗ್ ಪೋರ್ಟ್ ಮೂಲಕ 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 12 ಘಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo