KGF Chapter 2 ಸದ್ದಿಲ್ಲದೆ ಅಮೆಜಾನ್ ಪ್ರೈಮ್ OTT ನಲ್ಲಿ ಬಿಡುಗಡೆ! ವೀಕ್ಷಣೆಗೆ ಈ ಷರತ್ತು ಅನ್ವಯ!

HIGHLIGHTS

ಭಾರತೀಯ ಚಿತ್ರರಂಗದಲ್ಲೇ ನೂತನ ದಾಖಲೆ ಬರೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2

KGF Chapter 2 ಚಿತ್ರ ಸದ್ದೇ ಇಲ್ಲದೇ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ (Amazon Prime Video) ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ಜೀ5 ಆ್ಯಪ್​ನಲ್ಲಿ ಈ ಮೊದಲು ಸಾಕಷ್ಟು ಸಿನಿಮಾಗಳು ಇದೇ ಮಾದರಿಯಲ್ಲಿ ರಿಲೀಸ್ ಆಗಿವೆ

KGF Chapter 2 ಸದ್ದಿಲ್ಲದೆ ಅಮೆಜಾನ್ ಪ್ರೈಮ್ OTT ನಲ್ಲಿ ಬಿಡುಗಡೆ! ವೀಕ್ಷಣೆಗೆ ಈ ಷರತ್ತು ಅನ್ವಯ!

KGF Chapter 2: ಬಾಕ್ಸಾಫೀಸ್ ಗಳಿಕೆ ಮೂಲಕ ಭಾರತೀಯ ಚಿತ್ರರಂಗದಲ್ಲೇ ನೂತನ ದಾಖಲೆ ಬರೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಸದ್ದೇ ಇಲ್ಲದೇ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಕಳೆದ ಮಾರ್ಚ್ 14ರಂದು ‘ಕೆಜಿಎಫ್ 2’ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಬಿಡುಗಡೆ ಆಗಿತ್ತು. ಬಿಡುಗಡೆಯಾಗಿ ಒಂದು ತಿಂಗಳ ಅವಧಿಯಲ್ಲಿ ಚಿತ್ರ ಸಾವಿರ ನೂರು ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದ್ದು ಭಾರತವೊಂದರಲ್ಲೇ ಚಿತ್ರದ ಗಳಿಕೆ ಸಾವಿರ ಕೋಟಿ ರೂ ಗಳಿಕೆ ಕಂಡಿದೆ. 

Digit.in Survey
✅ Thank you for completing the survey!

ಬಾಲಿವುಡ್​ನಲ್ಲಿ ಈ ಸಿನಿಮಾ 427 ಕೋಟಿ ರೂಪಾಯಿ ಬಾಚಿಕೊಂಡಿದೆ. ಈಗಲೂ ಚಿತ್ರ ಚಿತ್ರಮಂದಿರಗಳಲ್ಲಿ ಹೊಸ ಚಿತ್ರಗಳನ್ನು ಹಿಂದಿಕ್ಕಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಒಟಿಟಿಯಲ್ಲಿ ಯಾವಾಗ ತೆರೆಕಾಣಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದರೆ ಈ ಚಿತ್ರ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗಲೇ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ (Amazon Prime Video) ಪ್ರಸಾರ ಕಂಡಿದೆ.

ಹೌದು ಈಗ ಒಟಿಟಿಯಲ್ಲೂ ಐದೂ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಿದ್ದು ಈ ಸಿನಿಮಾ ವೀಕ್ಷಣೆಗೆ ಒಂದು ಷರತ್ತು ಇದೆ. ಅದೇನೆಂದರೆ ನೀವು ಈ ಚಿತ್ರವನ್ನು ರೆಂಟ್ ಪಡೆದು ಈ ವೀಕ್ಷಿಸಬಹುದು. ನೀವು ಅಮೇಜಾನ್​ ಪ್ರೈಮ್ ವಿಡಿಯೋ ಚಂದಾದಾರರಾದರೆ ಈ ಸಿನಿಮಾವನ್ನು ವೀಕ್ಷಿಸುವುದಕ್ಕೆ ಸಾಧ್ಯವಿಲ್ಲ! ಈ ಸಿನಿಮಾ ನೋಡಬೇಕು ಎಂದರೆ ನೀವು ಹೆಚ್ಚುವರಿಯಾಗಿ ಹಣ ಪಾವತಿಸಬೇಕು. 199 ರೂಪಾಯಿ ಪಾವತಿಸಿ ನೀವು ಚಿತ್ರ ವೀಕ್ಷಣೆ ಮಾಡಬಹುದು.

ಜೀ5 ಆ್ಯಪ್​ನಲ್ಲಿ ಈ ಮೊದಲು ಸಾಕಷ್ಟು ಸಿನಿಮಾಗಳು ಇದೇ ಮಾದರಿಯಲ್ಲಿ ರಿಲೀಸ್ ಆಗಿವೆ. ಸಲ್ಮಾನ್ ಖಾನ್ ನಟನೆಯ ‘ರಾಧೆ’ ಚಿತ್ರವನ್ನು ಇದೇ ರೀತಿಯಲ್ಲಿ ರಿಲೀಸ್ ಮಾಡಲಾಗಿತ್ತು. ಆದರೆ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ಈ ರೀತಿಯ ಪ್ರಯೋಗ ನಡೆದಿರಲಿಲ್ಲ. ಈಗ ‘ಕೆಜಿಎಫ್ 2’ ಮೂಲಕ ಸಿನಿಮಾಗಳನ್ನು ರೆಂಟ್​​ಗೆ ನೀಡುವ ತಂತ್ರವನ್ನು ಆರಂಭಿಸಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo