ಅತೀ ಶೀಘ್ರದಲ್ಲೇ Motorola Edge 70 Fusion ಬಿಡುಗಡೆ! ಕುತೂಹಲ ಹೆಚ್ಚಿಸಿದ ಲೀಕ್ ಫೀಚರ್ಸ್
Motorola Edge 70 Fusion ಮೊಬೈಲ್ ಶೀಘ್ರದಲ್ಲೇ ಲಾಂಚ್ ಆಗಲಿದೆ
ಈ ಫೋನ್ ವಿಶ್ವದ ಮೊದಲ 50MP ಸೋನಿ LYT-710 ಸೆನ್ಸಾರ್ ಪಡೆದಿರುವ ಸಾಧ್ಯತೆ
ಮೊಟೊರೊಲಾದ ಈ ಮೊಬೈಲ್ 32MP ಸೆಲ್ಫಿ ಕ್ಯಾಮೆರಾ ಒಳಗೊಂಡಿರಬಹುದು
Motorola ಕಂಪನಿಯು ಎಡ್ಜ್ ಸರಣಿಯಲ್ಲಿ ಹಲವು ಸ್ಮಾರ್ಟ್‌ಫೊನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಕೆಲವು ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಅದರ ಮುಂದುವರಿದ ಭಾಗವಾಗಿ ಮೊಟೊರೊಲಾ ಇದೀಗ Motorola Edge 70 Fusion ಸ್ಮಾರ್ಟ್‌ಫೋನ್ ಪರಿಚಯಿಸಲು ಸಜ್ಜಾಗುತ್ತಿದೆ. ಮುಂಬರುವ ಈ ಫೋನ್ Snapdragon 7s Gen 3 SoC ಚಿಪ್‌ಸೆಟ್ ಪ್ರೊಸೆಸರ್ ಒಳಗೊಂಡಿರುವ ಸಾಧ್ಯತೆಗಳು ಇವೆ. ಅಲ್ಲದೇ ಈ ಫೋನ್ ಪ್ಯಾಂಟೋನ್ ಸಿಲೂಯೆಟ್, ಪ್ಯಾಂಟೋನ್ ಬ್ಲೂ ಸರ್ಫ್ ಮತ್ತು ಪ್ಯಾಂಟೋನ್ ಕಂಟ್ರಿ ಏರ್ ಕಲರ್ ಆಯ್ಕೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಗಳು ಇವೆ. ಇದರೊಂದಿಗೆ ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ರಚನೆ ಪಡೆದಿರಲಿದೆ ಎನ್ನಲಾಗಿದೆ. ಹಾಗಾದರೆ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಫೋನಿನ ನಿರೀಕ್ಷಿತ ಫೀಚರ್ಸ್ ಸೇರಿದಂತೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಆಫರ್‌ನಲ್ಲಿ POCO M7 Plus ಮೊಬೈಲ್ ಖರೀದಿಸಲು ಇದಕ್ಕಿಂತ ಒಳ್ಳೆಯ ಸಮಯ ಬೇಕೆ?
Motorola Edge 70 Fusion ಮೊಬೈಲ್ ಲಾಂಚ್ ಮಾಹಿತಿ
ಮೊಟೊ ಸಂಸ್ಥೆಯು ಮೊಟೊರೊಲಾ ಎಡ್ಜ್ 70 ಸರಣಿಯಲ್ಲಿ ಪರಿಚಯಿಸಲಿರುವ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಫೋನ್ ಈಗಾಗಲೆ ಗ್ರಾಹಕರ ನಿರೀಕ್ಷೆ ಹೆಚ್ಚಿಸಿದೆ. ಇನ್ನು ಈ ಮೊಬೈಲ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ ಎಂದು ವರದಿಯಾಗಿದೆ. ಮಾರ್ಚ್‌ತಿಂಗಳ ಆರಂಭದಲ್ಲಿ ಫೋನಿನ ಕುರಿತಾಗಿ ಇನ್ನಷ್ಟು ಮಾಹಿತಿಗಳನ್ನು ಸಂಸ್ಥೆಯು ಹೊರಹಾಕುವ ಸಾಧ್ಯತೆಗಳು ಇವೆ. ಮುಂಬರುವ MWC 2026 ಕಾರ್ಯಕ್ರಮದಲ್ಲಿ ಮೊಬೈಲ್ ಅನ್ನು ಪರಿಚಯಿಸುವ ಸಾಧ್ಯತೆಗಳು ಇವೆ. ಲಾಂಚ್ ಬಳಿಕ ಈ ಫೋನ್ ಫ್ಲಿಪ್‌ಕಾರ್ಟ್, ಮೊಟೊರೊಲಾ ವೆಬ್‌ಸೈಟ್ ಮತ್ತು ಪ್ರಮುಖ ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಇದು ಪ್ಯಾಂಟೋನ್ ಸಿಲೂಯೆಟ್, ಪ್ಯಾಂಟೋನ್ ಬ್ಲೂ ಸರ್ಫ್ ಮತ್ತು ಪ್ಯಾಂಟೋನ್ ಕಂಟ್ರಿ ಏರ್ ಕಲರ್ ಆಯ್ಕೆ ಪಡೆದಿರಬಹುದು ಎನ್ನಲಾಗಿದೆ.

ಮೊಟೊರೊಲಾ ಎಡ್ಜ್ 70 ಫ್ಯೂಷನ್ ನಿರೀಕ್ಷಿತ ಫೀಚರ್ಸ್
ಮೊಟೊರೊಲಾದ ಮುಂಬರುವ ಈ ಹೊಸ ಫೋನ್ 6.78 ಇಂಚಿನ ಕ್ವಾಡ್ ಕರ್ವ್ OLED ಮಾದರಿಯ ಡಿಸ್‌ಪ್ಲೇ ಪಡೆದಿರಲಿದೆ. ಹಾಗೆಯೇ ಸುಗಮ ಗ್ರಾಫಿಕ್ಸ್ ಹಾಗೂ ಅನಿಮೇಷನ್‌ಗಾಗಿ 144Hz ರಿಫ್ರೆಶ್ ರೇಟ್ ಒಳಗೊಂಡಿರುವ ನಿರೀಕ್ಷೆಗಳಿವೆ. ಅಲ್ಲದೇ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ನಿಂದ ರಕ್ಷಿಣೆ ಪಡೆದಿರಲಿದೆ ಎನ್ನಲಾಗಿದೆ. ಅಲ್ಲದೇ ಈ ಫೋನ್ Snapdragon 7s Gen 3 SoC ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಒಳಗೊಂಡಿರಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ Hello UI ಸಪೋರ್ಟ್ ಜೊತೆಗೆ ಇತ್ತೀಚಿನ ಆಂಡ್ರಾಯ್ಡ್ 16 OS ನಲ್ಲಿ ರನ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.
ಹಾಗೆಯೇ ಮೊಟೊರೊಲಾ ಎಡ್ಜ್ 70 ಫ್ಯೂಷನ್ ಮೊಬೈಲ್ ವಿಶ್ವದ ಮೊದಲ 50MP ಸೋನಿ LYT-710 ಸೆನ್ಸಾರ್ ಪಡೆದಿರುವ ಸಾಧ್ಯತೆಗಳು ಹೆಚ್ಚಿವೆ. ಇದರೊಂದಿಗೆ ಇನ್ನೊಂದು ಕ್ಯಾಮೆರಾವು 13MP ಅಲ್ಟ್ರಾ ವೈಡ್ ಸೆನ್ಸಾರ್ ನಲ್ಲಿ ಇರಲಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಒದಗಿಸುವ ಸೂಚನೆಗಳು ಇವೆ. ಅಂದಹಾಗೆ ಎಲ್ಲಾ ಕ್ಯಾಮೆರಾಗಳಿಗೆ 4K ಸಪೋರ್ಟ್ ಇರಲಿದೆ ಎನ್ನಲಾಗಿದೆ. ಇನ್ನು ಈ ಫೋನ್ 7000 mAh ಬ್ಯಾಟರಿ ಸಪೋರ್ಟ್ ಜೊತೆಗೆ 68W ಟರ್ಬೊ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿರುವುದು ಬಹುತೇಕ ಪಕ್ಕಾ ಎನ್ನಲಾಗಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile